Bangalore

8 ಕನ್ನಡಿಗರಿಗೆ ಪದ್ಮ ಪ್ರಶಸ್ತಿಯು ಕರ್ನಾಟಕದಲ್ಲಿನ ಅಪಾರ ಪ್ರತಿಭೆಯನ್ನು ತೋರಿಸುತ್ತದೆ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.26. ವಿವಿಧ ಕ್ಷೇತ್ರಗಳ 8 ಮಂದಿ ಕನ್ನಡಿಗರಿಗೆ ಪ್ರತಿಷ್ಠಿತ ಪದ್ಮ ಪ್ರಶಸ್ತಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇದು ಕರ್ನಾಟಕದಲ್ಲಿರುವ ಅಮೋಘ ಪ್ರತಿಭೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಯಾವುದೇ ನಿರೀಕ್ಷೆಗಳಿಲ್ಲದೆ ದೇಶಕ್ಕೆ ಉತ್ಕೃಷ್ಟ ಕೊಡುಗೆ ನೀಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಕರ್ನಾಟಕದಿಂದ ಮಾಜಿ ಸಿಎಂ ಎಸ್ಎಂ ಕೃಷ್ಣ, ಸಮಾಜ ಸೇವಕಿ ಸುಧಾ ಮೂರ್ತಿ […]

8 ಕನ್ನಡಿಗರಿಗೆ ಪದ್ಮ ಪ್ರಶಸ್ತಿಯು ಕರ್ನಾಟಕದಲ್ಲಿನ ಅಪಾರ ಪ್ರತಿಭೆಯನ್ನು ತೋರಿಸುತ್ತದೆ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಲ್ ಟಿಕೆಟ್ ತಿದ್ದುಪಡಿ..! ➤ ಜ. 30 ರವರೆಗೆ ಅವಕಾಶ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.26. ಮಾರ್ಚ್ ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಸಿದ್ಧಪಡಿಸಲಾಗಿದೆ. ಪ್ರವೇಶ ಪತ್ರಗಳಲ್ಲಿ ಅಗತ್ಯವಿದ್ದರೆ ತಿದ್ದುಪಡಿ ಮಾಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜನವರಿ 30ರವರೆಗೆ ಅವಕಾಶ ಕಲ್ಪಿಸಿದೆ. ಪದವಿ ಪೂರ್ವ ಕಾಲೇಜುಗಳು ವಿದ್ಯಾರ್ಥಿಗಳ ಹಾಲ್ ಟಿಕೆಟ್ ಗಳನ್ನು ಮಂಡಳಿಯ ಪಿಯು ಎಕ್ಸಾಮ್ ಪೋರ್ಟಲ್ ನಲ್ಲಿ ಲಾಗಿನ್ ಆಗುವ ಮೂಲಕ ಡೌನ್ಲೋಡ್ ಮಾಡಿ ಮಾಡಿಕೊಂಡು ತಿದ್ದುಪಡಿ ಮಾಡಲು ಜನವರಿ 25ರವರೆಗೆ ಅವಕಾಶ ನೀಡಲಾಗಿತ್ತು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಹಾಲ್ ಟಿಕೆಟ್ ತಿದ್ದುಪಡಿ..! ➤ ಜ. 30 ರವರೆಗೆ ಅವಕಾಶ Read More »

ಕರ್ನಾಟಕ

ಕೇಂದ್ರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ➤ 6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ

(ನ್ಯೂಸ್ ಕಡಬ)newskadaba.com  ಹೊಸದಿಲ್ಲಿ, ಜ.26. 74ನೇ ಗಣರಾಜ್ಯೋತ್ಸವದ ಮುನ್ನ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮ ಪುರಸ್ಕೃತರನ್ನ ಘೋಷಿಸಿದ್ದು, ಕನ್ನಡಿಗರಾದ ಸುಧಾ ಮೂರ್ತಿ, ಎಸ್. ಎಂ ಕೃಷ್ಣ, ಎಸ್.ಎಲ್ ಬೈರಪ್ಪ, ಜಾನಪದ ನೃತ್ಯಗಾರ್ತಿ ರಾಣಿ ಮಾಚಯ್ಯ, ಚಿಕ್ಕಬಳ್ಳಾಪುರದ ತಮಟೆ ವಾದಕ ಮುನಿ ವೆಂಕಟಪ್ಪ ಸೇರಿ 106 ಸಾಧಕರು ಪ್ರಶಸ್ತಿಗೆ ಅರ್ಹರಾಗಿದ್ದಾರೆ. 6 ಪದ್ಮವಿಭೂಷಣ, 9 ಪದ್ಮಭೂಷಣ ಮತ್ತು 91 ಪದ್ಮಶ್ರೀ ಪ್ರಶಸ್ತಿಗಳಲ್ಲಿ ಒಟ್ಟಾರೆ 19 ಪ್ರಶಸ್ತಿ ಪುರಸ್ಕೃತರು ಮಹಿಳೆಯರಾಗಿದ್ದಾರೆ. ಈ ಪಟ್ಟಿಯಲ್ಲಿ ವಿದೇಶಿಯರು / ಎನ್‌ಆರ್‌ಐ / ಪಿಐಒ

ಕೇಂದ್ರದಿಂದ ‘ಪದ್ಮ ಪ್ರಶಸ್ತಿ’ ಘೋಷಣೆ ➤ 6 ಕನ್ನಡಿಗರು ಸೇರಿ 106 ಸಾಧಕರಿಗೆ ಗೌರವ Read More »

ರಾಷ್ಟ್ರೀಯ ನ್ಯೂಸ್

ಫೆ.13ರಿಂದ ಬೆಂಗಳೂರಲ್ಲಿ ಏರೋ ಇಂಡಿಯಾ ಏರ್‌ ಶೋ  ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಕಲಬುರಗಿ, ಜ.25. ಬೆಂಗಳೂರಿನ ಯಲಹಂಕದಲ್ಲಿ ಫೆ.13ರಿಂದ 17ರವರೆಗೆ “ಏರೋ ಇಂಡಿಯಾ’ ಏರ್‌ ಶೋ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ಅತಿದೊಡ್ಡ ಏರ್‌ ಶೋ ಮತ್ತು ಏರ್‌ ಸ್ಪೇಷ್‌ ಎಕ್ಸಿಬಿಷನ್‌ ಆಯೋಜಿಸಲಾಗುತ್ತಿದೆ. ಸ್ಪೇಸ್‌ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. ಉತ್ತಮ ಘೋಷಣೆಗಳಿರಲಿವೆ.

ಫೆ.13ರಿಂದ ಬೆಂಗಳೂರಲ್ಲಿ ಏರೋ ಇಂಡಿಯಾ ಏರ್‌ ಶೋ  ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಪ್ರೀತಿ ಗೆಹ್ಲೋತ್‌ ಸೇರಿ 3 ಐಎಎಸ್ ಅಧಿಕಾರಿಗಳ ವರ್ಗಾವಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25. ಕರ್ನಾಟಕ ಸರ್ಕಾರ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಇರುವಾಗ ಆಡಳಿತ ಯಂತ್ರದಲ್ಲಿ ಹಲವು ಬದಲಾವಣೆ ಮಾಡುತ್ತಿದೆ. ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೂವರು ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆಗೊಳಿಸಿದೆ. ತಕ್ಷಣದಿಂದಲೇ ಈ ಆದೇಶ ಜಾರಿಗೆ ಬರಲಿದೆ ಎಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. 2016ನೇ ಬ್ಯಾಚ್ ಕರ್ನಾಟಕ ಕೆಡರ್‌ನ ಐಎಎಸ್ ಅಧಿಕಾರಿ ಪ್ರೀತಿ ಗೆಹ್ಲೋಟ್ ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ಪುರಸಭೆ ದತ್ತಾಂಶ ಸೊಸೈಟಿ (ಕೆಎಂಡಿಎಸ್) ಜಂಟಿ ಆಯುಕ್ತರಾಗಿದ್ದ ಪ್ರೀತಿ ಗೆಹ್ಲೋಟ್‌ರನ್ನು

ಪ್ರೀತಿ ಗೆಹ್ಲೋತ್‌ ಸೇರಿ 3 ಐಎಎಸ್ ಅಧಿಕಾರಿಗಳ ವರ್ಗಾವಣೆ Read More »

