crime

ಹೋಟೆಲ್ ಮಾಲಕ ನಾಪತ್ತೆ – ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಆ. 03. ವೈದ್ಯರ ಬಳಿ ತೆರಳಿದ್ದ ಹೋಟೆಲ್ ಮಾಲಕ ನಾಪತ್ತೆಯಾದ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಯುವಕನನ್ನು ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆಯ ಸಂದೀಪ್ ಜೈನ್ ಎಂದು ಗುರುತಿಸಲಾಗಿದೆ. ಕಾರ್ಕಳ ತಾಲೂಕಿನ ಈದು ಗ್ರಾಮದ ನೂರಲ್ ಬೆಟ್ಟು ಎಂಬಲ್ಲಿ ವಾಸ್ತವ್ಯವಿದ್ದ ಸಂದೀಪ್ ಜೈನ್ ಅವರು, ಪ್ರಸ್ತುತ ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಸಿದ್ದಕಟ್ಟೆ ಪೇಟೆಯಲ್ಲಿ ಜೈನ್ ರೆಸ್ಟೋರೆಂಟ್ ಎಂಬ ಹೆಸರಿನ ಹೋಟೆಲ್ ಅನ್ನು ನಡೆಸಿಕೊಂಡಿದ್ದರು. ಆದರೆ, ಜು.31 […]

ಹೋಟೆಲ್ ಮಾಲಕ ನಾಪತ್ತೆ – ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಖರ್ಚಿಗೆ ಹಣ ಕೊಡಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಆ. 03. ಡಿಪ್ಲೊಮಾಗೆ ಸೇರ್ಪಡೆಗೊಂಡ ಮೊದಲ ದಿನವೇ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲವೆಂದು ಮನನೊಂದು ವಿದ್ಯಾರ್ಥಿಯೊಬ್ಬ ಮನೆಯೊಳಗೆ ನೇಣಿಗೆ ಶರಣಾಗಿರುವ ಘಟನೆ ಕುತ್ತಾರ್ ಸುಭಾಷ್ ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಭಾಷನಗರದ ಸುಶಾಂತ್ (17) ಎಂದು ಗುರುತಿಸಲಾಗಿದೆ. ಪ್ರಥಮ ಪಿಯುಸಿಯ ಮುಗಿಸಿದ್ದ ಸುಶಾಂತ್ ಬಳಿಕ ಮೆಕ್ಯಾನಿಕಲ್ ಡಿಪ್ಲೊಮಾ ನಡೆಸುವ ಆಸಕ್ತಿ ವಹಿಸಿದ್ದರಿಂದ ಹೆತ್ತವರು ಆತನನ್ನು ಸೇರಿಸಿದ್ದರು. ಈ ವೇಳೆ ರೂ. 500 ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಇಂದು ಬೆಳಿಗ್ಗೆ ಮತ್ತೆ

ಖರ್ಚಿಗೆ ಹಣ ಕೊಡಲಿಲ್ಲವೆಂದು ನೇಣಿಗೆ ಶರಣಾದ ವಿದ್ಯಾರ್ಥಿ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ಪತ್ನಿಗೆ ಕಿರುಕುಳ- ಕೊಲೆ ಯತ್ನ – ಆರೋಪಿ ಪತಿಗೆ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 03. ಪತಿಯೋರ್ವ ಪತ್ನಿಗೆ ನಿರಂತರ ಕಿರುಕುಳ ನೀಡುತ್ತಿರುವ ಕುರಿತು ತಾಲೂಕಿನ ಅಜ್ಜಾವರ ಗ್ರಾಮದಿಂದ ವರದಿಯಾಗಿದೆ. ಅಜ್ಜಾವರ ಗ್ರಾಮದ ಮೇನಾಲ ಇರಂತಮಜಲು ನಿವಾಸಿ ಅಬ್ದುಲ್ ನವಾಝ್ ಎಂಬಾತ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇತ್ತೀಚೆಗೆ ಇವರ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು, ಈ ಕುರಿತು ಪತ್ನಿ, ಪತಿಯು ತನಗೆ ಕಿರುಕುಳ ನೀಡುವುದಲ್ಲದೇ, ಕೊಲೆಗೆ ಯತ್ನಿಸಿದ್ದಾರೆಂದು ಗಂಡನ ವಿರುದ್ಧ ಮಹಿಳಾ ಪೋಲೀಸರಿಗೆ ದೂರು ನೀಡಿದ್ದರು. ದೂರಿನಲ್ಲಿ ವರದಕ್ಷಿಣೆ ಕಿರುಕುಳ, ದಿನನಿತ್ಯ ಹಲ್ಲೆ, ದಿಂಬನ್ನು ಮುಖಕ್ಕೆ

