crime

ಅಕ್ರಮ ಮದ್ಯ ಸಾಗಾಟ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 10. ಟೆಂಪೋ ವ್ಯಾನ್ ಒಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮದ್ಯವನ್ನು ಮಂಜೇಶ್ವರ ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿ, ಓರ್ವನನ್ನು ಬಂಧಿಸಿದ ಘಟನೆ ವರದಿಯಾಗಿದೆ. ಬಂಧಿತನನ್ನು ರಾಧಾಕೃಷ್ಣ ಕಾಮತ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 2,484 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈತ ಮದ್ಯದ ಬಾಟಲಿಗಳ ಬಾಕ್ಸ್ ಗಳ ಮೇಲೆ ಗೆರಟೆಗಳನ್ನು ತುಂಬಿಸಿ ಮದ್ಯ ಸಾಗಾಟ ಮಾಡುತ್ತಿದ್ದ, ಇದರಿಂದ ಸಂಶಯಗೊಂಡು ಅಬಕಾರಿ ದಳದ ಸಿಬ್ಬಂದಿಗಳು ತಪಾಸಣೆ ನಡೆಸಿದಾಗ ಅಕ್ರಮ ಸಾಗಾಟ […]

ಅಕ್ರಮ ಮದ್ಯ ಸಾಗಾಟ ➤ ಓರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಿಶುವಿಹಾರದಲ್ಲಿ ಚೂರಿಯಿರಿತ- 3 ಮಕ್ಕಳ ಸಹಿತ 6 ಮಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಚೀನಾ, ಜು. 10. ಶಿಶುವಿಹಾರದಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಮೂವರು ಮಕ್ಕಳು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಚೀನಾದ ಆಗ್ನೇಯ ಗುವಾಂಗ್‌ ಡಾಂಗ್ ಪ್ರಾಂತ್ಯದಲ್ಲಿ ನಡೆದಿದೆ. ಲಿಯಾಂಜಿಯಾಂಗ್ ಕೌಂಟಿಯ ಪೊಲೀಸರ ಹೇಳಿಕೆಯಂತೆ ಇದೊಂದು ಉದ್ದೇಶಪೂರ್ವಕ ದಾಳಿಯಾಗಿದೆ. ಘಟನೆಯು ಇಂದು ಬೆಳಗ್ಗೆ ಸ್ಥಳೀಯ ಸಮಯ 07:40 ಕ್ಕೆ ಸಂಭವಿಸಿದ್ದು ಕೆಲವೇ ನಿಮಿಷಗಳಲ್ಲಿ ವೂ ಎಂಬ ಉಪನಾಮ ಹೊಂದಿರುವ 25 ವರ್ಷದ ಯುವಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಶಿಶುವಿಹಾರದಲ್ಲಿ ಚೂರಿಯಿರಿತ- 3 ಮಕ್ಕಳ ಸಹಿತ 6 ಮಂದಿ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಸುಳ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ➤ ಯುವಕ ಅರೆಸ್ಟ್, ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜು. 10. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೋಕ್ಸೋ ಪ್ರಕರಣವನ್ನು ದಾಖಲಿಸಿ, ಆತನನ್ನು ಬಂಧಿಸಲಾಗಿದೆ. ಬಂಧಿತನನ್ನು ಕಲ್ಮಡ್ಕ ಗ್ರಾಮದ ಕಾರ್ತಿಕ್‌ ಎಂದು ಗುರುತಿಸಲಾಗಿದೆ. ಈತ ಉಬರಡ್ಕದ ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗರ್ಭವತಿಯಾಗಿದ್ದು, ವಿಷಯ ತಿಳಿದ ಬಳಿಕ ಬಾಲಕಿಯ ತಾಯಿಯು ಬೆಳ್ಳಾರೆ ಠಾಣೆಗೆ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜು. 7ರಂದು ಬಾಲಕಿ ಹೊಟ್ಟೆನೋವು ಎಂದು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ

ಸುಳ್ಯ: ಅಪ್ರಾಪ್ತೆಯ ಮೇಲೆ ಅತ್ಯಾಚಾರ ➤ ಯುವಕ ಅರೆಸ್ಟ್, ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಹೊಳೆನೀರಿಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಜು. 10. ಹೊಳೆನೀರಿಗೆ ಬಿದ್ದು ಕೃಷಿಕರೋರ್ವರು ಮೃತಪಟ್ಟ ಘಟನೆ ಕಡಬ ಸಮೀಪದ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಇಚ್ಲಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ(ಕಿಟ್ಟಣ್ಣ) ಎಂದು ಗುರುತಿಸಲಾಗಿದೆ. ಇವರು ಜು. 09ರಂದು ಮಧ್ಯಾಹ್ನ ಇಚ್ಲಂಪಾಡಿಯ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದಾಗ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ. ಇದೀಗ ಜು.10ರಂದು

