Bangalore

ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ನಿರಾಕರಣೆ ➤ ಜೂ. 20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 16. ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಜೂ. 20ರಂದು ರಾಜ್ಯದೆಲ್ಲೆಡೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ. 20ರಂದು ಕಾಂಗ್ರೆಸ್ ಪಕ್ಷದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಪಕ್ಷದ ನಾಯಕರು, ಶಾಸಕರು ಭಾಗವಹಿಸಲಿದ್ದಾರೆ. ಆ ಮೂಲಕ ಕೇಂದ್ರ […]

ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ನಿರಾಕರಣೆ ➤ ಜೂ. 20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ Read More »

ಕರ್ನಾಟಕ

ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ➤  ಇಂದು ಪೂರ್ವಭಾವಿ ಸಭೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜೂ . 16 . ನೂತನ ಕಾಂಗ್ರೆಸ್ ಸರ್ಕಾರದ ಮೊದಲ ಬಜೆಟ್ ಮಂಡನೆ ಜುಲೈ 7 ರಂದು ನಡೆಯಲಿದ್ದು, ಈ ಕುರಿತಾದ ಪೂರ್ವಭಾವಿ ಸಭೆ ಇಂದು ಕೂಡ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರೇಸ್ ಕೋರ್ಸ್ ರಸ್ತೆಯ ಶಕ್ತಿ ಭವನದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಯಲಿದೆ.ಇಂದು ಬೆಳಗ್ಗೆ 11 ರಿಂದ ಸಂಜೆಯತನಕ ಬಜೆಟ್ ಪೂರ್ವಭಾವಿ ಸಭೆಯನ್ನು ಮುಖ್ಯಮಂತ್ರಿಗಳು ನಡೆಸಲಿದ್ದು, 14 ಇಲಾಖೆಗಳ ಜೊತೆ ಸಭೆ ನಡೆಸಲಿದ್ದಾರೆ.

ಜುಲೈ 7ರಂದು ರಾಜ್ಯ ಬಜೆಟ್ ಮಂಡನೆ ➤  ಇಂದು ಪೂರ್ವಭಾವಿ ಸಭೆ Read More »

ಕರ್ನಾಟಕ

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ ➤ ಮೂವರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com  ಚನ್ನಪಟ್ಟಣ ಜೂ.15. ಟಿಂಬರ್‌ ಲಾರಿಗೆ ಹಿಂಬದಿಯಿಂದ ಹೊಂಡಸಿಟಿ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟು,  ಮೂವರು ಗಾಯಗೊಂಡಿರುವ ಘಟನೆ ದೇವರಹೊಸಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಸಂಭವಿಸಿದೆ. ಮೃತರನ್ನು ಕಾರಿನ ಚಾಲಕ ಕೃಷ್ಣಮೂರ್ತಿ (57), ನಿಧಿ (13), ನಿಶಾ(20) ಎಂದು ಗುರುತಿಸಲಾಗಿದೆ. ಬೆಂಗಳೂರಿನ ಯಲಹಂಕದ ವಿದ್ಯಾರಣ್ಯಪುರ ಮೂಲದ ಶ್ರೀನಿವಾಸ್‌ಮೂರ್ತಿ ಕುಟುಂಬದವರು ಮದುವೆಗೆಂದು ಮೈಸೂರಿನ ಎಚ್‌.ಡಿ.ಕೋಟೆಗೆ ತೆರಳಿ, ಮದುವೆ ಮುಗಿಸಿಕೊಂಡು ವಾಪಸ್‌ ಬೆಂಗಳೂರಿಗೆ ಹಿಂದಿರುಗುತಿದ್ದ ವೇಳೆ ಈ ದುರ್ಘಟನೆ ನಡೆದಿದೆ. .    

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇನಲ್ಲಿ ಭೀಕರ ಅಪಘಾತ ➤ ಮೂವರ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿಇಟಿ ಫಲಿತಾಂಶ ಪ್ರಕಟ  ➤ ಎಕ್ಸ್‌ಪರ್ಟ್ ನ ಬೈರೇಶ್‌ಗೆ ಬಿಎಸ್‌ಸಿಯಲ್ಲಿ ಪ್ರಥಮ ರ್‍ಯಾಂಕ್

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜೂ . 15 . ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ-2023ರ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್​ ಅವರು ಬೆಂಗಳೂರಿನ ಮಲ್ಲೇಶ್ವರಂನ ಕೆಇಎ ಕಚೇರಿಯಲ್ಲಿ ಸಿಇಟಿ ಫಲಿತಾಂಶ ಪ್ರಕಟಿಸಿದ್ದು ಈ ಬಾರಿ ಸಿಇಟಿಯಲ್ಲೂ ಎಲ್ಲ ವಿಭಾಗಗಳಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಮಂಗಳೂರಿನ ಎಕ್ಸ್‌ಪರ್ಟ್ ಪ್ರಿ-ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿ ಬೈರೇಶ್ ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಪ್ರಥಮ ರ್ಯಾಂಕ್(96.7%) ಪಡೆದಿದ್ದಾರೆ.  ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸಸ್

