ಪೋಲೀಸರ ಕಿರುಕುಳ ತಾಳಲಾರದೆ ಯುವಕ ನೇಣಿಗೆ ಶರಣು

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಜೂ.17. ಪೊಲೀಸರ ಕಿರುಕುಳ ತಾಳಲಾರದೇ ಯುವಕನೊಬ್ಬ ನೇಣಿಗೆ ಶರಣಾದ ‍ಘಟನೆಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ ದೂರು ದಾಖಲಾಗಿರುವ ಘಟನೆ ಶಿವಮೊಗ್ಗದ ಹೊಳೆಹೊನ್ನೂರಿನಲ್ಲಿ ನಡೆದಿದೆ.

ಯಾವುದೇ ದೂರು ಇಲ್ಲದಿದ್ದರೂ ಯುವಕನನ್ನು ಠಾಣೆಗೆ ಕರೆದೊಯ್ದು ಪೊಲೀಸರು ಥಳಿಸಿದ್ದು, ಇದರಿಂದ ಮನನೊಂದು ಆತ್ಮಹತ್ಯೆಯ ಹಾದಿ ಹಿಡಿದ್ದಾನೆ ಎಂದು ಪೊಲೀಸರ ವಿರುದ್ಧ ಆರೋಪಿಸಲಾಗಿದೆ. ಇದೀಗ ಯುವಕನ ಆತ್ಮಹತ್ಯೆ ಸಂಬಂಧ ಶಿವಮೊಗ್ಗದ ಹೊಳೆಹೊನ್ನೂರು ಠಾಣೆಯ ನಾಲ್ವರು ಪೊಲೀಸ್ ಸಿಬ್ಬಂದಿಗಳಾದ ಬಿಲಾಲ್, ಲಿಂಗೇಗೌಡ, ಸುದರ್ಶನ್ ಹಾಗೂ ವಿಶ್ವನಾಥ್ ವಿರುದ್ಧ ಕೇಸು ದಾಖಲಾಗಿದೆ.

 

 

 

Scroll to Top