dehli

ದೆಹಲಿ: ಮತ್ತೆ ಅತೀ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ

(ನ್ಯೂಸ್‌ ಕಡಬ)com,ಡಿ.26: ವಾರದ ಆರಂಭದಲ್ಲಿ ಸ್ವಲ್ಪ ಸುಧಾರಣೆ ಕಂಡಿದ್ದ ದೆಹಲಿಯ ಗಾಳಿಯ ಗುಣಮಟ್ಟ ಶನಿವಾರ ಮತ್ತೆ ಹದಗೆಟ್ಟಿದ್ದು, ನಗರದ ಹಲವಾರು ಭಾಗಗಳು ಮಾಲಿನ್ಯ ಮಟ್ಟವನ್ನು ‘ತುಂಬಾ ಕಳಪೆ’ ಮತ್ತು ‘ತೀವ್ರ’ ವರ್ಗಗಳಲ್ಲಿ ದಾಖಲಿಸಿವೆ. ಇದರಿಂದಾಗಿ ವಾತಾವರಣದಲ್ಲಿ ಕನಿಷ್ಠ ತಾಪಮಾನ 7.7 ಡಿಗ್ರಿ ಸೆಂಟಿಗ್ರೇಡ್‌ಗೆ ಸಾಧಾರಣ ಏರಿಕೆಯಾಗಿದೆ. ಸೋಮವಾರದದವರೆಗೆ ತಾಪಮಾನವು 5ರಿಂದ 8 ಡಿಗ್ರಿ ಸೆಂಟಿಗ್ರೇಡ್‌ವರೆಗೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (CPCB) ದತ್ತಾಂಶದ ಪ್ರಕಾರ, ಧೌಲಾ ಕುವಾನ್‌ನಲ್ಲಿ ಗಾಳಿಯ ಗುಣಮಟ್ಟವು 252 […]

ದೆಹಲಿ: ಮತ್ತೆ ಅತೀ ಕಳಪೆ ಶ್ರೇಣಿಗೆ ಇಳಿದ ವಾಯುಗುಣಮಟ್ಟ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೆಹಲಿ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಿಸಿದ್ದು ಉಮರ್- ಡಿಎನ್ಎ ಪರೀಕ್ಷೆಯಲ್ಲಿ ದೃಢ

(ನ್ಯೂಸ್‌ ಕಡಬ) newskadaba.com,  ನ.13: ದೆಹಲಿಯ ಕೆಂಪು ಕೋಟೆ ಬಳಿ ನ.10ರಂದು ಕಾರ್ ಬಾಂಬ್ ಸ್ಫೋಟ ಮಾಡಿದ್ದು ಡಾ. ಉಮರ್ ಎನ್ನುವುದು ಅಧಿಕೃತವಾಗಿ ದೃಢಡಪಟ್ಟಿದೆ. ಐ20 ಕಾರನ್ನು ಚಲಾಯಿಸಿದ ವ್ಯಕ್ತಿ ಉಮರ್ ಎಂದು ತನಿಖಾಧಿಕಾರಿಗಳು ಮೊದಲೇ ಶಂಕಿಸಿದ್ದರು. ಹೀಗಿದ್ದರೂ ಮುಂದೆ ಚಾರ್ಜ್ಶೀಟ್ ಸಲ್ಲಿಕೆ ಮಾಡುವಾಗ ಮೃತ ವ್ಯಕ್ತಿ ಉಮರ್ ಎನ್ನುವುದಕ್ಕೆ ವೈಜ್ಞಾನಿಕ ದಾಖಲೆಯ ಅಗತ್ಯ ಇತ್ತು. ಹೀಗಾಗಿ ಪುಲ್ವಾಮಾದಲ್ಲಿರುವ ಉಮರ್ ತಾಯಿಯ ಡಿಎನ್‌ಎ ಮಾದರಿಯನ್ನೂ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಸ್ಫೋಟದ ಬಳಿಕ ಉಮರ್ ಕಾಲು ಸ್ಟೀರಿಂಗ್ ವೀಲ್ ಮತ್ತು

