flood

ಕೃತಕ ನೆರೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶ ಜಲಾವೃತ; ಲಕ್ಷಾಂತರ ರೂ. ನಷ್ಟ

(ನ್ಯೂಸ್ ಕಡಬ) newskadaba.com ಜು. 18. ಕರ್ನಾಟಕದ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ಬೈಕಂಪಾಡಿಯ ಕೈಗಾರಿಕಾ ವಲಯದಲ್ಲಿ ಗುರುವಾರ ಮತ್ತು ಶುಕ್ರವಾರ ಸುರಿದ ಭಾರೀ ಮಳೆಯಿಂದಾಗಿ ಕೃತಕ ನೆರೆ ಸೃಷ್ಟಿಯಾಗಿದ್ದು, ಹಲವು ಕೈಗಾರಿಕಾ ಘಟಕಗಳು ಜಲಾವೃತಗೊಂಡಿವೆ. ಕೈಗಾರಿಕಾ ಘಟಕಗಳೊಳಗೆ ನೀರು ನುಗ್ಗಿದ ಪರಿಣಾಮ ಯಂತ್ರೋಪಕರಣಗಳು ಹಾಗೂ ಕಚ್ಚಾ ವಸ್ತುಗಳು ಹಾನಿಗೊಳಗಾಗಿದ್ದು, ಉದ್ಯಮಿಗಳಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿರುವ ಮಳೆನೀರು ಹರಿವಿನ ಚರಂಡಿಗಳ ಅವೈಜ್ಞಾನಿಕ ನಿರ್ಮಾಣ ಹಾಗೂ ಸಮರ್ಪಕ ನಿರ್ವಹಣೆಯ ಕೊರತೆಯೇ ಈ ಕೃತಕ […]

ಕೃತಕ ನೆರೆಗೆ ಬೈಕಂಪಾಡಿ ಕೈಗಾರಿಕಾ ಪ್ರದೇಶ ಜಲಾವೃತ; ಲಕ್ಷಾಂತರ ರೂ. ನಷ್ಟ Read More »

ಕರಾವಳಿ

ಉತ್ತರಾಖಂಡದಲ್ಲಿ ಭಾರೀ ಮಳೆಯ ಪರಿಣಾಮ ಚಮೋಲಿಯಲ್ಲಿ ಭಾರೀ ಪ್ರವಾಹ-ಇಬ್ಬರು ನಾಪತ್ತೆ

(ನ್ಯೂಸ್‌ ಕಡಬ) newskadaba.com,ಆ.23 ಬೆಂಗಳೂರು: ಉತ್ತರಾಖಂಡದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಪರಿಣಾಮ ಚಮೋಲಿ ಜಿಲ್ಲೆಯ ಥರಾಲಿಯಲ್ಲಿ ಪ್ರವಾಹ ಉಂಟಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ. ಚೆಪ್ಡಾನ್ ಮಾರುಕಟ್ಟೆ ಪ್ರದೇಶದ ಕೆಲವು ಅಂಗಡಿಗಳು ಹಾನಿಗೊಳಗಾಗಿದ್ದು, ಡೆಹ್ರಾಡೂನ್, ತೆಹ್ರಿ, ಪೌರಿ, ಚಮೋಲಿ, ರುದ್ರಪ್ರಯಾಗ, ನೈನಿತಾಲ್ ಮತ್ತು ಅಲ್ಮೋರಾ ಸೇರಿದಂತೆ ರಾಜ್ಯದಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.ರಕ್ಷಣಾ ತಂಡಗಳೊಂದಿಗೆ ಜಿಲ್ಲಾಧಿಕಾರಿ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಥರಾಲಿ ಬಜಾರ್, ರಾಡಿಬಾಗ್ ಮತ್ತು

ಉತ್ತರಾಖಂಡದಲ್ಲಿ ಭಾರೀ ಮಳೆಯ ಪರಿಣಾಮ ಚಮೋಲಿಯಲ್ಲಿ ಭಾರೀ ಪ್ರವಾಹ-ಇಬ್ಬರು ನಾಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತಕ್ಕೆ ತುತ್ತಾಗಿ 17 ಮಂದಿ ಸಾವು

(ನ್ಯೂಸ್ ಕಡಬ) newskadaba.com, ಜು. 21. ದಕ್ಷಿಣ ಕೊರಿಯಾದ ಗ್ಯಾಪ್ಯೊಂಗ್ ಕೌಂಟಿಯಲ್ಲಿ ಭಾನುವಾರ ಸಂಭವಿಸಿದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಮನೆಗಳು ಮತ್ತು ಶಿಬಿರಗಳು ಜಲಾವೃತಗೊಂಡಿದ್ದು, ವಾಹನಗಳು ಪ್ರವಾಹಕ್ಕೆ ಸಿಲುಕಿವೆ. ಹಲವಾರು ಮಂದಿ ಕಾಣೆಯಾಗಿದ್ದಾರೆ. ಬುಧವಾರ ಮಳೆ ಆರಂಭವಾದಾಗಿನಿಂದ ದೇಶಾದ್ಯಂತ ಸಾವಿನ ಸಂಖ್ಯೆ 17 ಕ್ಕೆ ಏರಿದ್ದು, 11 ಜನರು ಕಾಣೆಯಾಗಿದ್ದಾರೆ, 13,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಗ್ಯಾಪ್ಯೊಂಗ್‌ನಲ್ಲಿನ ಶಿಬಿರದ ಮೇಲೆ ಭೂಕುಸಿತ ಸಂಭವಿಸಿದ್ದು, 40 ರ ಹರೆಯದ ವ್ಯಕ್ತಿಯೊಬ್ಬರು

