Bangalore

ಸ್ವಚ್ಛ ಭಾರತದ ಪರಿಕಲ್ಪನೆ ► ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20.  ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿರ್ದೇಶನದ ಮೇರೆಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ ಕಾರ್ಯಕ್ರಮವನ್ನು ಡಿಸೆಂಬರ್ 16 ರಂದು ಚಾಲನೆ ನೀಡಲಾಯಿತು. ಈ ಅಭಿಯಾನವು ಡಿಸೆಂಬರ್ 31 ರವರೆಗೆ ಹಮ್ಮಿಕೊಳ್ಳಲಾಗುವುದು. ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು, ತಾಂತ್ರಿಕ ಮತ್ತು ಬೋಧಕೇತರ ಸಿಬಂದಿ ವರ್ಗದವರು ಸ್ವಚ್ಚತೆಯ ಪಖ್ವಾಡದ ಬಗ್ಗೆ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಭಾರತ ಮಾತೆಗೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಮತ್ತು ಜವಾಬ್ದಾರಿ […]

ಸ್ವಚ್ಛ ