ಮಂಗಳೂರು: ಬೈಕ್  ಅಪಘಾತ; ಯುವಕನೋರ್ವ ಮೃತ್ಯು !  

(ನ್ಯೂಸ್ ಕಡಬ)newskadaba.com ವಿಟ್ಲ, ಫೆ.12. ಮಂಗಳೂರಿನ ಅಡ್ಯಾರ್ ಬಳಿ ನಡೆದ ಬೈಕ್ ಅಪಘಾತದಲ್ಲಿ ಮಾಣಿಲ ನಿವಾಸಿ ಯುವಕನೋರ್ವ ಮೃತಪಟ್ಟ ಘಟನೆ ವಿಟ್ಲದಲ್ಲಿ ವರದಿಯಾಗಿದೆ.

ಗೋಪಾಲಕೃಷ್ಣ ಮಣಿಯಾಣಿರವರ ಪುತ್ರ ಕಾರ್ತಿಕ್ (24) ಮೃತರು ಎಂದು ಗುರುತಿಸಲಾಗಿದೆ.  ಈತ ಮಂಗಳೂರಿನಲ್ಲಿ ಡೆಕೋರೇಷನ್ ಕೆಲಸ ನಿರ್ವಹಿಸುತ್ತಿದ್ದು, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಅಡ್ಯಾರ್ ಬಳಿ ಅಪಘಾತ ನಡೆದಿದೆ.

Scroll to Top