death

ಸುಳ್ಯ :ವಸತಿಗೃಹವೊಂದರಲ್ಲಿ ಯುವಕ-ಯುವತಿ ಆತ್ಯಹತ್ಯೆಗೆ ಶರಣು.!

(ನ್ಯೂಸ್ ಕಡಬ) newskadaba.com ಸುಳ್ಯ  ಅ. 19: ಸುಳ್ಯ ನಗರದ ವಸತಿಗೃಹವೊಂದರಲ್ಲಿ ಯುವಕ ಹಾಗೂ ಯುವತಿಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ನಡೆದಿದೆ. ಆತ್ಮಹತ್ಯೆಗೆ ಶರಣಾದ ಯುವಕನನ್ನು ಐವರ್ನಾಡಿನ ಕಟ್ಟತ್ತಾರು ತಿಮ್ಮಪ್ಪ ಗೌಡರ ಪುತ್ರ ದರ್ಶನ್ ಎಂದು ತಿಳಿದು ಬಂದಿದೆ.   ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿದೆ .ಇನ್ನು ಆತ್ಮಹತ್ಯೆಗೆ ಶರಣಾಗಿರುವ ಯುವತಿ ಬೆಳ್ತಂಗಡಿ ನಿವಾಸಿ ಎಂದು ತಿಳಿದು ಬಂದಿದೆ. ಆದರೆ ಯುವಕ ಹಾಗೂ ಯುವತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ […]

ಸುಳ್ಯ :ವಸತಿಗೃಹವೊಂದರಲ್ಲಿ ಯುವಕ-ಯುವತಿ ಆತ್ಯಹತ್ಯೆಗೆ ಶರಣು.! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನವರಾತ್ರಿ ಉತ್ಸವಕ್ಕಾಗಿ ಅಳವಡಿಸಿದ ವಿದ್ಯುತ್ ಕೇಬಲ್ ತಗುಲಿ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಕುಂದಾಪುರ ಅ. 19: ನವರಾತ್ರಿ ಉತ್ಸವಕ್ಕಾಗಿ ಮಾಡಿದ್ದ ವಿದ್ಯುತ್ ಅಲಂಕಾರದ ಕೇಬಲ್ ತಗುಲಿ 16 ವರ್ಷದ ಬಾಲಕ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ.   ಇಲ್ಲಿನ ಉಪ್ಪಿನ ಕುದ್ರು ನಿವಾಸಿ ಗಂಗಾಧರ ಆಚಾರ್ ಅವರ ಪುತ್ರ ಧನುಷ್ (16) ಮೃತ ದುರ್ದೈವಿ ಬಾಲಕ .ಈತ ಹತ್ತನೆ ತರಗತಿ ಓದುತ್ತಿದ್ದ.ಧನುಷ್ ತನ್ನ ಮನೆ ಸಮೀಪದ ಶ್ರೀ ಲಲಿತಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವಕ್ಕೆಂದು ರಾತ್ರಿ 8:00 ಗಂಟೆಯ ಸುಮಾರಿಗೆ ಮನೆಯಿಂದ ಹೋಗಿದ್ದು, ರಾತ್ರಿ

ನವರಾತ್ರಿ ಉತ್ಸವಕ್ಕಾಗಿ ಅಳವಡಿಸಿದ ವಿದ್ಯುತ್ ಕೇಬಲ್ ತಗುಲಿ ಬಾಲಕ ಮೃತ್ಯು Read More »

ಕರಾವಳಿ, ಕರ್ನಾಟಕ

ಕಾರ್ಕಳ : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ

(ನ್ಯೂಸ್ ಕಡಬ) newskadaba.com ಕಾರ್ಕಳ ಅ. 19: ಕಾರ್ಕಳ ಚಿಕ್ಕಲ್ ಬೆಟ್ಟು ಎಂಬಲ್ಲಿ ಇಂದು ಮುಂಜಾನೆ ಸುಮಾರು 78 ವರುಷದ ವೃದ್ದೆಯೋರ್ವರು ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.   ಘಟನೆ ಕಾರ್ಕಳದ ಹಿರ್ಗಾನ್ ಗ್ರಾಮದ ಚಿಕ್ಕಲ್ ಬೆಟ್ಟು ಎಂಬಲ್ಲಿ ನಡೆದಿದೆ.  ವೃದ್ದೆ ಸುಲೋಚನಾ ಎಂಬುವರು ಮನೆ ಸಮೀಪದ ತೋಟದಲ್ಲಿ ಮುಂಜಾನೆ ಸೀಮೆ ಎಣ್ಣೆ ಹಾಗೂ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಕಾರ್ಕಳ : ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಶರಣಾದ ವೃದ್ದೆ Read More »

