death

ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ ಅ. 28: ಕಾರ್ಕಳದಲ್ಲಿ ಕ್ವಾಲೀಸ್ ವಾಹನದ ಟಯರ್ ಸಿಡಿದು ಯುವಕ ಸಾವನ್ಬಪ್ಪಿದ ಘಟನೆ ಕುತ್ಲೂರು ಸಮೀಪದ ಕುಕ್ಕೆಜೆಯಲ್ಲಿ ನಡೆದಿದೆ. ಕೋಲಾರದ ನಸಾಪುರದ ರಾಕೇಶ್(24) ಮೃತ ದುರ್ದೈವಿ.   ಕಳೆದ ದಿನ ಕೋಲಾರದ ನರ್ಸಾಪುರದಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಕ್ವಾಲೀಸ್ ವಾಹನದ ಟಯರ್ ಸಿಡಿದು ವಾಹನ ಪಲ್ಟಿಯಾಗಿದೆ. ಘಟನೆಯಲ್ಲಿ ಕ್ವಾಲೀಸ್ ನಲ್ಲಿದ್ದ ಇಬ್ಬರಿಗೆ ಗಾಯಗಳಾಗಿತ್ತು, ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಲ್ಲಿ ರಾಕೇಶ್ ಎಂಬುವರು ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.    

ಕಾರ್ಕಳ :ವಾಹನದ ಟಯರ್ ಸಿಡಿದು ಯುವಕ ಮೃತ್ಯು Read More »

ಕರಾವಳಿ

ತೊಕ್ಕೊಟ್ಟುವಿನಲ್ಲಿ ಭೀಕರ ಅಪಘಾತ ಪ್ರಕರಣ➤ ನವದಂಪತಿ ಮೃತ್ಯು

(ನ್ಯೂಸ್ ಕಡಬ) newskadaba.com ತೊಕ್ಕೊಟ್ಟು ಅ. 28: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಟ್ರಕ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ನವ ದಂಪತಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳೂರಿನ ಬಜಾಲು ನಿವಾಸಿಗಳಾದ ರಯಾನ್ ಫೆರ್ನಾಂಡೀಸ್, ಹಾಗೂ ಪತ್ನಿ ಪ್ರಿಯಾ ಫೆರ್ನಾಂಡೀಸ್ ಸಾವನ್ನಪ್ಪಿದ ದುರ್ದೈವಿಗಳು. ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಉದ್ಯೋಗಿಗಳಾಗಿರುವ ಈ ಇಬ್ಬರು ದಂಪತಿ ಉಳ್ಳಾಲದ ಬಂಗೇರಲೇನ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.     ಕೆಲಸ ಮುಗಿಸಿ ಉಳ್ಳಾಲದ ಮನೆಗೆ ಮರಳುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ನಲ್ಲಿ ಬಂದ ಟ್ರಕ್ ಬೈಕಿಗೆ ಡಿಕ್ಕಿ

ತೊಕ್ಕೊಟ್ಟುವಿನಲ್ಲಿ ಭೀಕರ ಅಪಘಾತ ಪ್ರಕರಣ➤ ನವದಂಪತಿ ಮೃತ್ಯು Read More »

ಕರಾವಳಿ, ಕರ್ನಾಟಕ

ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಪ್ರಕರಣ ➤ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಹರ್ಯಾಣ ಅ. 28: ಹಾಡಹಗಲೇ ಕಾಲೇಜು ಆವರಣದಲ್ಲಿಯೇ 21 ವರ್ಷದ ಯುವತಿಯನ್ನು ಗುಂಡಿಟ್ಟು ಹತ್ಯೆಗೈದ ಘಟನೆ ಸೋಮವಾರ (ಅ.27) ಹರ್ಯಾಣದಲ್ಲಿ ನಡೆದಿದ್ದು, ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಖಿತಾ ಟೋಮರ್ ಅಂತಿಮ ವರ್ಷದ ಕಾಮರ್ಸ್ ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆ ಬರೆಯಲು ಕಾಲೇಜಿಗೆ ತೆರಳಿದ್ದಳು. ಕಾರಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಲು ಯತ್ನಿಸಿದ್ದರು. ಆದರೆ ಅದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದು, ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಲ್ಲಿ ಗುಂಡಿಟ್ಟು ಹತ್ಯೆಗೈದಿರುವ ದೃಶ್ಯ

ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಗೆ ಗುಂಡಿಟ್ಟು ಹತ್ಯೆ ಪ್ರಕರಣ ➤ ಆರೋಪಿಯ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪಿಲಿಕುಳ ಜೈವಿಕ ಉದ್ಯಾನವನದ “ವಿಕ್ರಂ ಹುಲಿ” ಇನ್ನಿಲ್ಲ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 27:  2003ರಲ್ಲಿ ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ವಿಕ್ರಂ ಹುಲಿಗೆ ಹತ್ತು ಮರಿಗಳಿದ್ದು, ಅವು ದೇಶದ ವಿವಿಧ ಮೃಗಾಲಯಗಳಲ್ಲಿವೆ. 21 ವರ್ಷದ ವಿಕ್ರಂ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹುಲಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ವಿಕ್ರಮ್ ಕಳೆದ ಒಂದು ವಾರದಿಂದ ಆಹಾರ ಸೇವನೆ ನಿಲ್ಲಿಸಿತ್ತುಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ದೃಷ್ಟಿಹೀನತೆಯಿಂದ ಬಳಲುತ್ತಿತ್ತು. ಇದರಿಂದ ಒಂದು ವಾರದಿಂದ ಆಹಾರ ಸೇವನೆಗೂ ಹಿಂದೇಟು ಹಾಕುತ್ತಿತ್ತು.

ಪಿಲಿಕುಳ ಜೈವಿಕ ಉದ್ಯಾನವನದ “ವಿಕ್ರಂ ಹುಲಿ” ಇನ್ನಿಲ್ಲ Read More »

ಕರಾವಳಿ

ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.!

(ನ್ಯೂಸ್ ಕಡಬ) newskadaba.com  ರಾಜಸ್ಥಾನ ಅ. 25: ತಾನು ಪ್ರೀತಿ ಮಾಡಿದಾತನನ್ನು ಮದುವೆಯಾಗುತ್ತೇನೆ ಎಂದ ಸಹೋದರಿಯನ್ನು ಸಹೋದರನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಆರೋಪಿ ಸಹೋದರನನ್ನು ಪವನ್(24) ಎಂದು ಗುರುತಿಸಲಾಗಿದೆ. ಅಣ್ಣ-ತಂಗಿ ಇಬ್ಬರೂ ರಾಜಸ್ಥಾನದ ಅಲ್ವಾರ್ ಪಟ್ಟಣದ ಭಿವಾಡಿ ನಿವಾಸಿಗಳಾಗಿದ್ದಾರೆ. ಈ ಘಟನೆ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಆರೋಪಿ ಏರ್ ಕಂಡೀಷನರ್ ರಿಪೇರಿ ಮಾಡುವ ಅಂಗಡಿ ಹೊಂದಿದ್ದನು. ಯುವತಿಯ ಪ್ರಿಯತಮ ವಿಷ್ಣು ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು. ಆರೋಪಿ ಪವನ್ ತನ್ನ ತಂಗಿಯ ತಲೆಯನ್ನು

ನೆಲಕ್ಕೆ ಬಡಿದು ಅಣ್ಣನಿಂದಲೇ ತಂಗಿಯ ಬರ್ಬರ ಹತ್ಯೆ.! Read More »

ಕ್ರೈಮ್ ನ್ಯೂಸ್

ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್​ ಹತ್ಯೆ.!!

