death

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್ ಢಿಕ್ಕಿ ➤ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30. ನಗರದ ಬೆಂದೂರ್ ವೆಲ್ ಬಳಿ ರಸ್ತೆ ದಾಟುತ್ತಿದ್ದ ವೇಳೆ ಬಸ್ ಢಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮೃತರನ್ನು ಐರಿನ್ ಡಿಸೋಜ(55) ಎಂದು ಗುರುತಿಸಲಾಗಿದೆ. ಸಿಟಿ ಬಸ್ ಬೆಂದೂರ್ ವೆಲ್ ಜಂಕ್ಷನ್ ನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದು, ಈ ವೇಳೆ ಅದೇ ಬಸ್ಸಿನಿಂದ ಇಳಿದು ಬಸ್ಸಿನ ಮುಂಭಾಗದಿಂದ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮಂಗಳೂರು: ರಸ್ತೆ ದಾಟುತ್ತಿದ್ದ ಮಹಿಳೆಗೆ ಬಸ್ ಢಿಕ್ಕಿ ➤ ಸ್ಥಳದಲ್ಲೇ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಸತಿ ಸಮುಚ್ಚಯದ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು.!

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30 ಯುವಕನೋರ್ವ ವಸತಿ ಸಮುಚ್ಚಯದ 14ನೇ ಮಹಡಿಯಿಂದ ಆಕಸ್ಮಿಕವಾಗಿ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಇಂದು ಮುಂಜಾನೆ ನಗರದ ಕದ್ರಿಯಿಂದ ವರದಿಯಾಗಿದೆ.ಮೊಬೈಲ್ ಕೇರ್ ನ ಜಿ.ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್(21) ಮೃತಪಟ್ಟವರು. ಕದ್ರಿಯ ಕೆಪಿಟಿ ಹಿಂಬದಿಯಲ್ಲಿರುವ ಪ್ಲಾನೆಟ್ ಎಸ್.ಕೆ.ಎಸ್. ವಸತಿ ಸಮುಚ್ಚಯದಲ್ಲಿ ಇಂದು ಮುಂಜಾನೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದೆ.ರಮಝಾನ್ ಉಪವಾಸದ ಹಿನ್ನೆಲೆಯಲ್ಲಿ ಸಹರಿ ಉಪಾಹಾರ ಸೇವಿಸಿದ ಬಳಿ ಫ್ಲ್ಯಾಟ್ ನ ಬಾಲ್ಕನಿಗೆ ಹೋಗಿದ್ದ

ವಸತಿ ಸಮುಚ್ಚಯದ 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು.! Read More »

ಕರಾವಳಿ, ಕರ್ನಾಟಕ

ಠಾಣೆಯಲ್ಲೇ ಕುಸಿದು ಬಿದ್ದು ಪೊಲೀಸ್ ಸಿಬಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.30. ಪೊಲೀಸ್ ಸಿಬಂದಿಯೋರ್ವರು ಠಾಣೆಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಆದೂರುನಲ್ಲಿ ನಡೆದಿದೆ. ಆದೂರು ಪೊಲೀಸ್ ಠಾಣಾ ಪೊಲೀಸ್ ಸಿಬ್ಬಂದಿ ಕೆ.ಅಶೋಕ್ ಮೃತ ಪಟ್ಟವರು ಎನ್ನಲಾಗಿದೆ. ಬೆಳಿಗ್ಗೆ ಶೌಚಾಲಯದಲ್ಲಿ ಕುಸಿದು ಬಿದ್ದ ಇವರನ್ನು ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದರು. ಇವರು ಪೆರ್ಲಡ್ಕ ಪೊಯಿನಾ ನಿವಾಸಿಯಾಗಿದ್ದಾರೆ.  

ಠಾಣೆಯಲ್ಲೇ ಕುಸಿದು ಬಿದ್ದು ಪೊಲೀಸ್ ಸಿಬಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿ.!

  (ನ್ಯೂಸ್ ಕಡಬ)newskadaba.com ಚೆನ್ನೈ, ಮಾ. 30 ಅಪ್ಪನ ಮಾತಿಗೆ ಮನನೊಂದು 9 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ತಿರುವಳ್ಳೂರ್ ನಲ್ಲಿ  ನಡೆದಿದೆ.ಮನೆಯ ಬಳಿ ಆಡುತ್ತಿದ್ದ ಮಗಳಿಗೆ ತಂದೆ ಕೃಷ್ಣಮೂರ್ತಿ ಆಡಿದ್ದು ಸಾಕು ಈಗ ಹೋಗಿ ಮನೆಯಲ್ಲಿ ಓದು ಎಂದು ಹೇಳಿ ಮಗಳ ಕೈಯಲ್ಲಿ ಮನೆಯ ಕೀಕೊಟ್ಟು ಕೆಲಸಕ್ಕೆ ಹೋಗಿದ್ದಾರೆ. ಕೃಷ್ಣಮೂರ್ತಿ ಸಂಜೆ ಬಂದು ಮನೆಒಳಗೆ ಹೋಗಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮಗಳು ಪತ್ತೆಯಾಗಿದ್ದಾಳೆ. ಕೂಡಲೇ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗಳನ್ನು ಆಸ್ಪತ್ರೆಗೆ ದಾಖಲು

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆಗೆ ಶರಣಾದ ಬಾಲಕಿ.! Read More »

ರಾಷ್ಟ್ರೀಯ ನ್ಯೂಸ್

ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು ➤ ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್.!!

(ನ್ಯೂಸ್ ಕಡಬ)newskadaba.com ದಾವಣಗೆರೆ, ಮಾ. 30 ದಾವಣಗೆರೆಯ ರಿಂಗ್ ರಸ್ತೆಯಲ್ಲಿ ಮಹಾಂತೇಶ್(35) ಎಂಬುವವರ ಕೊಲೆ ನಡೆದಿತ್ತು. ಕೊಲೆ ಬಳಿಕ ಶವದ ಮುಂದೆ ಪತ್ನಿ ಶ್ವೇತಾ (27) ಬಿಕ್ಕಿ ಬಿಕ್ಕಿ ಅತ್ತಿದ್ದಳು. ಇದೀಗ ಪೊಲೀಸರ ತನಿಖೆಯಲ್ಲಿ ಶ್ವೇತಾಳ ಸರಸದಾಟ ಬಯಲಾಗಿದ್ದು, ಗೆಳೆಯ ಚಂದ್ರಶೇಖರ್ (28) ಜೊತೆ ಸೆರೆಮನೆ ಸೇರಿದ್ದಾಳೆ. ಪೊಲೀಸರ ತನಿಖೆ ವೇಳೆ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವ ವಿಚಾರವನ್ನ ಶ್ವೇತಾ ಒಪ್ಪಿಕೊಂಡಿದ್ದಾಳೆ. ಕೊಲೆಯಾದ ಮಹಾಂತೇಶ್ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬೈಚವಳ್ಳಿ  ಗ್ರಾಮದ ನಿವಾಸಿಯಾಗಿದ್ದು, ದಾವಣಗೆರೆಯ ಕಟಿಂಗ್

ಗಂಡ ಸತ್ತಾಗ ಬಿಕ್ಕಿ ಬಿಕ್ಕಿ ಅತ್ತವಳ ಸರಸದಾಟ ಬಯಲು ➤ ಇನಿಯನ ಜೊತೆಗಿನ ಕಾಮದಾಟ ತನಿಖೆಯಲ್ಲಿ ರಿವೀಲ್.!! Read More »

ಕರ್ನಾಟಕ

ಮಂಗಳೂರು: ಸಹರಿ ಉಪಹಾರ ಸೇವಿಸಿ ಯುವಕ ಆಯತಪ್ಪಿ ಬಿದ್ದು ಮೃತ್ಯು           

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.30. ರಂಝಾನ್ ಹಿನ್ನೆಲೆ ಸಹರಿ ಉಪಾಹಾರ ಸೇವಿಸಿ ಫ್ಲ್ಯಾಟ್ ನ ಹೊರಗೆ ಬಂದ ಯುವಕ ಆಕಸ್ಮಿಕವಾಗಿ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ಕದ್ರಿಯಲ್ಲಿ ನಡೆದಿದೆ. ಮಂಗಳೂರಿನ ಅಬ್ದುಲ್ ಸಲೀಂ ಎಂಬವರ ಪುತ್ರ ಮುಹಮ್ಮದ್ ಶಮಾಲ್(20) ಮೃತ ಯುವಕ‌ ಎಂದು ಗುರುತಿಸಲಾಗಿದೆ.  

