Bangalore

ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ    ➤  25 ಲಕ್ಷ ರೂ. ನಗದು ಘೋಷಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.07. 54 ವರ್ಷ​ಗಳ ಬಳಿ​ಕ ಪ್ರತಿ​ಷ್ಠಿತ ಸಂತೋಷ್‌ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ ತಂಡಕ್ಕೆ ಕರ್ನಾ​ಟಕ ರಾಜ್ಯ ಫುಟ್ಬಾಲ್‌ ಸಂಸ್ಥೆ(ಕೆ​ಎ​ಸ್‌​ಎ​ಫ್‌​ಎ) 25 ಲಕ್ಷ ರು. ನಗದು ಬಹು​ಮಾನ ಘೋಷಿ​ಸಿದೆ ಎನ್ನಲಾಗಿದೆ. ಕೆಎ​ಸ್‌​ಎ​ಫ್‌ಎ ಫುಟ್ಬಾಲ್‌ ಕ್ರೀಡಾಂಗ​ಣ​ದಲ್ಲಿ ನಡೆದ ಆಟ​ಗಾ​ರ​ರಿಗೆ ಸನ್ಮಾನ, ಟ್ರೋಫಿ ಪರೇಡ್‌ ಕಾರ್ಯಕ್ರಮ​ದಲ್ಲಿ ಮಾತ​ನಾ​ಡಿದ ಕೆಎ​ಸ್‌​ಎಫ್‌ಎ ಅಧ್ಯಕ್ಷ ಎನ್‌.​ಎ.​ಹ್ಯಾ​ರಿಸ್‌, ‘ರಾಜ್ಯದ ಆಟ​ಗಾ​ರರು ಈ ಬಾರಿ ಐತಿ​ಹಾ​ಸಿಕ ಸಾಧನೆ ಮಾಡಿ​ದ್ದಾರೆ. ದೇಶದ ಫುಟ್ಬಾ​ಲ್‌​ನಲ್ಲಿ ನಮ್ಮ ತಂಡ ಹೊಸ ಚರಿತ್ರೆ ಸೃಷ್ಟಿ​ಸಿದೆ. […]

ರಾಷ್ಟ್ರೀಯ ಫುಟ್ಬಾಲ್‌ ಟೂರ್ನಿ​ಯಲ್ಲಿ ಚಾಂಪಿ​ಯನ್‌ ಆದ ಕರ್ನಾಟಕ    ➤  25 ಲಕ್ಷ ರೂ. ನಗದು ಘೋಷಣೆ Read More »

ಕರ್ನಾಟಕ

H3N2 ವೈರಸ್‍ ಬಗ್ಗೆ ಆತಂಕ ಬೇಡ.!     ➤  ಡಾ.ಕೆ.ಸುಧಾಕರ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಎಚ್3 ಎನ್2 ವೈರಸ್‍ ರಾಜ್ಯದಲ್ಲಿ ಇದುವರೆಗೂ ಕಂಡು ಬಂದಿಲ್ಲದ ಕಾರಣ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಧಾನಸೌಧದ ಮುಂಭಾಗ ಹಮ್ಮಿಕೊಂಡಿದ್ದ ಸೈಕಲ್ ಜಾಥಾಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವೈರಸ್ ಬಗ್ಗೆ ಕೈಗೊಳ್ಳಬೇಕಾದ ನಿಯಂತ್ರಣ ಕ್ರಮಗಳು ಹಾಗೂ ಚಿಕಿತ್ಸೆ ಕುರಿತಂತೆ

H3N2 ವೈರಸ್‍ ಬಗ್ಗೆ ಆತಂಕ ಬೇಡ.!     ➤  ಡಾ.ಕೆ.ಸುಧಾಕರ್ Read More »

ಕರ್ನಾಟಕ

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ.!       ➤  ಚಾಲಕರ ವೇತನ ಬಳಸಿಕೊಂಡು ರೂ.33 ಲಕ್ಷ ದಂಡ ಕಟ್ಟಿದ BMTC

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಸವಾರರಿಗೆ ದಂಡ ಪಾವತಿಸಲು ಸರ್ಕಾರ ಶೇ.50ರ ರಿಯಾಯಿತಿಯನ್ನು ನೀಡಿದ್ದು, ಸರ್ಕಾರದ ಈ ಆಫರ್’ನ್ನು ಬಿಎಂಟಿಸಿ ಕೂಡ ಬಳಕೆ ಮಾಡಿಕೊಂಡಿದೆ. ನಗರದಲ್ಲಿ 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಬಿಎಂಟಿಸಿ ಚಾಲಕರು ನಿಗಮಕ್ಕೆ ಬರೋಬ್ಬರಿ 1 ಕೋಟಿ ರೂ. ನಷ್ಟವುಂಟು ಮಾಡಿದ್ದಾರೆ. 12 ಸಾವಿರ ಸಿಗ್ನಲ್ ಜಂಪ್ ಮಾಡಿರುವ ಪ್ರಕರಣಗಳು ಸೇರಿ ಒಟ್ಟು ದಂಡದ ಮೊತ್ತ 1 ಕೋಟಿ ರೂ.ಗೆ ತಲುಪಿದೆ. ಟ್ರಾಫಿಕ್ ನಿಯಮಗಳನ್ನ ಉಲ್ಲಂಘಿಸಿದ ಪ್ರಮುಖ

ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ 50 ರಿಯಾಯಿತಿ.!       ➤  ಚಾಲಕರ ವೇತನ ಬಳಸಿಕೊಂಡು ರೂ.33 ಲಕ್ಷ ದಂಡ ಕಟ್ಟಿದ BMTC Read More »

ಕರ್ನಾಟಕ

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಗಮನಿಸಿ.!    ➤  ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2022-23ನೇ ಸಾಲಿನಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು 2023ರ ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿದುಬಂದಿದೆ. ಅರ್ಹ ವಿದ್ಯಾರ್ಥಿಗಳು ಇಲಾಖಾ ವೆಬ್‌ಸೈಟ್ www..tw.kar.nic.in ನಲ್ಲಿ ಅರ್ಜಿಯನ್ನು ಸಲ್ಲಿಸುವುದು.  

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳೇ ಗಮನಿಸಿ.!    ➤  ಪ್ರೋತ್ಸಾಹಧನಕ್ಕಾಗಿ ಆನ್ ಲೈನ್ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ Read More »

ಕರ್ನಾಟಕ

ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ..!    

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಕುರಿತಂತೆ ಈಗಾಗಲೇ ಆದಾಯ ತೆರಿಗೆ ಇಲಾಖೆ ಹಲವು ಬಾರಿ ಸೂಚನೆಗಳನ್ನು ನೀಡಿದೆ. ಅಲ್ಲದೆ ದಿನಾಂಕಗಳನ್ನು ಸಹ ಈ ಹಿಂದೆ ಮುಂದೂಡಲಾಗಿದ್ದು, ಇದೀಗ 31 ಮಾರ್ಚ್ 2023 ಕೊನೆಯ ದಿನಾಂಕವಾಗಿದೆ ಎಂದು ವರದಿ ತಿಳಿಸಿದೆ. ಪಾನ್ ಜೊತೆ ಆಧಾರ್ ಲಿಂಕ್ ಮಾಡಲು ರೂ.1000 ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಜೊತೆಗೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಜೊತೆ ಪಾನ್ ಲಿಂಕ್ ಮಾಡದಿದ್ದರೆ ನಿಮ್ಮ ಪಾನ್ ಕಾರ್ಡ್

ಮಾರ್ಚ್ 31ರೊಳಗೆ ‘ಆಧಾರ್’ ಜೊತೆ ‘ಪಾನ್’ ಲಿಂಕ್ ಮಾಡುವುದು ಕಡ್ಡಾಯ..!     Read More »

ಕರ್ನಾಟಕ

ಸಿಲಿಂಡರ್ ಸ್ಫೋಟ..!     ➤  ಛಿದ್ರವಾಗಿ ಹೋಯ್ತು ಬಾಲಕನ ದೇಹ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.06. ಸಿಲಿಂಡರ್ ಸ್ಫೋಟಗೊಂಡು 13 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹೆಬ್ಬಾಳ ಸಮೀಪದ ಗುಡ್ಡದಹಳ್ಳಿಯಲ್ಲಿ ಇಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ನಡೆದಿದೆ. ಆರನೇ ತರಗತಿಯಲ್ಲಿ ಓದುತಿದ್ದ ಮಹೇಶ್(13) ಮೃತಪಟ್ಟ ಬಾಲಕ ಎಂದು ತಿಳಿದುಬಂದಿದೆ. ಸಿಲಿಂಡರ್ ಫಿಲ್ಲಿಂಗ್ ಅಂಗಡಿಯಲ್ಲಿ ಘಟನೆ ನಡೆದಿದ್ದು, ಅಂಗಡಿ ಪಕ್ಕದಲ್ಲಿ ಬಾಲಕ ಮಹೇಶ್ ನಿಂತಿದ್ದ. ಸ್ಫೋಟದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.  

ಸಿಲಿಂಡರ್ ಸ್ಫೋಟ..!     ➤  ಛಿದ್ರವಾಗಿ ಹೋಯ್ತು ಬಾಲಕನ ದೇಹ Read More »

