death

ಬಸ್ ಢಿಕ್ಕಿಯಾಗಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌‌ಗೆ ಗುದ್ದಿದ ಸ್ಕೂಟರ್ ➤ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಪು, ಫೆ.14. ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಮೂಡಬೆಟ್ಟು ಬಳಿ ಸ್ಕೂಟರಿನಲ್ಲಿ ಚಲಾಯಿಸುತ್ತಿದ್ದ ಸಹಸವಾರೆಯ ಎಡ ಕಾಲಿಗೆ ಬಸ್ಸಿನ ಹಿಂಬದಿ ಢಿಕ್ಕಿ ಹೊಡೆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್‌ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಬಿದ್ದು ಹಿಂಬದಿಯಿದ್ದ ಯುವತಿ ಮೃತಪಟ್ಟ, ಸವಾರ ಗಾಯಗೊಂಡ ಘಟನೆ ವರದಿಯಾಗಿದೆ.  

ಬಸ್ ಢಿಕ್ಕಿಯಾಗಿ ನಿಯಂತ್ರಣ ತಪ್ಪಿ ಬ್ಯಾರಿಕೇಡ್‌‌ಗೆ ಗುದ್ದಿದ ಸ್ಕೂಟರ್ ➤ ಯುವತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಲಿಫ್ಟ್ ನಲ್ಲಿ ಸಿಲುಕಿ ಬಾಲಕನೋರ್ವ ಮೃತ್ಯು

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.14. ಉತ್ತರ ದಿಲ್ಲಿ ಜಿಲ್ಲೆಯ ಹೊರ ವಲಯದ ಬವಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಲರ್ ಫ್ಯಾಕ್ಟರಿಯೊಂದರ ಲಿಫ್ಟ್‌ ಅಡಿ ಸಿಲುಕಿ 15 ವರ್ಷದ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಮೃತ ಬಾಲಕನನ್ನು ಲೋಕೇಶ್ ಎಂದು ಗುರುತಿಸಲಾಗಿದ್ದು, ಆತನ ತಾಯಿಯು ಆ ಫ್ಯಾಕ್ಟರಿಯಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇನ್ನು ಬಾಲಕ ಆಟವಾಡುತ್ತಾ, ಲಿಫ್ಟ್ ಅಡಿಗೆ ಹೋಗಿದ್ದು, ಯಾರೋ ಲಿಫ್ಟ್ ಗಾಗಿ ಗುಂಡಿ ಒತ್ತಿದಾಗ ಕೆಳಗೆ ಬಂದಿರುವ ಎಲಿವೇಟರ್ ಅಡಿಗೆ ಸಿಕ್ಕಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಲಿಫ್ಟ್ ನಲ್ಲಿ ಸಿಲುಕಿ ಬಾಲಕನೋರ್ವ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.!

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.13. ಕ್ಷುಲಕ ಕಾರಣಕ್ಕೆ ಕಾರ್ಮಿಕರ ಮಧ್ಯೆ ಹೊಡೆದಾಟ ನಡೆದು ಓರ್ವ ಮೃತಪಟ್ಟು, ಮತ್ತಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕುಳಾಯಿ ಬಳಿ ಸಂಭವಿಸಿದೆ. ಮೃತ ಯುವಕನ್ನು ಬಿಹಾರ ಮೂಲದ ಚೋಟು ಕುಮಾರ್ (21) ಎಂದು ಗುರುತಿಸಲಾಗಿದೆ. ಮೃತ ಯುವಕ ಮತ್ತು ಆರೋಪಿಗಳು ಕುಳಾಯಿಯ ಮಾರ್ಬಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಊಟಕ್ಕೆ ಸಂಬಂಧಿಸಿಂತೆ ಮೂವರ ಮಧ್ಯೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.  