ಮಂಗಳೂರು: ಸಹರಿ ಉಪಹಾರ ಸೇವಿಸಿ ಯುವಕ ಆಯತಪ್ಪಿ ಬಿದ್ದು ಮೃತ್ಯು            Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಕಡಬ, ಮಾ.30. ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ದೈವ ನರ್ತಕರೊಬ್ಬರು ಇಹಲೋಕ ತ್ಯಜಿಸಿದ ಘಟನೆ ಮಾ.30 ರಂದು ಕಡಬ ಸಮೀಪದ ಎಡಮಂಗಲ ಗ್ರಾಮದಿಂದ ವರದಿಯಾಗಿದೆ. ಗ್ರಾಮದಲ್ಲಿ ದೈವ ನರ್ತಕರಾಗಿ ಹೆಸರುವಾಸಿಯಾಗಿದ್ದ ಕಾಂತು ಅಜಿಲ ಮೂಲಂಗೀರಿ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಹಲವಾರು ವರ್ಷಗಳಿಂದ ಎಡಮಂಗಲ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾ.30 ರಂದು ಎಡಮಂಗಲ ಗ್ರಾಮದ ಇಡ್ಯಡ್ಕದಲ್ಲಿ ಗ್ರಾಮಕ್ಕೆ ಸಂಬಂಧಿಸಿದ ನೇಮೊತ್ಸವ ನಡೆಯುತ್ತಿತ್ತು. ದೈವ ನರ್ತನ ಮಾಡುತ್ತಿರುವಾಗಲೇ ಕುಸಿದು

ಕಡಬ: ದೈವ ನರ್ತನ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮೆಕ್ಸಿಕೊ: ವಲಸಿಗರ ಬಂಧನ ಕೇಂದ್ರದಲ್ಲಿ ಭೀಕರ ಅಗ್ನಿದುರಂತ…!!        ➤ ಕನಿಷ್ಠ 37 ಮಂದಿ ಮೃತ್ಯು

(ನ್ಯೂಸ್ ಕಡಬ)Newskadaba.com ಮೆಕ್ಸಿಕೊ: ಮಾ.29  ಮೆಕ್ಸಿಕೊ ದೇಶದ ರಾಜಧಾನಿಯಲ್ಲಿನ ವಲಸಿಗರ ಬಂಧನ ಕೇಂದ್ರದಲ್ಲಿ ರಾತ್ರಿ ಸಂಭವಿಸಿದ ಭೀಕರ ಅಗ್ನಿದುರಂತದಲ್ಲಿ ಕನಿಷ್ಠ 37 ಮಂದಿ ಸಾವನ್ನಪ್ಪಿದ್ದಾರೆ.ಮೆಕ್ಸಿಕೊಸಿಟಿಯ ರಸ್ತೆ ಬದಿಗಳಲ್ಲಿ ಬೀಡುಬಿಟ್ಟಿದ್ದ ಸುಮಾರು 71 ವಲಸಿಗರನ್ನು ವಶಕ್ಕೆ ತೆಗೆದುಕೊಂಡು ಬಂಧನ ಕೇಂದ್ರದಲ್ಲಿರಿಸಿದ್ದರು.ಇದಾದ ಕೆಲ ಹೊತ್ತಿನ ಬಳಿಕ ಅಗ್ನಿ ಅವಘಡ ಸಂಭವಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಅಗ್ನಿ ದುರಂತಕ್ಕೆ ಸಂಬಂಧಿಸಿ ಮೆಕ್ಸಿಕೊದ ರಾಷ್ಟ್ರೀಯ ವಲಸೆ ಸಂಸ್ಥೆಯು ತನಿಖೆಯನ್ನು ಆರಂಭಿಸಿದೆ. ಆದರೆ ಅವಘಡಕ್ಕೆ ಕಾರಣ ಹಾಗೂ ಮೃತಪಟ್ಟವರು ಯಾವ ದೇಶಕ್ಕೆ ಸೇರಿದವರು ಎಂಬ ಬಗ್ಗೆ ಈತನಕ ಅದು

