crime

ಬೆಳ್ತಂಗಡಿ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 22.  ನೆರಿಯದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ನೆರಿಯ ಗ್ರಾಮದ ನೆಕ್ಕರೆಯ ನಿವಾಸಿ ದಾಸ್ ಎಂಬವರ ಮಗಳು ಆದೀರಾ (19) ಎಂದು ಗುರುತಿಸಲಾಗಿದೆ. ಇವರು ಜೂ. 18 ರಂದು ಆದಿತ್ಯವಾರ ರಾತ್ರಿ ಊಟದ ಬಳಿಕ ಒಂದು ಕೋಣೆಯಲ್ಲಿ ಅದಿರಾ, ಮತ್ತೊಂದು ಕೋಣೆಯಲ್ಲಿ ನರೇಂದ್ರ ಮತ್ತು ರೋಹಿತ್ ಮಲಗಿದ್ದರೆನ್ನಲಾಗಿದೆ. ಆದರೆ ಜೂನ್ 19 ಸೋಮವಾರದಂದು ಬೆಳಗ್ಗೆ 8 ಗಂಟೆಗೆ ಎದ್ದು ನೋಡುವಾಗ ಆದಿರಾ […]

ಬೆಳ್ತಂಗಡಿ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ನೆಲ್ಯಾಡಿ: ಖಾಸಗಿ ಬಸ್ ಡಿವೈಡರ್ ಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜೂ. 22. ನಿಯಂತ್ರಣ ತಪ್ಪಿದ ಖಾಸಗಿ ಬಸ್ಸೊಂದು ಹೆದ್ದಾರಿ ಬದಿಯ ಡಿವೈಡರ್ ಗೆ ಢಿಕ್ಕಿ ಹೊಡೆದ ಘಟನೆ ರಾ.ಹೆ.75ರ ನೆಲ್ಯಾಡಿ ಸಮೀಪದ ಪೆರಿಯಶಾಂತಿಯ ಎಂಬಲ್ಲಿ ನಡೆದಿದೆ‌. ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಡಿವೈಡರ್‌ಗೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬಸ್‌ ನ ಮುಂಭಾಗ ಜಖಂಗೊಂಡಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನೆಲ್ಯಾಡಿ: ಖಾಸಗಿ ಬಸ್ ಡಿವೈಡರ್ ಗೆ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

30 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 22. ಕಳೆದ 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಳೆ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತ ಆರೋಪಿಯನ್ನು ಹಾವೇರಿ ಮೂಲದ ಪ್ರಸ್ತುತ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ನಿವಾಸಿ ಹೊನ್ನ ಯಾನೆ ಹೊನ್ನಪ್ಪ(55) ಎಂದು ಗುರುತಿಸಲಾಗಿದೆ. ಶಂಕರನಾರಾಯಣ ಗ್ರಾಮದಲ್ಲಿ 1993ರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಈತನನ್ನು ಜೂ. 20ರಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಶಂಕರನಾರಾಯಣ ಪೊಲೀಸರು ಬಂಧಿಸಿ, ಜೂ.21ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈತನ

30 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಸವಾದ್ ಕೊಲೆ ಪ್ರಕರಣ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 22. ಬಂಟ್ವಾಳದ ಸವಾದ್ ಎಂಬಾತನನ್ನು ಕೊಲೆ‌ ಮಾಡಿ ಮೂಡಿಗೆರೆ ಪ್ರವಾಸಿ ತಾಣ ದೇವರಮನೆ ಗಡ್ಡೆಯ ಬಳಿ ಸುಟ್ಟು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಬಂಟ್ವಾಳ ಮೂಲದ ರಿಜ್ವಾನ್ ಮತ್ತು ಝೈನುಲ್ಲಾ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮೃತದೇಹದ ಪತ್ತೆಯ ಬಳಿಕ ಪ್ರಕರಣದ ತನಿಖೆ ಕೈಗೊಂಡಿದ್ದ ಮೂಡಿಗೆರೆ ವೃತ್ತ ನಿರೀಕ್ಷಕ ಸೋಮಶೇಖರ್ ಮತ್ತು ಬಣಕಲ್ ಎಸ್.ಐ.

