crime

ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣ..! ➤ ಒಂದು ತಿಂಗಳ ಬಳಿಕ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.03. ಹಂಪನಕಟ್ಟೆಯಲ್ಲಿನ ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ತಿಂಗಳ ಬಳಿಕ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡ್ ಕೊಯಿಲಾಂಡಿಯ ಶಿಫಾಝ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಅತ್ತಾವರದ ನಿವಾಸಿ ರಾಘವ(50) ಎಂಬವರನ್ನು ಚೂರಿಯಿಂದ ಇರಿದು ಕೊಲೆಗೈದು ದರೋಡೆ ಮಾಡಿಕೊಂಡು ಮುಸುಕುದಾರಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣ..! ➤ ಒಂದು ತಿಂಗಳ ಬಳಿಕ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಭ್ರಷ್ಟಾಚಾರ ಪ್ರಕರಣ..! ➤ ಗ್ರಾಮ ಕರಣಿಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.03. ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕರಣಿಕನಿಗೆ ಮಂಗಳೂರಿನ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಘಟನೆ ನಡೆದಿದೆ. ಶಿಕ್ಷೆಗೊಳಗಾದವರನ್ನು ಎಸ್‌. ಮಹೇಶ್‌ ಎಂದು ಗುರುತಿಸಲಾಗಿದೆ. ಸುಳ್ಯ ಮಂಡೆಕೋಲಿನ ಗೋಪಾಲಕೃಷ್ಣ ಅವರ ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗೆ 60,000 ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, 2016ರ ಜೂ. 7ರಂದು 45,000 ರೂ.ಗಳನ್ನು ಲಂಚದ ಹಣವಾಗಿ ಸ್ವೀಕರಿಸುವ ಸಂದರ್ಭ ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸರು ಬಂಧಿಸಿದ್ದರು.

ಮಂಗಳೂರು: ಭ್ರಷ್ಟಾಚಾರ ಪ್ರಕರಣ..! ➤ ಗ್ರಾಮ ಕರಣಿಕನಿಗೆ ನಾಲ್ಕು ವರ್ಷ ಜೈಲು ಶಿಕ್ಷೆ Read More »

ಕರಾವಳಿ

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು!

(ನ್ಯೂಸ್ ಕಡಬ)newskadaba.com ತೆಲಂಗಾಣ, ಮಾ.02. ಗುಡಿಸಲಿನ ಮೇಲೆ ಲಾರಿವೊಂದು ಹರಿದು ಕರ್ನಾಟಕದ ಮೂವರು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಹೊರವರ್ತುಲ ರಸ್ತೆಯಲ್ಲಿ ನಡೆದಿದೆ. ಬಾಬು ರಾಠೋಡ್, ಕಮಲಿಬಾಯ್ ಮತ್ತು ಬಸಪ್ಪ ರಾಠೋಡ್ ಮೃತರೆಂದು ತಿಳಿದುಬಂದಿದೆ. ಲಾರಿ ರಿಂಗ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಗುಡಿಸಲಿನ ಮೇಲೆ ಹರಿದಿದೆ. ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಗುಡಿಸಲಿನ ಮೇಲೆ ಹರಿದ ಲಾರಿ !     ➤ಕರ್ನಾಟಕ ಮೂಲದ ಮೂವರು ಮೃತ್ಯು! Read More »

ರಾಷ್ಟ್ರೀಯ ನ್ಯೂಸ್

ಬೈಕ್’ನಲ್ಲಿ 6.5 ಕೆ.ಜಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದ ವ್ಯಕ್ತಿ..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ನಗರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಎಸ್.ಜೆ. ಪಾರ್ಕ್ ಪೊಲೀಸರು ನಾಕಾಬಂಧಿ ವಾಹನ ತಪಾಸಣೆ ವೇಳೆ ಬರೋಬ್ಬರಿ 6.5 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ನಿಕುಂಜ್ ಬಾಬಿಲ್ ಎಂಬಾತನನ್ನು ಹಿಡಿದು 6.5 ಕೆಜಿ ಚಿನ್ನಾಭರಣ ವಶಕ್ಕೆ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.  

ಬೈಕ್’ನಲ್ಲಿ 6.5 ಕೆ.ಜಿ ಚಿನ್ನ ಸಾಗಿಸುತ್ತಿದ್ದಾಗ ಸಿಕ್ಕಿ ಬಿದ್ದ ವ್ಯಕ್ತಿ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಮಾ.02. ರೈಲು ಬಡಿದು ಮಂಜೇಶ್ವರ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಮೃತಪಟ್ಟ ಘಟನೆ ಉಪ್ಪಳ ರೈಲ್ವೆ ನಿಲ್ದಾಣ ಪರಿಸರದಲ್ಲಿ ನಡೆದಿದೆ. ಉಪ್ಪಳ ಮಂಗಲ್ಪಾಡಿ ಯಲ್ಲಿರುವ ಮಂಜೇಶ್ವರ ತಾಲೂಕು ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್ ಪಿ. ಐಶ್ವರ್ಯ (27) ಮೃತಪಟ್ಟವರು.  