ಸುಳ್ಯ: ಪತ್ನಿಗೆ ಕಿರುಕುಳ- ಕೊಲೆ ಯತ್ನ – ಆರೋಪಿ ಪತಿಗೆ ನ್ಯಾಯಾಂಗ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಮಾದಕ ವಸ್ತು ಸಾಗಾಟ ! – ಓರ್ವ ಅರೆಸ್ಟ್; ಸೊತ್ತು ವಶಕ್ಕೆ

(ನ್ಯೂಸ್ ಕಡಬ)newskadaba.com ಬಜಪೆ, ಆ.03. ಮಂಗಳೂರು ನಗರದಾದ್ಯಂತ ಮಾದಕ ವ್ಯಸನ ಮುಕ್ತ ಮಂಗಳೂರು ಮಾಡುವ ನಿಟ್ಟಿನಲ್ಲಿ ಮೇಲಾಧಿಕಾರಿಗಳು ನೀಡಿದ ಸೂಚನೆಯಂತೆ ಬಜಪೆ ಠಾಣಾ ಪೊಲೀಸರು ಮುರ ನಗರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಂಬರ್ ಪ್ಲೇಟ್ ಇಲ್ಲದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚನೆ ನೀಡಿದಾಗ ಕಾರು ಚಾಲಕ ನಿಲ್ಲಿಸದೇ ವೇಗವಾಗಿ ಚಲಾಯಿಸಿದ್ದರಿಂದ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆಯಿತು ಎಂದು ತಿಳಿದುಬಂದಿದೆ. ತತ್ ಕ್ಷಣ ಪೊಲೀಸರು ಕಾರಿನ ಬಳಿ ತೆರಳಿ ಅಬ್ದುಲ್ ಅಝೀಜ್(34) ನ್ನು ವಶಕ್ಕೆ

ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಮಾದಕ ವಸ್ತು ಸಾಗಾಟ ! – ಓರ್ವ ಅರೆಸ್ಟ್; ಸೊತ್ತು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ರೀಲ್ಸ್ ಗಾಗಿ ರಸ್ತೆಯಲ್ಲಿ ಯುವಕನ ಹುಚ್ಚಾಟ – ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಣಿಪಾಲ, ಆ.03. ಅಪಾಯಕಾರಿ ಸಾಹಸಗಳನ್ನು ಮಾಡಿ ರಸ್ತೆಯಲ್ಲಿ ಸಂಚರಿಸುವವರಿಗೆ ಅಪಾಯ ತಂದೊಡ್ಡುತ್ತಿದ್ದ 19 ವರ್ಷದ ಯುವಕನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ರಸ್ತೆಯಲ್ಲಿ ಯುವಕನೋರ್ವ ಸ್ಕೂಟಿಯನ್ನು ಯದ್ವಾತದ್ವಾ ಓಡಿಸಿ ಅದನ್ನು ತನ್ನ ಮೊಬೈಲ್ ನಲ್ಲಿ ರೀಲ್ಸ್ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಬ್ಬರು ಯುವಕರು ಸ್ಕೂಟರ್‌ಗಳನ್ನು ಅಪಾಯಕಾರಿಯಾಗಿ ಅತಿವೇಗದಲ್ಲಿ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದ್ವಿಚಕ್ರ ವಾಹನಗಳು

ರೀಲ್ಸ್ ಗಾಗಿ ರಸ್ತೆಯಲ್ಲಿ ಯುವಕನ ಹುಚ್ಚಾಟ – ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಪಂಪ್ ಹಾಕಲು ಹೋದ ಶಾಲಾ ಸಹಾಯಕಿಗೆ ಹಾವು ಕಡಿತ – ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com ಕಾರವಾರ, ಆ.03. ಕರ್ನಾಟಕ ಪಬ್ಲಿಕ್ ಶಾಲೆಯ ಸಹಾಯಕಿ ಆನಂದಿ ಎಂಬ ಮಹಿಳೆಗೆ ಹಾವು ಕಡಿದ ಘಟನೆ ಕಾರವಾರದಲ್ಲಿ ವರದಿ ತಿಳಿಸಿದೆ. ಶಾಲಾ ಸಮಯದಲ್ಲಿ ನೀರಿನ ಪಂಪ್ ಸ್ಟಾರ್ಟ್ ಮಾಡಲು ತೆರಳುವ ವೇಳೆ ಆನಂದಿ ಅವರಿಗೆ ಹಾವು ಕಚ್ಚಿದೆ ಎನ್ನಲಾಗಿದೆ. ತೀವ್ರ ಅಸ್ವಸ್ಥರಾದ ಅವರನ್ನು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಿದರು ಎಂದು ತಿಳಿದುಬಂದಿದೆ. ಇವರ ಸ್ಥಿತಿ ಚಿಂತಾಜನಕವಾಗಿದ್ದು ಚಿಕಿತ್ಸೆ ಮುಂದುವರೆದಿದೆ ಎನ್ನಲಾಗಿದೆ.

ಪಂಪ್ ಹಾಕಲು ಹೋದ ಶಾಲಾ ಸಹಾಯಕಿಗೆ ಹಾವು ಕಡಿತ – ಸ್ಥಿತಿ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

9 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್.!

