crime

ಕಾರು & ಲಾರಿ ನಡುವೆ ಭೀಕರ ಅಪಘಾತ ➤ 6 ಮಂದಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಕುಷ್ಟಗಿ, ಮೇ.29. ಕಾರು ಹಾಗೂ ಲಾರಿಯ ನಡುವೆ ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಷ್ಟಗಿ ತಾಲೂಕಿನ ಗುಡಿ ಕಲಕೇರಿ ಸಾಮಾಜಿಕ ಅರಣ್ಯ ವಲಯದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ‌ ನಡೆದಿದೆ‌. ಮೃತರನ್ನು ರಾಜಪ್ಪ ಬನಗೋಡಿ, ರಾಘವೇಂದ್ರ ಕಾಂಬಳೆ, ಅಕ್ಷಯ, ಶಿವಶರಣ, ಜಯಶ್ರೀ ಹಾಗೂ ಮಕ್ಕಳಾದ ರಾಕಿ, ರಶ್ಮಿಕಾ ಎಂದು ಗುರುತಿಸಲಾಗಿದೆ.  

ಕಾರು & ಲಾರಿ ನಡುವೆ ಭೀಕರ ಅಪಘಾತ ➤ 6 ಮಂದಿ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ವಾಷಿಂಗ್ಟನ್, ಮೇ.29. ರೀಡ್ಸ್‌ಬರ್ಗ್ ಮನೆಯ ಎರಡನೇ ಮಹಡಿಯಲ್ಲಿ ವಧು  ನಿದ್ರಿಸುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿ ಮೃತಪಟ್ಟಿದ್ದಾಳೆ ಎಂದು ವರದಿ ತಿಳಿಸಿದೆ. ಪೈಜ್ ರಡ್ಡಿ (19) ವರ್ಷದ ಯುವತಿ  ಈ ಘಟನೆಯಲ್ಲಿ ಮೃತಪಟ್ಟ ವಧು ಎಂದು ಗುರುತಿಸಲಾಗಿದೆ. ಈ ಘಟನೆ ಅಮೇರಿಕಾದ ವಿಸ್ಕಾನ್ಸಿನ್‌ ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಎರಡನೇ ಮಹಡಿಯಲ್ಲಿ  ನಿದ್ರಿಸುತ್ತಿದ್ದ ವೇಳೆ ಮನೆಗೆ ಬೆಂಕಿ ಹತ್ತಿಕೊಂಡಿದ್ದು, ಹೊಗೆಯಿಂದಾಗಿ ಉಸಿರುಗಟ್ಟಿ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಚಿಕಿತ್ಸೆ ಫ‌ಲಕಾರಿಯಾಗದೆ ಯುವತಿ  ಸಾವನ್ನಪ್ಪಿದ್ದಾಳೆ

ವಿವಾಹವಾಗಬೇಕಿದ್ದ ವಧು ಅಗ್ನಿ ಅವಘಡದಲ್ಲಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಳ್ಯ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಢಿಕ್ಕಿ ➤ ಮೂವರು ಗಂಭೀರ

(ನ್ಯೂಸ್ ಕಡಬ)newskadaba.com  ಸುಳ್ಯ, ಮೇ.29. ಬೈಕ್ ವೊಂದು ಪಾದಚಾರಿಗೆ ಢಿಕ್ಕಿಯಾಗಿ ಬೈಕ್ ನಲ್ಲಿದ್ದ ಮೂವರು ಗಂಭೀರ ಗಾಯಗೊಂಡ ಘಟನೆ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಪಡೀಲ್ ಎಂಬಲ್ಲಿ ಸಂಭವಿಸಿದೆ ಎಂದು ವರದಿ ತಿಳಿಸಿದೆ. ಮಂಡೆಕೋಲು ಗ್ರಾಮದ ಭವಾನಿಶಂಕರ್, ಪತ್ನಿ ಲೀಲಾವತಿ ಹಾಗೂ ಇಬ್ಬರು ಮಕ್ಕಳು ಸುಳ್ಯದಿಂದ ಮಂಡೆಕೋಲು ಮನೆಗೆ ಬೈಕ್ ನಲ್ಲಿ ತೆರಳುತ್ತಿದ್ದರು. ಪಡೀಲ್ ಎಂಬಲ್ಲಿ ಸವಾರನ ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಗುದ್ದಿದ್ದು, ಬೈಕ್ ನಲ್ಲಿದ್ದ ನಾಲ್ವರೂ ಕೂಡಾ ರಸ್ತೆಗೆಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ.  

