chikkaballapur

ಚಿಕ್ಕಬಳ್ಳಾಪುರ: ಅಪಘಾತದಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ

(ನ್ಯೂಸ್‌ ಕಡಬ)com,ಡಿ.26: ಚಿಕ್ಕಬಳ್ಳಾಪುರದಲ್ಲಿ ಲಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಟಿಪ್ಪರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಗ್ರಾಮದ ನಾಲ್ವರು ಯುವಕರು ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿತ್ತು. ದುರ್ಘಟನೆಯಲ್ಲಿ ಅಜ್ಜವಾರ ಗ್ರಾಮದ ನರಸಿಂಹಮೂರ್ತಿ. ನಂದೀಶ್, ಅರುಣ್, ಮನೋಜ್ ಎಂಬುವವರು ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ […]

ಚಿಕ್ಕಬಳ್ಳಾಪುರ: ಅಪಘಾತದಲ್ಲಿ ಮೃತಪಟ್ಟ ಯುವಕರ ಕುಟುಂಬಕ್ಕೆ ತಲಾ ರೂ.5 ಲಕ್ಷ ಪರಿಹಾರ ಘೋಷಣೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟ ಆಫ್ರಿಕನ್‌ ಹಂದಿ ಜ್ವರ

(ನ್ಯೂಸ್‌ ಕಡಬ) newskadaba.com, ಆ.29: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಫಾರ್ಮ್‌ವೊಂದರಲ್ಲಿ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ 100 ಹಂದಿಗಳು ಮೃತಪಟ್ಟಿದ್ದು, 57 ಹಂದಿಗಳನ್ನು ಕೊಲ್ಲಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ, ಆಫ್ರಿಕನ್‌ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕಬೇಡ. ಕಳೆದ ಒಂದು ವಾರದಿಂದ ಫಾರ್ಮ್‌ನಲ್ಲಿ ಹಂದಿಗಳು ಮೃತಪಟ್ಟಿದ್ದವು. ಹಾಗಾಗಿ ಸಾಕಾಣಿಕೆಯ ಫಾರ್ಮ್‌ ಹೌಸ್‌ಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ ಎಂದರು.

ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟ ಆಫ್ರಿಕನ್‌ ಹಂದಿ ಜ್ವರ Read More »

ಕರ್ನಾಟಕ

ಚಿಕ್ಕಬಳ್ಳಾಪುರ: ರೈತರ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ) newskadaba.com ಎ. 29 ಚಿಕ್ಕಬಳ್ಳಾಪುರ : ಪಂಚಗಿರಿಗಳ ನಾಡು ಎಂಬ ಖ್ಯಾತಿಯ ಚಿಕ್ಕಬಳ್ಳಾಪುರದಂತೆ ಜಿಲ್ಲೆಯಲ್ಲಿ ಹಬ್ಬಿನಿಂತ ಮಲೆಯ ಸಾಲುಗಳಲ್ಲಿ ಡೈನಮೈಟ್‌ಗಳ ಭೋರ್ಗೆರೆತ,ಜಲ್ಲಿ ಕಲ್ಲುಗಳ ಸಾಗಾಟದ ನಡುವೆ ರೈತಾಪಿ ವರ್ಗದ ಎದೆಗೆ ಗುಂಡು ಹಾರಿಸಲಾಗಿದೆ. ಜಿಲ್ಲೆಯಲ್ಲಿ ಗಣಿಗಾರಿಕೆ ಮತ್ತು ಕಲ್ಲು ಕ್ವಾರಿಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಾಕೃತಿಕ ಸಂಪ ನ್ಮೂಲಗಳ ಹರಣ ನಾಗರೀಕರನ್ನು ದಿಗಿಲುಬೀಳುವಂತೆ ಮಾಡಿರುವುದೇ ಏ28ರ ಮಂಚೇನಹಳ್ಳಿ ಬಂದ್‌ಗೆ ಕಾರಣವಾಗಿದೆ. ಹೌದು. ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದು

ಚಿಕ್ಕಬಳ್ಳಾಪುರ: ರೈತರ ಮೇಲೆ ಗುಂಡಿನ ದಾಳಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್

(ನ್ಯೂಸ್ ಕಡಬ)newskadaba.com  ಚಿಕ್ಕಬಳ್ಳಾಪುರ, ಜ.20. ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆಯಾಗಿದ್ದು, 2000 ರೂಪಾಯಿ ಮುಖಬೆಲೆಯ 1.29 ಕೋಟಿ ಮೌಲ್ಯದ ನಕಲಿ ನೋಟುಗಳನ್ನ ಚಿಂತಾಮಣಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಊಲವಾಡಿ ಗ್ರಾಮದ ಬಾರ್ನ್ ಫೌಂಡೇಶನ್ ಕಟ್ಟಡದಲ್ಲಿ ನಡೆಯುತ್ತದ್ದ ನಕಲಿ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೇಖ್ ಹಿದಾಯತ್, ದಾವೂದ್ ವಾಸಿಮ್ ಹಾಗೂ ಶಿವಣ್ಣ ಬಂಧಿತ ಆರೋಪಿಗಳು. ಕಟ್ಟಡದ ಕೋಣೆಯೊಂದರಲ್ಲೇ ನಕಲಿ ನೋಟುಗಳನ್ನು ಪ್ರಿಂಟ್​ ಮಾಡುತ್ತಿದ್ದರು.    

