blackmail

ಸಲ್ಮಾನ್ ಖಾನ್ ನಂತರ ಶಾರೂಕ್ ಖಾನ್ ಗೆ ಜೀವ ಬೆದರಿಕೆ..!

(ನ್ಯೂಸ್ ಕಡಬ) newskadaba.com ನ. 07. ಇತ್ತೀಚೆಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಕರೆ ಬಂದಿರುವ ಬೆನ್ನಲ್ಲೇ ಇದೀಗ ಮತ್ತೊಂದು ಬಾಲಿವುಡ್ ಸೂಪರ್ ಸ್ಟಾರ್ ನಟ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈನ ಬಾಂದ್ರಾ ಪೊಲೀಸರು ತಿಳಿಸಿದ್ದಾರೆ. ಛತ್ತೀಸ್ ಗಡದ ರಾಯ್ ಪುರದ ಫೈಜಾನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ಬೆದರಿಕೆ ಬಂದಿರುವುದಾಗಿ ತಿಳಿದುಬಂದಿದೆ. ಈ ಕುರಿತು ಶಾರುಖ್ ಖಾನ್ ತಂಡವು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಸಲ್ಮಾನ್ ಖಾನ್ ನಂತರ ಶಾರೂಕ್ ಖಾನ್ ಗೆ ಜೀವ ಬೆದರಿಕೆ..! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ದೂರವಾಣಿ ಕರೆಮಾಡಿ ಜೀವಬೆದರಿಕೆ- ದೂರು ದಾಖಲು

(ನ್ಯೂಸ್ ಕಡಬ) newskadaba.com ಅ. 11. ವಿದ್ಯುತ್‌ ಲೈನ್‌ ಕಾಮಗಾರಿ ನಿರ್ವಹಿಸುವ ಹಿರಿಯ ವಿದ್ಯುತ್‌ ಗುತ್ತಿಗೆದಾರರೊಬ್ಬರಿಗೆ ಅಪರಿಚಿತ ವ್ಯಕ್ತಿಯೊರ್ವ ಅ.9ರಂದು ರಾತ್ರಿ ಮೊಬೈಲ್‌ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಪುತ್ತೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ದೂರವಾಣಿ ಕರೆಮಾಡಿ ಜೀವಬೆದರಿಕೆ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಬ್ಯಾಂಕ್ ಸಿಬ್ಬಂದಿಗಳಿಗೆ ಬೆದರಿಕೆ ಪ್ರಕರಣ – ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲು

(ನ್ಯೂಸ್ ಕಡಬ) newskadaba.com ಸೆ. 28. ಸಾಲ ಮರುಪಾವತಿ ವಿಚಾರವಾಗಿ ಉದ್ಯಮಿಯೊಬ್ಬರ ಮನೆಗೆ ಹೋಗಿದ್ದ ರಾಷ್ಟ್ರೀಕೃತ ಬ್ಯಾಂಕ್ ನ ರಿಲೇಶನ್ ಶಿಪ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ. ದೂರಿನ ಪ್ರಕಾರ, ಪ್ರಕರಣದ ಪಿರ್ಯಾದುದಾರರಾದ ಚಿಕ್ಕಮಗಳೂರು ಕೊಪ್ಪ ತಾಲೂಕು ನಿವಾಸಿ ಚೈತನ್ಯ ಹೆಚ್.ಸಿ ನೀಡಿರುವ ದೂರಿನಂತೆ, ‘ಚೈತನ್ಯ ಎಂಬವರು ಪುತ್ತೂರಿನ ಕೋರ್ಟ್ ರಸ್ತೆಯ‍ಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ

ಬ್ಯಾಂಕ್ ಸಿಬ್ಬಂದಿಗಳಿಗೆ ಬೆದರಿಕೆ ಪ್ರಕರಣ – ಶಸ್ತ್ರಾಸ್ತ್ರ ಕಾಯ್ದೆಯಡಿ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಪೊಲೀಸ್ ಠಾಣೆಯ ಮೊರೆಹೋದ ಶಿಕ್ಷಕಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಸೆ. 20. ಶಾಲಾ ಶಿಕ್ಷಕಿಯ ಖಾಸಗಿ ವಿಡಿಯೋ ವೈರಲ್ ಮಾಡುವುದಾಗಿ ಧಮ್ಕಿ ಹಾಕುವುದಲ್ಲದೇ 10 ಲಕ್ಷ ರೂಪಾಯಿ ಹಣ ನೀಡದೇ ಇದ್ರೆ ಏರಿಯಾದಲ್ಲಿ ದೊಡ್ಡದಾಗಿ ಫ್ಲೆಕ್ಸ್ ಹಾಕುವುದಾಗಿ ಬ್ಲ್ಯಾಕ್​ ಮೇಲ್ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬ್ಲ್ಯಾಕ್​ ಮೇಲ್ ಮಾಡಿರುವ ಆರೋಪಿಗಳು ಅಸೀಮ್ ಹಾಗೂ ಮಯೂರ್ ಎಂದು ಗುರುತಿಸಲಾಗಿದೆ. ಅಸೀಮ್ ಹಾಗೂ ಮಯೂರ್ ಶಿಕ್ಷಕಿಯ ಅಶ್ಲೀಲ ವಿಡಿಯೋ ಹಾಗೂ ಫೋಟೋಗಳನ್ನು ಪತಿ ಹಾಗೂ

ಖಾಸಗಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ – ಪೊಲೀಸ್ ಠಾಣೆಯ ಮೊರೆಹೋದ ಶಿಕ್ಷಕಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೊಲೀಸರ ಹೆಸರಿನಲ್ಲಿ ಬ್ಲಾಕ್ ಮೇಲ್ – ವಿದ್ಯಾರ್ಥಿಯಿಂದ ಹಣ ವಸೂಲಿ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 26. ಪೊಲೀಸರ ತನಿಖೆ ವಿಚಾರಣೆ ಶೈಲಿಯನ್ನು ಸರಿಯಾಗಿ ತಿಳಿದುಕೊಂಡು, ಇದನ್ನೇ ಬಂಡವಾಳವಾಗಿಟ್ಟುಕೊಂಡು ಆರೋಪಿಗಳು ಪ್ಯಾರಾಮೆಡಿಕಲ್​ ವಿದ್ಯಾರ್ಥಿಯೋರ್ವನಿಂದ ಹಣ ಸುಲಿಗೆ ಮಾಡಿರುವ ಘಟನೆ ವರದಿಯಾಗಿದೆ. ಆರೋಪಿಗಳು ತಾವು ಪೊಲೀಸರು, ಸ್ಟೇಷನ್ ಗೆ ನಡೆಯಿರಿ ಎಂದು ಹೇಳಿ ವಿದ್ಯಾರ್ಥಿಯನ್ನು ಕಾರು ಹತ್ತಿಸಿ, ಬರೋಬ್ಬರಿ 1 ಲಕ್ಷದ 70 ಸಾವಿರ ಅಕೌಂಟ್​ಗೆ ಹಾಕಿಸಿಕೊಂಡಿದ್ದಾರೆ ಎಂದು ಪೊಲೀಸ್​ ವಿಚಾರಣೆ ವೇಳೆ ಬಯಲಿಗೆ ಬಂದಿದೆ. ನಂತರ ಆರೋಪಿಗಳು ವಿಚಾರ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದು,

ಪೊಲೀಸರ ಹೆಸರಿನಲ್ಲಿ ಬ್ಲಾಕ್ ಮೇಲ್ – ವಿದ್ಯಾರ್ಥಿಯಿಂದ ಹಣ ವಸೂಲಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಮಲಮಗಳ ಮೇಲೆ ಅತ್ಯಾಚಾರ ಪ್ರಕರಣ ➤ ಆರೋಪಿಗೆ 20 ವರ್ಷ ಜೈಲುಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 22. ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್ FTSC || (POCSO) ನ್ಯಾಯಾಲಯವು ಆರೋಪಿ ಮಲತಂದೆಗೆ 20 ವರ್ಷ ಜೈಲುಶಿಕ್ಷೆ ಪ್ರಕಟಿಸಿದೆ. ಶಿಕ್ಷೆಗೊಳಗಾದ ಆರೋಪಿಯನ್ನು ಅಶ್ವತ್ಥ್ ಎಂದು ಗುರುತಿಸಲಾಗಿದೆ. ಈತ ತನ್ನ ಮೊದಲ ಪತ್ನಿ ಹೆರಿಗೆಗೆ ಹೋಗಿದ್ದ  ವೇಳೆ ಮನೆಯಲ್ಲಿದ್ದ ಅಪ್ರಾಪ್ತ ವಯಸ್ಸಿನ ಮಲಮಗಳನ್ನು ಅತ್ಯಾಚಾರಗೈದಿದಲ್ಲದೇ, ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಕೊಲ್ಲುವುದಾಗಿಯೂ ಬೆದರಿಸಿದ್ದ ಎಂಬುವುದಾಗಿ ಮಂಗಳೂರು ಮಹಿಳಾ ಠಾಣೆಯಲ್ಲಿ

