Bellare

ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆ ➤ ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.27. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದ ಹಿನ್ನೆಲೆಯಲ್ಲಿ ಸುಳ್ಯ, ಪುತ್ತೂರು ಹಾಗೂ ಕಡಬ ತಾಲೂಕುಗಳಲ್ಲಿ ಸ್ವಯಂಪ್ರೇರಿತ ಬಂದ್ ನಡೆಸಲು ಎಂದು ಹಿಂದೂ ಸಂಘಟನೆಯ ಮುಖಂಡರು ಕರೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಹಿಂದೂ ಮುಖಂಡ ಮುರಳೀಕೃಷ್ಣ ಹಸಂತ್ತಡ್ಕ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಜು.27 ರಂದು ಪುತ್ತೂರು, ಕಡಬ ಹಾಗೂ ಸುಳ್ಯ ತಾಲೂಕಿನಾದ್ಯಂತ ಸ್ವಯಂ ಪ್ರೇರಿತ […]

ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಹಿನ್ನೆಲೆ ➤ ಸುಳ್ಯ, ಪುತ್ತೂರು, ಕಡಬ ತಾಲೂಕುಗಳಲ್ಲಿ ಸ್ವಯಂ ಪ್ರೇರಿತ ಬಂದ್ ಗೆ ಕರೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ. 14. ಕೆ.ಎಸ್. ಗೌಡ ಸಮೂಹ ವಿದ್ಯಾಸಂಸ್ಥೆ ಗಳು (ರಿ) ಹಿರಿಯ ವಿದ್ಯಾರ್ಥಿ ಸಂಘ ಕೆ. ಎಸ್. ಗೌಡ ಪದವಿ ಪೂರ್ವ ಕಾಲೇಜು, ಜ್ಞಾನದೀಪ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ (ರಿ) ಬೆಳ್ಳಾರೆ ಹಾಗೂ ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಇವುಗಳ ಜಂಟಿ ಆಶ್ರಯದಲ್ಲಿ ಮಾರ್ಚ್ 3 ಹಾಗೂ 4ರಂದು ಆಧಾರ್ ನೋಂದಾವಣೆ ಹಾಗೂ ತಿದ್ದುಪಡಿ ಶಿಬಿರವು ನಡೆಯಲಿರುವುದು. ಈ ಶಿಬಿರದ ಸದುಪಯೋಗ ಪಡೆದುಕೊಳ್ಳುವವರು ಮಾರ್ಚ್ 1 ನೇ ತಾರೀಖಿನಂದು ಹೆಸರು

ಮಾರ್ಚ್ 3, 4 ರಂದು ನಿಂತಿಕಲ್ಲು ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ಆಧಾರ್ ಮೇಳ Read More »

ಕರಾವಳಿ

ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ. ಫೆ.12. ಸುಳ್ಯ ತಾಲೂಕಿನ ಬೆಳ್ಳಾರೆ ಪೋಲಿಸ್ ಠಾಣೆಯಲ್ಲಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈರಯ್ಯ ಡಿ ಎನ್ ರವರು ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡು 2 ತಿಂಗಳುಗಳು ಕಳೆದರೂ, ತೆರವಾದ ಬೆಳ್ಳಾರೆ ಠಾಣೆಯ ಠಾಣಾಧಿಕಾರಿ ಹುದ್ದೆಗೆ ನೂತನ ಎಸ್ ಐ ಇನ್ನೂ ಕೂಡ ನೇಮಕವಾಗಿಲ್ಲ. ವರ್ಗಾವಣೆಗೊಂಡ ಬಳಿಕ ಕೆಲ ದಿನಗಳ ಕಾಲ ಎಎಸ್ ಐ ಮಧುರವರು ಠಾಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಆ ಬಳಿಕ ಪ್ರೊಬೆಷನರಿ ಎಸ್ ಐ ಆಗಿರುವ ಆಂಜನೇಯ ರೆಡ್ಡಿರವರು