ಸಿಇಟಿ ಫಲಿತಾಂಶ ಪ್ರಕಟ  ➤ ಎಕ್ಸ್‌ಪರ್ಟ್ ನ ಬೈರೇಶ್‌ಗೆ ಬಿಎಸ್‌ಸಿಯಲ್ಲಿ ಪ್ರಥಮ ರ್‍ಯಾಂಕ್ Read More »

ಕರ್ನಾಟಕ

ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಕೆಲಸ ಮುಗಿಸಿಕೊಂಡು ಆಟೋ ರಿಕ್ಷಾದಲ್ಲಿ ಹೋಗುತ್ತಿದ್ದ ಪ್ರಯಾಣಿಕರ ಬಳಿ ಹೆಚ್ಚಿನ ಹಣ ಕೇಳಿದ ಚಾಲಕನೊಂದಿಗೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾದ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಅಸ್ಸಾಂ ಮೂಲದ ಅಹ್ಮದ್ (28) ಮತ್ತು ಗಾಯಗೊಂಡಿರುವ ಯುವಕನನ್ನು ಅಯೂಬ್ (26) ಎಂದು ಗುರುತಿಸಲಾಗಿದೆ. ಪ್ರಯಾಣಿಕರು ಮತ್ತು ಚಾಲಕನ ನಡುವೆ ಹಣದ ವಿಷಯಕ್ಕೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರು ಪ್ರಯಾಣಿಕರಿಗೆ ಆಟೋ ಚಾಲಕ ಚಾಕುವಿನಿಂದ ಇರಿದಿದ್ದು,

ಹೆಚ್ಚು ಹಣ ಕೇಳಿದ್ದಕ್ಕೆ ಜಗಳ ➤ ಆಟೋ ಚಾಲಕನಿಂದ ಪ್ರಯಾಣಿಕನ ಕೊಲೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 13. ಪುತ್ರಿಯೋರ್ವಳು ಹೆತ್ತ ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ ಕೇಸ್ ನಲ್ಲಿಟ್ಟು ಠಾಣೆಗೆ ತಂದ ಭೀಕರ ಘಟನೆಯ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಹತ್ಯೆಗೊಳಗಾದವರನ್ನು ಬೀವಾ ಪಾಲ್ (70) ಎಂದು ಗುರುತಿಸಲಾಗಿದೆ. ಇವರು ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಮಗಳು ಸೆನಾಲಿ ಸೇನ್‌, ಹಾಗೂ ಸೆನಾಲಿ ಅತ್ತೆ ವಾಸವಾಗಿದ್ದರು. ದಿನನಿತ್ಯವೂ ಬೀವಾ ಪಾಲ್ ಮತ್ತು ಸೆನಾಲಿ ಅತ್ತೆ ನಡುವೆ ಜಗಳವಾಗುತ್ತಿತ್ತು.

ತಾಯಿಯನ್ನು ಕೊಂದು ಮೃತದೇಹವನ್ನು ಸೂಟ್ಕೇಸ್ ನಲ್ಲಿಟ್ಟು ಠಾಣೆಗೆ ತಂದ ಪುತ್ರಿ ➤ ರಾಜ್ಯವನ್ನೇ ಬೆಚ್ಚಿಬೀಳಿಸಿದ ಘಟನೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಗೀಸರ್ ನಿಂದ ವಿಷಾನಿಲ ಸೋರಿಕೆ ➤ ಯುವಕ – ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜೂ 12.  ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ಚಿಕ್ಕಜಾಲದಲ್ಲಿ ನಡೆದಿದೆ. ಮೃತರನ್ನು ಗುಂಡ್ಲುಪೇಟೆಯ ಚಂದ್ರಶೇಖರ್ ಹಾಗೂ ಗೋಕಾಕ್ ನ ಸುಧಾರಾಣಿ ಎಂದು ಗುರುತಿಸಲಾಗಿದೆ.ಇವರಿಬ್ಬರು ಬೆಂಗಳೂರಿನ ನಂದಿಹಿಲ್ಸ್ ಬಳಿಯ ಗಾಲ್ಪ್ ಹೋಟೆಲ್​ನಲ್ಲಿ ಉದ್ಯೋಗದಲ್ಲಿದ್ದರು. ಬೆಂಗಳೂರಿನ ತಬೇರನಹಳ್ಳಿಯಲ್ಲಿ ಜೂನ್ 10 ರಂದು ಈ ಘಟನೆ ನಡೆದಿದ್ದು,ಘಟನೆ ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ. ಎರಡು ದಿನಗಳಿಂದ ಮನೆಯಿಂದ ಯಾರೂ ಹೊರಗೆ ಬಾರದಿದ್ದಾಗ ಮನೆಯ ಮಾಲೀಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ

ಗೀಸರ್ ನಿಂದ ವಿಷಾನಿಲ ಸೋರಿಕೆ ➤ ಯುವಕ – ಯುವತಿ ಮೃತ್ಯು Read More »

ಕರ್ನಾಟಕ

ನಾಳೆಯಿಂದ ಶಕ್ತಿ ಯೋಜನೆಗೆ ಸಿಎಂ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 10. ನಾಳೆ (ಜೂ.11) ಭಾನುವಾರ ಮಧ್ಯಾಹ್ನ ಶಕ್ತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ನಾಳೆ ಸಿಎಂ ‘ಶಕ್ತಿ ಯೋಜನೆ’ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಒಂದು ರೌಂಡ್ ಬಸ್ ನಲ್ಲಿ ಹೋಗಿ, ನಂತರ ಸ್ಮಾರ್ಟ್ ಕಾರ್ಡ್ ಸಾಂಕೇತಿಕವಾಗಿ ಕೆಲವರಿಗೆ ಕೊಡುತ್ತೇವೆ ಎಂದರು. ಇನ್ನು ಎಲ್ಲರೂ ಸ್ಮಾರ್ಟ್ ಕಾರ್ಡ್ ಮಾಡಿಸಿಕೊಳ್ಳಲು ಮೂರು ತಿಂಗಳು ಅವಧಿ ನೀಡಲಾಗಿದ್ದು,

ನಾಳೆಯಿಂದ ಶಕ್ತಿ ಯೋಜನೆಗೆ ಸಿಎಂ ಚಾಲನೆ Read More »

ಕರ್ನಾಟಕ

ಜೂ. 30ರೊಳಗೆ ಆಸ್ತಿ ವಿವರ ಸಲ್ಲಿಸುವಂತೆ 224 ಶಾಸಕರಿಗೆ ಲೋಕಾಯುಕ್ತ ಖಡಕ್ ಸೂಚನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 09. ಎಲ್ಲಾ 224 ಶಾಸಕರು ಜೂನ್ ತಿಂಗಳ ಅಂತ್ಯದೊಳಗೆ ಆಸ್ತಿ ವಿವರ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿಗಳು ಡೆಡ್ ಲೈನ್ ನೀಡಿದ್ದಾರೆ. ಜೂನ್ 30 ರೊಳಗೆ ಎಲ್ಲಾ ಶಾಸಕರು ಕಡ್ಡಾಯವಾಗಿ ಆಸ್ತಿ ವಿವರ ಸಲ್ಲಿಸುವಂತೆ ಸರ್ಕಾರದ ಸಿಎಸ್ ಗೆ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಸೂಚನೆ ನೀಡಿದ್ದಾರೆ. ಆದೇಶ ನೀಡಿ 15 ದಿನಗಳು ಕಳೆದರೂ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ. ಕಳೆದ ಬಾರಿ ಆಸ್ತಿವಿವರ ಸಲ್ಲಿಸಲಾಗಿದೆ ಎಂದು ಸುಮ್ಮನಿರುವಂತಿಲ್ಲ. ಪುನರಾಯ್ಕೆಯಾದ ಶಾಸಕರು ಹಾಗೂ ಹೊಸದಾಗಿ

ಜೂ. 30ರೊಳಗೆ ಆಸ್ತಿ ವಿವರ ಸಲ್ಲಿಸುವಂತೆ 224 ಶಾಸಕರಿಗೆ ಲೋಕಾಯುಕ್ತ ಖಡಕ್ ಸೂಚನೆ Read More »

ಕರ್ನಾಟಕ

ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು ಜೂ. 08. ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಮೃತಪಟ್ಟ ಘಟನೆ ತಾವರೆಕೆರೆಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಕೃಷ್ಣೇಗೌಡ ಹಾಗೂ ರಾಧಾ ದಂಪತಿಯ ಪುತ್ರಿ ಎಂಇಎಸ್ ಶಾಲೆಯ ವಿದ್ಯಾರ್ಥಿ ಲಿಸ್ಮಿತಾ ಎಂದು ಗುರುತಿಸಲಾಗಿದೆ. ಈಕೆ ಶಾಲೆಯಿಂದ ಮನೆಗೆ ವಾಪಸ್ ಆಗಿ ಬಸ್‌ನಿಂದ ಇಳಿಯುತ್ತಿದ್ದ ವೇಳೆ ಬಸ್ ಬಾಲಕಿ ಮೇಲೆ ಹರಿದಿದೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಲಿಸ್ಮಿತಾಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದು, ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಬಸ್ ಹರಿದು ಶಾಲಾ ವಿದ್ಯಾರ್ಥಿನಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top