Bangalore

ಶಾಂಪಿಗ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಕೋಟಿ-ಕೋಟಿ ಹಣ ಲೂಟಿ.!➤ಮಾಜಿ ಶಾಸಕಿ ವಿರುದ್ಧ ಹಾಲಿ ಶಾಸಕ ದೂರು

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.29 ಜಯನಗರ ಶಾಂಪಿಗ್ ಕಾಂಪ್ಲೇಕ್ಸ್ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಲಾಗಿದೆ ಎಂಬ ಆರೋಪ ಬಿಬಿಎಂಪಿ ಅಧಿಕಾರಿಗಳು ಹಾಗೂ ಮಾಜಿ ಶಾಸಕರ ವಿರುದ್ಧ ಕೇಳಿಬಂದಿದೆ. 15 ರಿಂದ 20 ಕೋಟಿ ಲೂಟಿ ಮಾಡಲಾಗಿದೆ ಎನ್ನಲಾಗುತ್ತಿದೆ. ಜಯನಗರ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುತ್ತಿದ್ದಂತೆ ನೂತನ ಶಾಸಕ ರಾಮಮೂರ್ತಿ ಭ್ರಷ್ಟರ ಹಿಂದೆ ಬಿದ್ದಿದ್ದಾರೆ. ಜಯನಗರ ವಾಣಿಜ್ಯ ಸಂಕೀರ್ಣದಲ್ಲಿ ಅಕ್ರಮ ಮಳಿಗೆ ನಿರ್ಮಾಣ ಮಾಡಿ ಕಾನೂನು ಬಾಹಿರವಾಗಿ ಹಂಚಿಕೆ ಮಾಡಿ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದಿದ್ದಾರೆ. ಹೀಗಾಗಿ ಶಾಸಕ ರಾಮಮೂರ್ತಿ, […]

ಶಾಂಪಿಗ್ ಕಾಂಪ್ಲೆಕ್ಸ್ ಹೆಸರಿನಲ್ಲಿ ಕೋಟಿ-ಕೋಟಿ ಹಣ ಲೂಟಿ.!➤ಮಾಜಿ ಶಾಸಕಿ ವಿರುದ್ಧ ಹಾಲಿ ಶಾಸಕ ದೂರು Read More »

ಕರ್ನಾಟಕ

ಶೀಘ್ರವೇ ರಾಜ್ಯ ಸರ್ಕಾರದ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ.!➤ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು ,ಮೇ.29 ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡುವುದಾಗಿ ಜನರಿಗೆ ಮಾತು ನೀಡಿದ್ದೇವೆ.ಕೊಟ್ಟ ಮಾತಿನಂತೆ ಆದಷ್ಟು ಬೇಗ ಹುದ್ದೆ ಭರ್ತಿ ಮಾಡುತ್ತೇವೆ. ಅರ್ಹರನ್ನು ಪಾರದರ್ಶಕವಾಗಿ ನೇಮಿಸುತ್ತೇವೆ ಎಂದು ತಿಳಿಸಿದ್ದಾರೆ.    

ಶೀಘ್ರವೇ ರಾಜ್ಯ ಸರ್ಕಾರದ ಎಲ್ಲ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ.!➤ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ Read More »

ಕರ್ನಾಟಕ

ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಉಳ್ಳವರು ಪಡೆದರೆ ಅದು ಹೆಣದ ಮೇಲಿನ ಅನ್ನ ತಿಂದಂತೆ.!➤ಸಚಿವ ಕೆ.ಎನ್. ರಾಜಣ್ಣ ಹೇಳಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು ,ಮೇ.29 ನಾಡಿನ ಬಡ ಜನತೆಗೆ ನ್ಯಾಯಯುತವಾಗಿ ಸಿಗಬೇಕಾದ ಸವಲತ್ತುಗಳನ್ನು ಉಳ್ಳವರು ಪಡೆದರೆ ಅದು ಹೆಣದ ಮೇಲಿನ ಅನ್ನ ತಿಂದಂತೆ ಎಂದು ನೂತನ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ, ಭರವಸೆ ನೀಡಿದಂತೆ ಐದು ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು, ಪ್ರತಿಪಕ್ಷಗಳು ಮುಗ್ಧ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಬಾರದು ಎಂದು ಹೇಳಿದರು.  

