death

ಸುಳ್ಯ: ಅಪಘಾತ ಪ್ರಕರಣ..! ಗಂಭೀರ ಗಾಯಗೊಂಡಿದ್ದ ವೈದ್ಯ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 05. ಕೆಲ ದಿನಗಳ ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೈದ್ಯರೋರ್ವರು ಮೃತಪಟ್ಟ ಘಟನೆ ಸುಳ್ಯದಲ್ಲಿ ವರದಿಯಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಿಂದ ಮನೆಗೆ ಹೋಗುವ ಸಂಧರ್ಭದಲ್ಲಿ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಸುಳ್ಯ: ಅಪಘಾತ ಪ್ರಕರಣ..! ಗಂಭೀರ ಗಾಯಗೊಂಡಿದ್ದ ವೈದ್ಯ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತದಿಂದ ಸರ್ಕಾರಿ ವೈದ್ಯ, ಗ್ರಾ.ಪಂ ಅಧ್ಯಕ್ಷ ಸಾವು !

(ನ್ಯೂಸ್‌ ಕಡಬ) newskadaba.com ಜು.01: ಕಳೆದ ಒಂದೇ ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ 19 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಈಗ ಶಿವಮೊಗ್ಗದಲ್ಲಿ ಸರ್ಕಾರಿ ವೈದ್ಯ ಹಾಗೂ ತುಮಕೂರಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಿರಿಯ ವೈದ್ಯಾಧಿಕಾರಿಯಾಗಿದ್ದ ಡಾ.ಸಂದೀಪ್ ಅವರು ಸೋಮವಾರ ಹೃದಯಾಘಾತದಿಂದ ಸಾವನ್ನಪ್ಪಿದರು. ಶುಕ್ರವಾರ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ ನಂತರ ಇವರಿಗೆ ರಾತ್ರಿ ಎದೆನೋವು ಕಾಣಿಸಿಕೊಂಡಿದೆ.

ಹೃದಯಾಘಾತದಿಂದ ಸರ್ಕಾರಿ ವೈದ್ಯ, ಗ್ರಾ.ಪಂ ಅಧ್ಯಕ್ಷ ಸಾವು ! Read More »

ಕರ್ನಾಟಕ

ರಸ್ತೆ ಅಪಘಾತ- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದುರ್ಮರಣ

(ನ್ಯೂಸ್ ಕಡಬ) newskadaba.com ಜೂ. 30. ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬಂಟ್ವಾಳದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೃತಪಟ್ಟ ಘಟನೆ ಬಿ.ಸಿ.ರೋಡಿನ ಅಜ್ಜಿಬೆಟ್ಟು ಕ್ರಾಸ್‌ ಬಳಿ ನಡೆದಿದೆ.   ಮೃತರನ್ನು ಶಂಭೂರು ಕೊಪ್ಪಳ ನಿವಾಸಿ ಚಿದಾನಂದ (50) ಎಂದು ಗುರುತಿಸಲಾಗಿದೆ. ಇವರು ತನ್ನ ದ್ವಿಚಕ್ರ ವಾಹನದಲ್ಲಿ ಬಿ.ಸಿ.ರೋಡ್‌ ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್‌ ಕಡೆಗೆ ದಾಟುವ ಸಂದರ್ಭ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್‌ ಲಾರಿ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಚಿದಾನಂದರು ಚಕ್ರದಡಿಗೆ

ರಸ್ತೆ ಅಪಘಾತ- ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ದುರ್ಮರಣ Read More »

ಕರಾವಳಿ, ಕ್ರೈಮ್ ನ್ಯೂಸ್

ಮಹಿಳೆಯ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದ ದುಷ್ಕರ್ಮಿಗಳು !

(ನ್ಯೂಸ್‌ ಕಡಬ) newskadaba.com ಜು.29 : ಮಹಿಳೆಯೊಬ್ಬರನ್ನು ಭೀಕರವಾಗಿ ಕೊಂದು ಮೂಟೆಕಟ್ಟೆ ಬಿಬಿಎಂಪಿ ಕಸದ ಲಾರಿಗೆ ಎಸೆದು ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಬೆಂಗಳೂರಿನ ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಸ್ಕೇಟಿಂಗ್‌ ಮೈದಾನದ ಬಳಿ ನಿಲ್ಲಿಸಿದ್ದ ಕಸದ ಲಾರಿಯಲ್ಲಿ ಇಂದು ಬೆಳಗ್ಗೆ ಮೂಟೆಯೊಂದು ಕಂಡು ಬಂದಿದ್ದು, ಪೌರಕಾರ್ಮಿಕರು ರಕ್ತದ ಕಲೆ ನೋಡಿ ಪರಿಶೀಲಿಸಿದಾಗ ಅದರೊಳಗೆ ಮಹಿಳೆ ಶವ ಪತ್ತೆಯಾಗಿದೆ. ಸ್ಥಳಕ್ಕೆ ಧಾವಿಸಿರುವ ಪೊಲೀಸರು ಪರಿಶೀಲನೆ ನಡೆಸಿದಾಗ ಸುಮಾರು 30-35 ವರ್ಷದ ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ

ಮಹಿಳೆಯ ಕೊಂದು ಮೂಟೆ ಕಟ್ಟಿ ಕಸದ ಲಾರಿಗೆ ಎಸೆದ ದುಷ್ಕರ್ಮಿಗಳು ! Read More »

ಕ್ರೈಮ್ ನ್ಯೂಸ್

‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು

(ನ್ಯೂಸ್‌ ಕಡಬ) newskadaba.com ಜೂ.28: ಪುನೀತ್ ರಾಜ್​ಕುಮಾರ್ ಜೊತೆ ‘ನಾ ಬೋರ್ಡು ಇರದ ಬಸ್ಸನು..’ ಹಾಡಿಗೆ ಮಸ್ತ್ ಆಗಿ ಕುಣಿದಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ 42 ವರ್ಷ ವಯಸ್ಸಾಗಿತ್ತು. ಮುಂಬೈನ ಅಂಧೇರಿ ಲೋಖಂಡ್‌ವಾಲಾ ಪ್ರದೇಶದಲ್ಲಿ ವಾಸಿಸುತ್ತಿದ್ದ ನಟಿ ಶೆಫಾಲಿ ಜೂನ್ 27ರ ಬೆಳಿಗ್ಗೆ 11 ಗಂಟೆ ಸುಮಾರಿಗೆ ತೀವ್ರ ಅಸ್ವಸ್ಥರಾದರು. ಅವರಿಗೆ ಎದೆನೋವು ಕಾಣಿಸಿಕೊಂಡಿತು. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ, ಯಾವುದೇ ಪ್ರಯೋಜನ ಆಗಲಿಲ್ಲ. ಆಗಲೇ ಅವರು ನಿಧನ

‘ಪಂಕಜಾ..’ ಹಾಡಿಗೆ ಕುಣಿದಿದ್ದ ಶೆಫಾಲಿ ಜರಿವಾಲ ಹೃದಯಘಾತದಿಂದ ಸಾವು Read More »

ಸಿನಿಮಾ

ಕಡಬ: ನಿವೃತ್ತ ಸೈನಿಕ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜೂ.18. ಭಾರತೀಯ ಸೇನೆಯಿಂದ ನಿವೃತ್ತಿ ಪಡೆದು ಊರಿನಲ್ಲಿ ನೆಲೆಸಿದ್ದ ಸೈನಿಕರೋರ್ವರು ಡಿಢೀರ್ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಘಟನೆ ಬುಧವಾರ ರಾತ್ರಿ ಕಡಬದಲ್ಲಿ ನಡೆದಿದೆ. ಮೃತರನ್ನು ಮೂಲತಃ ಕೊಂಬಾರು ನಿವಾಸಿ ಪ್ರಸ್ತುತ ಕಳಾರ ಸಮೀಪದ ಅಲಾರ್ಮೆಯಲ್ಲಿ ವಾಸವಾಗಿದ್ದ ರಂಗಸ್ವಾಮಿ ಎಂಬವರ ಪುತ್ರ ನಿವೃತ್ತ ಸೈನಿಕ ಪ್ರಭಾಕರನ್ ಎಂದು ಗುರುತಿಸಲಾಗಿದೆ. ಒಂದು ವರ್ಷದ ಹಿಂದಷ್ಟೇ ಸೇನೆಯಿಂದ ನಿವೃತ್ತಿ ಪಡೆದು ಊರಿಗೆ ಆಗಮಿಸಿದ್ದ ಅವರು ಹೆತ್ತವರೊಂದಿಗೆ ಕುಟುಂಬ ಸಮೇತರಾಗಿ ವಾಸವಿದ್ದರು. ರಂಗಸ್ವಾಮಿ ಮತ್ತು‌ ಸೆಲ್ಲಾಯಿ ದಂಪತಿಗಳಿಗೆ

ಕಡಬ: ನಿವೃತ್ತ ಸೈನಿಕ ಹೃದಯಾಘಾತದಿಂದ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಎಸಿ ಸ್ಫೋಟ- ಕೇರಳದ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಜೂ. 18. ಕೊಠಡಿಯಲ್ಲಿನ ಎಸಿ ಸ್ಫೋಟಗೊಂಡ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇರಳ ಮೂಲದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟವರನ್ನು ಎರ್ನಾಕುಲಂನ ಪರವೂರ್‌ ಮಂಜಲಿ ನಿವಾಸಿ ಬಶೀರ್ ಅವರ ಪುತ್ರ ಜಿಯಾದ್ ಎಂದು ಗುರುತಿಸಲಾಗಿದೆ.

