ಚಿಕ್ಕಬಳ್ಳಾಪುರ ಜಿಲ್ಲೆಗೆ ಕಾಲಿಟ್ಟ ಆಫ್ರಿಕನ್‌ ಹಂದಿ ಜ್ವರ

(ನ್ಯೂಸ್‌ ಕಡಬ) newskadaba.com, ಆ.29: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಫಾರ್ಮ್‌ವೊಂದರಲ್ಲಿ ಆಫ್ರಿಕನ್‌ ಹಂದಿ ಜ್ವರ ಕಾಣಿಸಿಕೊಂಡಿದೆ. ಈಗಾಗಲೇ 100 ಹಂದಿಗಳು ಮೃತಪಟ್ಟಿದ್ದು, 57 ಹಂದಿಗಳನ್ನು ಕೊಲ್ಲಲು ತೀರ್ಮಾನಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ, ಆಫ್ರಿಕನ್‌ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕಬೇಡ. ಕಳೆದ ಒಂದು ವಾರದಿಂದ ಫಾರ್ಮ್‌ನಲ್ಲಿ ಹಂದಿಗಳು ಮೃತಪಟ್ಟಿದ್ದವು. ಹಾಗಾಗಿ ಸಾಕಾಣಿಕೆಯ ಫಾರ್ಮ್‌ ಹೌಸ್‌ಗೆ ಭೇಟಿ ನೀಡಿ, ಪರಿಶೀಲಿಸಲಾಗಿದೆ ಎಂದರು.

ಹಂದಿಜ್ವರದ ಶಂಕೆ ಹಿನ್ನೆಲೆ ಸ್ಯಾಂಪಲ್‌ನ್ನು ಭೋಪಾಲ್‌ನ ರಾಷ್ಟ್ರೀಯ ಲ್ಯಾಬ್‌ಗೆ ಸ್ಯಾಂಪಲ್‌ ಕಳುಹಿಸಲಾಗಿದೆ. ಇಂದು ಬಂದಿರುವ ವರದಿಯಲ್ಲಿ ಆಫ್ರಿಕನ್‌ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಸದ್ಯ ಫಾರ್ಮ್‌ನಿಂದ ಹಂದಿಗಳ ಸಾಗಾಟ ಹಾಗಾಗಿ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದರು.

ಹಂದಿಗಳಿಗೆ ಆಫ್ರಿಕನ್‌ ಜ್ವರ ಹರಡದಂತೆ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ಹರಡುವುದಿಲ್ಲ. ಹಾಗಾಗಿ ಆಫ್ರಿಕನ್‌ ಹಂದಿ ಜ್ವರದಿಂದ ಜನರಿಗೆ ಯಾವುದೇ ರೀತಿಯಾದ ಆತಂಕಬೇಡ ಎಂದು ಹೇಳಿದರು.

Scroll to Top