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!! 

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, ಜ.20. ಮಗ ಕೆಟ್ಟವನಾದರೂ ತಾಯಿ ಕೆಟ್ಟವಳಾಗುವುದಿಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿ ಮಾತ್ರ ತಾಯಿ, ತನ್ನ ಮಗುವಿಗೆ ಜನ್ಮ ನೀಡಿ ಮಗು ಬೇಡ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾಳೆ. ಅದರ ಪರಿಣಾಮವಾಗಿ ಈಗ ಮಗು ಮೃತಪಟ್ಟಿದೆ. ನಡುರಸ್ತೆಯಲ್ಲೇ ಪುಟ್ಬಾತ್ ಮೇಲೆ ಮಗುವಿಗೆ ಹೆಣ್ಣು ಜನ್ಮ ನೀಡಿದ ತಾಯಿ ನಂತರ ಆಕೆ ನಾಪತ್ತೆಯಾಗಿದ್ದಾಳೆ. ಈ ರೀತಿಯ ಪ್ರಕರಣಗಳು ದೇಶಾದ್ಯಂತ ಹೆಚ್ಚಾಗುತ್ತಿವೆ. ಹುಟ್ಟಿಸಿದ ಮಗು ತನಗೆ ಬೇಡ ಎಂದು ಅನೇಕ ತಾಯಂದಿರು ಮಗುವನ್ನು ತ್ಯಜಿಸುವುದು ಈಗ ಸಾಮಾನ್ಯವಾಗಿದೆ.

ಫುಟ್​ಪಾತ್​ ಮೇಲೆ ಮಗುವಿಗೆ ಜನ್ಮ ನೀಡಿ ರಸ್ತೆಯಲ್ಲೇ ಎಸೆದು ಹೋದ ಪಾಪಿ ತಾಯಿ..!!  Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ►ಮದುವೆ ಮನೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಘಟನೆ

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ನ.2. ಮದುವೆ ಮನೆಯಿಂದ ಜನರನ್ನು ಕರೆದುಕೊಂಡು ವಾಪಾಸ್ಸಾಗುತ್ತಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶಿಡ್ಲಘಟ್ಟ ತಾಲೂಕಿನ ಬೈಯಪ್ಪನಹಳ್ಳಿ ಗೇಟ್ ಬಳಿ ಬುಧವಾರ ಮಧ್ಯರಾತ್ರಿ ಸಂಭವಿಸಿದೆ. ಬಸ್ ನಲ್ಲಿದ್ದವರು ಬಾಗೇಪಲ್ಲಿಯ ಮಿಟ್ಟೆಮರಿ ಗ್ರಾಮದ ನಿವಾಸಿಗಳಾಗಿದ್ದು, ಬೆಂಗಳೂರಿನ ಸರ್ಜಾಪುರ ಕಲ್ಯಾಣ ಮಂಟಪವೊಂದರಲ್ಲಿ ಮದುವೆಯನ್ನು ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಮಧ್ಯರಾತ್ರಿ 12.30 ರ ಸುಮಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಬಸ್ ನಲ್ಲಿ 70ಕ್ಕೂ ಅಧಿಕ ಮಂದಿ

ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ ►ಮದುವೆ ಮನೆಯಿಂದ ವಾಪಸ್ಸಾಗುತ್ತಿದ್ದ ವೇಳೆ ಘಟನೆ Read More »

ಕರ್ನಾಟಕ

9 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ► ರಾಜ್ಯದಲ್ಲೊಂದು ಭೀಕರ ಅಮಾನುಷ ಘಟನೆ

(ನ್ಯೂಸ್ ಕಡಬ ) newskadaba.com ಚಿಕ್ಕಬಳ್ಳಾಪುರ, ಆ 24, ಮನೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿರುವ ಕಾಮುಕರು, ಬಾಲಕಿ ಮೇಲೆ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಿರುವ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗ್ರಾಮದ 9 ವರ್ಷದ ಬಾಲಕಿಯನ್ನು ಅಪಹರಿಸಿರುವ ದುಷ್ಕರ್ಮಿಗಳು, ಬಾಲಕಿ ಮೇಲೆ ಅತ್ಯಾಚಾರ ಎಸಗಿ ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮನೆಯಲ್ಲಿ ಮಲಗಿದ್ದ ಬಾಲಕಿ ನಾಪತ್ತೆಯಾದ ನಂತರ ಬಾಲಕಿಯ ಪೋಷಕರು ಹಾಗೂ ಸಂಬಂಧಿಕರು ಹುಡುಕಾಟ ನಡೆಸಿದ್ರೂ

9 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿ ಕೊಲೆ ► ರಾಜ್ಯದಲ್ಲೊಂದು ಭೀಕರ ಅಮಾನುಷ ಘಟನೆ Read More »

ಕರ್ನಾಟಕ
Scroll to Top