ಬಂಟ್ವಾಳ: ಸವಾದ್ ಕೊಲೆ ಪ್ರಕರಣ ➤ ಇಬ್ಬರ ಬಂಧನ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಸುಳ್ಯ: ಕಂಟೇನರ್ ಲಾರಿ ಹಾಗೂ ಕಾರು ಢಿಕ್ಕಿ ➤ ಕಾರು ಚಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 22. ಕಾರು ಹಾಗೂ ಕಂಟೈನರ್ ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ಐವರು ಗಂಭೀರ ಗಾಯಗೊಂಡ ಘಟನೆ ಸಂಪಾಜೆ ಸಮೀಪ ದೇವರಕೊಲ್ಲಿಯಲ್ಲಿ ಬುಧವಾರದಂದು ರಾತ್ರಿ ಸಂಭವಿಸಿದೆ.   ಮೃತ ಕಾರು ಚಾಲಕನನ್ನು ಬೆಂಗಳೂರಿನ ರವಿ ಎಂದು ಗುರುತಿಸಲಾಗಿದೆ. ಗಾಯಗೊಂಡ ಲಾರಿ ಚಾಲಕ ಮಂಗಳೂರಿನ ಕುಳಾಯಿ ನಿವಾಸಿ ಈಶ್ವರ (42), ಕಾರಿನಲ್ಲಿದ್ದ ಚಂದ್ರಶೇಖರ, ನಿತಿನ್‌, ಜಗದೀಶ್‌ ಹಾಗೂ ಹರ್ಷ ಎಂಬವರನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಳ್ಯ ಮೂಲಕ

ಸುಳ್ಯ: ಕಂಟೇನರ್ ಲಾರಿ ಹಾಗೂ ಕಾರು ಢಿಕ್ಕಿ ➤ ಕಾರು ಚಾಲಕ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಲಾರಿ- ಬೈಕ್ ನಡುವೆ ಮುಖಾಮುಖಿ ಢಿಕ್ಕಿ ➤ ಸವಾರರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ. 21. ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತರೀಕೆರೆ ತಾಲೂಕಿನ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಹೊಳೆ ಗೇಟ್ ಬಳಿ ನಡೆದಿದೆ. ಮೃತ ಸವಾರನನ್ನು ತಾಲೂಕಿನ ಬೇಲೇನಹಳ್ಳಿ ನಿವಾಸಿ ವಿಶ್ವಾಸ್ ಹಾಗೂ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ನಿವಾಸಿ ದೀಪಿಕಾ ಎಂದು ಗುರುತಿಸಲಾಗಿದೆ. ಇವರು ತರೀಕೆರೆಯಿಂದ ಬೇಲೇನಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆನ್ನಲಾಗಿದೆ.

ಲಾರಿ- ಬೈಕ್ ನಡುವೆ ಮುಖಾಮುಖಿ ಢಿಕ್ಕಿ ➤ ಸವಾರರಿಬ್ಬರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಯುವಕನಿಗೆ ಹಲ್ಲೆ, ಜೀವಬೆದರಿಕೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 21. ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ಮಂಗಳವಾರದಂದು ಸಂಜೆ ತಾಲೂಕಿನ ನರಿಮೊಗರು ಗ್ರಾಮದ ಪುರುಷಕಟ್ಟೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಇಲ್ಲಿನ ಇಂದ್ರನಗರ, ಕಟ್ಟೆ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವೀಣ್ ಮತ್ತು ಪ್ರವೀಣ್ ಆಚಾರ್ಯ ಇಬ್ಬರೂ ಈ ಹಿಂದೆ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಬಳಿಕ ಪ್ರವೀಣ್ ಆಚಾರ್ಯ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ರಾಜಕೀಯ ವಿಚಾರಕ್ಕೆ

ಪುತ್ತೂರು: ಯುವಕನಿಗೆ ಹಲ್ಲೆ, ಜೀವಬೆದರಿಕೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಉಪ್ಪಿನಂಗಡಿ: ಗಾಂಜಾ ಸೇವನೆ ➤ ಆರೋಪಿ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 21. ಬಿಳಿಯೂರು ಗ್ರಾಮದ ಬಿಳಿಯೂರು ಕ್ರಾಸ್ ನ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸಿ ಅನುಚಿತವಾಗಿ ವರ್ತಿಸುತ್ತಿದ್ದ ಓರ್ವನನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತನನ್ನು ಮಹಮ್ಮದ್ ಸರ್ಫರಾಜ್ (26) ಎಂದು ಗುರುತಿಸಲಾಗಿದೆ‌. ಜೂ. 19ರಂದು ಉಪ್ಪಿನಂಗಡಿ ಪೊಲೀಸರು ರೌಂಡ್ಸ್‌ನಲ್ಲಿದ್ದ ಸಂದರ್ಭ ಬಿಳಿಯೂರು ಕ್ರಾಸ್ ಬಸ್ ನಿಲ್ದಾಣದ ಬಳಿ ಸರ್ಫರಾಜ್ ಎಂಬಾತ, ಅನುಚಿತವಾಗಿ ವರ್ತಿಸುತ್ತಿರುವುದನ್ನು ಕಂಡು ವಿಚಾರಿಸಿದಾಗ ಆತ ಮಾದಕ ದ್ರವ್ಯ ಗಾಂಜಾ ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದ. ಬಳಿಕ

ಉಪ್ಪಿನಂಗಡಿ: ಗಾಂಜಾ ಸೇವನೆ ➤ ಆರೋಪಿ ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪಂಪ್ ರಿಪೇರಿ ವೇಳೆ ಹೈಟೆನ್ಷನ್‌ ಲೈನ್‌ ಗೆ ತಗುಲಿದ ಪೈಪ್ ➤ ಇಬ್ಬರು ಮೃತ್ಯು

 (ನ್ಯೂಸ್ ಕಡಬ) newskadaba.com ಜೈಪುರ, ಜೂ. 21. ಹ್ಯಾಂಡ್‌ ಪಂಪ್‌ ರಿಪೇರಿ ವೇಳೆ ಹೈಟೆನ್ಷನ್‌ ಲೈನ್‌ ಗೆ ಪೈಪ್ ತಗುಲಿದ ಪರಿಣಾಮ ಇಬ್ಬರು ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ರಾಜಸ್ಥಾನದ ಧೋಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಲೋಕೇಶ್ ಮತ್ತು ಧ್ರುವ ಎಂದು ಗುರುತಿಸಲಾಗಿದೆ. ರಾಮ್‌ ವೀರ್, ಥಾನ್ ಸಿಂಗ್, ಹರಿ ಸಿಂಗ್ ಹಾಗೂ ಶಿಮ್ಲಾ ತೀವ್ರ ಸುಟ್ಟಗಾಯಗಳಾಗಿದ್ದು, ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸೇಡಿ ಉಪವಿಭಾಗದ ವಿಜಯಕಾಪುರ ಗ್ರಾಮದಲ್ಲಿ ಹ್ಯಾಂಡ್ ಪಂಪ್ ದುರಸ್ತಿ ಕಾರ್ಯ

ಪಂಪ್ ರಿಪೇರಿ ವೇಳೆ ಹೈಟೆನ್ಷನ್‌ ಲೈನ್‌ ಗೆ ತಗುಲಿದ ಪೈಪ್ ➤ ಇಬ್ಬರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ವೇಳೆ ಲ್ಯಾಪ್‌ಟಾಪ್, ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವು! ➤ ದೂರು ದಾಖಲು

 (ನ್ಯೂಸ್ ಕಡಬ) newskadaba.com ಮಂಗಳೂರು, ಜೂ.  21. ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಲ್ಯಾಪ್‌ಟಾಪ್ ಮತ್ತು ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವಾದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ. ರಂಜಿತ್ ಎಂಬವರು ಜೂ.15ರಂದು ರಾತ್ರಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಲ್ಯಾಪ್‌ ಟಾಪ್ ಮತ್ತು ಪಾಸ್‌ಪೋರ್ಟ್ ಇದ್ದ ಬ್ಯಾಗ್‌ನ್ನು ಸೀಟಿನ ಮೇಲ್ಭಾಗದ ಕ್ಯಾರಿಯರ್‌ನಲ್ಲಿಟ್ಟಿದ್ದರು, ಮರುದಿನ ಬೆಳಗ್ಗೆ ಮಂಗಳೂರಿನ ಪಿವಿಎಸ್ ಸರ್ಕಲ್ ಬಳಿ ನೋಡಿದಾಗ ಬ್ಯಾಗ್ ಕಳವಾಗಿತ್ತು. ಬಿ.ಸಿರೋಡ್‌ನಲ್ಲಿ ಇಳಿದ ಇಬ್ಬರು ಪ್ರಯಾಣಿಕರ ಮೇಲೆ ಗುಮಾನಿ

ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ  ವೇಳೆ ಲ್ಯಾಪ್‌ಟಾಪ್, ಪಾಸ್‌ಪೋರ್ಟ್ ಇದ್ದ ಬ್ಯಾಗ್ ಕಳವು! ➤ ದೂರು ದಾಖಲು Read More »

ಕರಾವಳಿ, ಕರ್ನಾಟಕ
Scroll to Top