ಕರ್ನಾಟಕ

ಶಾಲಾ ಶಿಕ್ಷಕರ ವರ್ಗಾವಣೆ ತಾತ್ಕಾಲಿಕ ಸ್ಥಗಿತ ➤ ವರ್ಗಾವಣೆ ಪಟ್ಟಿಯಲ್ಲಿ ಲೋಪದೋಷ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25. ಪ್ರಸ್ತುತ ಚಾಲ್ತಿಯಲ್ಲಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ಮುಂದೂಡಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹೊರಡಿಸಿದ್ದಾರೆ. ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಸಿದ್ಧಪಡಿಸಿರುವ ಪಟ್ಟಿಯಲ್ಲಿನ ಲೋಪದೋಷಗಳನ್ನು ಸರಿಪಡಿಸದೆ ವರ್ಗಾವಣೆ ನಡೆಸಲು ಮುಂದಾಗಿರುವುದಕ್ಕೆ ಶಿಕ್ಷಕರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಸಚಿವ ಬಿ.ಸಿ.ನಾಗೇಶ್ ಸೂಚನೆ ಮೇರೆಗೆ ವರ್ಗಾವಣೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಿಕ್ಷಕರ ಪರಿಷ್ಕೃತ ವರ್ಗಾವಣೆಯ ವೇಳಾಪಟ್ಟಿಯ ಪ್ರಕಾರ

ಶಾಲಾ ಶಿಕ್ಷಕರ ವರ್ಗಾವಣೆ ತಾತ್ಕಾಲಿಕ ಸ್ಥಗಿತ ➤ ವರ್ಗಾವಣೆ ಪಟ್ಟಿಯಲ್ಲಿ ಲೋಪದೋಷ Read More »

ಕರ್ನಾಟಕ

ರಾಜ್ಯದ ಕೆಲವೆಡೆ ಬಿರುಸಿನ ಮಳೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25. ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಮಡಿಕೇರಿ ನಗರವೂ ಸೇರಿದಂತೆ ಕೊಡಗು ಜಿಲ್ಲೆಯ ಭಾಗಮಂಡಲ, ಸಂಪಾಜೆ ಸಮೀಪದ ಚೆಂಬು, ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಅಮ್ಮತ್ತಿ, ಸೋಮವಾರಪೇಟೆ ಭಾಗದಲ್ಲಿ ಮಳೆ ಸುರಿದಿದೆ. ಒಣಗಿಸಲು ಕಣದಲ್ಲಿ ಹಾಕಿದ್ದ ಕಾಫಿ ಹಾಗೂ ಕೊಯ್ಲು ಮಾಡಿದ್ದ ಕಾಫಿ ಮಳೆಯಿಂದ ಹಾಳಾಗಿದೆ. ಭಾಗಮಂಡಲದ ಕೆಲವೆಡೆ ಇನ್ನೂ ಭತ್ತದ ಕೊಯ್ಲು ಆಗಿಲ್ಲ. ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಜ.27ರಿಂದ ಫೆ.2ರವರೆಗೆ ಸರಾಸರಿಗಿಂತ ಹೆಚ್ಚು ಮಳೆಯಾಗುವ

ರಾಜ್ಯದ ಕೆಲವೆಡೆ ಬಿರುಸಿನ ಮಳೆ Read More »

ಕರ್ನಾಟಕ

 ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..!  ➤  ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಪಾಸ್ ಆದವರಿಗೆ 5 ಸಾವಿರ ಪ್ರೋತ್ಸಾಹ ಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.25. ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸರ್ಕಾರಿ ನೌಕರರಿಗೆ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವ ಸಂಬಂಧ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯದ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತೆಯನ್ನು ಬಡ್ತಿ, ಮುಂಬಡ್ತಿಗಾಗಿ ಪಾಸ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈ ಪರೀಕ್ಷೆಯಲ್ಲಿ ಡಿಸೆಂಬರ್ 31, 2022ರೊಳಗೆ ಮುಕ್ತಾಯಗೊಳಿಸುವುದಕ್ಕೆ ಸೂಚಿಸಲಾಗಿತ್ತು. ನಂತರ ಈ ಅವಧಿಯನ್ನು ಡಿ.31, 2023ರವರೆಗೆ ವಿಸ್ತರಿಸಲಾಗಿತ್ತು. ಇದೀಗ ರಾಜ್ಯ ಸರ್ಕಾರ ನೌಕರರಿಗೆ

 ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..!  ➤  ‘ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ’ ಪಾಸ್ ಆದವರಿಗೆ 5 ಸಾವಿರ ಪ್ರೋತ್ಸಾಹ ಧನ Read More »

ಕರ್ನಾಟಕ

ನಾಲ್ವರು ಐಐಎಸ್ಸಿ ಸಂಶೋಧಕರಿಗೆ ಐಎನ್ಎಸ್ಎ ಯುವ ವಿಜ್ಞಾನಿ ಪ್ರಶಸ್ತಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಭಾರತೀಯ ವಿಜ್ಞಾನ ಸಂಸ್ಥೆಯ ನಾಲ್ವರು ಅಧ್ಯಾಪಕರು ಯುವ ವಿಜ್ಞಾನಿಗಳ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಪದಕಕ್ಕೆ ಆಯ್ಕೆಯಾಗಿದ್ದಾರೆ. ಡಾ ಶ್ರೀಮೊಂಟಾ ಗಯೆನ್, ಡಾ ಸುಭೋಜೋಯ್ ಗುಪ್ತಾ, ಡಾ ಮೋಹಿತ್ ಕುಮಾರ್ ಜಾಲಿ ಮತ್ತು ಡಾ ವೆಂಕಟೇಶ್ ರಾಜೇಂದ್ರನ್ ಸೇರಿದಂತೆ ಭಾರತದಾದ್ಯಂತ 42 ವಿಜ್ಞಾನಿಗಳು ಪದಕಕ್ಕೆ ಆಯ್ಕೆಯಾಗಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ 40 ವರ್ಷದೊಳಗಿನ ವಿಜ್ಞಾನಿಗಳಿಗೆ ವಾರ್ಷಿಕವಾಗಿ INSA ನಿಂದ ಯುವ ವಿಜ್ಞಾನಿಗಳಿಗೆ ಪದಕವನ್ನು ನೀಡಲಾಗುತ್ತದೆ. ಡಾ ಗಯೆನ್ ಅವರು

ನಾಲ್ವರು ಐಐಎಸ್ಸಿ ಸಂಶೋಧಕರಿಗೆ ಐಎನ್ಎಸ್ಎ ಯುವ ವಿಜ್ಞಾನಿ ಪ್ರಶಸ್ತಿ Read More »

ಕರ್ನಾಟಕ

ವಾರಾಂತ್ಯದಲ್ಲಿ 108 ನಮ್ಮ ಕ್ಲಿನಿಕ್‌ಗಳು ಪ್ರಾರಂಭ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.24. ಹಲವಾರು ಗಡುವುಗಳು ಮುಗಿದ ನಂತರ, ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಈ ವಾರಾಂತ್ಯದ ವೇಳೆಗೆ 108 ಬಿಬಿಎಂಪಿ ವಾರ್ಡ್‌ಗಳಲ್ಲಿ (ಒಟ್ಟು 243 ವಾರ್ಡ್‌ಗಳ ಪೈಕಿ) ತನ್ನ ಬಾಗಿಲು ತೆರೆಯಲು ಸಿದ್ಧವಾಗಿದೆ. ಬಿಬಿಎಂಪಿಯು ವೈದ್ಯರ ಕೊರತೆಯನ್ನು ನಿಭಾಯಿಸುತ್ತಿದ್ದು, ಮುಂದಿನ ಕೆಲವು ಹಂತಗಳಲ್ಲಿ ಉಳಿದ 135 ಕ್ಲಿನಿಕ್‌ಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸುತ್ತಿದೆ. ಬೆಂಗಳೂರಿನಲ್ಲಿ 243 ಸೇರಿದಂತೆ ಎಲ್ಲಾ 438 ಕ್ಲಿನಿಕ್‌ಗಳನ್ನು ಆಗಸ್ಟ್ ನಲ್ಲಿ ತೆರೆಯಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ, ಬಿಡುಗಡೆಯ ಗಡುವನ್ನು ವಿಸ್ತರಿಸುತ್ತಲೇ ಇತ್ತು.

ವಾರಾಂತ್ಯದಲ್ಲಿ 108 ನಮ್ಮ ಕ್ಲಿನಿಕ್‌ಗಳು ಪ್ರಾರಂಭ Read More »

ಕರ್ನಾಟಕ
Scroll to Top