death

ಹೋಟೆಲ್‌ನ ಕೊಠಡಿಯೊಂದರಲ್ಲಿ ಚಲನಚಿತ್ರ ನಿರ್ದೇಶಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ.!

(ನ್ಯೂಸ್ ಕಡಬ)newskadaba.com ಉತ್ತರ ಪ್ರದೇಶ,ಮೇ.25 ಭೋಜ್‌ಪುರಿ ಚಲನಚಿತ್ರ ನಿರ್ದೇಶಕ ಸುಭಾಷ್ ಚಂದ್ರ ತಿವಾರಿ ಅವರು ಉತ್ತರ ಪ್ರದೇಶದ ಸೋನ್‌ಭದ್ರಾದಲ್ಲಿರುವ ಹೋಟೆಲ್ನ ಕೊಠಡಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸುಭಾಷ್ ಅವರು ತಮ್ಮ ತಂಡದೊಂದಿಗೆ ಸೋನ ಭದ್ರಾದಲ್ಲಿರುವ ಹೋಟೆಲ್ ತಿರುಪತಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ತಂಗಿದ್ದರು. ಈ ವೇಳೆ ಅವರು ಮೃತಪಟ್ಟಿರುವುದಾಗಿ ತಿಳಿದಿದೆ. ಆದರೆ. “ಅವರ ಸಾವಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯನ್ನು ಪಡೆದ ನಂತರ ಹೆಚ್ಚಿನ ತನಿಖೆ […]

ಹೋಟೆಲ್‌ನ ಕೊಠಡಿಯೊಂದರಲ್ಲಿ ಚಲನಚಿತ್ರ ನಿರ್ದೇಶಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ.! Read More »

ರಾಷ್ಟ್ರೀಯ ನ್ಯೂಸ್

3 ವರ್ಷದ ಮಗುವಿನ ಮೇಲೆ ಹರಿದ ಕಾರು.!➤ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಹೈದರಾಬಾದ್,ಮೇ.25  ಪಾರ್ಕಿಂಗ್‌ ಏರಿಯಾದಲ್ಲಿ ಮಲಗಿದ್ದ 3 ವರ್ಷದ ಮಗುವಿನ ಮೇಲೆ ಎಸ್ ಯುವಿ ಕಾರು ಹರಿದು ಮಗು ಮೃತಪಟ್ಟಿರುವ ಘಟನೆ ಹೈದರಬಾದ್‌ ನಲ್ಲಿ ನಡೆದಿರುವುದು ವರದಿಯಾಗಿದೆ. ಕಲಬುರಗಿಯ ಶಹಬಾದ್‌ ಮೂಲದ ಮಹಿಳೆಯಾಗಿರುವ ಕವಿತಾ ತನ್ನ ಎರಡು ಮಕ್ಕಳೊಂದಿಗೆ ಕೆಲಸ ಹುಡುಕಿಕೊಂಡು ಹೈದರಬಾದ್‌ ಗೆ ಬಂದಿದ್ದಾರೆ.ಪಾರ್ಕಿಂಗ್‌ ಏರಿಯಾದಲ್ಲಿ ಮಗುವನ್ನು ಮಲಗಿಸಿದ್ದ ವೇಳೆ ಎಸ್ ಯುವಿ ಕಾರು ಪಾರ್ಕ್‌ ಮಾಡುವ ನಿಟ್ಟಿನಲ್ಲಿ ಬಂದು ಮಲಗಿದ್ದ ಮಗುವಿನ ಮೇಲೆ ಹರಿದು ಮತ್ತೆ ಹಿಂದಕ್ಕೆ ಹೋಗಿದೆ. ತಲೆಗೆ ತೀವ್ರತರದ ಏಟಾಗಿ

3 ವರ್ಷದ ಮಗುವಿನ ಮೇಲೆ ಹರಿದ ಕಾರು.!➤ಪ್ರಕರಣ ದಾಖಲು Read More »

