crime

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ವಿಟ್ಲ, ಜು. 21. ಅಪ್ರಾಪ್ತೆಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಬಳಿಕ ಆರೋಪಿ ಪರಾರಿಯಾದ ಘಟನೆ ವಿಟ್ಲ ಠಾಣಾ ವ್ಯಾಪ್ತಿಯ ಕನ್ಯಾನದಲ್ಲಿ ನಡೆದಿದೆ. ಆರೋಪಿಯನ್ನು ಅಬ್ದುಲ್‌ ಸಮೀರ್‌ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ದ ವಿಟ್ಲ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ ಆರೋಪಿಯು ಅಪ್ರಾಪ್ತೆಯನ್ನು ಪ್ರೀತಿಸುತ್ತಿದ್ದು, ಬಳಿಕ ಮದುವೆಯಾಗುವುದಾಗಿ ನಂಬಿಸಿ 2019ರಲ್ಲಿ ಕನ್ಯಾನ ಗ್ರಾಮದ ನಿರ್ಮಾಣ ಹಂತದ ಮನೆಯೊಂದಕ್ಕೆ ಕರೆದುಕೊಂಡು ಹೋಗಿ ದೈಹಿಕ ಸಂಪರ್ಕ ಬೆಳೆಸಿದ್ದನು. ಬಳಿಕ ಮದುವೆಯಾಗದೇ ಮೋಸ […]

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ – ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್ – ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜು.21. ಬಂಧಿತ ಶಂಕಿತ ಉಗ್ರರ ಕೃತ್ಯಗಳ ಪ್ಲಾನ್‍ಗಳು ಬಗೆದಷ್ಟೂ ಬಯಲಾಗುತ್ತಿದ್ದು, ಶಂಕಿತ ಉಗ್ರರ ಟಾರ್ಗೆಟ್ ಬೆಂಗಳೂರು ಮಾತ್ರ ಅಲ್ಲ, ಇಡೀ ಕರ್ನಾಟಕದಲ್ಲೇ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದೆ. ಕೋಮುಗಲಭೆ ಸೃಷ್ಟಿಸಿ ನರಮೇಧಕ್ಕೆ ಷಡ್ಯಂತ್ರ ರೂಪಿಸಿರುವುದು ಎಂಬಂತಹ ಒಂದೊಂದೇ ಸ್ಫೋಟಕ ಸತ್ಯಗಳು ಕೇಂದ್ರ ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಿದ ವೇಳೆ ಹೊರ ಬರುತ್ತಿರುವುದಾಗಿ ತಿಳಿದು ಬಂದಿದೆ. ಶಂಕಿತ ಉಗ್ರರು ರಾಜ್ಯಾದ್ಯಂತ ರಕ್ತಪಾತ, ನರಮೇಧ, ಪೈಶಾಚಿಕ ಕೃತ್ಯಕ್ಕೆ

ಬೆಂಗಳೂರು ಅಲ್ಲ ಇಡೀ ಕರ್ನಾಟಕವೇ ಟಾರ್ಗೆಟ್ – ಶಂಕಿತ ಉಗ್ರರಿಂದ ಸ್ಪೋಟಕ ಹೇಳಿಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತದಿಂದ ಹಾರಿದ ಬಾಲಕಿ – ವಿಡಿಯೋ ವೈರಲ್..!

(ನ್ಯೂಸ್ ಕಡಬ)newskadaba.com ಛತ್ತೀಸ್ ಗಢ, ಜು.21. ಶಾಲಾ ಬಾಲಕಿಯೊಬ್ಬಳು ಪೋಷಕರು, ಜಾಸ್ತಿ ಮೊಬೈಲ್ ಬಳಸಬೇಡ ಎಂದು ಆಕೆಗೆ ಹೇಳಿದ್ದಕ್ಕೆ, ಮನನೊಂದು 90 ಅಡಿ ಇರುವ ಈ ಜಲಪಾತದಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಪ್ರಯತ್ನಿಸಿದ ಘಟನೆ ಛತ್ತೀಸ್ ಗಢದ ಬಸ್ತಾರ್ ನಲ್ಲಿರುವ ಚಿತ್ರಕೋಟೆ ಎಂಬ ಜಲಪಾತದಲ್ಲಿ ನಡೆದಿದೆ. ಜಲಪಾತಕ್ಕೆ ಧುಮುಕುವ ಮೊದಲು ಆಕೆ ಸ್ವಲ್ಪ ಹೊತ್ತು ಅದರ ಅಂಚಿನಲ್ಲಿ ಓಡಾಡಿದ್ದಾಳೆ. ಇದನ್ನು ನೋಡಿದ ಸ್ಥಳೀಯರು/ಪ್ರವಾಸಿಗರು, ಆಕೆಯನ್ನು ಕೂಗಿ ನಿಲ್ಲುವಂತೆ ಹೇಳಿದ್ದಾರೆ. ಬಳಿಕ ಹಾರಿರುವ ವಿಡಿಯೋ ವೈರಲ್ ಆಗಿದೆ.

