death

ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಕ್ತಿನಗರ ನಾಲ್ಯಪದವಿನಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಹರ್ಷದ್‌ ಕೌಶಲ್‌ (17) ಎಂದು ಗುರುತಿಸಲಾಗಿದೆ. ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಈತ ಕರಾಟೆ ಪಟುವೂ ಆಗಿದ್ದ. ಗುರುವಾರದಂದು ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದ ಕೌಶಲ್‌ ಈ ಕೃತ್ಯವೆಸಗಿದ್ದಾನೆ‌. ಇನ್ನು ಮನೆಯಲ್ಲಿ ಕೌಶಲ್‌ ಹಾಗೂ ಅಜ್ಜಿ ಮಾತ್ರ ಇದ್ದು, ತಾಯಿ ಮತ್ತು ತಂದೆ ಕೆಲಸಕ್ಕೆ ಹೋಗಿದ್ದರು. ಸಂಜೆಯ ವೇಳೆ […]

ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ಸಹಸವಾರ SSLC ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 27. ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಅಡ್ಯಾರ್ ಎಂಬಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಅಡ್ಯಾರ್ ಪದವು ನಿವಾಸಿ ಶರಫುದ್ದೀನ್ (16) ಎಂದು ಗುರುತಿಸಲಾಗಿದೆ. ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ ಈತ ಗೆಳೆಯನೊಂದಿಗೆ ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಹಿಂಬದಿ ಸವಾರನಾಗಿದ್ದ ಶರಫುದ್ದೀನ್ ರಸ್ತೆಗೆಸೆಯಲ್ಪಟ್ಟು ತೀವ್ರ ರಕ್ತ ಸ್ರಾವವಾಗಿದ್ದು, ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.

ರಸ್ತೆ ಅಪಘಾತ- ಸಹಸವಾರ SSLC ವಿದ್ಯಾರ್ಥಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಮೃತ್ಯು

(ನ್ಯೂಸ್ ಕಡಬ) newskadaba.com ಕಲಬುರಗಿ, ಆ. 25. ಮನೆಯ ಎದುರಿಗಿದ್ದ ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡ ದಾರುಣ ಘಟನೆ ಕಲಬುರಗಿ ನಗರದ ಮುಜಾಹಿರ್ ಬಡಾವಣೆಯಲ್ಲಿ ನಡೆದಿದೆ. ಮೃತ ಮಗುವನ್ನು ಸೋನಿಯಾ ಗಾಂಧಿ ಆಶ್ರಯ ಕಾಲನಿಯ ಮಹಮ್ಮದ್ ಬುರ್‌ಹಾನುದ್ದೀನ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ (2) ಎಂದು ಗುರುತಿಸಲಾಗಿದೆ. ಗುರುವಾರದಂದು ಮಧ್ಯಾಹ್ನ ಮಗು ಆಟ ಆಡಿಕೊಂಡು ಮನೆಯ ಮುಂಭಾಗದಲ್ಲಿನ ಒಳಚರಂಡಿ ಕಡೆಗೆ ಹೋಗಿದ್ದು, ಈ ವೇಳೆ ತಿಳಿಯದೇ ಚರಂಡಿಯಲ್ಲಿ ಬಿದ್ದು, ಉಸಿರುಗಟ್ಟಿ ಕೊನೆಯುಸಿರಳೆದಿದೆ

ತೆರೆದ ಚರಂಡಿಗೆ ಬಿದ್ದು ಎರಡು ವರ್ಷದ ಮಗು ದಾರುಣ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೇಕರಿ ಮಾಲಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ. 22. ಬೇಕರಿ ಅಂಗಡಿ ಮಾಲೀಕ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯ ಕುತ್ತಾರು ಸಮೀಪದ ಶಾಂತಿಬಾಗ್ ಎಂಬಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಮೂಲತಃ ಹಾಸನ ಜಿಲ್ಲೆಯ ಹಳೇಬೀಡು ರಸ್ತೆಯ ಬಲ್ಲೇನಹಳ್ಳಿ ನಿವಾಸಿ ರುದ್ರೇಶ್‌ ಎಂದು ಗುರುತಿಸಲಾಗಿದೆ. ಮಾಡಿಕೊಂಡವರು. ಇವರು ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಶಾಂತಿಬಾಗ್‌ ಬಳಿಯ ಬಾಡಿಗೆ ಮನೆಯೊಂದರಲ್ಲಿ ನೆಲೆಸಿದ್ದರು. ಹಾಸನದಿಂದ 12 ವರ್ಷಗಳ ಹಿಂದೆ ಬಂದಿದ್ದ ರುದ್ರೇಶ್‌ ಕುತ್ತಾರು