ರಾಷ್ಟ್ರೀಯ ನ್ಯೂಸ್

ಮಾರಾಕಾಸ್ತ್ರಗಳಿಂದ ಕೊಚ್ಚಿ `ಕಾಂಗ್ರೆಸ್ ಕಾರ್ಯಕರ್ತ’ನ ಬರ್ಬರ ಹತ್ಯೆ.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.25   ಬೆಂಗಳೂರಿನ ಚೌಡೇಶ್ವರಿ ನಗರದ ಹಳ್ಳಿ ರುಚಿ ಬಳಿ ಕಾಂಗ್ರೆಸ್ ಕಾರ್ಯಕರ್ತರ ರವಿ ಅಲಿಯಾಸ್ ಮತ್ತಿ ರವಿ (42) ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಬೈಕ್ ಗಳಲ್ಲಿ ಬಂದಿದ್ದ ದುಷ್ಕರ್ಮಿಗಳು ರವಿ ಹತ್ಯೆಗೂ ಮುನ್ನ ಏರಿಯಾಗಳಲ್ಲಿ ಹಾಕಿದ್ದ ಬ್ಯಾನರ್ ಹರಿದು ಹಾಕಿದ್ದಾರೆ. ಬಳಿಕ ರವಿಯನ್ನು ಸಿಎಂಹೆಚ್ ಬಾರ್ ನಿಂದ ಅಟ್ಟಾಡಿಸಿಕೊಂಡು ಬಂದು ಹಳ್ಳಿ ರುಚಿ ಹೋಟೆಲ್ ಮುಂಭಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ

ಮಾರಾಕಾಸ್ತ್ರಗಳಿಂದ ಕೊಚ್ಚಿ `ಕಾಂಗ್ರೆಸ್ ಕಾರ್ಯಕರ್ತ’ನ ಬರ್ಬರ ಹತ್ಯೆ.! Read More »

ಕರ್ನಾಟಕ

4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಮೃತ್ಯು.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.25  ಪೊಲೀಸರು ವಶಕ್ಕೆ ಪಡೆಯಲು ತೆರಳಿದ್ದ ವೇಳೆ ವ್ಯಕ್ತಿಯೊಬ್ಬ ಮಹಡಿ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 4ನೇ ಮಹಡಿಯಿಂದ ಜಿಗಿದು 31 ವರ್ಷದ ಮೊಹಮ್ಮದ್ ಹುಸೇನ್ ಮೃತಪಟ್ಟಿದ್ದಾನೆ. ಬೊಮ್ಮನಹಳ್ಳಿ ಬೇಗೂರು ರಸ್ತೆಯಲ್ಲಿ ನಡೆದಿದೆ. ಮಹಮ್ಮದ್ ಹುಸೇನ್​ನನ್ನು ವಶಕ್ಕೆ ಪಡೆಯಲು ನಾಲ್ವರು ಪೊಲೀಸರ ತಂಡ ತೆರಳಿತ್ತು. ನಾಲ್ಕನೇ ಮಹಡಿಯ ಟೆರೇಸ್ ಮೇಲಿಂದ ವಶಕ್ಕೆ ಪಡೆಯುತ್ತಿದ್ದ ವೇಳೆ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

4ನೇ ಮಹಡಿಯಿಂದ ಜಿಗಿದು ವ್ಯಕ್ತಿ ಮೃತ್ಯು.! Read More »

