died

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು

(ನ್ಯೂಸ್ ಕಡಬ) newskadaba.com ಮಂಗಳೂರು‌, ಸೆ.17. ರಜೆಯ ಮಜಾ ಸವಿಯಲೆಂದು ಬಂದು ಸ್ನಾನಕ್ಕಿಳಿದ ಯುವಕನೋರ್ವ ಸಮುದ್ರಪಾಲಾದ ಘಟನೆ ಪಣಂಬೂರು ಮೀನಕಳಿಯ ಎಂಬಲ್ಲಿ ಭಾನುವಾರ ಸಂಜೆ ವೇಳೆ ನಡೆದಿದೆ. ಆಂಧ್ರ ಪ್ರದೇಶದ ಮೂಲದ ಸಾಯಿಚರಣ್ (19) ಮೃತ ಯುವಕ. ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಸಾಯಿಚರಣ್ ತನ್ನ ನಾಲ್ಕು ಮಂದಿ ಗೆಳೆಯರೊಂದಿಗೆ ರಜೆ ಕಳೆಯಲು ಬಂದಿದ್ದ. ಮಡಿಕೇರಿಗೆ ತೆರಳಿ ಮಂಗಳೂರಿಗೆ ಭೇಟಿ ನೀಡಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಯುವಕನ ಶವ ಪತ್ತೆಗೆ ಸಮುದ್ರದ ಅಲೆಗಳ ಹೊಡೆತ ಅಡ್ಡಿಯಾಗಿದ್ದು, […]

ಪಣಂಬೂರು: ಇಂಜಿನಿಯರಿಂಗ್ ವಿದ್ಯಾರ್ಥಿ ನೀರುಪಾಲು Read More »

ಕರಾವಳಿ

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಸೆ.09. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ವಳಾಲು ಎಂಬಲ್ಲಿ ಕಂಟೈನರ್ ಲಾರಿ ಮತ್ತು ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನದ ನಡುವೆ ಢಿಕ್ಕಿ ಹೊಡೆದು ಓರ್ವ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಅಶೋಕ್ ಲೇಲ್ಯಾಂಡ್ ದೋಸ್ತ್ ಚಾಲಕ ಮೆಲ್ಕಾರ್ ನಿವಾಸಿ ನವಾಝ್ ಎಂದು ಗುರುತಿಸಲಾಗಿದೆ. ನಾಲ್ಕು ತಿಂಗಳ ಹಿಂದೆ ವಿವಾಹವಾಗಿದ್ದ ನವಾಝ್ ಬೇಕರಿ ತಿಂಡಿ ಲೈನ್ ಸೇಲ್ ಮಾಡುತ್ತಿದ್ದರು. ಮೃತದೇಹವನ್ನು ಪುತ್ತೂರು ಆಸ್ಪತ್ರೆಯಲ್ಲಿ ಇಡಲಾಗಿದೆ.

ನೆಲ್ಯಾಡಿ: ಕಂಟೈನರ್ ಲಾರಿ – ಅಶೋಕ್ ಲೈಲ್ಯಾಂಡ್ ದೋಸ್ತ್ ಢಿಕ್ಕಿ ► ಓರ್ವ ಮೃತ್ಯು Read More »

ಕರಾವಳಿ

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.09. ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆಲಂಕಾರು ಎಂಬಲ್ಲಿ ಪಿಕಪ್‌ ವಾಹನವೊಂದು ಮಗುವೊಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮಗು ಆಸ್ಪತ್ರೆಗೆ ಸಾಗಿಸುವ ಹಾದಿ‌ ಮಧ್ಯೆ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ. ಮೃತ ಮಗುವನ್ನು ನೆಕ್ಕರೆ ನಿವಾಸಿ ಆ ಸಮಯದಲ್ಲಿ ಮಗುವಿಗೆ ಮಹಮ್ಮದ್ ಹನೀಫ್ ಎಂಬವರ ಪುತ್ರಿ ಶೈಮಾ(6) ಎಂದು ಗುರುತಿಸಲಾಗಿದೆ. ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ತನ್ನ ರಸ್ತೆ ಬದಿಯ ಮನೆಯಿಂದ ಹಠಾತ್ ರಸ್ತೆಗೆ ಬಂದ ಮಗುವಿಗೆ ಕುಂತೂರು

ಆಲಂಕಾರು: ಪಿಕಪ್ ಢಿಕ್ಕಿ – ಮಗು ಮೃತ್ಯು Read More »

ಕರಾವಳಿ

ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.04.‌ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಚೆನ್ನಪ್ಪ ಗೌಡ ನೂಜಿಯವರ ಮನೆಗೆ ಇಂಟರ್ಲಾಕ್ ಅಳವಡಿಸಲೆಂದು ಆಗಮಿಸಿದ್ದ ಮಂಗಳೂರು ಪೊಳಲಿ ನಿವಾಸಿ ಹರಿಪ್ರಸಾದ್(30) ನೀರುಪಾಲಾದ ದುರ್ದೈವಿ. ಇವರು ತನ್ನ ಜತೆಗಾರರೊಂದಿಗೆ ಕುದ್ಮಾರು ಎಂಬಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕಿಳಿದಿದ್ದ ವೇಳೆ ನೀರುಪಾಲಾದರೆನ್ನಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ.

ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು Read More »

ಕರಾವಳಿ

ಲಾರಿಗೆ ಢಿಕ್ಕಿಯಾದ ಕಾರು: ಕಿರುತೆರೆ ನಟಿ, ಸಹ ನಟ ಮೃತ್ಯು ► ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಆಗಮಿಸುತ್ತಿದ್ದ ನಟರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.24. ರಸ್ತೆ ಬದಿ ನಿಂತಿದ್ದ ಟ್ಯಾಂಕರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಿರುತುರೆ ನಟಿ ಹಾಗೂ ಸಹನಟ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ನಾಲ್ವರು ಸಹನಟರು ಗಾಯಗೊಂಡ ಘಟನೆ ನೆಲಮಂಗಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 48ರ ಲ್ಯಾಂಕೋ ಟೋಲ್‌ ರಸ್ತೆಯ ಸೋಲೂರು ಬಳಿ ಬುಧವಾರ ತಡರಾತ್ರಿ ನಡೆದಿದೆ. ಮಹಾನದಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಮತ್ತು ರು. ಮಧುಬಾಲ, ತ್ರಿವೇಣಿ ಸಂಗಮ ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ಕಿರುತೆರೆ ನಟಿ ರಚನಾ(23) ಹಾಗೂ ಸಹ ನಟ ಜೀವನ್‌ ಮೃತಪಟ್ಟವರು.

ಲಾರಿಗೆ ಢಿಕ್ಕಿಯಾದ ಕಾರು: ಕಿರುತೆರೆ ನಟಿ, ಸಹ ನಟ ಮೃತ್ಯು ► ಕುಕ್ಕೇ ಸುಬ್ರಹ್ಮಣ್ಯ ದೇವರ ದರ್ಶನಕ್ಕೆ ಆಗಮಿಸುತ್ತಿದ್ದ ನಟರು Read More »

ಕರ್ನಾಟಕ

ಲಾರಿ ಮರಕ್ಕೆ ಢಿಕ್ಕಿ: ಮೂವರು ಮೃತ್ಯು ► ಆರು ಮಂದಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕೋಲಾರ, ಆ.12. ಲಾರಿಯೊಂದು‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ಓರ್ವ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಹೃದಯ ವಿದ್ರಾವಕ‌ ಘಟನೆ ಶನಿವಾರದಂದು ನಡೆದಿದೆ. ಮಾಲೂರಿನಿಂದ ಕೋಲಾರದ ಕಡೆಗೆ ತೆರಳುತ್ತಿದ್ದ ಲಾರಿಯಲ್ಲಿ ಒಟ್ಟು 9 ಮಂದಿಯಿದ್ದರು. ಘಟನೆಯಲ್ಲಿ ರಮೇಶ್(35) ಹಾಗೂ ನಾಗರಾಜ್ (34) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌. ಲಾರಿಯ ಚಾಲಕ ಹಾಗೂ ನಿರ್ವಾಹಕ ಸೇರಿದಂತೆ ಇನ್ನುಳಿದ 6 ಮಂದಿಗೆ ಗಂಭೀರ ಗಾಯಗಳಾಗಿವೆ.

ಲಾರಿ ಮರಕ್ಕೆ ಢಿಕ್ಕಿ: ಮೂವರು ಮೃತ್ಯು ► ಆರು ಮಂದಿಗೆ ಗಂಭೀರ ಗಾಯ Read More »

ಕರ್ನಾಟಕ

ಇನ್ನೋವಾಗಳೆರಡು ಮುಖಾಮುಖಿ ಢಿಕ್ಕಿ ► ಮಹಿಳೆ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಕೋಲಾರ, ಆ.09. ಇನ್ನೋವಾ ಕಾರುಗಳೆರಡು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಮಹಿಳೆಯೋರ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ತಡರಾತ್ರಿ ಕೋಲಾರದಲ್ಲಿ ನಡೆದಿದೆ. ಕೋಲಾರ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ಇನ್ನೋವಾ ಕಾರು ಎದುರಿನಿಂದ ಬರುತ್ತಿದ್ದ ಇನ್ನೋವಾಗೆ ಕೋಲಾರ ತಾಲೂಕಿನ ಪಟ್ನಾ ಗ್ರಾಮದ ಬಳಿ ಮುಖಾಮುಖಿ ಢಿಕ್ಕಿಯಾದುದರಿಂದ ಬೆಂಗಳೂರು ರಾಮಮೂರ್ತಿ ನಗರ ನಿವಾಸಿ ರೂಪಾ(28) ಎಂಬವರು ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಘಟನೆಯಲ್ಲಿ ಕೋಲಾರ ನಗರಸಭೆ 27 ನೇ ವಾರ್ಡ್ ಸದಸ್ಯೆ ಸಾಕಮ್ಮ ಹಾಗೂ ಪ್ರಭಾಕರ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಕೋಲಾರದ ಖಾಸಗಿ