ದೆಹಲಿ ಕೆಂಪು ಕೋಟೆ ಬಳಿ ಬಾಂಬ್ ಸ್ಫೋಟಿಸಿದ್ದು ಉಮರ್- ಡಿಎನ್ಎ ಪರೀಕ್ಷೆಯಲ್ಲಿ ದೃಢ Read More »

ಅಂತರ್ರಾಷ್ಟ್ರೀಯ ನ್ಯೂಸ್

ದೆಹಲಿ ನಿಗೂಢ ಸ್ಫೋಟ: ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ

(ನ್ಯೂಸ್‌ ಕಡಬ) newskadaba.com,  ನ.08: ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್ ಎಂಬಾತನ ಮೊದಲ ಚಿತ್ರ ಇದೀಗ ಬಹಿರಂಗಗೊಂಡಿದೆ. ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟದಲ್ಲಿ ಭಾಗಿಯಾಗಿರುವ ಹುಂಡೈ ಐ20 ಕಾರನ್ನು ಸ್ಫೋಟಕ್ಕೂ ಮುನ್ನ ಮಸೀದಿಯೊಂದರ ಬಳಿ ಮೂರು ಗಂಟೆಗಳ ಕಾಲ ಪಾರ್ಕಿಂಗ್ ಮಾಡಲಾಗಿತ್ತು. ಕಾರು ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಮಧ್ಯಾಹ್ನ 3:19 ಕ್ಕೆ ಪ್ರವೇಶಿಸಿ ಸಂಜೆ 6:48ಕ್ಕೆ ನಿರ್ಗಮಿಸಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬಂದಿದೆ.

ದೆಹಲಿ ನಿಗೂಢ ಸ್ಫೋಟ: ಶಂಕಿತ ಆತ್ಮಹತ್ಯಾ ಬಾಂಬರ್ ಚಿತ್ರ ಬಹಿರಂಗ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ತೀವ್ರ ಶೋಧ

(ನ್ಯೂಸ್‌ ಕಡಬ) newskadaba.com, ಆ.18:‌‌ ದ್ವಾರಕಾದ ದೆಹಲಿ ಪಬ್ಲಿಕ್‌ ಶಾಲೆ ಸೇರಿದಂತೆ ಅನೇಕ ಶಾಲೆಗಳಿಗೆ ಬಾಂಬ್‌ ಬೆದರಿಕೆ ಬಂದಿದ್ದು, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಣೆ ಮಾಡಲಾಗಿದೆ. ಮೂಲಗಳ ಪ್ರಕಾರ, ದೆಹಲಿ ಪೊಲೀಸ್‌ ತಂಡಗಳು ಹಾಗೂ ಬಾಂಬ್‌ ನಿಷ್ಕ್ರಿಯ ದಳಗಳು ಸ್ಥಳಗೆ ಧಾವಿಸಿದ್ದು, ಶೋಧ ನಡೆಸುತ್ತಿವೆ. ದ್ವಾರಕಾದ ಸೆಕ್ಟರ್-19‌ ಬಳಿಯ ಸೇಂಟ್‌ ಥಾಮಸ್‌ ಶಾಲೆ, ಸೆಕ್ಟರ್‌-18ರ ದೆಹಲಿ ಇಂಟರ್‌ನ್ಯಾಷನಲ್‌ ಸ್ಕೂಲ್‌ ಎಡ್ಜ್‌, ಸೆಂಟ್ರಲ್‌ ಅಕಾಡೆಮಿ ಸ್ಕೂಲ್‌, ಸೆಕ್ಟರ್-10ರ ದ್ವಾರಕಾದ ಜಿಡಿ ಗೋನೆಕಾ ಸ್ಕೂಲ್‌, ಸೆಕ್ಟರ್-19ರ ದ್ವಾರಕಾ ಹಾಗೂ

ದೆಹಲಿಯಲ್ಲಿ ಶಾಲೆಗಳಿಗೆ ಬಾಂಬ್‌ ಬೆದರಿಕೆ: ತೀವ್ರ ಶೋಧ Read More »