ಮಂಗಳೂರು: ಮಲಮಗಳ ಮೇಲೆ ಅತ್ಯಾಚಾರ ಪ್ರಕರಣ ➤ ಆರೋಪಿಗೆ 20 ವರ್ಷ ಜೈಲುಶಿಕ್ಷೆ ಪ್ರಕಟ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಯುವಕನಿಗೆ ಹಲ್ಲೆ, ಜೀವಬೆದರಿಕೆ ➤ ದೂರು ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 21. ಯುವಕನೋರ್ವನಿಗೆ ಹಲ್ಲೆ ನಡೆಸಿದ ಘಟನೆ ಮಂಗಳವಾರದಂದು ಸಂಜೆ ತಾಲೂಕಿನ ನರಿಮೊಗರು ಗ್ರಾಮದ ಪುರುಷಕಟ್ಟೆ ಎಂಬಲ್ಲಿ ನಡೆದಿದೆ. ಹಲ್ಲೆಗೊಳಗಾದವರನ್ನು ನರಿಮೊಗರು ನಿವಾಸಿ ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಇಲ್ಲಿನ ಇಂದ್ರನಗರ, ಕಟ್ಟೆ ನಿವಾಸಿ ಪ್ರವೀಣ್ ಎಂಬಾತ ಹಲ್ಲೆ ನಡೆಸಿದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರವೀಣ್ ಮತ್ತು ಪ್ರವೀಣ್ ಆಚಾರ್ಯ ಇಬ್ಬರೂ ಈ ಹಿಂದೆ ಬಿಜೆಪಿಯ ಕಾರ್ಯಕರ್ತರಾಗಿದ್ದರು. ಬಳಿಕ ಪ್ರವೀಣ್ ಆಚಾರ್ಯ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದರು. ಇದೀಗ ರಾಜಕೀಯ ವಿಚಾರಕ್ಕೆ

ಪುತ್ತೂರು: ಯುವಕನಿಗೆ ಹಲ್ಲೆ, ಜೀವಬೆದರಿಕೆ ➤ ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಪೋಲೀಸರ ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ.17. ಪೊಲೀಸರ ಕಿರುಕುಳ ತಾಳಲಾರದೇ ಯುವಕನೊಬ್ಬ ನೇಣಿಗೆ ಶರಣಾದ ‍ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ದೂರು ದಾಖಲಾಗಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ನಡೆದಿದೆ. ಯಾವುದೇ ದೂರು ಇಲ್ಲದಿದ್ದರೂ ಯುವಕನನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದು, ಇದರಿಂದ ಮನನೊಂದು ಆತ್ಮಹತ್ಯೆಯ ಹಾದಿ ಹಿಡಿದ್ದಾನೆ ಎಂದು ಪೊಲೀಸರ ವಿರುದ್ಧ ಆರೋಪಿಸಲಾಗಿದೆ. ಇದೀಗ ಯುವಕನ ಆತ್ಮಹತ್ಯೆ ಸಂಬಂಧ ಶಿವಮೊಗ್ಗದ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳಾದ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್ ವಿರುದ್ಧ ಕೇಸು

ಪೋಲೀಸರ ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶರದ್ ಪವಾರ್ ಗೆ ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಐಟಿ ಕಂಪನಿ ಉದ್ಯೋಗಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 12. ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಪುಣೆಯ ಐಟಿ ಕಂಪನಿ ಉದ್ಯೋಗಿಯೋರ್ವನನ್ನು ಮುಂಬೈ ಕ್ರೈಂ ಬಾಂಚ್, ಪುಣೆಯಲ್ಲಿ ಬಂಧಿಸಿದ ಕುರಿತು ವರದಿಯಾಗಿದೆ. ಬಂಧಿತನನ್ನು ಸಾಗರ್ ಬರ್ವೆ(34) ಎಂದು ಗುರುತಿಸಲಾಗಿದೆ. ಈತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕೊಲೆ ಬೆದರಿಕೆಗಳನ್ನು ಕಳುಹಿಸಲು ಎರಡು ನಕಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ರಚಿಸಿ, ವಾಟ್ಸಾಪ್ ಮೂಲಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ ಅವರ ಮೊಬೈಲ್

ಶರದ್ ಪವಾರ್ ಗೆ ಕೊಲೆ ಬೆದರಿಕೆ ಪ್ರಕರಣ ➤ ಆರೋಪಿ ಐಟಿ ಕಂಪನಿ ಉದ್ಯೋಗಿ ಅರೆಸ್ಟ್ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

NCP ಅಧ್ಯಕ್ಷ ಶರದ್ ಪವಾರ್ ಗೆ ಕೊಲೆ ಬೆದರಿಕೆ

(ನ್ಯೂಸ್ ಕಡಬ) newskadaba.com ಮುಂಬೈ, ಜೂ. 09. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಶುಕ್ರವಾರ ಟ್ವಿಟರ್ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ. ಪಕ್ಷದ ಮುಖಂಡರ ನಿಯೋಗವು ಪೊಲೀಸ್ ಕಮಿಷನರ್ ಕಛೇರಿಗೆ ಭೇಟಿ ನೀಡಿ ಬೆದರಿಕೆ ಹಾಕಿರುವ ಟ್ವಿಟರ್ ಖಾತೆಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಹಿಂದೆಯೂ ಕೂಡಾ ಶರದ್ ಪವಾರ್ ಅವರಿಗೆ ಕೊಲೆ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಪೊಲೀಸರು ಎನ್ ಸೋನಿ(45) ಎಂಬ ಆರೋಪಿಯನ್ನು ಬಂಧಿಸಿದ್ದರು.

NCP ಅಧ್ಯಕ್ಷ ಶರದ್ ಪವಾರ್ ಗೆ ಕೊಲೆ ಬೆದರಿಕೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top