ಬೇಕರಿ ಮಾಲಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 21. ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ನೀಲೇಶ್ವರದ ತೈಕಡಪ್ಪುರ ಎಂಬಲ್ಲಿ ರವಿವಾರದಂದು ಸಂಜೆ ನಡೆದಿದೆ. ಮೃತಪಟ್ಟ ನೌಕರರನ್ನು ರಾಜೇಶ್ ಮತ್ತು ಸನೀಶ್ ಎಂದು ಗುರುತಿಸಲಾಗಿದೆ. ಮೀನು ಹಿಡಿಯುತ್ತಿದ್ದ ಸಂದರ್ಭ ರಾಜೇಶ್ ಆಕಸ್ಮಿಕವಾಗಿ ಸಮುದ್ರಕ್ಕೆ ಬಿದ್ದಿದ್ದು, ಉಳಿದವರು ಬೊಬ್ಬೆ ಹಾಕಿದಾಗ ಅಲ್ಲೇ ಇದ್ದ ಸನೀಶ್ ಸಮುದ್ರಕ್ಕೆ ಹಾರಿ ರಾಜೇಶ್ ನನ್ನು ರಕ್ಷಿಸಲೆತ್ನಿಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಕೂಡಾ ನೀರುಪಾಲಾಗಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಕರಾವಳಿ

ಕರಾವಳಿ ಪೊಲೀಸ್ ರಕ್ಷಣಾ ಬೋಟ್ ನ ನೌಕರರಿಬ್ಬರು ಸಮುದ್ರದಲ್ಲಿ ಮುಳುಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಗಳ ನಡುವೆ ಢಿಕ್ಕಿ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 21. ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಮೂವರು ಗಾಯಗೊಂಡ ಘಟನೆ ಪಂಪ್ ವೆಲ್ ಬಳಿ ಭಾನುವಾರದಂದು ರಾತ್ರಿ ಸಂಭವಿಸಿದೆ. ಮೃತರನ್ನು ಮೆಫಿನ್ ಥಾಮ್ಸ್ (25) ಎಂದು ಗುರುತಿಸಲಾಗಿದೆ. ಬೈಕೊಂದು ಇನ್ನೊಂದು ಬೈಕ್ ಗೆ ಹಿಂಬದಿನಿಂದ ಢಿಕ್ಕಿ ಹೊಡೆದಿದ್ದು, ಈ ವೇಳೆ ಮೆಫಿನ್ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೈಕ್ ಗಳ ನಡುವೆ ಢಿಕ್ಕಿ- ಓರ್ವ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಇಂಜೆಕ್ಷನ್ ಅಡ್ಡ ಪರಿಣಾಮ- ಚಿಕಿತ್ಸೆ ಫಲಿಸದೇ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ, ಆ. 20. ಜ್ವರಕ್ಕೆಂದು ವೈದ್ಯರು ನೀಡಿದ ಇಂಜೆಕ್ಷನ್ ನಿಂದ ಅಡ್ಡ ಪರಿಣಾಮ ಉಂಟಾಗಿ ಕುಂದಾಪುರ ಮೂಲದ ಯುವಕನೊಬ್ಬ ಬೆಂಗಳೂರಿನ ಕೆ.ಪಿ. ಅಗ್ರಹಾರದಲ್ಲಿ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ. ಮೃತ ಯುವಕನನ್ನು ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಬೆದ್ರಳ್ಳಿಯ ದಿ. ಚಂದ್ರಶೆಟ್ಟಿ ಎಂಬವರ ಮಗ ಅಮರ್ ಶೆಟ್ಟಿ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಹೋಟೆಲ್ ವ್ಯವಹಾರ ಮಾಡಿಕೊಂಡಿದ್ದ ಅಮರ್ ಶೆಟ್ಟಿ, ಆಗಸ್ಟ್ 13ರಂದು ಕೆ.ಪಿ. ಅಗ್ರಹಾರದ ಸಂಬಂಧಿಕರ ಮನೆಗೆ ಹೋಗಿದ್ದ ಸಂದರ್ಭ ಮೈಬಿಸಿ ಇರುವುದನ್ನು