ಬಡವರಿಗೆ ಸಿಗಬೇಕಾದ ಸವಲತ್ತುಗಳನ್ನು ಉಳ್ಳವರು ಪಡೆದರೆ ಅದು ಹೆಣದ ಮೇಲಿನ ಅನ್ನ ತಿಂದಂತೆ.!➤ಸಚಿವ ಕೆ.ಎನ್. ರಾಜಣ್ಣ ಹೇಳಿಕೆ Read More »

ಕರ್ನಾಟಕ

ಪದವಿ ಕಾಲೇಜುಗಳ `ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ.!➤ ಜು.17 ರಿಂದ ತರಗತಿ ಆರಂಭ

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.29 ಉನ್ನತ ಶಿಕ್ಷಣ ಇಲಾಖೆಯು 2023-24 ನೇ ಸಾಲಿನಿಂದ ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯಗಳು ಹಾಗೂ ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಪದವಿ ಕೋರ್ಸುಗಳ ಪ್ರವೇಶ ಪ್ರಕ್ರಿಯೆ, ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ ಪ್ರಕಟಿಸಿದೆ. ಪ್ರಸ್ತುತ ಸಾಲಿನಲ್ಲಿ ಮೇ.22 ರಿಂದ ಜುಲೈ 15 ರೊಳಗೆ ಪದವಿ ಕಾಲೇಜುಗಳ ಪ್ರಥಮ ಸೆಮಿಸ್ಟರ್ ಪ್ರವೇಶ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಜು.17 ರಿಂದ ತರಗತಿಗಳನ್ನು ಆರಂಭಿಸಿ, ನವೆಂಬರ್ 18 ಕ್ಕೆ ಮುಕ್ತಾಯಗೊಳಿಸಬೇಕು. 13 ರಿಂದ 2

ಪದವಿ ಕಾಲೇಜುಗಳ `ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ.!➤ ಜು.17 ರಿಂದ ತರಗತಿ ಆರಂಭ Read More »

ಕರ್ನಾಟಕ

ಇಂದಿನಿಂದ 2023- 24 ನೇ ಸಾಲಿನ ಶೈಕ್ಷಣಿಕ ವರ್ಷ ➤ ಮೇ 31ರಿಂದ ತರಗತಿ ಆರಂಭ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.29. ಇಂದಿನಿಂದ 2023- 24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಶಾಲೆಗಳು ತೆರೆಯಲಿದ್ದು, ಮೇ.31 ರಿಂದ ರಾಜ್ಯಾದಾದ್ಯಂತ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿದೆ ಎಂದು ವರದಿ ತಿಳಿಸಿದೆ. ಮೇ.29 ಮತ್ತು 30 ರಂದು ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ ಸಿದ್ದತೆ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.

ಇಂದಿನಿಂದ 2023- 24 ನೇ ಸಾಲಿನ ಶೈಕ್ಷಣಿಕ ವರ್ಷ ➤ ಮೇ 31ರಿಂದ ತರಗತಿ ಆರಂಭ Read More »

ಕರ್ನಾಟಕ

ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆಯ ಅಬ್ಬರ.!➤ ಹವಾಮಾನ ಇಲಾಖೆ ಸೂಚನೆ

(ನ್ಯೂಸ್ ಕಡಬ)newskadaba.com ಬೆಂಗಳೂರು ,ಮೇ.29  ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದ್ದು, ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಎಲ್ಲೋ ಅಲರ್ಟ್ ನೀಡಲಾಗಿದೆ.ಜೂನ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ರಾಜ್ಯದಲ್ಲಿ  ಮಳೆಯ ಅಬ್ಬರ ಹೆಚ್ಚಾಗಲಿದ್ದು, ಮೇ 31 ಮತ್ತು ಜೂನ್ 1ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವ ಇದೆ. ಉತ್ತರ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿಯೂ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಹೆಚ್ಚಾಗಲಿದೆ ಮಳೆಯ ಅಬ್ಬರ.!➤ ಹವಾಮಾನ ಇಲಾಖೆ ಸೂಚನೆ Read More »