ಕಾಸರಗೋಡು: ರೈಲು ಬಡಿದು ಲ್ಯಾಬ್ ಟೆಕ್ನಿಷಿಯನ್ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಂಗಳೂರು: ನಿವೃತ್ತ ಮಹಿಳಾ ಸರ ದೋಚಿದ್ದ ಖದೀಮನ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಇತ್ತೀಚಿಗೆ ನಿವೃತ್ತ ಮಹಿಳಾ ಪೊಲೀಸ್‌ ಇನ್ಸ್ ಪೆಕ್ಟರ್‌ವೊಬ್ಬರಿಂದ ಚಿನ್ನದ ಸರ ದೋಚಿದ್ದ ಚಾಲಾಕಿ ಖದೀಮನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉಲ್ಲಾಳ ನಿವಾಸಿ ದರ್ಶನ್‌ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ರು ಮೌಲ್ಯದ 76.4 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮೂಡಲಪಾಳ್ಯ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಕಾಲೋನಿ ನಿವಾಸಿ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಗೀತಾರೆಡ್ಡಿ ಅವರು ಮನೆ ಮುಂದೆ ಕಸ ಗುಡಿಸುವಾಗ ಸರ ಕಳವು ಮಾಡಿ ಕಿಡಿಗೇಡಿ ಪರಾರಿಯಾಗಿದ್ದ.

ಬೆಂಗಳೂರು: ನಿವೃತ್ತ ಮಹಿಳಾ ಸರ ದೋಚಿದ್ದ ಖದೀಮನ ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ

(ನ್ಯೂಸ್ ಕಡಬ)newskadaba.com ಮುಂಬೈ, ಮಾ.02. ತನ್ನ ನೆರೆಹೊರೆಯಲ್ಲಿ ತಂಗಿದ್ದ ಮೂವರು ಅಪ್ರಾಪ್ತ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಕಸೂತಿ ಕೆಲಸಗಾರನನ್ನು ಮುಂಬೈನ ಜೆಜೆ ಮಾರ್ಗ ಪೊಲೀಸರು ಬಂಧಿಸಿದ್ದಾರೆ. ತನ್ನ ಏಳು ವರ್ಷದ ಮಗಳು ಈ ಸಂಕಟವನ್ನು ವಿವರಿಸಿದ ನಂತರ ಸಂತ್ರಸ್ತೆಯ ತಾಯಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದಳು. ದಕ್ಷಿಣ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್ ದಿಲೀಪ್ ಸಾವಂತ್ ಅವರು ತ್ವರಿತ ತನಿಖೆಗೆ ಭರವಸೆ ನೀಡಿದ್ದು, ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಒಂದೇ ಮನೆಯ ಮೂವರು ಅಪ್ರಾಪ್ತ ಸಹೋದರಿಯರ ಮೇಲೆ ಅತ್ಯಾಚಾರ Read More »

ಕ್ರೈಮ್ ನ್ಯೂಸ್

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಕಲಬುರ್ಗಿ, ಮಾ.02. ಯುವಕನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಘಟನೆ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಾಳಮಂದರ್ಗಿ ಗ್ರಾಮದಲ್ಲಿ ನಡೆದಿದೆ. ಭರತ ಸುಭಾಶ್ಚಂದ್ರ (25)ಕೊಲೆಯಾದ ಯುವಕ ಎನ್ನಲಾಗಿದೆ. ಈತನ ಸಂಬಂಧಿಯೇ ಆಗಿರುವ ಮಲ್ಲಿಕಾರ್ಜುನ ಶಿವಶರಣಪ್ಪ ಕೊಲೆ ಮಾಡಿರುವುದು ತಿಳಿದು ಬಂದಿದೆ..

ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಡಬ, ಮಾ.02. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ವೆಂಕಪ್ಪ ಪೂಜಾರಿ ಎಂಬವರ ಪುತ್ರ ಕಿಶೋರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಡಬ ಠಾಣಾ ಹೆಚ್.ಸಿ ರಾಜುನಾಯ್ಕ ಮತ್ತು ಪಿಸಿ ಸಿರಾಜುದ್ದಿನ್ ಅವರು ಮಂಗಳೂರಿನಲ್ಲಿ ದಸ್ತಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಕಡಬ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.01. ಬಾಯ್ಲರ್ ಸಿಡಿದು ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ನಗರದ ಅನೇಕಲ್ ನ ಬೊಮ್ಮಸಂದ್ರದಲ್ಲಿ ನಡೆದಿದೆ. ಬೊಮ್ಮಸಂದ್ರದ ಬಾಲ್ ಫಾರ್ಮ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಪ್ರದೀಪ್, ಮುರುಗನ್, ಕಿರಣ್ ಎಂಬ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಮೈ ಮೇಲೆ ಭಾರಿ ಪ್ರಮಾಣದ ಕೆಮಿಕಲ್ ಬಿದ್ದು ತೀವ್ರತರದ ಗಾಯಗಳಾಗಿದೆ.  

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top