ತಿಂಗಳು ಕಳೆದರೂ ನೇಮಕವಾಗಿಲ್ಲ ಬೆಳ್ಳಾರೆ ಠಾಣೆಗೆ ನೂತನ ಎಸ್ಐ Read More »

ಕರಾವಳಿ

ಬೆಳ್ಳಾರೆ: ಡಾ| ಬಿ.ಎಂ ಶೆಟ್ಟಿ ಇನ್ನಿಲ್ಲ

(ನ್ಯೂಸ್ ಕಡಬ) newskadaba.com, ಸುಳ್ಯ. ಫೆ.7. ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ, ವೈದ್ಯ ಡಾ.ಬಿ.ಎಂ.ಶೆಟ್ಟಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. ವೈದ್ಯರಾಗಿ, ಪ್ರಗತಿಪರ ಕೃಷಿಕರಾಗಿ, ಧಾರ್ಮಿಕ ನೇತಾರರಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಬೆಳ್ಳಾರೆಯ ಡಾ.ಬಿ.ಎಂ. ಶೆಟ್ಟಿ ತಡಗಜೆ ಅವರು ದಾವಣಗೆರೆ ಜಿಲ್ಲೆಯ ಜಗಳೂರು ಎಂಬಲ್ಲಿ 25 ವರ್ಷ ವೈದ್ಯಕೀಯ ಸೇವೆ ಸಲ್ಲಿಸಿದ್ದರು. ಬಳಿಕ ಊರಿಗೆ ಹಿಂತಿರುಗಿ ಕೃಷಿ ಹಾಗೂ ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ, ನಾಲ್ವರು ಪುತ್ರರು, ಸೊಸೆಯಂದಿರು,

ಬೆಳ್ಳಾರೆ: ಡಾ| ಬಿ.ಎಂ ಶೆಟ್ಟಿ ಇನ್ನಿಲ್ಲ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಳ್ಳಾರೆ: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com, ಬೆಳ್ಳಾರೆ, ಡಿ.16   ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರನಿಗೂ ಸಹಸವಾರನಿಗೂ ಗಾಯಗಳಾದ ಘಟನೆ ಬೆಳ್ಳಾರೆ ತಿರುವು ರಸ್ತೆಯಲ್ಲಿ ನಿನ್ನೆ ನಡೆದಿದೆ. ಢಿಕ್ಕಿ ಹೊಡೆದ ಪರಿಣಾಮ ಸವಾರ ಕಿರಣ್ ಮತ್ತು ಸಹಸವಾರ ಸತ್ಯ ನಾರಾಯಣರವರಿಗೆ ಗಾಯಗಳಾಗಿರುವ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ಳಾರೆ: ಕಾರು ಮತ್ತು ಬೈಕ್ ನಡುವೆ ಢಿಕ್ಕಿ ➤ ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಬೆಳ್ಳಾರೆ: ಪದವಿ ಪೂರ್ವ ಕಾಲೇಜಿನ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಕಳ್ಳತನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜು.17. ಇಲ್ಲಿನ ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕೊಠಡಿಯ ಒಳನುಗ್ಗಿರುವ ಕಳ್ಳರು ಲ್ಯಾಪ್ ಟಾಪ್ ಹಾಗೂ ಪ್ರೊಜೆಕ್ಟರನ್ನು ಹೊತ್ತೊಯ್ದಿದ್ದಾರೆ. ಶನಿವಾರ ಸಂಜೆಯಿಂದ ಸೋಮವಾರ ಬೆಳಗ್ಗಿನ ನಡುವೆ ಒಳ ನುಗ್ಗಿರುವ ಕಳ್ಳರು 13,000/- ರೂಪಾಯಿ ಮೌಲ್ಯದ ಪ್ಯಾನಾಸೋನಿಕ್ ಕಂಪೆನಿಯ ಪ್ರೊಜೆಕ್ಟರ್ ಮತ್ತು ಸುಮಾರು 10,000/- ರೂಪಾಯಿ ಮೌಲ್ಯದ ಆಸಸ್ ಕಂಪೆನಿಯ ಲ್ಯಾಪ್ ಟಾಪ್ ಸೇರಿ ಒಟ್ಟು ರೂಪಾಯಿ 23,000 ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ. ಸೋಮವಾರದಂದು ಉಪನ್ಯಾಸಕರು ಕಾಲೇಜಿಗೆ ಆಗಮಿಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಬೆಳ್ಳಾರೆ: ಪದವಿ ಪೂರ್ವ ಕಾಲೇಜಿನ ಲ್ಯಾಪ್ ಟಾಪ್, ಪ್ರೊಜೆಕ್ಟರ್ ಕಳ್ಳತನ Read More »