ಸುರತ್ಕಲ್: ಕಾರ್ಮಿಕರ ನಡುವೆ ಹೊಡೆದಾಟ     ➤  ಓರ್ವ ಮೃತ್ಯು.! Read More »

ಕರಾವಳಿ, ಕ್ರೈಮ್ ನ್ಯೂಸ್

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಸಿರುಗುಪ್ಪ, ಫೆ.12. ತಾಲೂಕಿನ ಕೆಂಚನಗುಡ್ಡದ ಸಮೀಪದ ಹರಿಯುತ್ತಿರುವ ತುಂಗಭದ್ರಾ ನದಿಯ ನಡುವೆ ಇರುವ ಗಡ್ಡೆ ಖಾದರ್ ಭಾಷ ಉರುಸ್ ಗೆ ಬಂದಿದ್ದ ನಬಿರಸೂಲ್(18) ಎಂಬುವ ಯುವಕ ತುಂಗಭದ್ರಾ ನದಿಯಲ್ಲಿ ಸ್ಥಾನ ಮಾಡಲು ಹೋಗಿ ಕೆಸರಿನಲ್ಲಿ ಸಿಕ್ಕಿಕೊಂಡು ಮೃತ ಪಟ್ಟಿರುವ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯು ಸೀಮಾಂದ್ರ ಪ್ರದೇಶದ ರಾಯದುರ್ಗ ತಾಲೂಕಿನ ಬಿ.ಹಿರೇಹಾಳ್ ಗ್ರಾಮದವನೆಂದು ಪತ್ತೆ ಹಚ್ಚಲಾಗಿದೆ ಈ ಬಗ್ಗೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ ಎಂದು  ವರದಿ ತಿಳಿದು ಬಂದಿದೆ.  

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು Read More »

ಕರ್ನಾಟಕ

ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ,12. ದಕ್ಷಿಣ ಆಫ್ರಿಕಾದ ರ್ಯಾಪರ್ ಕೀರ್ನಾನ್ ಫೋರ್ಬ್ಸ್ (35) ರನ್ನು ಡರ್ಬನ್ನ ಜನಪ್ರಿಯ ರೆಸ್ಟೋರೆಂಟ್ ಒಂದರ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರ್ಯಾಪರ್ ಎಂದು ಗುರುತಿಸಲ್ಪಡುವ ಅವರ ಮೇಲೆ ಆರು ಬಾರಿ ಗುಂಡು ಹಾರಿಸಲಾಗಿದೆ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ತಿಳಿಸಿವೆ. ಗಾಯಕನ ಸಾವಿಗೆ ಸಂತಾಪ ಸೂಚಿಸಿ, ಫೋರ್ಬ್ಸ್ ಅವರ ಪೋಷಕರು ಫೋರ್ಬ್ಸ್ ರ ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಣೆ ಹೊರಡಿಸಿದ್ದಾರೆ. “ನಮ್ಮ ಪ್ರೀತಿಯ ಮಗನ ನಿಧನವನ್ನು ನಾವು ತೀವ್ರ ದುಃಖದಿಂದ ಒಪ್ಪಿಕೊಳ್ಳುತ್ತೇವೆ” ಎಂದು

ಕೀರ್ನಾನ್ ಫೋರ್ಬ್ಸ್ ಗುಂಡೇಟಿಗೆ ಬಲಿ Read More »

ರಾಷ್ಟ್ರೀಯ ನ್ಯೂಸ್

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು               

(ನ್ಯೂಸ್ ಕಡಬ)newskadaba.com ತುಮಕೂರು, ಫೆ.12. ತುಮಕೂರಿನಲ್ಲಿ ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಚಿಕ್ಕ ಹುಲಿಕುಂಟೆಯ ಅನಿಲ್ ಹಾಗೂ ಆಂದ್ರದ ಶ್ರೀಧರ್ ಎಂದು ಗುರುತಿಸಲಾಗಿದೆ. ಇಬ್ಬರು ಬೈಕ್ ನಲ್ಲಿ ಸೌತೆಕಾಯಿ ವ್ಯಾಪಾರಕ್ಕೆ ತೆರಳುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಈ ಸಂಬಂಧ ಪಟ್ಟನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.    

ಬೈಕ್ ಗೆ ಟಿಪ್ಪರ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತ್ಯು                Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಆಕಸ್ಮಿಕವಾಗಿ ನೀರಿಗೆ ಬಿದ್ದು ಬಾಲಕಿ ಮೃತ್ಯು ➤ಪರಿಹಾರದ ಹಣಕ್ಕಾಗಿ ‘ಹೆತ್ತ’ ಹಾಗೂ ‘ದತ್ತು’ ಪೋಷಕರ ನಡುವೆ ಪೈಪೋಟಿ!