ಕಡಬ: ಹೊಳೆನೀರಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ: ನೀರುಪಾಲಾಗಿದ್ದ ಕಾರ್ಮಿಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಅರಂತೋಡು, ಜು. 09. ನಾಲ್ಕು ದಿನಗಳ ಹಿಂದೆ ಕಾಲುಸಂಕ ದಾಟುತ್ತಿದ್ದ ಸಂದರ್ಭ ಆಯ ತಪ್ಪಿ ಹೊಳೆಗೆ ಬಿದ್ದಿದ್ದ ಕೂಲಿ ಕಾರ್ಮಿಕನ ಮೃತದೇಹವು ಇಂದು ಪತ್ತೆಯಾಗಿದೆ. ಕುಂದಲ್ಪಾಡಿ ಪೆರಾಜೆ ಎಂಬಲ್ಲಿ ರಬ್ಬರ್ ಟ್ಯಾಪರ್ ಆಗಿದ್ದ ಕಾಸರಗೋಡು ಜಿಲ್ಲೆಯ ಚಿತ್ತಾರಿಕಲ್ ಸಮೀಪದ ನಾರಾಯಣನ್ ಎಂಬವರು ಕೂರ್ನಡ್ಕದಲ್ಲಿ ನಾಲ್ಕು ದಿನಗಳ ಹಿಂದೆ ನೀರು ಪಾಲಾಗಿದ್ದು, ಅಂದಿನಿಂದಲೇ ಶೋಧ ಕಾರ್ಯ ಆರಂಭಗೊಂಡಿತ್ತು. ಸುಳ್ಯ ಅಗ್ನಿಶಾಮಕ ದಳ, ಎಸ್.ಡಿ.ಆರ್.ಎಫ್ ತಂಡ, ಪೋಲಿಸ್ ಇಲಾಖೆಯೊಂದಿಗೆ ಅರಂತೋಡು ಕಲ್ಲುಗುಂಡಿ ವಿಖಾಯ ತಂಡ ಹಾಗೂ

ಸುಳ್ಯ: ನೀರುಪಾಲಾಗಿದ್ದ ಕಾರ್ಮಿಕನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ- ಮೃತದೇಹವನ್ನು ತುಂಡರಿಸಿ ಕೊಳವೆ ಬಾವಿಗೆಸೆದ ಹಂತಕರು

(ನ್ಯೂಸ್ ಕಡಬ) newskadaba.com ಚಿಕ್ಕೋಡಿ, ಜು. 09. ನಾಪತ್ತೆಯಾಗಿದ್ದ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿ ಪರ್ವತ ಜೈನ ಆಶ್ರಮದ ಕಾಮ ಕುಮಾರ ನಂದಿ ಮಹಾರಾಜರನ್ನು ದುಷ್ಕರ್ಮಿಗಳು ವಿದ್ಯುತ್ ಶಾಕ್ ಕೊಟ್ಟು, ಅಂಗಾಂಗ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿರುವುದಾಗಿ ವಿಚಾರಣೆಯ ವೇಳೆ ಆರೋಪಿಗಳು ಘಟನೆಯ ಭೀಕರತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ‌. ಆರೋಪಿಗಳನ್ನಿ ನಾರಾಯಣ ಮಾಳಿ ಹಾಗೂ ಹುಸೇನ್ ಎಂದು ಗುರುತಿಸಲಾಗಿದೆ. ಆರೋಪಿಗಳು ಸ್ವಾಮೀಜಿಯನ್ನು ಹತ್ಯೆ ಮಾಡಿದ ಬಳಿಕ ದೇಹವನ್ನು 9 ತುಂಡುಗಳನ್ನಾಗಿ ಕತ್ತರಿಸಿ, ರಾಯಬಾಗ ತಾಲೂಕಿನ ಖಟಕಬಾವಿ ಗ್ರಾಮದ ಕಬ್ಬಿನ