ಮೊಬೈಲ್ ಜಾಸ್ತಿ ಬಳಸಬೇಡ ಎಂದಿದ್ದಕ್ಕೆ ಜಲಪಾತದಿಂದ ಹಾರಿದ ಬಾಲಕಿ – ವಿಡಿಯೋ ವೈರಲ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು ➤ ಕಂಡಕ್ಟರ್ ನಾಪತ್ತೆ; ದೂರು ದಾಖಲು

(ನ್ಯೂಸ್ ಕಡಬ)newskadaba.com ಪುತ್ತೂರು, ಜು.21. ಅಡಿಕೆ ಸಾಗಾಟದ ಲಾರಿಯೊಂದರಿಂದ ಲಕ್ಷಾಂತರ ರೂಪಾಯಿ ನಗದು ಕಳವಾಗಿರುವ ಮತ್ತು ಲಾರಿಯ ಕಂಡಕ್ಟರ್ ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೂಣೆಯಲ್ಲಿರುವ ಅಝರ್ ಟ್ರೆಂಡಿಂಗ್ ಮತ್ತು ಪುತ್ತೂರಿಯಲ್ಲಿರುವ ಅಝರ್ ಟ್ರಾನ್ಸ್ ಪೋರ್ಟ್ ಸಂಸ್ಥೆಯ ಮಾಲಕ ಬನ್ನೂರು ನಿವಾಸಿ ಅಝರ್ ಕಂಪೌಂಡ್ ನ ಕಲಂದರ್ ಇಬ್ರಾಹಿಂ ನೌಷದ್ ಎಂಬವರ ಲಕ್ಷಾಂತರ ರೂಪಾಯಿ ನಗದು ಕಳವಾಗಿದೆ.  

ಲಾರಿಯಿಂದ ಲಕ್ಷಾಂತರ ರೂ.ನಗದು ಕಳವು ➤ ಕಂಡಕ್ಟರ್ ನಾಪತ್ತೆ; ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಶಿಕ್ಷಕಿಯನ್ನು ಗಂಭೀರವಾಸ್ಥೆಗೆ ತಳ್ಳಿದ ವೀಲಿಂಗ್ ಗ್ಯಾಂಗ್ – ದೂರು ದಾಖಲು

(ನ್ಯೂಸ್ ಕಡಬ) newskadaba.com ಮೈಸೂರು, ಜು. 21. ದಿನದಿಂದ ದಿನಕ್ಕೆ ಪುಂಡರ ಹಾವಳಿ ಹೆಚ್ಚುತ್ತಿದ್ದು, ರಸ್ತೆಗಳಲ್ಲಿ ವೀಲಿಂಗ್ ಮಾಡುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ವರದಿಯಾಗಿದ್ದು, ವೀಲಿಂಗ್ ಮಾಡುತ್ತಿದ್ದ ಯುವಕರು ಶಿಕ್ಷಕಿಯೋರ್ವರ ಸ್ಕೂಟರ್ ಗೆ ಢಿಕ್ಕಿ ಹೊಡೆದು ಶಿಕ್ಷಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದಾರೆ. ಶಿಕ್ಷಕಿ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ವೇಳೆ ಗಾಯತ್ರಿಪುರಂ ಚರ್ಚ್​ ಬಳಿ ಕೆಟಿಎಂ ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಮೂಲಕ ವೀಲಿಂಗ್ ಮಾಡುತ್ತಾ ಬಂದ ಪುಂಡರು ಎದುರಿನಿಂದ ಬರುತ್ತಿದ್ದ ಸ್ಕೂಟರ್​ಗೆ