ರಾಷ್ಟ್ರೀಯ ನ್ಯೂಸ್

ದೆಹಲಿ ತುಳು ಮಹಾಸಭೆಯ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ ನೇಮಕ

(ನ್ಯೂಸ್ ಕಡಬ) newskadaba.com, ಜು. 10. ತುಳು ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಶತಮಾನಗಳಿಂದ ಶ್ರಮಿಸುತ್ತಿರುವ ತುಳು ಮಹಾಸಭೆಯು ತನ್ನ ನವದೆಹಲಿ ಘಟಕದ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರನ್ನು ನಾಮನಿರ್ದೇಶನ ಮಾಡಿದೆ. ಈ ಹೊಸ ನೇಮಕಾತಿಯು ತುಳು ಭಾಷೆಯನ್ನು ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಹೋರಾಟಕ್ಕೆ ಶಕ್ತಿ ತುಂಬುವ ನಿರೀಕ್ಷೆಯಿದೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ತುಳು ಸಂಘಟನೆಗಳು ಈ ನೇಮಕಾತಿಯನ್ನು ಸ್ವಾಗತಿಸಿವೆ. 1928 ರಲ್ಲಿ ಹಿರಿಯ ಎಸ್.ಯು. ಪಣಿಯಾಡಿ

ದೆಹಲಿ ತುಳು ಮಹಾಸಭೆಯ ಸಂಚಾಲಕರಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ ನೇಮಕ Read More »

ಕರಾವಳಿ, ರಾಷ್ಟ್ರೀಯ ನ್ಯೂಸ್

ದೆಹಲಿ ಕಾಲೇಜಿನಲ್ಲಿ ಬೆಂಕಿ ಅವಘಡ – ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com , ಮೇ.15. ದೆಹಲಿಯ ಪಿತಾಂಪುರ ಪ್ರದೇಶದಲ್ಲಿರುವ ಶ್ರೀ ಗುರು ಗೋಬಿಂದ್ ಸಿಂಗ್ (ಜಿಜಿಎಸ್) ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಬೆಳಿಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕಾಲೇಜಿನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಘಟನೆ ಬೆಳಿಗ್ಗೆ 9:40 ರ ಸುಮಾರಿಗೆ ಸಂಭವಿಸಿದೆ. ಮೊದಲ ಮಹಡಿಯಲ್ಲಿರುವ ಕಾಲೇಜು ಗ್ರಂಥಾಲಯದಲ್ಲಿ ಬೆಂಕಿ ಕಾಣಿಸಿಕೊಂಡು, ನಂತರ ಎರಡನೇ ಮತ್ತು ಮೂರನೇ ಮಹಡಿಗೆ ಹರಡಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 11 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದವು

ದೆಹಲಿ ಕಾಲೇಜಿನಲ್ಲಿ ಬೆಂಕಿ ಅವಘಡ – ತಪ್ಪಿದ ಭಾರೀ ಅನಾಹುತ Read More »

ಬ್ರೇಕಿಂಗ್ ನ್ಯೂಸ್

ದೆಹಲಿಯಲ್ಲಿ ನೂತನ ಕರ್ನಾಟಕ ಭವನ ‘ಕಾವೇರಿ’ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com , ಏ.03 ಬೆಂಗಳೂರು: ಕರ್ನಾಟಕ ಭವನ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ದೆಹಲಿಗೆ ಭೇಟಿ ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಿನ್ನೆಯಷ್ಟೇ ದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ದೆಹಲಿಯಲ್ಲಿ 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನೂತನ ಕರ್ನಾಟಕ ಭವನವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು, ಸಂಸದರು

ದೆಹಲಿಯಲ್ಲಿ ನೂತನ ಕರ್ನಾಟಕ ಭವನ ‘ಕಾವೇರಿ’ ಲೋಕಾರ್ಪಣೆ Read More »