ಕರ್ನಾಟಕ

ವಿದ್ಯುತ್ ಶಾಕ್ ಹೊಡೆದು ಕುಮಾರಧಾರ ನದಿಯ ಬಳಿ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಮೇ.24. ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ಹಿರೇಬಂಡಾಡಿ ಗ್ರಾಮದ ಅಡಕ್ಕಲ್ ಕುಮಾರಧಾರ ನದಿಯ ಬಳಿ ನಡೆದಿದೆ. ಶರೀಪುದ್ದೀನ್(19) ಮೃತ ಯುವಕ.  ಈತ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇತ್ತೀಚೆಗೆ ತೇರ್ಗಡೆಯಾಗಿದ್ದ. ಯುವಕ  ಹಮ್ಮಬ್ಬ ಅವರ ಸಹೋದರಿಯ ಪುತ್ರನಾಗಿದ್ದು, ಹುಮ್ಮಬ್ಬ ಅವರ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಇದೀಗ ಬಾಲಕನ ಅಗಲಿಕೆಯಿಂದ ತಾಯಿ ಕಣ್ಣೀರಲ್ಲಿ ಮುಳುಗಿದ್ದಾರೆ. ಘಟನೆಯ ಬಗ್ಗೆ  ಹುಮ್ಮಬ್ಬ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ವಿದ್ಯುತ್ ಶಾಕ್ ಹೊಡೆದು ಕುಮಾರಧಾರ ನದಿಯ ಬಳಿ ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು

(ನ್ಯೂಸ್ ಕಡಬ)newskadaba.com ಉಡುಪಿ, ಮೇ.24. ಮುಂಬೈಯಿಂದ ಮಗಳ ಮದುವೆ ಕಾರ್ಯಕ್ಕೆಂದು ಬಂದ ವ್ಯಕ್ತಿಯೊಬ್ಬರು ಹೊಟೇಲಿ ನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ರಾತ್ರಿ ವೇಳೆ ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ದೊಂಬಿವಿಲಿಯ ರಾಮಕೃಷ್ಣ ಮುದ್ದು ಶೆಟ್ಟಿ (68) ಎಂದು ಗುರುತಿಸಲಾಗಿದೆ.

ಉಡುಪಿ: ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಆಟೋಗೆ  ಡಿಕ್ಕಿಯಾದ ಬೈಕ್➤ಒಬ್ಬರು ಮೃತ್ಯು, ನಾಲ್ವರಿಗೆ ಗಾಯ

(ನ್ಯೂಸ್ ಕಡಬ)newskadaba.com ದಾವಣಗೆರೆ ,ಮೇ.23 ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಡಿಸಿಸಿ ಬ್ಯಾಂಕ್ ಅಧಿಕಾರಿ  ಮೃತಪಟ್ಟ ಘಟನೆ ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಉದ್ದಗಟ್ಟ ಕ್ರಾಸ್ ಬಳಿ ಆಟೋ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಡಿಸಿಸಿ ಬ್ಯಾಂಕ್ ಕ್ಷೇತ್ರ ವಿಸ್ತರಣಾಧಿಕಾರಿ ಹಾಲಸ್ವಾಮಿ(53) ಮೃತಪಟ್ಟಿದ್ದಾರೆ. ಹಾಲಸ್ವಾಮಿ ಹಿರೇಮಲ್ಲನಹೊಳೆ ಗ್ರಾಮದ ಗೊಲ್ಲರಹಟ್ಟಿ ನಿವಾಸಿಯಾಗಿದ್ದಾರೆ. ಅಪಘಾತದಲ್ಲಿ ಆಟೋದಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಜಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ಆಟೋಗೆ  ಡಿಕ್ಕಿಯಾದ ಬೈಕ್➤ಒಬ್ಬರು ಮೃತ್ಯು, ನಾಲ್ವರಿಗೆ ಗಾಯ Read More »

