heart attack

ಸುಳ್ಯ: ಹೃದಯಾಘಾತ- ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 26. ಹೃದಯಾಘಾತದಿಂದ ಯುವಕನೋರ್ವ ಮೃತಪಟ್ಟ ಘಟನೆ‌ ಸುಳ್ಯ ತಾಲೂಕಿನ ಕರಿಕ್ಕಳ ಎಂಬಲ್ಲಿಂದ ವರದಿಯಾಗಿದೆ. ಮೃತ ಯುವಕನನ್ನು ಪಂಬೆತ್ತಾಡಿ ಗ್ರಾಮದ ಕರಿಕ್ಕಳ ದಿ.ತಮ್ಮಯ್ಯ ಗೌಡರ ಪುತ್ರ ಭಾಸ್ಕರ ಗೌಡ ಎಂದು ಗುರುತಿಸಲಾಗಿದೆ. ಇವರು ಭಾನುವಾರದಂದು ರಾತ್ರಿ10 ಗಂಟೆ ವೇಳೆಗೆ ಮನೆಯಲ್ಲಿ ತೀವ್ರ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸುಳ್ಯ: ಹೃದಯಾಘಾತ- ಯುವಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಹೃದಯಾಘಾತ- ಬಸ್ ಚಾಲಕ ನಿಧನ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 17. ಖಾಸಗಿ ಬಸ್ ಚಾಲಕರೋರ್ವರು ಹೃದಯಾಘಾತದಿಂದ ನಿಧನರಾದ ಘಟನೆ ಕನ್ಯಾನ ಬಂಡಿತ್ತಡ್ಕ ಸಮೀಪ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಕನ್ಯಾನ ಬಂಡಿತ್ತಡ್ಕ ನಿವಾಸಿ ರಮೇಶ್ ಎಂದು ಗುರುತಿಸಲಾಗಿದೆ. ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವಿಟ್ಲ: ಹೃದಯಾಘಾತ- ಬಸ್ ಚಾಲಕ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತ- ಬಂಟ್ವಾಳ ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ನಿಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 09. ಸೌದಿ ಅರೇಬಿಯಾದಲ್ಲಿ ವೃತ್ತಿಯಲ್ಲಿದ್ದ ಮಾಣಿ ಸಮೀಪದ ಸೂರಿಕುಮೇರು ನಿವಾಸಿ ದಿವಂಗತ ಅಬೂಬಕರ್ ರವರ ಪುತ್ರ ಅಬ್ದುಲ್ ರಝಾಕ್ ಎಂಬವರು ಹೃದಯಾಘಾತದಿಂದ ಮೃತಪಟ್ಟ ಘಟನೆ ವರದಿಯಾಗಿದೆ. ಕಳೆದ 15 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ವೃತ್ತಿಯಲ್ಲಿದ್ದ ಅವರು ರಜೆಯಲ್ಲಿ ಮನೆಗೆ ಬಂದು 3 ತಿಂಗಳ ಹಿಂದೆಯಷ್ಟೇ ಮರಳಿ ವಿದೇಶಕ್ಕೆ ತರಳಿದ್ದರು ಎಂದು ಹೇಳಲಾಗಿದೆ. ಮೃತರು ಪತ್ನಿ, ಇಬ್ಬರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧುಗಳನ್ನು ಅಗಲಿದ್ದಾರೆ.

ಹೃದಯಾಘಾತ- ಬಂಟ್ವಾಳ ಮೂಲದ ವ್ಯಕ್ತಿ ಸೌದಿ ಅರೇಬಿಯಾದಲ್ಲಿ ನಿಧನ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಪೊಲೀಸ್ ನಿರೀಕ್ಷಕ ಲಿಂಗರಾಜು ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 08. ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದ, ಪ್ರಸ್ತುತ ಚಿತ್ರದುರ್ಗದಲ್ಲಿ ಪೊಲೀಸ್ ನಿರೀಕ್ಷಕರಾಗಿರುವ ಲಿಂಗರಾಜು ಎಂಬವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಅವರು ಇತ್ತೀಚೆಗೆ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದು, ಆದರೆ ಅಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಪೊಲೀಸ್ ನಿರೀಕ್ಷಕ ಲಿಂಗರಾಜು ಹೃದಯಾಘಾತದಿಂದ ನಿಧನ Read More »