ಜೈನಮುನಿಗೆ ಕರೆಂಟ್ ಶಾಕ್ ಕೊಟ್ಟು ಕೊಲೆ- ಮೃತದೇಹವನ್ನು ತುಂಡರಿಸಿ ಕೊಳವೆ ಬಾವಿಗೆಸೆದ ಹಂತಕರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಾನುವಾರುಗಳ ಮೇಲೆ ಹರಿದ ಕಾರು- ಮೂರು ಜಾನುವಾರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 09. ರಸ್ತೆಬದಿ ಮಲಗಿದ್ದ ಜಾನುವಾರುಗಳ ಮೇಲೆ ಕಾರು ಚಲಿಸಿ ಮೂರು ಜಾನುವಾರುಗಳು ಮೃತಪಟ್ಟು, ವೈದ್ಯ ವಿದ್ಯಾರ್ಥಿ ಗಾಯಗೊಂಡ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಹೌಸ್ ನಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ. ಗಾಯಗೊಂಡವರನ್ನು ಮೈಸೂರು ಮೂಲದ ಡಾ.ವಿವೇಕ್ ಶಶಿಕುಮಾರ್ ಎಂದು ಗುರುತಿಸಲಾಗಿದೆ. ದೇರಳಕಟ್ಟೆ ಕಡೆಯಿಂದ ತೊಕ್ಕೊಟ್ಟಿನತ್ತ ತೆರಳುತ್ತಿದ್ದ ಕಾರು ನಸುಕಿನ 3.30 ರ ಸುಮಾರಿಗೆ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳ ಮೇಲೆ ಹರಿದಿದ್ದು, ಪರಿಣಾಮ ಮೂರು ಜಾನುವಾರುಗಳು ಸಾವನ್ನಪ್ಪಿವೆ.

ಜಾನುವಾರುಗಳ ಮೇಲೆ ಹರಿದ ಕಾರು- ಮೂರು ಜಾನುವಾರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಓಮ್ನಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು- ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 09. ಓಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರೊಂದು ಢಿಕ್ಕಿಯಾಗಿ ಓಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಬಿ.ಸಿ.ರೋಡು- ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ನಡೆದಿದೆ. ಅಪಘಾತದಲ್ಲಿ ಓಮ್ನಿ ಕಾರು ಚಾಲಕ ರಾಯಿಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸಹಿತ ಮೂರು ಜನ ಹಾಗೂ ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೆ ಗಾಯವಾಗಿದೆ. ಎರಡೂ ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ

ಬಂಟ್ವಾಳ: ಓಮ್ನಿ ಕಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಸ್ವಿಫ್ಟ್ ಕಾರು- ಹಲವರಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಮೂರು ವಾಹನಗಳ ನಡುವೆ ಸರಣಿ ಅಪಘಾತ- ರಿಕ್ಷಾ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಜು. 08. ಮೂರು ವಾಹನಗಳ ನಡುವೆ ಪರಸ್ಪರ ಢಿಕ್ಕಿ ಸಂಭವಿಸಿ ಓರ್ವ ಗಂಭೀರ ಗಾಯಗೊಂಡ ಘಟನೆ ಧರೆಗುಡ್ಡೆ ಎಂಬಲ್ಲಿ ನಡೆದಿದೆ. ನಾಟಿಗೆಂದು ನೇಜಿಯನ್ನು ಹೊತ್ತೊಯ್ಯುತ್ತಿದ್ದ ಮರೋಡಿ ಮೂಲದ ಪಿಕಪ್ ವಾಹನವು ಬೆಳುವಾಯಿಯಿಂದ ದರೆಗುಡ್ಡೆ ಮೂಲಕ ವೇಗವಾಗಿ ಸಾಗಿ ಹಂಗೊಟ್ಟು ಎಂಬಲ್ಲಿ ಬೊಲೇರೋ ಕಾರು ಹಾಗೂ ರಿಕ್ಷಾವೊಂದಕ್ಕೆ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನುಜ್ಜುಗುಜ್ಜಾಗಿದ್ದು ವಾಹನಗಳಲಿದ್ದ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂರು ವಾಹನಗಳ ನಡುವೆ ಸರಣಿ ಅಪಘಾತ- ರಿಕ್ಷಾ ಚಾಲಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಒಡಿಶಾ ರೈಲು ದುರಂತ- ಮೂವರು ಸಿಬಂದಿಗಳನ್ನು ವಶಕ್ಕೆ ಪಡೆದ ಸಿಬಿಐ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಜು. 08. ಒಡಿಶಾದ ಬಾಲಸೋರ್ ನಲ್ಲಿ ಜೂನ್ 2 ರಂದು ಸಂಭವಿಸಿದ್ದ ಶಾಲಿಮಾರ್-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಸ್ಟೇಷನರಿ ಗೂಡ್ಸ್ ಈ ಮೂರು ರೈಲುಗಳ ಸರಣಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮೂವರು ರೈಲ್ವೇ ಸಿಬಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ನಿಯೋಜಿಸಲಾದ ಹಿರಿಯ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಂತ, ಸೆಕ್ಷನ್ ಇಂಜಿನಿಯರ್ ಮೊಹಮ್ಮದ್ ಅಮೀರ್ ಖಾನ್ ಮತ್ತು ತಂತ್ರಜ್ಞ ಪಪ್ಪು

ಒಡಿಶಾ ರೈಲು ದುರಂತ- ಮೂವರು ಸಿಬಂದಿಗಳನ್ನು ವಶಕ್ಕೆ ಪಡೆದ ಸಿಬಿಐ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top