ಮೆಕ್ಸಿಕೊ: ವಲಸಿಗರ ಬಂಧನ ಕೇಂದ್ರದಲ್ಲಿ ಭೀಕರ ಅಗ್ನಿದುರಂತ…!!        ➤ ಕನಿಷ್ಠ 37 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ಬೈಕ್‌ ಮತ್ತು ಜೀಪ್ ನಡುವೆ ಅಪಘಾತ     ➤ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಪುಣೆ, ಮಾ.29. ಬೈಕ್‌ ಗೆ ಜೀಪ್ ಡಿಕ್ಕಿ ಹೊಡೆದು ಐವರು ಮೃತಪಟ್ಟ ಘಟನೆ ನಡೆದಿದೆ. ಈ ಭೀಕರ ಅಪಘಾತದ ಹಿನ್ನೆಲೆ ಜೀಪ್​​ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಸುಂದರಾಬಾಯಿ(28) ಗೌರವ್ ಮಾದೆ (5) ನಿತಿನ್​​ ಮಾದೆ(25) ಮತ್ತೊಂದು ಮಗು ಮೃತಪಟ್ಟಿದೆ ಎನ್ನಲಾಗಿದೆ. ಮೃತರಲ್ಲಿ ಒಬ್ಬರ ಹೆಸರು ಪತ್ತೆಯಾಗಿಲ್ಲ. ಅರ್ಚನಾ ಮಾದೆ ಮತ್ತು ಸುಹಾಸ್​​ ಮಾದೆ ಅವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  

ಬೈಕ್‌ ಮತ್ತು ಜೀಪ್ ನಡುವೆ ಅಪಘಾತ     ➤ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ಐದು ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                    

(ನ್ಯೂಸ್ ಕಡಬ)Newskadaba.com ಚಿತ್ರದುರ್ಗ: ಮಾ.29 ಪಿಯುಸಿ ಪರೀಕ್ಷೆ ಮುಗಿದ ಬೆನ್ನಿಗೇ ಮೂವರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಅದೃಷ್ಟವಶಾತ್, ಜೊತೆಗಿದ್ದ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕು ನಂದನಹೊಸೂರು ಗ್ರಾಮದ ಸಂಜಯ್ (18), ಎಚ್​.ಡಿ.ಪುರದ ಗಿರೀಶ್ (18) ನಂದನಹೊಸೂರು ಗೊಲ್ಲರಹಟ್ಟಿಯ ಮನು (18) ಸಾವಿಗೀಡಾದವರು. ಹೊಳಲ್ಕೆರೆ ತಾಲ್ಲೂಕಿನ ನಂದನಹೊಸೂರು ಗ್ರಾಮದ ಕೆರೆಯಲ್ಲಿ ಈ ಅವಘಡ ಸಂಭವಿಸಿದೆ. ಪಿಯುಸಿ ಪರಿಕ್ಷೆ ಮುಗಿಸಿ ಗ್ರಾಮಗಳಿಗೆ ಮರಳಿದ್ದ ಐವರು ಕೆರೆಗೆ ಈಜಲು ಧುಮುಕಿದ್ದರು. ಗುಂಡಿಕೆರೆ ತುಂಬಾ

ಪಿಯುಸಿ ಪರೀಕ್ಷೆ ಬೆನ್ನಿಗೇ ಮೂವರು ವಿದ್ಯಾರ್ಥಿಗಳ ಮರಣ..! ➤ ಅದೃಷ್ಟವಶಾತ್ ಇನ್ನಿಬ್ಬರು ಪ್ರಾಣಾಪಾಯದಿಂದ ಪಾರು                     Read More »

ಕರ್ನಾಟಕ
Scroll to Top