death

ಮಣಿಪಾಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಣಿಪಾಲ, ಡಿ. 09. ರಸ್ತೆ ಬದಿಯಲ್ಲಿ  ಕೆಟ್ಟು ನಿಂತ ಲಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆಯು  ಪರ್ಕಳ ಎಸ್‌ಬಿಐ ಬ್ಯಾಂಕಿನ ಎದುರು ನಡೆದಿದೆ. ಮೃತರನ್ನು ಪರ್ಕಳದ ಶೆಟ್ಟಿಬೆಟ್ಟುವಿನ ದೇವು ಪೂಜಾರಿ ಎಂಬವರ ಮಗ ಸೃಜನ್ ಸಾಗರ್ ಎಂದು ಗುರುತಿಸಲಾಗಿದೆ. ಟೈಯರ್ ಸಿಡಿದ ಟ್ಯಾಂಕರ್ ಲಾರಿಯನ್ನು ಚಾಲಕ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಈ ವೇಳೆ ಬೈಕಿನಲ್ಲಿ ಬಂದ ಸೃಜನ್, ಲಾರಿಯ ಹಿಂಬದಿಗೆ ಢಿಕ್ಕಿ ಹೊಡೆದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ […]

ಮಣಿಪಾಲ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು Read More »

ಕರಾವಳಿ

ಭಾರತ ಮೂಲದ ವಿದ್ಯಾರ್ಥಿಗೆ ಚಾಕು ಇರಿತ..!

(ನ್ಯೂಸ್ ಕಡಬ) newskadaba.com ನವದೆಹಲಿ, ಡಿ. 07. ಭಾರತ ಮೂಲದ ವಿದ್ಯಾರ್ಥಿಯನ್ನು ಇರಿದು ಹತ್ಯೆಗೈದಿರುವ ಘಟನೆ ಕೆನಡಾದ ಒಂಟಾರಿಯೊದಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯ ನಿವಾಸದಲ್ಲೇ ವಾಸವಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮೃತ ವಿದ್ಯಾರ್ಥಿಯನ್ನು 22 ವರ್ಷದ ಗುರಾಸಿಸ್ ಸಿಂಗ್ ಎಂದು ಗುರುತಿಸಲಾಗಿದೆ. ಲ್ಯಾಂಬ್ಟನ್ ಕಾಲೇಜಿನಲ್ಲಿ ಮೊದಲನೆ ವರ್ಷದ ಬಿಸಿನೆಸ್ ಮ್ಯಾನೇಜ್ ಮೆಂಟ್ ಪದವಿ ವಿದ್ಯಾರ್ಥಿಯಾಗಿದ್ದ ಗುರಾಸಿಸ್ ಸಿಂಗ್ ಅನ್ನು ಆತನ ಕಕೋಣೆಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದ 36 ವರ್ಷದ ಕ್ರಾಸ್ಲೀ ಹಂಟರ್ ಎಂಬ ವ್ಯಕ್ತಿ ರವಿವಾರ ಚೂರಿಯಿಂದ ಇರಿದಿದ್ದಾನೆ. ಅಡುಗೆ ಕೋಣೆಯಲ್ಲಿ

ಭಾರತ ಮೂಲದ ವಿದ್ಯಾರ್ಥಿಗೆ ಚಾಕು ಇರಿತ..! Read More »

ಕ್ರೈಮ್ ನ್ಯೂಸ್

ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಡಿ. 07. ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ  ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (46) ಎಂದು ಗುರುತಿಸಲಾಗಿದೆ. ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಘ್ನೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ ೩ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್‌ನಿಂದ ಬಿದ್ದಿದ್ದರು.