ಕರಾವಳಿ

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಜೂ.27. ಠಾಣಾ ವ್ಯಾಪ್ತಿಯ ಶೇಣಿಯಲ್ಲಿ ಯುವತಿಯೋರ್ವಳನ್ನು ಬಲವಂತದಿಂದ ಕರೆದೊಯ್ದು ಸರಣಿ ಅತ್ಯಾಚಾರಗೈದ ಪ್ರಕರಣದ ಮೂವರು ಆರೋಪಿಗಳನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮರ ಮೂಡ್ನೂರು ಗ್ರಾಮದ ಕುಡುಂಬಿಲ ನಿವಾಸಿ ಕುಂಇಪ್ಪ ನಾಯ್ಕ ಎಂಬವರ ಪುತ್ರ ಜಯಪ್ರಕಾಶ್ (25), ಚೊಕ್ಕಾಡಿಯ ನೇಣಾರು ನಿವಾಸಿ ಕೂಸಪ್ಪ ನಾಯ್ಕ ಎಂಬವರ ಪುತ್ರ ರಂಜಿತ್ (20), ಕುಕ್ಕುಜಡ್ಕದ ನೇರ್ಲಡ್ಕ ನಿವಾಸಿ ಗುಡ್ಡಪ್ಪನಾಯ್ಕ ಎಂಬವರ ಪುತ್ರ ರವೀಂದ್ರ (35) ಎಂದು ಗುರುತಿಸಲಾಗಿದೆ. ಆರೋಪಿಗಳು ಸೋಮವಾರ ಸಂಜೆ ಹಾಲು

ಬೆಳ್ಳಾರೆ: ಹಾಡುಹಗಲೇ ಬಲಾತ್ಕಾರವಾಗಿ ಸಾಮೂಹಿಕ ಅತ್ಯಾಚಾರ ► ರಿಕ್ಷಾ ಚಾಲಕರು ಸೇರಿದಂತೆ ಮೂವರ ಬಂಧನ Read More »

ಕರಾವಳಿ

ಬಾಳಿಲ : ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

(ನ್ಯೂಸ್ ಕಡಬ) newskadaba.com  ಸವಣೂರು, ಮಾ.28. ಬಾಳಿಲದಲ್ಲಿ ನಡೆದ ಜಿಲ್ಲಾ ಮಟ್ಟದ ಸೌಹಾರ್ದ ಕೂಟ ಸಮಾರಂಭದಲ್ಲಿ ಹಿರಿಯರ ಕ್ರೀಡಾಕೂಟದ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ರೈ, ಕ್ರೀಡಾ ತರಬೇತುದಾರ ಮಹಾಬಲ ರೈ, ಮಹಿಳಾ ಕ್ರೀಡಾಪಟು ರೀಟಾ ಡಿ’ಸೋಜಾ, ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿರವರನ್ನು ಸನ್ಮಾನಿಸಲಾಯಿತು.