ಕರ್ನಾಟಕ, ಕ್ರೈಮ್ ನ್ಯೂಸ್

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ಕಳ್ಳರಿಗೇನು ಕಮ್ಮಿಯಿಲ್ಲ, ಇದೀಗ ಬೈಕ್ಗಳನ್ನ ಕದ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನುಸಿದ್ದಾಪುರ ಪೊಲೀಸರಿಂದ ಬಂಧಿಸಲಾಗಿದೆ. ಸಿಲಿಕಾನ್‌ ಸಿಟಿಯಲ್ಲಿ ಬೆಂಗಳೂರಿಲ್ಲಿ ಪಾರ್ಕಿಂಗ್‌ ಇಲ್ಲದೇ ಅದೇಷ್ಟು ಜನರು ಮನೆ ಮುಂದೆ ಬೈಕ್‌ ನ್ನು ನಿಲ್ಲಿಸುತ್ತಾರೆ. ಇದನ್ನೆ ಬಂಡಾವಳವನ್ನಾಗಿ ಮಾಡಿಕೊಂಡು ರಾತ್ರೋರಾತ್ರಿ ಕಳ್ಳತನ ಮಾಡಿ ಮಾರಾಟ ಮಾಡುವ ಹೊಸ ದಂಧೆಯನ್ನ ಶುರು ಮಾಡಿದ್ದನು.

ʼಬೈಕ್ ಕದ್ದು ಕಡಿಮೆ ಬೆಲೆಗೆ ಮಾರುತ್ತಿದ್ದ ಖದೀಮ ಅರೆಸ್ಟ್‌ʼ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಮಾ. 9ರಿಂದ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Exam)ಗಳು ಶುರುವಾಗಲಿದೆ ಎಂದು ವರದಿಯಾಗಿದೆ. ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನೀರ್ಣಯ ಮಂಡಳಿ ನೀಡಿದ್ದ ಮನವಿಗೆ ಕೆಎಸ್‌ಆರ್‌ಟಿಸಿ ( KSRTC) ಒಪ್ಪಿ ಸುತ್ತೋಲೆ ಹೊರಡಿಸಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳು ತಮ್ಮ ವಿದ್ಯಾಸಂಸ್ಥೆಗಳ ಕೇಂದ್ರಗಳ ಹೊರತಾಗಿ ಬೇರೆ ಸ್ಥಳಗಳಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಸಂಚರಿಸಲು ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೇವೆ ಲಭ್ಯವಾಗಲಿದೆ ಎನ್ನಲಾಗಿದೆ. ಈ ಹಿಂದೆಯೇ ಕರ್ನಾಟಕ ರಾಜ್ಯ ಶಾಲಾ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ➤ KSRTC ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ Read More »

ಕರ್ನಾಟಕ

‘ಲೋಕಾಯುಕ್ತ ಮರು ಸ್ಥಾಪಿಸಿದ್ದೇ ಭ್ರಷ್ಟಾಚಾರ ನಿಗ್ರಹಕ್ಕೆ’ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.04. ಭ್ರಷ್ಟಾಚಾರವನ್ನು ತಡೆಯುವುದಕ್ಕೆಂದೇ ನಾವು ಲೋಕಾಯುಕ್ತವನ್ನು ಮರು ಸ್ಥಾಪಿಸಿರುವುದು. ತಪ್ಪು ಮಾಡಿದವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಕಚೇರಿ ಮತ್ತು ನಿವಾಸದ ಲೋಕಾಯುಕ್ತ ದಾಳಿ ವೇಳೆ ಕೋಟ್ಯಾಂತರ ರೂಪಾಯಿ ನಗದು ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ತಪ್ಪು ಮಾಡಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಕಾನೂನಿನ ಪ್ರಕಾರವೇ ಅವರಿಗೆ ಶಿಕ್ಷೆಯಾಗಲಿದೆ ಎಂದರು.    

‘ಲೋಕಾಯುಕ್ತ ಮರು ಸ್ಥಾಪಿಸಿದ್ದೇ ಭ್ರಷ್ಟಾಚಾರ ನಿಗ್ರಹಕ್ಕೆ’ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಲಂಚ ಸ್ವೀಕರಿಸುವಾಗ ಬೆಸ್ಕಾಂ ಎಂಜಿನಿಯರ್‌ ವಿದ್ಯಾ ಬಂಧನ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.03. ಮನೆಯ ಆವರಣದಲ್ಲಿದ್ದ ವಿದ್ಯುತ್‌ ಕಂಬ ತೆರವುಗೊಳಿಸಲು 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಬೆಸ್ಕಾಂ ಸಹಾಯಕ ಎಂಜಿನಿಯರ್‌ ಲೋಕಾ ಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬೆನ್ನಿಗಾನಹಳ್ಳಿ ಕಸ್ತೂರಿನಗರ ಬೆಸ್ಕಾಂ ಸಬ್‌ ಡಿವಿಷನ್‌ ಕಚೇರಿಯ ಸಹಾಯಕ ಎಂಜಿನಿಯರ್‌ ವಿದ್ಯಾ ಬಂಧಿತ ಆರೋಪಿ ಎನ್ನಲಾಗಿದೆ.  

ಲಂಚ ಸ್ವೀಕರಿಸುವಾಗ ಬೆಸ್ಕಾಂ ಎಂಜಿನಿಯರ್‌ ವಿದ್ಯಾ ಬಂಧನ Read More »

ಕರ್ನಾಟಕ
Scroll to Top