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ ಅ. 24: ನಗರದಲ್ಲಿ ಬೆಳ್ಳಂಬೆಳಗ್ಗೆ ನಿವೃತ್ತ ಪ್ರೊಫೆಸರ್​ನನ್ನು ಕೊಲೆಗೈದಿರುವ ಘಟನೆ ಲಿಂಗರಾಜ ನಗರದಲ್ಲಿ ನಡೆದಿದೆ. ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್ ಶಂಕ್ರಪ್ಪ ಮುಶನ್ನವರ ಕೊಲೆ ಮಾಡಲಾಗಿದೆ.   ಶಂಕ್ರಪ್ಪ ಗದಗ ಜಿಲ್ಲೆಯ ಕಾನೂನು ಕಾಲೇಜಿನಲ್ಲಿ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸಿದ್ದು ಇತ್ತೀಚೆಗೆ ನಿವೃತ್ತಿ ಪಡೆದು ಹುಬ್ಬಳ್ಳಿಯಲ್ಲಿ ನೆಲೆಸಿದ್ದರು ಎಂದು ತಿಳದುಬಂದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅಳಿಯನೇ ಕೊಲೆ ಮಾಡಿರುವ ಶಂಕೆ‌ ವ್ಯಕ್ತವಾಗಿದೆ. ಸ್ಥಳಕ್ಕೆ ವಿದ್ಯಾನಗರ ಠಾಣೆ ಪೊಲೀಸರ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.

ಬೆಳ್ಳಂಬೆಳಗ್ಗೆ ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್​ ಹತ್ಯೆ.!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: 50ಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ

(ನ್ಯೂಸ್ ಕಡಬ) newskadaba.com ಉಡುಪಿ ಅ. 23:  ಉಡುಪಿ ಜಿಲ್ಲಾ ಬೌದ್ಧ ಮಹಾ ಸಭಾ ಇದರ ವತಿಯಿಂದ ಆಯೋಜಿಸಿದ್ದ ಬಾಬಾಸಾಹೇಬ್ ಅಂಬೇಡ್ಕರ್‌ ಅವರ 64 ನೇ ಧಮ್ಮ ಚಕ್ರ ಪ್ರವರ್ತನಾ ದಿನಾಚರಣೆಯಲ್ಲಿ 50 ಕ್ಕೂ ಅಧಿಕ ದಲಿತರು ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಮೈಸೂರು ಕೊಳ್ಳೆಗಾಲದ ಜೀವನ ಬುದ್ಧ ವಿಹಾರದಿಂದ ಆಗಮಿಸಿದ್ದ ಸುಗತಪಾಲ ಭಂತೇಜಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಅವರಿಗೆ ಪ್ರಮಾಣವಚನ ಬೋಧಿಸಿದರು.ಮತಾಂತರಗೊಂಡ ಬೌದ್ಧರು ತಮ್ಮ ಬಲಕೈಯನ್ನು ಮುಂದಕ್ಕೆ ಚಾಚಿ ಪ್ರಮಾಣವಚನ ಸ್ವೀಕರಿಸಿದರು. ಅದೇ ರೀತಿ ಉಡುಪಿ ಜಿಲ್ಲೆಯಲ್ಲಿ ಅತ್ಯಾಧಿಕ

ಉಡುಪಿ: 50ಕ್ಕೂ ಹೆಚ್ಚು ದಲಿತರು ಬೌದ್ಧ ಧರ್ಮಕ್ಕೆ ಮತಾಂತರ Read More »

ಕರ್ನಾಟಕ

ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ

(ನ್ಯೂಸ್ ಕಡಬ) newskadaba.com ಬಂಟ್ವಾಳ ಅ. 23: ತುಳು ನಟ ಸುರೇಂದ್ರ ಬಂಟ್ವಾಳ ಕೊಲೆ ಮಾಡಿದ್ದು ನಾನೇ. ಪೊಲೀಸರಿಗೆ ಆಡಿಯೋ ಸಂದೇಶ ಕಳುಹಿಸಿ ಆರೋಪಿ ಸತೀಶ್ ಕುಲಾಲ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ನಿನ್ನೆ ಬಂಟ್ವಾಳದ ಬಿಸಿ ರೋಡ್ ನಲ್ಲಿದ್ದಂತ ತುಳು ನಟ ಹಾಗೂ ರೌಡಿ ಶೀಟರ್ ಸುರೇಂದ್ರ ಬಂಟ್ವಾಳ ಅವರನ್ನು ಅವರದ್ದೇ ಫ್ಲಾಟ್ ನಲ್ಲಿ ಬರ್ಬರವಾಗಿ ಕೊಲೆ ಗೈಯ್ಯಲಾಗಿತ್ತು. ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕೊಲೆಯ ಆರೋಪಿಗಾಗಿ ಬಲೆ ಕೂಡ ಬೀಸಿದ್ದರು. ಇದರ ಮಧ್ಯೆ  ಪೊಲೀಸರಿಗೆ ಆಡಿಯೋ ಸಂದೇಶವೊಂದನ್ನು ಕಳುಹಿಸಿರುವ