ದಕ್ಷಿಣ ಕೊರಿಯಾದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತಕ್ಕೆ ತುತ್ತಾಗಿ 17 ಮಂದಿ ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

50 ವರ್ಷಗಳ ನಂತರ ಮೊದಲ ಭಾರಿಗೆ ಸಹರಾ ಮರುಭೂಮಿಯಲ್ಲಿ ಪ್ರವಾಹ

(ನ್ಯೂಸ್ ಕಡಬ)newskadaba.com, ಅ. 12 ನವದೆಹಲಿ: ವಿಶ್ವದ ಅತಿದೊಡ್ಡ ಮರುಭೂಮಿ ಎಂದು ಕರೆಯುವ ಸಹರಾ ಮರುಭೂಮಿ ಭಾರಿ ಪ್ರಮಾಣದಲ್ಲಿ ಪ್ರವಾಹವಾಗಿದೆ. ವಿಶ್ವದ ಅತಿದೊಡ್ಡ ಸಹರಾ ಮರುಭೂಮಿ ಮರಳುಗಾಡು ಪ್ರದೇಶವಾಗಿದ್ದು, ಇಲ್ಲಿ ಧಾರಾಕಾರ ಮಳೆಯಿಂದ ನೀರು ಹರಿಯುತ್ತಿರುವ ಸೆಟಲೈಟ್‌ ಚಿತ್ರಗಳು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.ಇದು ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಸಹರಾ ಮರುಭೂಮಿ ಪ್ರವಾಹಕ್ಕೆ ಸಾಕ್ಷಿಯಾಗಿರುವುದಾಗಿ ವರದಿ ತಿಳಿಸಿದೆ.

50 ವರ್ಷಗಳ ನಂತರ ಮೊದಲ ಭಾರಿಗೆ ಸಹರಾ ಮರುಭೂಮಿಯಲ್ಲಿ ಪ್ರವಾಹ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನದಿಯಿಂದುಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರ – ಸಿಎಂ ಭರವಸೆ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಘಟಪ್ರಭಾ ನದಿ ನೀರಿನ ಪ್ರವಾಹದಿಂದಾಗಿ ಪ್ರತಿವರ್ಷ ಉಂಟಾಗುತ್ತಿರುವ ಹಾನಿಯ ಕುರಿತು ಸಂಬಂಧಪಟ್ಟ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.   ಅವರು ತಮ್ಮನ್ನು ಭೇಟಿಯಾದ ಮುಧೋಳ ತಾಲೂಕಿನ ರೈತರ ನಿಯೋಗದೊಂದಿಗೆ ಚರ್ಚಿಸಿದ ಬಳಿಕ ನೀರಾವರಿ ಸಚಿವರು, ಕಂದಾಯ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರೊಂದಿಗೆ ಆದಷ್ಟು ಬೇಗ ಸಭೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದಾಗಿ ತಿಳಿಸಿದರು. ಕಳೆದ ನಾಲ್ಕು ವರ್ಷಗಳ

ನದಿಯಿಂದುಂಟಾಗುವ ಪ್ರವಾಹಕ್ಕೆ ಶಾಶ್ವತ ಪರಿಹಾರ – ಸಿಎಂ ಭರವಸೆ Read More »

ಕರ್ನಾಟಕ

ನಾಳೆ (ಜು. 20) ದ.ಕ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ- ಡಿಸಿ ಆದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 19. ಕರಾವಳಿಯಾದ್ಯಂತ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜುಲೈ  20ರಂದು ದ.ಕ.ಜಿಲ್ಲೆಯ ಎಲ್ಲ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ನಾಳೆ (ಜು. 20) ದ.ಕ. ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ- ಡಿಸಿ ಆದೇಶ Read More »

ಕರಾವಳಿ, ಕರ್ನಾಟಕ

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ

(ನ್ಯೂಸ್ ಕಡಬ) newskadaba.com ಮಂಗಳೂರು, ‌ನ.20. ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ. ಮಂಗಳೂರು ಸುರಕ್ಷಿತವಾಗಿದ್ದು, ಮಂಗಳೂರಿಗೆ ನೈಸರ್ಗಿಕವಾಗಿ ಯಾವುದೇ ಅಪಾಯವಿರುವುದಿಲ್ಲ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಡಾ. ಸಿ.ಎನ್. ಪ್ರಭು ಹಾಗೂ ಭಾರತೀಯ ಹವಾಮಾನ ಇಲಾಖೆಯ ಮಾಜಿ ನಿರ್ದೇಶಕ, ವಿಜ್ಞಾನಿ ಬಿ.ಪುಟ್ಟಣ್ಣ ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಕಳೆದೆರಡು ದಿನಗಳಿಂದ ಮೋಡ ಕವಿದ ವಾತಾವರಣದೊಂದಿಗೆ ಗುಡುಗು ಸಹಿತ ಮಳೆಯಾದುದರಿಂದ ಮಂಗಳೂರು ಮುಳುಗಡೆಯಾಗುತ್ತದೆ‌ ಎಂಬ ವದಂತಿ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆ ವಿಜಯ ಕರ್ನಾಟಕ

ಐನೂರು ವರ್ಷಗಳು ಕಳೆದರೂ ಮಂಗಳೂರು ಮುಳುಗುವುದಿಲ್ಲ ► ಭಾರತದ ವಿಜ್ಞಾನಿಗಳಿಂದ ಸ್ಪಷ್ಟನೆ Read More »

ರಾಷ್ಟ್ರೀಯ ನ್ಯೂಸ್
Scroll to Top