ಇಂಜೆಕ್ಷನ್ ಅಡ್ಡ ಪರಿಣಾಮ- ಚಿಕಿತ್ಸೆ ಫಲಿಸದೇ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಆ. 20. ಕ್ವಾರ್ಟರ್ಸ್‌ನ ಮೇಲಿನಿಂದ ಬಿದ್ದು ವಲಸೆ ಕಾರ್ಮಿಕನೋರ್ವ ಮೃತಪಟ್ಟ ಘಟನೆ ಸೀತಾಂಗೋಳಿಯಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ರಾಜಸ್ತಾನ ಬೋಡಗಾನ್ ನಿವಾಸಿ ಕೇಮ್ರಾಜ್ ಗುಜ್ಜರ್ (43) ಎಂದು ಗುರುತಿಸಲಾಗಿದೆ. ಕಳೆದ 20 ವರ್ಷಗಳಿಂದ ಸೀತಾಂಗೋಳಿಯಲ್ಲಿ ಗ್ರಾನೈಟ್ ಹಾಗೂ ಮಾರ್ಬಲ್ ಕೆಲಸ ನಿರ್ವಹಿಸುತ್ತಿದ್ದ ಇವರು ಸೀತಾಂಗೋಳಿ ಪೇಟೆಯಲ್ಲಿರುವ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ರಾತ್ರಿ ಕ್ವಾರ್ಟರ್ಸ್‌ನ ಮೇಲಿನ ಮಹಡಿಯಲ್ಲಿ ನಿದ್ರಿಸುತ್ತಿದ್ದ ಇವರನ್ನು ಜೊತೆಗಿದ್ದವರು ಶನಿವಾರ ಮುಂಜಾನೆ ಎದ್ದು ನೋಡಿದಾಗ ಕೇಮ್ರಾಜ್ ಗುಜ್ಜರ್ ಕ್ವಾರ್ಟರ್ಸ್‌ನ ಕೆಳಗೆ

ಕ್ವಾರ್ಟರ್ಸ್ ಮೇಲೆ ಮಲಗಿದ್ದ ಕಾರ್ಮಿಕ ಕೆಳಗೆ ಬಿದ್ದು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ಪಂಜ ಕೆನರಾ ಬ್ಯಾಂಕ್ ಮಾಜಿ ಉದ್ಯೋಗಿ ಮೃತ್ಯು

(ನ್ಯೂಸ್ ಕಡಬ) newskadaba.com ವಿರಾಜಪೇಟೆ, ಆ. 19. ದ್ವಿಚಕೃ ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬ್ಯಾಂಕ್ ಉದ್ಯೋಗಿಯೋರ್ವರು ಮೃತಪಟ್ಟ ಘಟನೆ ವಿರಾಜಪೇಟೆ ಅಮ್ಮತ್ತಿ ರಸ್ತೆಯ ಸುಂಕದಕಟ್ಟೆ ಬಳಿ ನಡೆದಿದೆ. ಮೃತರನ್ನು ಮೂಲತಃ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ಪ್ರಸ್ತುತ ಅಮ್ಮತ್ತಿಯ ಕೆನರಾ ಬ್ಯಾಂಕ್ ಉದ್ಯೋಗಿ ಅಮೃತ(24) ಎಂದು ಗುರುತಿಸಲಾಗಿದೆ. ಇವರು ಈ ಹಿಂದೆ ಕಡಬ ತಾಲೂಕಿನ ಪಂಜ ಕೆನರಾ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಮೃತ ಅವರು ಎಂದಿನಂತೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ದ್ವಿಚಕ್ರ

ರಸ್ತೆ ಅಪಘಾತ- ಪಂಜ ಕೆನರಾ ಬ್ಯಾಂಕ್ ಮಾಜಿ ಉದ್ಯೋಗಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೃದಯಾಘಾತ- ಯುವನಟ ವಿಧಿವಶ

(ನ್ಯೂಸ್ ಕಡಬ) newskadaba.com ಮಂಡ್ಯ, ಆ. 18. ಹೃದಯಾಘಾತದಿಂದಾಗಿ 24 ವರ್ಷ ಯುವ ನಟನೋರ್ವ ನಿಧನರಾದ ಘಟನೆ ಮಂಡ್ಯದಿಂದ ವರದಿಯಾಗಿದೆ. ಮೃತ ನಟನನ್ನು ಪವನ್ ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರಾದ ಇವರು, ಪ್ರಸ್ತುತ ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು.

ಹೃದಯಾಘಾತ- ಯುವನಟ ವಿಧಿವಶ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top