crime

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವಿಟ್ಲ, ನ.14: ಕರೋಪಾಡಿ ಗ್ರಾಮದ ಕುರೋಮೂಲೆ ಎಂಬಲ್ಲಿ ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕರೋಪಾಡಿ ಗ್ರಾಮದ ಕುರೋಮೂಲೆ ನಿವಾಸಿ ಸತೀಶ್(39) ಎಂದು ಗುರುತಿಸಲಾಗಿದೆ.     ಸತೀಶ್ ಅವರು ವಿಪರೀತ ಕುಡಿತ ಚಟವನ್ನು ಹೊಂದಿದ್ದು, ಕುಡಿತದ ಚಟ ಹೆಚ್ಚಾಗಿ ಮಾನಸಿಕವಾಗಿ ನೊಂದುಕೊಂಡಿದ್ದರು. ಇದೇ ಕಾರಣದಿಂದಾಗಿ ಈ ಹಿಂದೆ ಮೂರು ಬಾರಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ. ಸತೀಶ್ ಅವರ ಪತ್ನಿ ಕೂಲಿ ಕೆಲಸಕ್ಕೆ […]

ವಿಟ್ಲ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಉಳ್ಳಾಲ: ಕಳವುಗೈದ ಪಿಕಪ್ ವಾಹನ ಮತ್ತು ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ, ನ.13: ತೊಕ್ಕೊಟ್ಟುವಿನ ಕಲ್ಲಾಪುವಿನಿಂದ  ಪಿಕಪ್ ವಾಹನವನ್ನು ಕಳ್ಳನೋರ್ವ ಕದ್ದೊಯ್ದಿದ್ದಾನೆ. ಕಳವು ಮಾಡಿದ ಈ ವಾಹನವು ಸುರತ್ಕಲ್ ಠಾಣಾ ವ್ಯಾಪ್ತಿಯ ಚೇಳ್ಯಾರು ಬಳಿ ಮನೆಯ ಕಂಪೌಂಡಿಗೆ ಢಿಕ್ಕಿ ಹೊಡೆದಿದ್ದು, ಸುರತ್ಕಲ್ ಪೊಲೀಸರು ಕಳೆದ ದಿನ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು  ತಮಿಳುನಾಡು ಮೂಲದ ದಕ್ಷಿಣಮೂರ್ತಿ ಎಂದು ಗುರುತಿಸಲಾಗಿದೆ.  ತೊಕ್ಕೊಟ್ಟು ಕಲ್ಲಾಪು ಬಳಿಯಿರುವ ಸೂಪರ್ ಬಜಾರ್ ಎದುರು ನಿಲ್ಲಿಸಿದ್ದ ಪಿಕಪ್ ವಾಹನವನ್ನು ದಕ್ಷಿಣಮೂರ್ತಿಯವರು ಮಧ್ಯರಾತ್ರಿ ವೇಳೆ ಕಳವು ಮಾಡಿದ್ದಾರೆ. ಕಳವು ನಡೆಸಿದ ವಾಹನವನ್ನು ಕೊಂಡೊಯ್ಯುವ

ಉಳ್ಳಾಲ: ಕಳವುಗೈದ ಪಿಕಪ್ ವಾಹನ ಮತ್ತು ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪಡುಬಿದ್ರಿ: ವರ್ತೆ ಪಂಜುರ್ಲಿ ದೈವಸ್ಥಾನದ ಬೀಗ ಮುರಿದು ಕಳವು

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ನ.13: ವರ್ತೆ ಪಂಜುರ್ಲಿ ದೈವಸ್ಥಾನ ಕಾಪು ತಾಲೂಕು ನಡ್ಸಾಲು ಗ್ರಾಮದ ಕಾಡಿಪಟ್ನ ಎಂಬಲ್ಲಿ ದೇವಸ್ಥಾನದ ಬೀಗ ಮುರಿದು ಕಳ್ಳರು ಕಳವುಗೈದಿರುವ ಘಟನೆ ನಡೆದಿದೆ.     ದೈವಸ್ಥಾನದ ಒಳಗಿದ್ದ ಬೆಳ್ಳಿಯ ವಸ್ತುಗಳಾದ ಪಂಜುರ್ಲಿ ದೈವದ ಬೆಳ್ಳಿಯ ಪ್ರಬಾವಳಿ, ಪಂಜುರ್ಲಿ ದೈವದ 250 ಗ್ರಾಂ ತೂಕದ ಬೆಳ್ಳಿಯ ಖಡ್ಸಲೆ, 4ಗ್ರಾಂ ತೂಕದ ನವರತ್ನ ಚಿನ್ನದ ಸರ, 8 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 5 ಗ್ರಾಂ ತೂಕದ ಚಿನ್ನದ ಹವಳದ ಸರ, 2.2

