ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.04.‌ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ.

ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಚೆನ್ನಪ್ಪ ಗೌಡ ನೂಜಿಯವರ ಮನೆಗೆ ಇಂಟರ್ಲಾಕ್ ಅಳವಡಿಸಲೆಂದು ಆಗಮಿಸಿದ್ದ ಮಂಗಳೂರು ಪೊಳಲಿ ನಿವಾಸಿ ಹರಿಪ್ರಸಾದ್(30) ನೀರುಪಾಲಾದ ದುರ್ದೈವಿ. ಇವರು ತನ್ನ ಜತೆಗಾರರೊಂದಿಗೆ ಕುದ್ಮಾರು ಎಂಬಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕಿಳಿದಿದ್ದ ವೇಳೆ ನೀರುಪಾಲಾದರೆನ್ನಲಾಗಿದೆ.

ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ.

Scroll to Top