(ನ್ಯೂಸ್ ಕಡಬ) newskadaba.com ಭುವನೇಶ್ವರ್, ಫೆ.12. ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದ ಬಾಲಕಿಗೆ ಸರಕಾರ ನೀಡಿದ ಪರಿಹಾರದ ಹಣಕ್ಕಾಗಿ ಹೆತ್ತವರು ಹಾಗೂ ಆ ಮಗುವನ್ನು ದತ್ತು ಪಡೆದ ಪೋಷಕರ ನಡುವೆ ಹಗ್ಗ ಜಗ್ಗಾಟ ನಡೆದಿರುವ ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಮೂರು ತಿಂಗಳ ಹಿಂದೆ 16 ವರ್ಷದ ನಮಿತಾ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದಳು. ಮೃತ ಬಾಲಕಿಯ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರವನ್ನು ಸರಕಾರ ಘೋಷಣೆ ಮಾಡಿತ್ತು. ಒಸ್ತಿಯಾ ಗ್ರಾಮದ ನಿವಾಸಿಯಾಗಿದ್ದ ನಮಿತಾಗೆ ಜನ್ಮ

 ಆಕಸ್ಮಿಕವಾಗಿ ನೀರಿಗೆ ಬಿದ್ದು ಬಾಲಕಿ ಮೃತ್ಯು ➤ಪರಿಹಾರದ ಹಣಕ್ಕಾಗಿ ‘ಹೆತ್ತ’ ಹಾಗೂ ‘ದತ್ತು’ ಪೋಷಕರ ನಡುವೆ ಪೈಪೋಟಿ! Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಬೈಕ್  ಅಪಘಾತ; ಯುವಕನೋರ್ವ ಮೃತ್ಯು !  

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.12. ಮಂಗಳೂರಿನ ಅಡ್ಯಾರ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮಾಣಿಲ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲದಲ್ಲಿ ವರದಿಯಾಗಿದೆ. ಗೋಪಾಲಕೃಷ್ಣ ಮಣಿಯಾಣಿರವರ ಪುತ್ರ ಕಾರ್ತಿಕ್ (24) ಮೃತರು ಎಂದು ಗುರುತಿಸಲಾಗಿದೆ.  ಈತ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ.

ಮಂಗಳೂರು: ಬೈಕ್  ಅಪಘಾತ; ಯುವಕನೋರ್ವ ಮೃತ್ಯು !   Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!     

(ನ್ಯೂಸ್ ಕಡಬ)newskadaba.com ಸುಳ್ಯ, ಫೆ.12. ಈಜಲು ನೀರಿಗಿಳಿದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅಜ್ಜಾವರ ಪಯಸ್ವಿನಿ ನದಿಯಲ್ಲಿ ಸಂಭವಿಸಿದೆ. ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಯುವಕರ ಗುಂಪು ಪಕ್ಕದಲ್ಲೇ ಇದ್ದ ಪಯಸ್ವಿನಿ ನದಿಗೆ ಈಜಲು ತೆರಳಿದ್ದು, ಈ ವೇಳೆ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಬಳಿಕ ಮೃತದೇಹವನ್ನು ಹೊರತೆಗೆದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸುಳ್ಯ: ಈಜಲು ನೀರಿಗಿಳಿದ ಯುವಕರಿಬ್ಬರು ಮೃತ್ಯು!      Read More »

ಕರಾವಳಿ, ಕ್ರೈಮ್ ನ್ಯೂಸ್

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾಂಬುಲ್, ಫೆ.12.  ಶತಮಾನದ ಭೀಕರವಾದ ಭೂಕಂಪಕ್ಕೆ ನಲುಗಿರುವ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳಲ್ಲಿ  ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಒಟ್ಟು ಮೃತರ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 24,617 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 3,575 ಮಂದಿ ಮೃತಪಟ್ಟಿದ್ದಾರೆ  ಎಂದು ವರದಿ ತಿಳಿಸಿದೆ. ಟರ್ಕಿಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಉಭಯ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.  

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top