ಕರಾವಳಿ

ಸ್ಯಾಂಡಲ್ ವುಡ್ ನಿರ್ದೇಶಕ ಕಿರಣ್ ಗೋವಿ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 26. ಕನ್ನಡ ಚಿತ್ರರಂಗದ ನಿರ್ದೇಶಕ ಕಿರಣ್‌ ಗೋವಿ ಅವರು ಶನಿವಾರದಂದು ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.   ‘ಪಯಣ’, ‘ಸಂಚಾರಿ’, ‘ಪಾರು ವೈಫ್ ಆಫ್ ದೇವದಾಸ್‌’, ‘ಯಾರಿಗೆ ಯಾರುಂಟು’ ಸಿನಿಮಾಗಳನ್ನು ನಿರ್ದೇಶಿಸಿರುವ ಇವರು, ಕಚೇರಿಯಲ್ಲಿದ್ದ ವೇಳೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫ‌ಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್ ವುಡ್ ನಿರ್ದೇಶಕ ಕಿರಣ್ ಗೋವಿ ವಿಧಿವಶ Read More »

ಕರ್ನಾಟಕ

ಹೃದಯಾಘಾತದಿಂದ ಕರಾವಳಿಯ ಯೋಧ ಭೋಪಾಲ್ ನಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಜ.25. ಭೋಪಾಲ್ ನಲ್ಲಿ ಸಶಸ್ತ್ರ ಸೀಮಾ ಬಲ್ ನಲ್ಲಿ ಕರ್ತವ್ಯದಲ್ಲಿದ್ದ ಕರಾವಳಿ ಮೂಲದ ಯೋಧರೊಬ್ಬರು ಹೃದಯಾಘಾತಕ್ಕೆ ಬಲಿಯಾದ ಘಟನೆ ವರದಿಯಾಗಿದೆ. ಮಂಗಳೂರಿನ ಶಕ್ತಿನಗರ ನಿವಾಸಿ ಯೋಧ ಮುರಲೀಧರ ರೈ(37) ಹೃದಯಾಘಾತದಿಂದ ಮೃತಪಟ್ಟಿದ್ದು, ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲಾಗಿದೆ. ಮಧ್ಯಪ್ರದೇಶದ ಭೋಪಾಲದಲ್ಲಿ ಕರ್ತವ್ಯದಲ್ಲಿದ್ದು, ಮಲಗಿದ್ದಾಗಲ್ಲೇ ಹೃದಯಾಘಾತದಿಂದ ಮುರಲೀಧರ ರೈ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿದ್ದು ನಿಲ್ದಾಣ ಆವರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಗಿದೆ.

ಹೃದಯಾಘಾತದಿಂದ ಕರಾವಳಿಯ ಯೋಧ ಭೋಪಾಲ್ ನಲ್ಲಿ ಮೃತ್ಯು Read More »

ಕರಾವಳಿ

ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ಮೃತ್ಯು !

(ನ್ಯೂಸ್ ಕಡಬ)newskadaba.com ವಿಜಯಪುರ, ಜ.21. ಸಿಂದಗಿ ಕ್ಷೇತ್ರದ ಘೋಷಿತ ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಸೋಮಜಾಳ (54) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಜೆಡಿಎಸ್ ಪಂಚರತ್ನ ಕಾರ್ಯಕ್ರಮದಲ್ಲಿ ಮತ್ತು ವಿಜಯಪುರದ ನಗರದ ದರಬಾರ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾವೇಶ ಕಾರ್ಯಕ್ರಮದಲ್ಲಿ‌ ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಭಾಗಿಯಾಗಿದ್ದರು. ಬಳಿಕ ಸಂಬಂಧಿಕರ ಮನೆಯಲ್ಲಿ ಅಸ್ವಸ್ಥಗೊಂಡಿದ್ದ ಶಿವಾನಂದ ಪಾಟೀಲ ಅವರನ್ನು ಸಿಂದಗಿ ಪಟ್ಟಣದ ವಾತ್ಸಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.    