ಬೈಕ್ ಅಪಘಾತದಲ್ಲಿ ಗಾಯಗೊಡಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಡಿ. 04. ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿದ್ದರು. ಸೋಮವಾರ ನೇತ್ರಾವತಿ ಈಜಾಡಲು ಸಂಜೆ ನದಿಯಲ್ಲಿ ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ಎಂಬಲ್ಲಿಯ ಓಡಿ ಎಂಬವರ

ನೇತ್ರಾವದಿ ನದಿಯಲ್ಲಿ ಮುಳುಗಿ ಆರ್‌ಎಸ್‌ಎಸ್‌ ಕಾರ್ಯಕರ್ತ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರ ಮೃತ್ಯು

(ನ್ಯೂಸ್ ಕಡಬ) newskadaba.com ಡಿ. 03 ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ದಾಚಿಗಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಉಗ್ರರಿರುವ ಮಾಹಿತಿಯ ಹಿನ್ನೆಲೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಡಿ.01ರಂದು ಕಾರ್ಯಾಚರಣೆ ಪ್ರಾರಂಭವಾಗಿದ್ದು, ಇಂದು ಬೆಳಿಗ್ಗೆ ಓರ್ವ ಉಗ್ರ ಸಾವನ್ನಪ್ಪಿದ್ದಾನೆ.  ದಾಚಿಗಂ ಅರಣ್ಯ ಪ್ರದೇಶಕ್ಕೂ ಮುನ್ನ ಶ್ರೀನಗರದ ಹರ್ವಾನ್ ಅರಣ್ಯಪ್ರದೇಶದಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ್ದರು. ನಂತರ ಉಗ್ರರ ಅಡಗುತಾಣ

ಭದ್ರತಾ ಪಡೆ ನಡೆಸಿದ ಎನ್ಕೌಂಟರ್ನಲ್ಲಿ ಓರ್ವ ಉಗ್ರ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಡಿ. 02.ಬೆಳ್ತಂಗಡಿ: ನೇತ್ರಾವತಿ ನದಿಗೆ ಇಳಿದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಬೆಳಾಲು ಗ್ರಾಮದ ಕೂಡಿಗೆ ಎಂಬಲ್ಲಿ ಡಿಸೆಂಬರ್ 2ರ ಸಂಜೆ ಸಂಭವಿಸಿದೆ. ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ ಕಾಣೆಯಾದ ವ್ಯಕ್ತಿ. ಇವರು ಯಾವುದೋ ಕಾರಣಕ್ಕೆ ನದಿಗೆ ಇಳಿದಿದ್ದು, ನಂತರ ಮುಳುಗಿ ಕಾಣೆಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಶೌರ್ಯ ವಿಪತ್ತು ನಿರ್ವಹಣೆ ತಂಡದ ಸದಸ್ಯರು ಭೇಟಿ ನೀಡಿದ್ದು, ಮುಳುಗು ತಜ್ಞ ಈಶ್ವರ್ ಮಲ್ಪೆಯನ್ನು ಕರೆಸಲಾಗಿತ್ತು. ಪ್ರಸಾದ್

ಬೆಳ್ತಂಗಡಿ: ನೇತ್ರಾವತಿ ನದಿಯಲ್ಲಿ ಮುಳುಗಿ ವ್ಯಕ್ತಿ ನಾಪತ್ತೆ Read More »

ಕರಾವಳಿ

ಬೈಕ್- ಸರ್ಕಾರಿ ಬಸ್ ಡಿಕ್ಕಿ: ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ರಾಯಚೂರು, ಡಿ. 02. ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕವಿತಾಳ ಗ್ರಾಮದ ಬಳಿ ನಡೆದಿದೆ. ಮೃತ ಬೈಕ್ ಸವಾರನನ್ನು ದೇವತಗಲ್ ಗ್ರಾಮದ ನಿವಾಸಿ ರಂಗನಾಥ ನಾಯಕ (35) ಎಂದು ಗುರುತಿಸಲಾಗಿದೆ. ಲಿಂಗಸುಗೂರು ಮೂಲಕ ರಾಯಚೂರಿಗೆ ಬರುತ್ತಿದ್ದ ಬಾದಾಮಿ ಘಟಕಕ್ಕೆ ಸೇರಿದ ವಾಯುವ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.  

ಬೈಕ್- ಸರ್ಕಾರಿ ಬಸ್ ಡಿಕ್ಕಿ: ಸವಾರ ಮೃತ್ಯು Read More »

ಕ್ರೈಮ್ ನ್ಯೂಸ್

ಅರಣ್ಯ ಇಲಾಖೆಯ ಸಿಬ್ಬಂದಿ ಕಚೇರಿಯೊಳಗೆ ಕುಸಿದು ಬಿದ್ದು ಮೃತ್ಯು..!