ಶಿಕ್ಷಕಿಯನ್ನು ಗಂಭೀರವಾಸ್ಥೆಗೆ ತಳ್ಳಿದ ವೀಲಿಂಗ್ ಗ್ಯಾಂಗ್ – ದೂರು ದಾಖಲು Read More »

ಕರ್ನಾಟಕ

ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 21. ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ ಗುದ್ದಿ ಜಖಂಗೊಂಡ ಘಟನೆ ಗುರುವಾರದಂದು ನಗರದ ಪಿವಿಎಸ್‌ ಬಳಿಯ ಎಂ.ಜಿ. ರೋಡ್‌ನ‌ಲ್ಲಿ ನಡೆದಿದೆ. ಕಾಸರಗೋಡು- ಮಂಗಳೂರು ನಡುವೆ ಸಂಚರಿಸುತ್ತಿದ್ದ ಬಸ್‌, ಇನ್ನೊಂದು ಕೆಎಸ್‌ಆರ್‌ಟಿಸಿಯ ಬಸ್ ನ್ನು ಹಿಂದಿಕ್ಕುವ ಭರದಲ್ಲಿ ಕಾಂಪಿಟೀಶನ್‌ ಮಾಡಿಕೊಂಡು ಪಿವಿಎಸ್‌ ಜಂಕ್ಷನ್‌ ನಿಂದ ಎಂ.ಜಿ ರಸ್ತೆಗೆ ನಿರ್ಲಕ್ಷ್ಯ ಮತ್ತು ಅತೀ ವೇಗದಿಂದ ಬಂದಿದ್ದು, ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಈ ಸಂದರ್ಭ

ಫುಟ್ ಪಾತ್ ನಲ್ಲಿ ನಿಲ್ಲಿಸಿದ್ದ ವಾಹನಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ Read More »

ಕರಾವಳಿ, ಕ್ರೈಮ್ ನ್ಯೂಸ್

ಮಾರಕಾಸ್ತ್ರದಿಂದ ಹೊಡೆದು ಯುವಕ ಬರ್ಬರ ಹತ್ಯೆ

(ನ್ಯೂಸ್ ಕಡಬ)newskadaba.com ಶಿವಮೊಗ್ಗ, ಜು.21. ಭದ್ರಾವತಿಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಮಾರಕಾಸ್ತ್ರಗಳಿಂದ ತಲೆಗೆ ಹೊಡೆದು ರೌಡಿಶೀಟರ್ ಓರ್ವನಿಗೆ ಬರ್ಬರವಾಗಿ ಕೊಲೆ ಮಾಡಲಾಗಿದೆ‌. ಮುಜಾಯಿದ್ದೀನ್(32) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಮಾರಕಾಯುಧದಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಮುಜಾಯಿದ್ದೀನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಸ್ಥಳಕ್ಕೆ ಪೇಪರ್ ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತಿ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಮಾರಕಾಸ್ತ್ರದಿಂದ ಹೊಡೆದು ಯುವಕ ಬರ್ಬರ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕುಂದಾಪುರ: ತಡರಾತ್ರಿ ನಿದ್ದೆಗಣ್ಣಿನಲ್ಲಿ ಮನೆಯಿಂದ 3 ಕಿ.ಮೀ ನಡೆದ ಬಾಲಕಿ

(ನ್ಯೂಸ್ ಕಡಬ)newskadaba.com ಕುಂದಾಪುರ, ಜು.21. ಮನೆಯಲ್ಲಿ ಮಲಗಿದ್ದ ಆರು ವರ್ಷದ ಬಾಲಕಿಯೊಬ್ಬಳು ನಿದ್ದೆಗಣ್ಣಿನಲ್ಲಿ ಎದ್ದು ಸುಮಾರು ಮೂರು ಕಿಲೋಮೀಟರ್ ದೂರ ನಡೆದು ಬೀದಿಯಲ್ಲಿ ವಾಹನ ಸಂಚರಿಸುತ್ತಿದ್ದವರ ಕಣ್ಣಿಗೆ ಬಿದ್ದ ಘಟನೆ ನಡೆದಿದೆ. ಕುಂದಾಪುರ ಸಮೀಪ ದಬ್ಬೆಕಟ್ಟೆ–ತೆಕ್ಕಟ್ಟೆ ರಸ್ತೆಯಲ್ಲಿ ರಾತ್ರಿ ಬಾರ್ ಬಂದ್ ಮಾಡಿ ತೆರಳುತ್ತಿದ್ದ ವೇಳೆ ಬಾಲಕಿ ರಸ್ತೆಯಲ್ಲಿ ತೆರಳುತ್ತಿರುವುದು ಕಣ್ಣಿಗೆ ಬಿದ್ದಿದ್ದು, ಈ ವೇಳೆ ಬಾಲಕಿಯನ್ನು ವಿಚಾರಿಸಿ ಅರ್ಚನಾ ಬಾರ್ ನ ವಿಶ್ವನಾಥ್ ಪೋಷಕರಿಗೆ ಕರೆಸಿದ್ದಾರೆ. ಮಗು ನಾಪತ್ತೆಯಾದ ವಿಷಯವೇ ತಿಳಿಯದೆ ಮನೆಯವರು ಮಗುವನ್ನು ಕಂಡು

ಕುಂದಾಪುರ: ತಡರಾತ್ರಿ ನಿದ್ದೆಗಣ್ಣಿನಲ್ಲಿ ಮನೆಯಿಂದ 3 ಕಿ.ಮೀ ನಡೆದ ಬಾಲಕಿ Read More »

ಕರ್ನಾಟಕ

ಮಹಿಳೆಯರ ನಗ್ನ ಮೆರವಣಿಗೆ ವೀಡಿಯೋ ವೈರಲ್ ಪ್ರಕರಣ – ಆರೋಪಿಯ ಮನೆಗೆ ಬೆಂಕಿ

(ನ್ಯೂಸ್ ಕಡಬ) newskadaba.com ಮಣಿಪುರ, ಜು. 21. ಮಣಿಪುರದಲ್ಲಿ ನಡೆದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣದ ವೀಡಿಯೊ ವೈರಲ್ ಆದ ಎರಡು ದಿನಗಳ ಬಳಿಕ ಪ್ರಮುಖ ಆರೋಪಿ ಮನೆಗೆ ಪ್ರತಿಭಟನಾಕಾರರ ಗುಂಪೊಂದು ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ. ಮಣಿಪುರದ ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಮೇ. 4ರಂದು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಲಾಗಿತ್ತು. ಅಲ್ಲದೇ ಈ ವೇಳೆ ಮಹಿಳೆಯರ ಮೇಲೆ ಅತ್ಯಾಚಾರ ಕೂಡಾ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆರೋಪಿಗಳನ್ನು

ಮಹಿಳೆಯರ ನಗ್ನ ಮೆರವಣಿಗೆ ವೀಡಿಯೋ ವೈರಲ್ ಪ್ರಕರಣ – ಆರೋಪಿಯ ಮನೆಗೆ ಬೆಂಕಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಹಿಳೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com ಕಾರ್ಕಳ, ಜು.21. ಮಹಿಳೆಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಆರೋಪ ಹೊತ್ತಿದ್ದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದಲ್ಲಿ ಸಂಭವಿಸಿದೆ. ಮೃತ ಪಟ್ಟವರನ್ನು ಸಂತೋಷ್ ಎಂದು ಗುರುತಿಸಲಾಗಿದೆ. ಮರವೊಂದಕ್ಕೆ ನೇಣುಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದು, ಕಾರ್ಕಳ ಮಾರ್ಕೆಟ್ ರೋಡ್ ನ ಮಹಿಳಾ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಮೀಳಾ ಎಂಬಾಕೆಗೆ ರೂ.3 ಲಕ್ಷ ಹಣ ನೀಡುವಂತೆ ಬ್ಲಾಕ್ ಮೇಲ್ ಮಾಡಿದ ಬಗ್ಗೆ ಸಂತೋಷ್ ಮೇಲೆ ಇತ್ತು ಎನ್ನಲಾಗಿದೆ. ಆತನ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದಿದ್ದ ಬ್ಯಾಂಕ್ ಸಿಬ್ಬಂದಿ

ಮಹಿಳೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ವ್ಯಕ್ತಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top