ಪಡುಬಿದ್ರಿ: ವರ್ತೆ ಪಂಜುರ್ಲಿ ದೈವಸ್ಥಾನದ ಬೀಗ ಮುರಿದು ಕಳವು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪಂಜ: ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವಪತ್ತೆ

(ನ್ಯೂಸ್ ಕಡಬ) newskadaba.com ಪಂಜ, ನ.13: ಪಂಜ ಸಮೀಪದ ನೆಲ್ಲಿಕಟ್ಟೆಯಿಂದ ಜಳಕದ ಹೋಗುವ ಹೊಳೆಗೆ ಕೂತ್ಕುಂಜ ಗ್ರಾಮದ ಗುಂಡಡ್ಕದ ರಸ್ತೆ ಪಕ್ಕದತೋಡಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.     ಆಳವಾದ ಗುಂಡಿಯ ನೀರಿನಲ್ಲಿ ಶವ ಪತ್ತೆಯಾಗಿದ್ದು, ಶವ ಕೊಳೆತು ಹೋಗಿರುವ ಕಾರಣ ಮುಖ ಪರಿಚಯ ಪತ್ತೆಯಾಗಿಲ್ಲ. ಸ್ಥಳೀಯರು ತಮ್ಮ ತೋಟಕ್ಕೆ ಹೋಗುವ ವೇಳೆ ಶವ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ.  

ಪಂಜ: ಕೊಳೆತ ಸ್ಥಿತಿಯಲ್ಲಿ ಗಂಡಸಿನ ಶವಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾಣಿ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಮಾಣಿ ನ. 12: ಮಾಣಿ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ಣಿಮ(30)ರವರು ನವೆಂಬರ್ 9 ರಂದು ಸಂಜೆ ವೇಳೆಗೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಯಿಂದ ಹೋದಾಕೆ ವಾಪಾಸ್ಸು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.     ಈ ಬಗ್ಗೆ ಪತಿ ಮಾಹಿತಿ ಪಡೆದು ಮಾಣಿ ಪೇಟೆಯಲ್ಲಿ ವಿಚಾರಿಸಿದಾಗ ಆಕೆ ಬಸ್ಸಿನಲ್ಲಿ ಹಾಸನ ಕಡೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ

ಮಾಣಿ: ವಿವಾಹಿತ ಮಹಿಳೆ ನಾಪತ್ತೆ Read More »

ಕರಾವಳಿ

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 12: ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳೂರಿನಿಂದ ಕೇರಳದ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಐದು ಹೋರಿ ಹಾಗೂ ಒಂದು ಹಸುವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನೋಂದವಣಿಯ ವಾಹನವಾಗಿದ್ದು ಚಾಲಕನು ವಾಹನ ಮತ್ತು ಜಾನುವಾರುಗಳನ್ನು ಹುಬ್ಬಳ್ಳಿಯ ಕೋರ್ಟಿಂದ ಬಿಡುಗಡೆಗೊಳಿಸಿರುವುದಾಗಿ ದಾಖಲೆ ತೋರಿದ್ದಾನೆ. ಉಳ್ಳಾಲ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.    

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ Read More »

ಕರಾವಳಿ

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ ➤ ನೇಪಾಳದ ಯುವಕ ಸೇರಿ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 11: ಬಂಟ್ವಾಳದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ನೇಪಾಳ ಮೂಲದ ಯುವಕ ಸೇರಿ ಇಬ್ಬರನ್ನು ಇಂದು  ಪೋಲಿಸರು ಬಂಧಿದ್ದಾರೆ.       ಮಂಗಳೂರು ನಿವಾಸಿ ಟಿ.ಪಿ ಫಾರೂಕ್‌ (50), ಹಾಗೂ ನೇಪಾಳ ನಿವಾಸಿ ಸಾಗರ್‌ ಸಿಂಗ್‌ (22), ಬಂಧಿತ ಆರೋಪಿಗಳು. ಬಂಧಿತರಿಂದ 10,32,900 ರೂ. ಮೌಲ್ಯದ ಒಟ್ಟು 1.480 ಕಿ.ಗ್ರಾಂ ಗಾಂಜಾವನ್ನು ಮತ್ತು ಅದನ್ನು ಸಾಗಾಟ ಮಾಡಲು ಉಪಯೋಗಿಸಿದ ಮಾರುತಿ ಬ್ರೀಝಾ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಇಬ್ಬರು ವ್ಯಕ್ತಿಗಳು ಬಿ.ಸಿ ರೋಡ್‌ನಿಂದ ಮಾಣಿ ಮಾರ್ಗದಲ್ಲಿ

ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನ ➤ ನೇಪಾಳದ ಯುವಕ ಸೇರಿ ಇಬ್ಬರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಮಣಿಪಾಲ, ನ.11: ಮಣಿಪಾಲದಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಹಣ ಹಾಗೂ ದಾಖಲೆ ಪತ್ರಗಳನ್ನು ಪಡೆದು ವಂಚಿಸಿಕೊಂಡಿರುವ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಗಣೇಶ್ ನಾಯ್ಕ್ ಎಂದು ಗುರುತಿಸಲಾಗಿದೆ.     ಪ್ರಕರಣದಲ್ಲಿ ಆರೋಪಿತನು ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿ ಸಿ ಆಗಿರುವುದಾಗಿ ಹೇಳಿ  ಉದ್ಯೋಗ ಕೊಡುವುದಾಗಿ  ವ್ಯಕ್ತಿಯನ್ನು  ನಂಬಿಸಿ 20,000 ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡು ವಂಚಿಸಿದ್ದಾನೆ. ಅಲ್ಲದೇ ಮತ್ತೊಬ್ಬ ಯುವತಿಯಿಂದ ಹಣ ಪಡೆದು

ಮಣಿಪಾಲ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಭೂಪ ➤ ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ತೊಡಿಕಾನ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ತೊಡಿಕಾನ, ನ.11: ತೊಡಿಕಾನ ಗ್ರಾಮದ ಮುಪ್ಪಸೇರು ನಿವಾಸಿಯೊಬ್ಬರು ಮನೆ ಸಮೀಪದ ಹೊಳೆ ಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ದಿನ ನಡೆದಿದೆ.     ನೇಣಿಗೆ ಶರಣಾದ ವ್ಯಕ್ತಿಯನ್ನು ಮುಪ್ಪಸೇರು ನಿವಾಸಿ ಧರ್ಮಪಾಲ (48) ಎಂದು ಗುರುತಿಸಲಾಗಿದೆ. ಇವರು ತೊಡಿಕಾನ ದೇವಾಲಯ ಬಳಿ ಮಿನಿ ಕ್ಯಾಂಟಿನ್ ಒಂದರಲ್ಲಿ ಕೆಲಸ ಮಾಡಿತ್ತಿದ್ದರು. ಇವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರರನ್ನು ಅಗಲಿದ್ದಾರೆ.

ತೊಡಿಕಾನ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ತಮಿಳುನಾಡು, ನ.10: ಟಿವಿ ಪತ್ರಕರ್ತನನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ನಡೆದಿದೆ. ಕೊಲೆಯಾದ ಪತ್ರಕರ್ತನನ್ನು ಇಸ್ರೇವೆಲ್ ಮೋಸೆಸ್(27) ಎಂದು ಗುರುತಿಸಲಾಗಿದೆ.     ಈತ ಡ್ರಗ್ಸ್ ದಂಧೆಯ ವರದಿ ಮಾಡುತ್ತಾರೆ ಎಂಬ ಭೀತಿಯಿಂದ ಕಳೆದ ದಿನ ಸಂಜೆ ಮೋಸಸ್ ರನ್ನು ಕರೆ ಮಾಡಿ ಕರೆಸಿಕೊಂಡ ಬಳಿಕ ದುಷ್ಕರ್ಮಿಗಳು ಕತ್ತು ಹಿಸುಕಿ ಹತ್ಯೆ ಮಾಡಿದ್ದಾರೆ. ಕೊಲೆ ಮಾಡಿ ಆತನನ್ನು ರಸ್ತೆಯಲ್ಲಿ ಎಸೆದು ಹೋಗಿದ್ದು, ಬಳಿಕ ಮನೆಯವರಿಗೆ ತಿಳಿದು ಈ ಸಂಬಂಧ

ಡ್ರಗ್ಸ್ ದಂಧೆ ಬಗ್ಗೆ ವರದಿ ಮಾಡಿದ್ದಕ್ಕೆ ಪತ್ರಕರ್ತನ ಹತ್ಯೆ ➤ ಐದು ಮಂದಿ ಪೊಲೀಸರ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top