ಎಸಿ ಸ್ಫೋಟ- ಕೇರಳದ ಯುವಕ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

12ನೇ ಮಹಡಿಯ ಬಾಲ್ಕನಿಯಿಂದ ಬಿದ್ದು 15ರ ಬಾಲಕಿ ಮೃತ್ಯು

(ನ್ಯೂಸ್ ಕಡಬ) newskadaba.com ಜೂ. 13. ವಸತಿ ಸಮುಚ್ಚಯದ 12ನೇ ಮಹಡಿಯ ಬಾಲ್ಕನಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು 15 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರು ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ವೈದ್ಯ ದಂಪತಿಯಾಗಿರುವ ಡಾ. ಮುಮ್ತಾಝ್ ಅಹ್ಮದ್ ಮತ್ತು ಖಮರ್ಜಹಾ ಬಾನು ಎಂಬವರ ಪುತ್ರಿ ಹಿಬಾ ಐಮನ್(15) ಎಂದು ಗುರುತಿಸಲಾಗಿದೆ. ಹಿಬಾ ಐಮನ್ ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಲು ಹಾಕುತ್ತಿದ್ದ ವೇಳೆ

12ನೇ ಮಹಡಿಯ ಬಾಲ್ಕನಿಯಿಂದ ಬಿದ್ದು 15ರ ಬಾಲಕಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: 11ಜನರು ಮೃತ್ಯು , 10 ಲಕ್ಷ ಪರಿಹಾರ ಘೋಷಿಸಿದ ಸಿಎಂ

(ನ್ಯೂಸ್ ಕಡಬ) newskadaba.com, ಜೂ.05. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ವಿಜಯೋತ್ಸವ ಸಂದರ್ಭದಲ್ಲಿ ದೊಡ್ಡ ಪ್ರಮಾಣದ ದುರಂತ ಸಂಭವಿಸಿದೆ. ಇಲ್ಲಿ ಕಾಲ್ತುಳಿತಕ್ಕೆ ಒಳಗಾಗಿ 11ಜನರು ಮೃತಪಟ್ಟಿದ್ದಾರೆ. 47 ಮಂದಿ ಗಾಯಗೊಂಡಿದ್ದಾರೆ. ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವ ವಯಸ್ಸಿನವರು. ನಾವು ಮೃತಪಟ್ಟವರ ಕುಟುಂಬದವರ ವಾರೀಸುದಾರರಿಗೆ ರೂ.10 ಲಕ್ಷ ಪರಿಹಾರವಾಗಿ ನೀಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಅವರು ದುರಂತದ ಕುರಿತು ತುರ್ತುಗೋಷ್ಟಿ ನಡೆಸಿದ ಸಿಎಂ, ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಗಾಯಗೊಂಡವರು ಪ್ರಾಣಾಪಾಯಾದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.ಈ ದುರಂತದ

ಆರ್‌ಸಿಬಿ ವಿಜಯೋತ್ಸವದಲ್ಲಿ ಕಾಲ್ತುಳಿತ: 11ಜನರು ಮೃತ್ಯು , 10 ಲಕ್ಷ ಪರಿಹಾರ ಘೋಷಿಸಿದ ಸಿಎಂ Read More »

ಕರ್ನಾಟಕ

ಉಡುಪಿ: ಕಾಪುವಿನಲ್ಲಿ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com, ಜೂ.03. ಬೆಂಗಳೂರು: ಕಾಪು : ಬೆಳ್ಳೆ ಗ್ರಾಮದ ಪೀಟರ್ ಮಥಾಯಸ್(65) ಎಂಬವರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು ಇವರಿಗೆ ಕೋವಿಡ್ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಪು ತಹಶೀಲ್ದಾರ್ ಮೃತರ ಮನೆಗೆ ಭೇಟಿ ನೀಡಿ ಮನೆಯವರ ರೋಗ್ಯವನ್ನು ವಿಚಾರಿಸಿ ಸಾಂತ್ವನ ಹೇಳಿದರು. ಮನೆಯ ತರರಿಗೆ ಕೋವಿಡ್ ಲಕ್ಷಣಗಳಿಲ್ಲ ದು ದೃಢವಾಗಿದೆ.ಮೃತದೇಹವನ್ನು ಆಸ್ಪತ್ರೆಯಲ್ಲೇ ಇರಿಸಲಾಗಿದ್ದು, ಬುಧವಾರ ಕೋವೀಡ್ ಮಾರ್ಗಸೂಚಿಯನ್ನು ಅನುಸರಿಸಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ತಿಳಿಸಿದ್ದಾರೆ  

ಉಡುಪಿ: ಕಾಪುವಿನಲ್ಲಿ ಕೋವಿಡ್ ಪಾಸಿಟಿವ್ ಇದ್ದ ವ್ಯಕ್ತಿ ಮೃತ್ಯು Read More »

ಕರಾವಳಿ
Scroll to Top