ತುಳು ನಟ ಸುರೇಂದ್ರನನ್ನು ಕೊಲೆಗೈದಿದ್ದು ನಾನೇ ➤ ಇದು ಕಿಶನ್ ಹೆಗ್ಡೆ ಸಾವಿನ ಪ್ರತೀಕಾರ ಎಂದ ಆರೋಪಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ – ಲಾರಿ ನಡುವೆ ಭೀಕರ ಅಪಘಾತ ➤ ಸವಾರರಿಬ್ಬರು ಮೃತ್ಯು.!

(ನ್ಯೂಸ್ ಕಡಬ) newskadaba.com ಕಾರವಾರ  ಅ. 23: ಬೈಕ್ ಹಾಗೂ ಕಂಟೇನರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಿಣಗಾ ಘಟ್ಟದ ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಸೊಲ್ಲಾಪುರ ಮೂಲದ ಮನೋಜ್ ರೇವಣಕರ್ ( 38), ಶೃತಿ ( 25) ಮೃತಪಟ್ಟವರು.ಗುರುವಾರ ಸಂಜೆ ಚೆಂಡಿಯಾದಿಂದ ಮಾಜಾಳಿಗೆ ಬೈಕ್ ಮೂಲಕ ಹೋಗುತ್ತಿದ್ದ ವೇಳೆ ಬಿಣಗಾ ಘಾಟ್ ಬಳಿ  ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಸಂಚಾರಿ ಪೋಲಿಸ್ ಠಾಣೆಯಲ್ಲಿ

ಬೈಕ್ – ಲಾರಿ ನಡುವೆ ಭೀಕರ ಅಪಘಾತ ➤ ಸವಾರರಿಬ್ಬರು ಮೃತ್ಯು.! Read More »

ಕರ್ನಾಟಕ

ಬಾಲಿವುಡ್ ನಟಿ ಝರೀನಾ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ ಅ. 19:  ಕುಂಕುಮ್‍ಭಾಗ್ಯ ಧಾರಾವಾಹಿಯಿಂದ ಪ್ರಸಿದ್ಧರಾಗಿದ್ದ ಬಾಲಿವುಡ್ ನ ಕಿರುತೆರೆ ನಟಿ ಜರೀನಾ ರೋಷನ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಜರೀನಾ (54) ಕಿರುತೆರೆಯಲ್ಲಿ ಬಲು ಪ್ರಸಿದ್ಧರಾಗಿದ್ದು ಅಮ್ಮ, ಅತ್ತೆ ಪಾತ್ರಗಳಿಗೆ ನಿರ್ದೇಶಕರ ಮೊದಲ ಆಯ್ಕೆ ನಟಿಯಾಗಿದ್ದರು. ಕುಂಕುಮಭಾಗ್ಯದಲ್ಲಿ ಇವರು ನಟಿಸಿದ್ದ ಇಂದೂ ದಾಸಿ ಎಂಬ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರ ಅಚ್ಚುಮೆಚ್ಚಿನ ನಟಿಯಾಗಿದ್ದರು.      

ಬಾಲಿವುಡ್ ನಟಿ ಝರೀನಾ ನಿಧನ Read More »

ರಾಷ್ಟ್ರೀಯ ನ್ಯೂಸ್
Scroll to Top