ಸುಳ್ಯ: ನಿಯಂತ್ರಣ ತಪ್ಪಿ ಪಾದಚಾರಿಗೆ ಬೈಕ್ ಢಿಕ್ಕಿ ➤ ಮೂವರು ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್
Crime

ಮಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ➤ ಮೂರು ಜನರ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಮೇ.29. ಮದ್ಯ ಸೇವಿಸಿ ವಾಹನ ಚಲಾಯಿಸಿದ ಮೂವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಪೊಲೀಸರು ನಡೆಸಿದ ದಿಢೀರ್ ಕಾರ್ಯಾಚರಣೆಯಲ್ಲಿ ಒಟ್ಟು 59 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದಾರೆ. ಇದ್ದು ತಪಾಸಣೆಯ ವೇಳೆ ಮೂವರು ಮದ್ಯ ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಮಂಗಳೂರು: ಮದ್ಯ ಸೇವಿಸಿ ವಾಹನ ಚಾಲನೆ ➤ ಮೂರು ಜನರ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಿರುದ್ಯೋಗದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೈಂದೂರು, ಮೇ.29. ಯುವತಿಯೋರ್ವಳು ನಿರುದ್ಯೋಗದಿಂದ ಮನನೊಂದು ಡೆತ್‌ ನೋಟ್‌ ಬರೆದು  ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಂದೂರು ಎಂಬಲ್ಲಿ ಸಂಭವಿಸಿದೆ. ಕಾಲ್ತೊಡು ಗ್ರಾಮದ ಸಿಗೇಅಡಿ ನಿವಾಸಿ ಪ್ರಮೋದಾ ಶೆಟ್ಟಿ ಅವರ ಪುತ್ರಿ  ಗೌತಮಿ (22) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಎಂ.ಕಾಂ. ಪದವಿ ಪಡೆದಿದ್ದ ಗೌತಮಿಯು ಇತ್ತೀಚೆಗೆ ಬ್ಯಾಂಕ್‌ ಪರೀಕ್ಷೆ ಮತ್ತು ಕಂಪೆನಿಯಲ್ಲಿ ಉದ್ಯೋಗ ಪಡೆಯಲು ಪರೀಕ್ಷೆಗಳನ್ನು ಬರೆದರೂ ಕೂಡ ಆಕೆಗೆ ಉದ್ಯೋಗ ಸಿಗಲ್ಲಿಲ್ಲ ಹೀಗಾಗಿ ಯುವತಿ ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ

ನಿರುದ್ಯೋಗದಿಂದ ಮನನೊಂದು ಯುವತಿಯೋರ್ವಳು ಆತ್ಮಹತ್ಯೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮತ್ತೇ ಭುಗಿಲೆದ್ದ ಹಿಂಸಾಚಾರ..! ➤ 40 ಕ್ಕೂ ಹೆಚ್ಚು ಉಗ್ರರ ಹತ್ಯೆ

(ನ್ಯೂಸ್ ಕಡಬ)newskadaba.com ಮಣಿಪುರ, ಮೇ.29. ಕೆಲ ದಿನಗಳಿಂದ ತಣ್ಣಗಿದ್ದ ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ ಎಂದು ವರದಿ ತಿಳಿಸಿದೆ. ಬಹುಸಂಖ್ಯಾತ ಹಿಂದೂ ಮೀಟಿ ಸಮುದಾಯದವರನ್ನು ಗುರಿಯಾಗಿಸಿ ಕುಕಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಉಗ್ರರು 80ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಸೇನೆಯ ಹೆಚ್ಚುವರಿ ಪಡೆಯನ್ನು ರವಾನಿಸಲಾಗಿದೆ. ಸೇನಾ ಮುಖ್ಯಸ್ಥ ನರವಣೆ ಪರಿಸ್ಥಿತಿಯ ಅಧ್ಯಯನಕ್ಕೆ ರಾಜ್ಯಕ್ಕೆ

ಮತ್ತೇ ಭುಗಿಲೆದ್ದ ಹಿಂಸಾಚಾರ..! ➤ 40 ಕ್ಕೂ ಹೆಚ್ಚು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸಿಲುಕಿ ಬಾಲಕಿ ಮೃತ್ಯು

(ನ್ಯೂಸ್ ಕಡಬ)newskadaba.com ಕಾರ್ಕಳ, ಮೇ.27. ಜೋಕಾಲಿ ಆಟದಲ್ಲಿ ನಿರತರಾಗಿದ್ದಾಗ ಕುತ್ತಿಗೆ ಸೀರೆ ಸುತ್ತಿಕೊಂಡ ಪರಿಣಾಮ ಬಾಲಕಿಯೊಬ್ಬಳು ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ಅಂತೊಟ್ಟು ಎಂಬಲ್ಲಿ ಸಂಭವಿಸಿದೆ. ಅಂತೊಟ್ಟು ನಿವಾಸಿ ಪಿರ್ಯಾದಿ ಲಕ್ಷ್ಮಣ್ ಪೂಜಾರಿ ಎಂಬವರ ಮಗಳು ಮಾನ್ವಿ ( 9) ಮೃತ ಬಾಲಕಿ ಎಂದು ಗುರುತಿಸಲಾಗಿದೆ. ಮನೆಯ ಬಳಿ ನೆರೆಕರೆಯ ದೀಕ್ಷಾ ಎಂಬಾಕೆಯ ಜೊತೆ ಸೀರೆಯನ್ನು ಕಟ್ಟಿ ಜೋಕಾಲಿ ಆಟ ಆಡುವಾಗ ಆಕಸ್ಮಿಕವಾಗಿ ಜೋಕಾಲಿಗೆ ಕಟ್ಟಿದ ಸೀರೆ ಆಕೆಯ ಕುತ್ತಿಗೆಗೆ