ಕರ್ನಾಟಕ

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.29. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟವಾಗಿದ್ದು, 34 ಮಂದಿಗೆ ವಿವಿಧ ಖಾತೆಗಳನ್ನು ಹಂಚಿಕೆ ಮಾಡಲಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತ ಪ್ರಕಟವಾಗಿದೆ. ಸಿಎಂ ಸಿದ್ದರಾಮಯ್ಯ- ಹಣಕಾಸು, ಐಟಿ-ಬಿಟಿ, ಗುಪ್ತಚರ, ವಾರ್ತಾ, ಐಟಿ-ಬಿಟಿ, ಮೂಲಸೌಕರ್ಯ ಅಭಿವೃದ್ಧಿ ಖಾತೆ ಡಿಸಿಎಂ ಡಿಕೆ ಶಿವಕುಮಾರ್- ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ ಡಾ. ಜಿ.ಪರಮೇಶ್ವರ್- ಗೃಹ ಹೆಚ್ ಕೆ‌ ಪಾಟೀಲ್- ಕಾನೂನು ಮತ್ತು ಸಂಸದೀಯ, ಪ್ರವಾಸೋದ್ಯಮ ಕೆ.ಹೆಚ್.ಮುನಿಯಪ್ಪ- ಆಹಾರ &

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಖಾತೆ ಹಂಚಿಕೆಯ ಅಧಿಕೃತ ಪಟ್ಟಿ ಪ್ರಕಟ Read More »

ಕರ್ನಾಟಕ

ಶಾಸಕರು ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ.!➤ಡಿಕೆ ಶಿವಕುಮಾರ್

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.27 ಸಚಿವ ಸ್ಥಾನ ಸಿಗದೆ ಹೋಗಿರುವುದಕ್ಕೆ ಕಾಂಗ್ರೆಸ್ ಪಕ್ಷದ ಹಲವಾರು ಶಾಸಕರಲ್ಲಿ ಅಸಮಾಧಾನ, ಹತಾಷೆ ಮೂಡಿದೆ. ನೊಂದ ಶಾಸಕರಿಗೆ ಉಪ ಮುಖ್ಯಮಂತ್ರಿ ಡಿಕೆ  ಶಿವಕುಮಾರ್ ‘’ಎಲ್ಲರೂ ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೆ ಅವಕಾಶ ಸಿಗಲಿದೆ’’ ಎಂದು ಎಚ್ಚರಿಕೆ ರೂಪದ ಸಲಹೆ ನೀಡಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿಗಳು ಹಿಂದೆ, ಧರಂ ಸಿಂಗ್ ಅವರ ಅವಧಿ ಮತ್ತು ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ತನಗೂ ಅವಕಾಶ ಸಿಕ್ಕಿರಲಿಲ್ಲ, ಆಗ ತಾನು ತಾಳ್ಮೆಯಿಂದ ಇದ್ದ ಹಾಗೆಯೇ, ಈಗಿನ ಅವಕಾಶವಂಚಿತರು

ಶಾಸಕರು ತಾಳ್ಮೆಯಿಂದರಬೇಕು ಮುಂದೆ ಎಲ್ಲರಿಗೂ ಅವಕಾಶ ಸಿಗಲಿದೆ.!➤ಡಿಕೆ ಶಿವಕುಮಾರ್ Read More »

ಕರ್ನಾಟಕ

ಟೆಕ್ಕಿಗೆ ಆಟೋ ಗುದ್ದಿಸಿ ಚಾಲಕ ಪರಾರಿ.!

(ನ್ಯೂಸ್ ಕಡಬ)newskadaba.com ಬೆಂಗಳೂರು,ಮೇ.27  ಆಟೋ ಚಾಲಕ ಕೇಳಿದ ಹೆಚ್ಚುವರಿ ದರವನ್ನು ನೀಡಲು ನಿರಾಕರಿಸಿದ ಟೆಕ್ಕಿ ಓರ್ವನನ್ನು ಚಾಲಕ ಗುದ್ದಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಎಚ್‌ಎಸ್‌ಆರ್ ಲೇಔಟ್ ಸೆಕ್ಟರ್ ಒಂದರಲ್ಲಿ ಈ ಘಟನೆ ನಡೆದಿದೆ. ಈ ಕೃತ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  

ಟೆಕ್ಕಿಗೆ ಆಟೋ ಗುದ್ದಿಸಿ ಚಾಲಕ ಪರಾರಿ.! Read More »

ಕರ್ನಾಟಕ

ಇಂದು(ಮೇ.27) 24 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮೇ.27. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟಕ್ಕೆ ಇಂದು ಶನಿವಾರ 24 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಸರಳ ಸುಂದರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ನೂತನ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರತಿಜ್ಞಾ ವಿಧಿ ಬೋಧಿಸಿದರು.

ಇಂದು(ಮೇ.27) 24 ಮಂದಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ Read More »

ಕರ್ನಾಟಕ
Scroll to Top