(ನ್ಯೂಸ್ ಕಡಬ)newskadaba.com ಪುತ್ತೂರು, ಆ.03. 9 ವರ್ಷಗಳ ಹಿಂದೆ ನಡೆದಿದ್ದ ಅಪರಾಧ ಪ್ರಕರಣವೊಂದರ ಆರೋಪಿ ತಲೆಮರೆಸಿಕೊಂಡಿರುವ ಜಾರ್ಖಂಡ್ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಕೃಷ್ಣಪ್ರಸಾದ್ ಗುಪ್ತ ಎಂಬವರ ಮಗ ಸತೀಶ್ ಗುಪ್ತ(33) ಎಂದು ಗುರುತಿಸಲಾಗಿದೆ. ಈತ ವಿಚಾರಣೆಗೆ ಹಾಜರಾಗದೇ ಇದ್ದ, ಆತನ ವಿರುದ್ದ ನ್ಯಾಯಾಲಯ ವಾರಂಟ್ ಜಾರಿ ಮಾಡಲಾಗಿತ್ತು ಎಂದು ವರದಿಯಾಗಿದೆ.

9 ವರ್ಷಗಳ ಹಿಂದೆ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್.! Read More »

ಕರಾವಳಿ, ಕ್ರೈಮ್ ನ್ಯೂಸ್

ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ – ದೂರು ದಾಖಲು

(ನ್ಯೂಸ್ ಕಡಬ)newskadaba.com ಬಂಟ್ವಾಳ, ಆ.03. RSS ಮುಖಂಡ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಹೆಸರಲ್ಲಿ ನಕಲಿ ಖಾತೆ ತೆರೆದು ಆಕ್ಷೇಪಾರ್ಹ ಬರಹಗಳನ್ನು ಪೋಸ್ಟ್ ಮಾಡಿದ  ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಂಗಳೂರು ಸೈಬರ್ ಕ್ರೈಮ್ ಪೋಲೀಸ್ ಠಾಣೆಗೆ ದೂರು ನೀಡಲಾಗಿದೆ. ಕಲ್ಲಡ್ಕ ಡಾ ಭಟ್ ಅವರ ಪೇಸ್ ಬುಕ್ ಖಾತೆಯಾಗಲಿ, ಇನ್ನಿತರ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿರುವುದಿಲ್ಲ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೆ ಈ ಖಾತೆಯ ಮೂಲಕ ಸಮಾಜದಲ್ಲಿ ಅಶಾಂತಿ ಹಬ್ಬಿಸುವ ಪ್ರಯತ್ನ ಮತ್ತು

ಕಲ್ಲಡ್ಕ ಡಾ| ಪ್ರಭಾಕರ್ ಹೆಸರಲ್ಲಿ ನಕಲಿ ಖಾತೆ – ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ – ಪೊಲೀಸ್ ರ ನಿಯೋಜನೆ

(ನ್ಯೂಸ್ ಕಡಬ)newskadaba.com ಮೂಡಿಗೆರೆ, ಆ.03. ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಮೃತಪಟ್ಟ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ ಎನ್ನಲಾಗಿದೆ. ಅಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ

ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ – ಪೊಲೀಸ್ ರ ನಿಯೋಜನೆ Read More »

ಕರಾವಳಿ, ಕರ್ನಾಟಕ

ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..!

(ನ್ಯೂಸ್ ಕಡಬ)newskadaba.com ಬೇಕೂರು, ಆ.03. ಶಾಲಾ ವಿದ್ಯಾರ್ಥಿಯ ಮೇಲೆ ಸೀನಿಯರ್ ವಿದ್ಯಾರ್ಥಿಗಳ ತಂಡವೊಂದು ರ‍್ಯಾಗಿಂಗ್ ನಡೆಸಿದ ಆರೋಪ ಕೇಳಿಬಂದಿದೆ. ಗಾಯಗೊಂಡ ಪ್ಲಸ್ ವನ್‌ ವಿದ್ಯಾರ್ಥಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ ಶಾಲೆ ಬಿಟ್ಟ ಬಳಿಕ ಸಮೀಪದ ಬಸ್‌ ತಂಗುದಾಣದಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಅದೇ ಶಾಲೆಯ ಪ್ಲಸ್‌ ಟು ವಿದ್ಯಾರ್ಥಿಗಳ ತಂಡವೊಂದು ಶೂ ಧರಿಸಿರುವುದಕ್ಕೆ ಹಲ್ಲೆ ಮಾಡಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗೆ ಹಲ್ಲೆಯಿಂದ ಕಿವಿ ತಮ್ಮಟೆಗೆ ಗಂಭೀರ ಗಾಯಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಶಾಲಾ ವಿದ್ಯಾರ್ಥಿಗೆ ಸೀನಿಯರ್ ವಿದ್ಯಾರ್ಥಿಗಳ ತಂಡದಿಂದ ಹಲ್ಲೆ..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top