ಕರಾವಳಿ, ಕರ್ನಾಟಕ

ಕಲ್ಮಕಾರು: ಯುವಕ ಆತ್ಮಹತ್ಮಗೆ ಶರಣು

(ನ್ಯೂಸ್ ಕಡಬ) newskadaba.com ಕಲ್ಮಕಾರು ಅ. 18: ಕಲ್ಮಕಾರಿನಲ್ಲಿ ಯುವಕನೋರ್ವ ಮದ್ಯಾಹ್ನ ವೇಳೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ದಿನ ನಡೆದಿದೆ. ಕಲ್ಮಕಾರು ಗ್ರಾಮದ ಪಡ್ಪು ವಸಂತರವರ ಪುತ್ರ ಲೋಹಿತ್ (24)  ಶನಿವಾರ ಮದ್ಯಾಹ್ಮ ಮನೆಯ ಸಮೀಪದ ಮಾವಿವಮರಕ್ಕೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮದ್ಯಾಹ್ನ ನಡೆದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ್. ಮೃತ ಲೋಹಿತ್ ತಂದೆ ತಾಯಿ ಹಾಗೂ ತಂಗಿಯನ್ನು ಅಗಲಿದ್ದಾರೆ.  

ಕಲ್ಮಕಾರು: ಯುವಕ ಆತ್ಮಹತ್ಮಗೆ ಶರಣು Read More »

ಕರಾವಳಿ, ಕರ್ನಾಟಕ

ಕೊವೀಡ್ ಗೆ ಪತ್ರಕರ್ತ ಪವನ್ ಹೆತ್ತೂರು ನಿಧನ

(ನ್ಯೂಸ್ ಕಡಬ) newskadaba.com  ಹಾಸನ ಅ. 18: ಪ್ರಜಾವಾಣಿ,ವಿಜಯವಾಣಿ ಹಾಗೂ ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಪ್ರಜಾವಾಣಿ ಮೈಸೂರು ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್, ಪತ್ನಿ, ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್​ಗೆ ಆರೋಗ್ಯ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂದಿಸಲಿಲ್ಲ. ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು.ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ. ಪತ್ರಕರ್ತ ಪವನ್ ನಿಧನಕ್ಕೆ ಕರ್ನಾಟಕ

ಕೊವೀಡ್ ಗೆ ಪತ್ರಕರ್ತ ಪವನ್ ಹೆತ್ತೂರು ನಿಧನ Read More »

ಕರಾವಳಿ

ಕಾರ್ಕಳ: ಡೆತ್‌ ನೋಟ್‌ ಬರೆದಿಟ್ಟು ಅವಿವಾಹಿತ ವೃದ್ಧ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಅ.18: ವೃದ್ಧರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ರಥಬೀದಿಯಲ್ಲಿ ಕಳೆದ ದಿನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕೃಷ್ಣ ಯಾನೆ ಕಿಟ್ಟ(೬೫) ಎಂದು ಗುರುತಿಸಲಾಗಿದೆ.     ಕ್ಯಾಟರಸ್ ಕೆಲಸ ಮಾಡುತ್ತಿದ್ದ ಇವರು ಅವಿವಾಹಿತರಾಗಿದ್ದುಕೊಂಡು ಸಹೋದರನೊಂದಿಗೆ ರಥಬೀದಿಯ ಮನೆಯೊಂದರಲ್ಲಿ ವಾಸವಾಗಿದ್ದರು. ಘಟನಾ ಸ್ಥಳದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ. ಇನ್ನು ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.  ಈ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಕಳ: ಡೆತ್‌ ನೋಟ್‌ ಬರೆದಿಟ್ಟು ಅವಿವಾಹಿತ ವೃದ್ಧ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 18: ಕನ್ನಡದ ಹಲವಾರು ಧಾರಾವಾಹಿಯಲ್ಲಿ ನಟಿಸಿದ್ದ ಪ್ರಸಿದ್ಧ ನಟ, ಬರಹಗಾರ ಕೃಷ್ಣ ನಾಡಿಗ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ದಿನ ಶೂಟಿಂಗ್‌ನಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿದೆ. ಮೊದಲಿಗೆ ಎದೆನೋವು ಕಾಣಿಸಿಕೊಂಡಿತ್ತು. ನಂತರ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ‘ಮಿಲನ’, ‘ದೇವಿ’, ‘ಪಾರು’ ಮುಂತಾದ ಧಾರಾವಾಹಿಗಳಲ್ಲಿ ಇವರು ನಟಿಸಿದ್ದರು. ಸುಮಾರು ನಾಲ್ಕುದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ನಟ, ಬರಹಗಾರರಾಗಿ ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿನ ಇವರ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ ಕೂಡ ಸಂದಿತ್ತು. ಇವರು ಪತ್ನಿ

ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ Read More »

ಕರ್ನಾಟಕ

ಮರ್ಕಂಜ: ಹೆರಿಗೆ ವೇಳೆ ಮಹಿಳೆ ಮೃತ್ಯು ➤ ಮಗು ಕ್ಷೇಮ

(ನ್ಯೂಸ್ ಕಡಬ) newskadaba.com ಮರ್ಕಂಜ, ಅ.16: ಮರ್ಕಂಜದಿಂದ ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾಪುವಿಗೆ ಮದುವೆಯಾಗಿದ್ದ ಮಹಿಳೆ ಕಳೆದ ದಿನ ಹೆರಿಗೆ ವೇಳೆ ಲೋ ಬಿಪಿ ಹಾಗೂ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ.     ಚಂದ್ರಕಲಾರವರನ್ನು ಪುತ್ತೂರು ತಾಲೂಕಿನ ಕಾವು ಬಳ್ಳಿಕಾನ ನಿವಾಸಿ ಪ್ರವೀಣ್‌ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಕಲಾರವರು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮರ್ಕಂಜ: ಹೆರಿಗೆ ವೇಳೆ ಮಹಿಳೆ ಮೃತ್ಯು ➤ ಮಗು ಕ್ಷೇಮ Read More »

ಕರಾವಳಿ

ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ ➤ ಒಟ್ಟು 15 ಮಂದಿ ಮೃತ್ಯು.!

(ನ್ಯೂಸ್ ಕಡಬ) newskadaba.com ಕಾಬೂಲ್ ಅ. 14: ಅಫ್ಘಾನಿಸ್ಥಾನದ ವಾಯು ಸೇನೆಯ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 15 ಜನರು ಮೃತಪಟ್ಟಿದ್ದಾರೆ. ಮಂಗಳವಾರ ರಾತ್ರಿ ದಕ್ಷಿಣ ಹೆಲ್‍ಮಂದ್ ವ್ಯಾಪ್ತಿಯ ನವಾ ಜಿಲ್ಲೆಯಲ್ಲಿ ಅಫ್ಘಾನ್ ವಾಯುಸೇನೆ ಎರಡು ಹೆಲಿಕಾಪ್ಟರ್ ಗಳ ನಡುವೆ ಡಿಕ್ಕಿಯಾಗಿದೆ. ಒಂದು ಹೆಲಿಕಾಪ್ಟರ್ ನಲ್ಲಿ ಕಮಾಂಡೋಗಳನ್ನು ಒಂದು ಸ್ಥಳಕ್ಕೆ ಕರೆದೊಯ್ಯಲಾಗುತ್ತಿತ್ತು. ಮತ್ತೊಂದರಲ್ಲಿ ಗಾಯಾಳುಗಳನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಅಪಘಾತ ನಡೆದಿದ್ದು, ಸ್ಥಳದಲ್ಲಿಯೇ ಎಂಟು ಜನ ಮೃತ ಪಟ್ಟಿದ್ದಾರೆ ಎಂದು ವರದಿಯಾಗಿದೆ.

ವಾಯು ಸೇನೆಯ ಎರಡು ಹೆಲಿಕಾಪ್ಟರ್​ಗಳ ನಡುವೆ ಡಿಕ್ಕಿ ➤ ಒಟ್ಟು 15 ಮಂದಿ ಮೃತ್ಯು.! Read More »

ರಾಷ್ಟ್ರೀಯ ನ್ಯೂಸ್

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!!

(ನ್ಯೂಸ್ ಕಡಬ) newskadaba.com ಹಾವೇರಿ ಅ. 14: ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹಲ್ಲೆ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿ ಗ್ರಾಮದಲ್ಲಿ ನಡೆದಿದೆ.   ನಾಗರಾಜ ಗೊರವರ(22) ಹತ್ಯೆಯಾದ ಅಣ್ಣ. ಈತನನ್ನು ತಮ್ಮ ದಿಳ್ಳೆಪ್ಪ ಗೊರವರ (20) ಕೊಲೆ ಮಾಡಿದ್ದಾನೆ. ನಾಗರಾಜ ದಿನನಿತ್ಯ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡ್ತಿದ್ದ. ಹೆತ್ತವರಿಗೆ ನೀಡ್ತಿದ್ದ ಅಣ್ಣನ ಕಿರಿಕಿರಿಯಿಂದ ಬೇಸತ್ತು ಕೊಡಲಿಯಿಂದ ಕೊಚ್ಚಿ ತಮ್ಮ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಅಣ್ಣನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಣ್ಣನನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಮ್ಮ.!! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top