ಕಾರ್ಕಳ: ಜೋಕಾಲಿ ಆಟವಾಡುತ್ತಿದ್ದಾಗ ಕುತ್ತಿಗೆಗೆ ಸೀರೆ ಸಿಲುಕಿ ಬಾಲಕಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹಾಸನದಲ್ಲಿ ಮಹಿಳಾ PSI ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

(ನ್ಯೂಸ್ ಕಡಬ)newskadaba.com ಹಾಸನ, ಮೇ.27. ಮಹಿಳಾ ಸಬ್‌ಇನ್ಸ್‌ ಪೆಕ್ಟರ್ ಮನೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ನಡೆದಿದೆ. ಕೊಣನೂರು ಪೊಲೀಸ್ ಠಾಣೆಯ ಪಿಎಸ್‌ಐ ಶೋಭಾ ಭರಮಕ್ಕನವರ್ ರಜೆಯ ಮೇಲೆ ಊರಿಗೆ ತೆರಳಿದ್ದರು. ಈ ವೇಳೆ ಅವರ ಬಾಡಿಗೆ ಮನೆಯ ಕಿಟಕಿ ಒಡೆದು ಸೀಮೆಎಣ್ಣೆ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಹಾಸನದಲ್ಲಿ ಮಹಿಳಾ PSI ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ನೂತನ ಸ್ಪೀಕರ್ ಖಾದರ್ ವಿರುದ್ಧ ಅವಹೇಳನಾಕಾರಿ ಪೋಸ್ಟ್ ➤ ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು

(ನ್ಯೂಸ್ ಕಡಬ)newskadaba.com ಚಿಕ್ಕಮಗಳೂರು, ಮೇ.27. ನೂತನ ಸಭಾಧ್ಯಕ್ಷರಾದ ಉಳ್ಳಾಲ ಕ್ಷೇತ್ರದ ಶಾಸಕ ಯು.ಟಿ ಖಾದರ್ ವಿರುದ್ದ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವ ಶ್ರೀರಾಮಸೇನೆ ಮುಖಂಡನ ವಿರುದ್ಧ ಕೇಸ್ ದಾಖಲಾಗಿದೆ. ಪ್ರೀತೇಶ್ ಚಿಕ್ಕಮಗಳೂರು ಎಂಬಾತ ಖಾದರ್ ವಿರುದ್ಧ ಪೋಸ್ಟ್ ಮಾಡಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಸೆನ್ ಠಾಣೆಯಲ್ಲಿ ಪ್ರೀತೇಶ್ ವಿರುದ್ದ ದೂರು ಸಲ್ಲಿಸಿದ್ದಾರೆ.ಈ ಕೂಡಲೇ ಇತನ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ನೂತನ ಸ್ಪೀಕರ್ ಖಾದರ್ ವಿರುದ್ಧ ಅವಹೇಳನಾಕಾರಿ ಪೋಸ್ಟ್ ➤ ಶ್ರೀರಾಮಸೇನೆ ಮುಖಂಡನ ವಿರುದ್ಧ ದೂರು Read More »

ಕರ್ನಾಟಕ
Crime

ಅನ್ಯಕೋಮಿನ ಜೋಡಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನ ➤ ದೂರು ದಾಖಲು

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, ಮೇ.27. ಅನ್ಯಕೋಮಿನ ಜೋಡಿ ಹೋಟೆಲ್ ಗೆ ತೆರಳಿದ ಹಿನ್ನೆಲೆಯಲ್ಲಿ, ಯುವಕರ ಗುಂಪು ಯುವಕನ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ನಗರದ ಚಾಟ್ ಸೆಂಟರ್ನಲ್ಲಿ ಯುವಕರ ಗುಂಪೊಂದು ಭಿನ್ನ ಧರ್ಮದ ಹುಡುಗಿ ಮತ್ತು ಹುಡುಗನಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ.  

ಅನ್ಯಕೋಮಿನ ಜೋಡಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನ ➤ ದೂರು ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top