ರಾಷ್ಟ್ರೀಯ ನ್ಯೂಸ್

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ)newskadaba.com ದೆಹಲಿ, ಜ.31. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ದೆಹಲಿಯ ಪಶ್ಚಿಮ ವಿಹಾರದಲ್ಲಿ ನಡೆದಿದೆ. ಮೃತರನ್ನು ಜ್ಯೋತಿ(32) ಎಂದು ಗುರುತಿಸಲಾಗಿದೆ. ಫ್ಲಿಪ್‌ಕಾರ್ಟ್‌ನ ಕೊರಿಯರ್ ಇಲಾಖೆಯಲ್ಲಿ ಕೆಲಸ ಮಾಡುವ ಜ್ಯೋತಿ ಕೆಲಸ ಮುಗಿಸಿ ಸ್ಕೂಟರ್‌ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಬೈಕ್‌ ಹಾಗೂ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳು ಜ್ಯೋತಿ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಜ್ಯೋತಿ ಅವರನ್ನು ಆಸ್ಪತ್ರೆಗೆ

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಗುಂಡಿನ ದಾಳಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪ್ರಧಾನಿ ಮೋದಿಯವರು ವಿಶ್ವದ ಅತಿ ಉದ್ದದ ನದಿ ಕ್ರೂಸರ್ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜ.13.  ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ವಿಹಾರ ಕ್ರೂಸರ್ ಎಂವಿ ಗಂಗಾ ವಿಲಾಸ್‌ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು ಎಂದು ತಿಳಿದುಬಂದಿದೆ. 32 ಸ್ವಿಸ್ ಪ್ರವಾಸಿಗರು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು ಮೊದಲ ಪ್ರಯಾಣವನ್ನು ಇದರ ಮೂಲಕ ಕೈಗೊಂಡಿದ್ದಾರೆ. ವಾರಣಾಸಿಯ ಗಂಗಾನದಿಯ ದಂಡೆಯ ಮೇಲೆ ಗುಜರಾತ್‌ನ ಕಚ್ ಮತ್ತು ರಾಜಸ್ಥಾನದಲ್ಲಿ ಇದೇ ರೀತಿಯ ಕ್ರೂಸರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾದ ‘ಟೆಂಟ್ ಸಿಟಿ’

ಪ್ರಧಾನಿ ಮೋದಿಯವರು ವಿಶ್ವದ ಅತಿ ಉದ್ದದ ನದಿ ಕ್ರೂಸರ್ ಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ Read More »

ರಾಷ್ಟ್ರೀಯ ನ್ಯೂಸ್

ನಿರಂತರ ಜೀವಬೆದರಿಕೆ ಹಿನ್ನೆಲೆ ➤ ಗನ್ ಲೈಸೆನ್ಸ್ ಪಡೆದುಕೊಂಡ ನೂಪುರ್ ಶರ್ಮಾ..!

(ನ್ಯೂಸ್ ಕಡಬ) newskadaba.com ನವದೆಹಲಿ, ಜ. 12. ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರು ಆತ್ಮರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.   ಬಿಜೆಪಿ ರಾಷ್ಟ್ರೀಯ ವಕ್ತಾರೆಯಾಗಿದ್ದ ನೂಪುರ್‌ ಶರ್ಮ, ಖಾಸಗಿ ಟಿವಿ ವಾಹಿನಿಯೊಂದರಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಪ್ರವಾದಿ ಪೈಗಂಬರ್‌ ಕುರಿತಾಗಿ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು. ಬಳಿಕ ದೇಶಾದ್ಯಂತ ಭಾರೀ ಪ್ರತಿಭಟನೆಯೂ ನಡೆದಿತ್ತು ಅಲ್ಲದೇ ಹಲವು ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಬೆನ್ನಲ್ಲೇ ಬಿಜೆಪಿ ಕೂಡಾ ಇವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಮಾಡಿತ್ತು.

ನಿರಂತರ ಜೀವಬೆದರಿಕೆ ಹಿನ್ನೆಲೆ ➤ ಗನ್ ಲೈಸೆನ್ಸ್ ಪಡೆದುಕೊಂಡ ನೂಪುರ್ ಶರ್ಮಾ..! Read More »

ರಾಷ್ಟ್ರೀಯ ನ್ಯೂಸ್
Scroll to Top