ಜೆಡಿಎಸ್ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ಮೃತ್ಯು ! Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com   ಉಪ್ಪಿನಂಗಡಿ, ಜ.14. ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತಕ್ಕೀಡಾಗಿ ಚಾಲಕ ಕಿಶೋರ್ ಕುಮಾರ್ (53) ಎಂಬವರು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ವರದಿಯಾಗಿದೆ. ಮೂಲತಃ ಮಂಗಳೂರಿನ ಕಾವೂರು ನಿವಾಸಿಯಾಗಿದ್ದ ಕಿಶೋರ್ ಕುಮಾರ್ ಬೆಂಗಳೂರಿನಿಂದ ಮಂಗಳೂರಿನತ್ತ ಟ್ಯಾಂಕರ್ ಚಲಾಯಿಸುತ್ತಿದ್ದಾಗ ಉಪ್ಪಿನಂಗಡಿ ಸಮೀಪಿಸುತ್ತಿದ್ದಂತೆಯೇ ಹೃದಯಾಘಾತಕ್ಕೆ ಒಳಗಾಗಿರುವುದಾಗಿ ತಿಳಿದುಬಂದಿದೆ. ಕೂಡಲೇ ಟ್ಯಾಂಕರ್ ನಲ್ಲಿದ್ದ ಸಹ ಚಾಲಕ ಟ್ಯಾಂಕರ್‌ನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾದರಾದರೂ ಆಸ್ಪತ್ರೆಯಲ್ಲಿ ಅವರು ಮೃತ ಪಟ್ಟಿದ್ದಾರೆಂದು ಘೋಷಿಸಲಾಯಿತು. ಪ್ರಕರಣಕ್ಕೆ ಸಂಬಂಧಿಸಿ ನಿಶಾಂತ್ ಶೆಟ್ಟಿ ನೀಡಿದ ದೂರಿನ

 ಉಪ್ಪಿನಂಗಡಿ: ಟ್ಯಾಂಕರ್ ಚಲಾಯಿಸುವಾಗಲೇ ಹೃದಯಾಘಾತದಿಂದ ಚಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆಟವಾಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತ್ಯು..!  

(ನ್ಯೂಸ್ ಕಡಬ) newskadaba.com  ಮಸ್ಕತ್, ಜ.12. ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್‌ ಆಟವಾಡುತ್ತಿದ್ದ ಯುವಕನೋರ್ವ ದಿಢೀರ್ ಕುಸಿದು ಬಿದ್ದು ಮೃತಪಟ್ಟ ಘಟನೆ ಮಸ್ಕತ್ ನಲ್ಲಿ ವರದಿಯಾಗಿದೆ. ಕೇರಳ ಮೂಲದ ಯುವಕ ಮೃತಪಟ್ಟವರು ಎನ್ನಲಾಗಿದ್ದು, ಸ್ನೇಹಿತರೊಂದಿಗೆ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲಿ ಆಟವಾಡುತ್ತಿದ್ದಾಗ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.ಈ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವೈದ್ಯರು ಪರೀಕ್ಷೆ ಬಳಿಕ ಹೃದಯಾಘಾತಗೊಂಡು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಬ್ಯಾಡ್ಮಿಂಟನ್ ಆಟದ ವೇಳೆ‌ ನಡೆದ ಹೃದಯಾಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ವರದಿ ತಿಳಿಸಿದೆ.  

ಆಟವಾಡುತ್ತಿದ್ದ ಯುವಕ ಹೃದಯಾಘಾತದಿಂದ ಮೃತ್ಯು..!   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಬಾಲಕನೋರ್ವ ಹೃದಯಾಘಾತದಿಂದ ಮೃತ್ಯು…!!!                   

(ನ್ಯೂಸ್ ಕಡಬ)newskadaba.com ಮಂಗಳೂರು, ಜ.10. ಶಾಲೆಗೆ ಹೊರಟಿದ್ದ 9ನೇ ತರಗತಿಯ ವಿದ್ಯಾರ್ಥಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮೃತ ಬಾಲಕನನ್ನು ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಎಂದು ಗುರುತಿಸಲಾಗಿದೆ. ಶಾಲೆಗೆ ಹೋಗಲು ಬೆಳಗ್ಗೆ ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತಿ ಬಿದ್ದಿದ್ದಾನೆ ಮನೆಯವರು ತಕ್ಷಣ ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು‌ ಪರೀಕ್ಷಿಸಿ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಆದರೂ ಬದುಕಿಸುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು.ಅಲ್ಲಿ

ಮಂಗಳೂರು: ಬಾಲಕನೋರ್ವ ಹೃದಯಾಘಾತದಿಂದ ಮೃತ್ಯು…!!!                    Read More »

ಕರಾವಳಿ
Scroll to Top