ಇನ್ನೋವಾಗಳೆರಡು ಮುಖಾಮುಖಿ ಢಿಕ್ಕಿ ► ಮಹಿಳೆ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ

(ನ್ಯೂಸ್ ಕಡಬ) newskadaba.com ಕಡಬ, ಆ.03. ಕಡಬ ಗ್ರಾಮದ ಪಿಜಕ್ಕಳ ಲಕ್ಷ್ಮೀನಾರಾಯಣ ಆಚಾರಿ ಎಂಬವರ ಪತ್ನಿ ಪಿಜಕ್ಕಳ ಸರಕಾರಿ ಕಿರಿಯ ಪ್ರಾಥಮಿಕ ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಸುಗುಣ(35) ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಕಳೆದೊಂದು ವಾರದಿಂದ ತೀವ್ರ ತರದ ಜ್ವರದಿಂದ ಬಳಲುತ್ತಿದ್ದ ಸುಗುಣರವರನ್ನು ಪುತ್ತೂರಿನ ಆದರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಗುರುವಾರದಂದು ಮೃತರಾಗಿದ್ದಾರೆ. ಇವರು ಪತಿ ಲಕ್ಷ್ಮೀ ನಾರಾಯಣ, ಪುತ್ರ ರೀತೇಶ್ ಹಾಗೂ ಪುತ್ರಿ ಜ್ಯೋತಿಕಾರನ್ನು ಅಗಲಿದ್ದಾರೆ.

ಕಡಬ: ತೀವ್ರ ತರದ ಜ್ವರಕ್ಕೆ ಮಹಿಳೆ ಬಲಿ Read More »

ಕರಾವಳಿ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು.25. ಠಾಣಾ ವ್ಯಾಪ್ತಿಯ ಕೊಲ್ಯದ ಕಟ್ಟೆ ಎಂಬಲ್ಲಿ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರದಂದು ನಡೆದಿದೆ. ಮೃತ ಯುವಕನನ್ನು ಗೋಳಿಯಡ್ಕ ನಿವಾಸಿ ಅಮ್ಮು ಮುಗೇರ ಎಂಬವರ ಪುತ್ರ ವಸಂತ (26) ಎಂದು ಗುರುತಿಸಲಾಗಿದೆ. ಬುಧವಾರದಂದು ಬೆಳಿಗ್ಗೆ ಸ್ಥಳೀಯ ವ್ಯಕ್ತಿಯೊಂದಿಗೆ ಮೀನು ಹಿಡಿಯಲೆಂದು ತೆರಳಿದ್ದ ವಸಂತ ಕೊಲ್ಯದಕಟ್ಟೆ ಪವರ್ ಡ್ಯಾಂ ಬಳಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎದೆನೋವು ಇದೆಯೆಂದು ಮನೆಯವರಲ್ಲಿ ತಿಲಿಸಿದ್ದಾರೆನ್ನಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕಾರಣ

ಕಡಬ: ನೀರಿನಲ್ಲಿ ಮುಳುಗಿ ಯುವಕ ಮೃತ್ಯು Read More »

ಕರಾವಳಿ

ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು.23. ನಗರದ ಅಳಕೆಯ ಫಲ್ಗುಣಿ ನದಿ ಸಮೀಪ ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ಅಳಕೆ ಎಂಬಲ್ಲಿ ನಡೆದಿದೆ. ಮೃತ ಬಾಲಕನನ್ನು ಅಡ್ಡೂರು ಸಮೀಪದ ನೂಹಿ ನಿವಾಸಿ ಇಬ್ರಾಹೀಂ ಎಂಬವರ ಪುತ್ರ ಮಂಗಳೂರಿನ ಮಹೇಶ್ ಕಾಲೇಜಿ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಅರ್ಶದ್ (17) ಎಂದು ಗುರುತಿಸಲಾಗಿದೆ. ಈತ ನಗರದ ಅಳಕೆಯ ಫಲ್ಗುಣಿ ನದಿ ಸಮೀಪದಲ್ಲಿ ಹೊಂಡವೊಂದಿದ್ದು, ಮಳೆಗಾಲವಾದುದರಿಂದ ಅದರಲ್ಲಿ ನೀರು ತುಂಬಿತ್ತು. ರವಿವಾರ ಸಂಜೆ ಅರ್ಶದ್ ಮತ್ತು ಆತನ

ನೀರು ತುಂಬಿದ್ದ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಮೃತ್ಯು Read More »

ಕರಾವಳಿ
Scroll to Top