ತೊಡಿಕಾನ: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ತೊಡಿಕಾನ, .11: ತೊಡಿಕಾನ ಗ್ರಾಮದ ಮುಪ್ಪಸೇರು ನಿವಾಸಿಯೊಬ್ಬರು ಮನೆ ಸಮೀಪದ ಹೊಳೆ ಬದಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಳೆದ ದಿನ ನಡೆದಿದೆ.

 

 

ನೇಣಿಗೆ ಶರಣಾದ ವ್ಯಕ್ತಿಯನ್ನು ಮುಪ್ಪಸೇರು ನಿವಾಸಿ ಧರ್ಮಪಾಲ (48) ಎಂದು ಗುರುತಿಸಲಾಗಿದೆ. ಇವರು ತೊಡಿಕಾನ ದೇವಾಲಯ ಬಳಿ ಮಿನಿ ಕ್ಯಾಂಟಿನ್ ಒಂದರಲ್ಲಿ ಕೆಲಸ ಮಾಡಿತ್ತಿದ್ದರು. ಇವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಸಹೋದರರನ್ನು ಅಗಲಿದ್ದಾರೆ.

 

 

 

Scroll to Top