(ನ್ಯೂಸ್ ಕಡಬ) newskadaba.com ನ. 30. ರಾತ್ರಿ ಸಮಯದಲ್ಲಿ ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕಚೇರಿಯೊಳಗೆ ಕುಸಿದು ಬಿದ್ದು ಮೃತಪಟ್ಟ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ಮೃತಪಟ್ಟವರನ್ನು ವೀರಕಂಬಗ್ರಾಮದ ಮಜ್ಜೋನಿ ದಿವಂಗತ ಕೃಷ್ಣಪ್ಪ ಮೂಲ್ಯರ ಪುತ್ರ ಜಯರಾಮ‌ ಮೂಲ್ಯ(45) ಎಂದು ಗುರುತಿಸಲಾಗಿದೆ. ಅವರು ಕಳೆದ ಸುಮಾರು 30 ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ.29ರಂದು ರಾತ್ರಿ ಪಾಳಿಯಲ್ಲಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ವೇಳೆ ಇವರಿಗೆ ತಲೆಸುತ್ತು ಬರುವ ವಿಚಾರ ಇಲಾಖೆಯ

ಅರಣ್ಯ ಇಲಾಖೆಯ ಸಿಬ್ಬಂದಿ ಕಚೇರಿಯೊಳಗೆ ಕುಸಿದು ಬಿದ್ದು ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಹೆಜ್ಜೇನು ಕಡಿತ: ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಬಜಪೆ, ನ. 29. ಹೆಜ್ಜೇನು ಕಡಿತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ದಿನಪತ್ರಿಕೆ ವಿತರಕರೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ನ. 28ರಂದು ಕೊನೆಯುಸಿರೆಳೆದಿದ್ದಾರೆ. ಮೃತ ದುರ್ದೈವಿಯನ್ನು ಪೇಜಾವರ ಪಡ್ಡೋಡಿಯ ನಿವಾಸಿ, ದಿನಪತ್ರಿಕೆ ವಿತರಕ ಪುಷ್ಪಾರಾಜ ಶೆಟ್ಟಿ (45) ಎಂದು ಗುರುತಿಸಲಾಗಿದೆ.  ಪುಷ್ಪಾರಾಜ ಅವರು ಬಜಪೆ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಕೆಂಜಾರು ತಾಂಗಡಿಯಲ್ಲಿ ನ. 27ರ ಬೆಳಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಅವರ ಮೇಲೆ ಹೆಜ್ಜೇನಿನ ಹಿಂಡು ದಾಳಿ ನಡೆಸಿತ್ತು. ಇದರಿಂದಾಗಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಹೆಜ್ಜೇನು ಕಡಿತ: ವ್ಯಕ್ತಿ ಮೃತ್ಯು..! Read More »

ಕ್ರೈಮ್ ನ್ಯೂಸ್

ರಸ್ತೆ ಅಪಘಾತ: 6 ವರ್ಷದ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಡಿಕೇರಿ, ನ. 28. ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ನರ್ಸರಿ ಬಳಿ ನಡೆದಿದೆ. ಮೃತ ದುರ್ದೈವಿಯನ್ನು ಸ್ಥಳೀಯ ನಿವಾಸಿ ರವಿ ಹಾಗೂ ಸಿಂಧು ದಂಪತಿ ಪುತ್ರಿ ಗಾನವಿ(6) ಎಂದು ಗುರುತಿಸಲಾಗಿದೆ. ಈಕೆ ಮಜ್ಜಿಗೆಹಳ್ಳ ಪರಂಬು ಶಾಲೆಯ 1ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗೋಣಿಕೊಪ್ಪ ಕಡೆಯಿಂದ ಹುಣಸೂರು ಕಡೆಗೆ ತೆರಳುತ್ತಿದ್ದ ಲಾರಿ ರಸ್ತೆಯಲ್ಲಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ಗಾನವಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ರಸ್ತೆ ಅಪಘಾತ: 6 ವರ್ಷದ ಬಾಲಕಿ ಮೃತ್ಯು..! Read More »

ಕ್ರೈಮ್ ನ್ಯೂಸ್
Scroll to Top