ಬಾಳಿಲ : ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ Read More »

ಕರಾವಳಿ

ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಸೆ.04.‌ ಸ್ನಾನಕ್ಕೆಂದು ನದಿಗೆ ಇಳಿದಿದ್ದ ವ್ಯಕ್ತಿಯೋರ್ವರು ನೀರುಪಾಲಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಸವಣೂರು ಸಿ.ಎ. ಬ್ಯಾಂಕ್ ನಿರ್ದೇಶಕ ಚೆನ್ನಪ್ಪ ಗೌಡ ನೂಜಿಯವರ ಮನೆಗೆ ಇಂಟರ್ಲಾಕ್ ಅಳವಡಿಸಲೆಂದು ಆಗಮಿಸಿದ್ದ ಮಂಗಳೂರು ಪೊಳಲಿ ನಿವಾಸಿ ಹರಿಪ್ರಸಾದ್(30) ನೀರುಪಾಲಾದ ದುರ್ದೈವಿ. ಇವರು ತನ್ನ ಜತೆಗಾರರೊಂದಿಗೆ ಕುದ್ಮಾರು ಎಂಬಲ್ಲಿ ಕುಮಾರಧಾರ ನದಿಗೆ ಸ್ನಾನಕ್ಕಿಳಿದಿದ್ದ ವೇಳೆ ನೀರುಪಾಲಾದರೆನ್ನಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿದ್ದು, ಅಗ್ನಿಶಾಮಕ ದಳದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ.

ಬೆಳ್ಳಾರೆ: ಸ್ನಾನಕ್ಕೆಂದು ನದಿಗಿಳಿದ ವ್ಯಕ್ತಿ ನೀರುಪಾಲು Read More »

ಕರಾವಳಿ

ಬೆಳ್ಳಾರೆ: ಅನ್ಯ ಕೋಮಿನ ವಿದ್ಯಾರ್ಥಿನಿಯ ಚುಡಾವಣೆ ► ಆರೋಪಿ ಮುಸ್ಲಿಂ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಆ.20. ತಾಲೂಕಿನ ಪಾಲ್ತಾಡು ಗ್ರಾಮದ ಮುಸ್ಲಿಂ ಯುವಕನೋರ್ವ ಅಪ್ರಾಪ್ತ ಅನ್ಯ ಕೋಮಿನ ಕಾಲೇಜು ವಿದ್ಯಾರ್ಥಿನಿಯನ್ನು ಚುಡಾಯಿಸುತ್ತಿರುವ ಬಗ್ಗೆ ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದ್ದು, ಆರೋಪಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಪಾಲ್ತಾಡು ಗ್ರಾಮದ ಮುರ್ಕೆತ್ತಿ ನಿವಾಸಿ ಮಹಮ್ಮದ್ ಹಕೀಂ ಎಂದು ಗುರುತಿಸಲಾಗಿದೆ. ಈತ ಕಾಲೇಜೊಂದರ ವಿದ್ಯಾರ್ಥಿನಿಯ ಹಿಂದೆ ಬಿದ್ದು ತನ್ನನ್ನು ಪ್ರೀತಿಸುವಂತೆ ಹಾಗೂ ವಿವಾಹವಾಗುವಂತೆ ಪೀಡಿಸುವುದಲ್ಲದೆ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ವಿದ್ಯಾರ್ಥಿನಿ ಬೆಳ್ಳಾರೆ ಠಾಣೆಗೆ ನೀಡಿದ ದೂರಿನನ್ವಯ ಪೋಕ್ಸೋ

ಬೆಳ್ಳಾರೆ: ಅನ್ಯ ಕೋಮಿನ ವಿದ್ಯಾರ್ಥಿನಿಯ ಚುಡಾವಣೆ ► ಆರೋಪಿ ಮುಸ್ಲಿಂ ಯುವಕನ ವಿರುದ್ಧ ಪೋಕ್ಸೋ ಪ್ರಕರಣ ದಾಖಲು Read More »

ಕರಾವಳಿ
Scroll to Top