ಕರ್ನಾಟಕ

ದಂಪತಿ ಕಲಹಕ್ಕೆ ಇಬ್ಬರು ಕಂದಮ್ಮಗಳು ಬಲಿ

(ನ್ಯೂಸ್ ಕಡಬ)newskadaba.com ಹಾವೇರಿ,ಮೇ.22 ಪತಿ-ಪತ್ನಿಯರ ನಡುವೆ ನಡೆಯುತ್ತಿದ್ದ ಜಗಳ ಹಾಗೂ ಸಂಶಯ ಎರಡು ಕಂದಮ್ಮಗಳನ್ನು ಬಲಿ ತೆಗೆದುಕೊಂಡ ಘಟನೆ ಹಾವೇರಿ ಜಿಲ್ಲೆ ರಾಣಿಬೆನ್ನೂರ ತಾಲೂಕಿನ ಸಣ್ಣಸಂಗಾಪುರ ಗ್ರಾಮದಲ್ಲಿ ನಡೆದಿದೆ. ಪತಿ ಮಂಜಯ್ಯ ಪಾಟೀಲಗೆ ಪತ್ನಿ ಸುನೀತಾ ಮೇಲೆ ಸಂಶಯ ಉಂಟಾಗಿದ್ದು, ನಿತ್ಯವೂ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಜಗಳದಿಂದ ಬೇಸತ್ತ ಸುನೀತಾ ಎರಡೂ ಮಕ್ಕಳನ್ನು ಕೊಠಡಿಯಲ್ಲಿ ನೇಣು ಹಾಕಿ, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಈ ಸಮಯದಲ್ಲಿ ಸಾಯುವ ಸಂಕಟದಲ್ಲಿದ್ದ ಸುನೀತಾ ಚೀರಿದ್ದಾಳೆ. ತಕ್ಷಣ ಧಾವಿಸಿದ ಅತ್ತೆ-ಮಾವ

ದಂಪತಿ ಕಲಹಕ್ಕೆ ಇಬ್ಬರು ಕಂದಮ್ಮಗಳು ಬಲಿ Read More »

ಕರ್ನಾಟಕ

ಪುತ್ತೂರು: ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಪುತ್ತೂರು, ಮೇ.22. ಕಾಲೇಜು ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ಕುಂಬ್ರದ ಜರತ್ತಾರಿನಲ್ಲಿ ನಡೆದಿದೆ. ಜರತ್ತಾರಿನ ಆನಂದ ಎಂಬವರ ಮಗ ರಿತೇಶ್(18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ರಿತೇಶ್ ಆತ್ಮಹತ್ಯೆಗೆ ಯತ್ನಿಸಿರುವ ವಿಚಾರ ಮನೆಯವರಿಗೆ ತಿಳಿದು ಬಂದು ಮನೆಯ ಸಮೀಪದ ಗುಡ್ಡದಲ್ಲಿ ಹೋಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ರಿತೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ‌.  

ಪುತ್ತೂರು: ಕಾಲೇಜು ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ರೈಲ್ವೇ ಹಳಿ ದಾಟುವಾಗ ಅವಘಡ ➤ ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com ಉಳ್ಳಾಲ, ಮೇ.22. ರೈಲು ಢಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಡ ಘಟನೆ ತೊಕ್ಕೊಟ್ಟು ಓಳಪೇಟೆ ಬಳಿ ನಡೆದಿದೆ. ಬಿಹಾರ ಮೂಲದ ಶ್ರವಣ್ ದಾಸ್ (38) ಮೃತರು ಎಂದು ಗುರುತಿಸಲಾಗಿದೆ. ಶ್ರವಣ್ ದಾಸ್ ಮೂಲತಃ ಬಿಹಾರದವಾರಾಗಿದ್ದು, ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ‌ ವಾಸಿಸುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಮನೆಗೆ ಬಂದು ಊಟಕ್ಕೆ ಸಾಂಬಾರ್ ತರಲೆಂದು ಹೊಟೇಲ್ ಗೆ ಹೋಗಿದ್ದು, ವಾಪಸ್ ಬರಲು ರೈಲ್ವೆ ಹಳಿ ದಾಟಿವಾಗ ರೈಲು ಢಿಕ್ಕಿ ಹೊಡೆದಿದೆ.

ಉಳ್ಳಾಲ: ರೈಲ್ವೇ ಹಳಿ ದಾಟುವಾಗ ಅವಘಡ ➤ ರೈಲು ಢಿಕ್ಕಿ ಹೊಡೆದು ಯುವಕ ಮೃತ್ಯು Read More »

ಕರಾವಳಿ
Scroll to Top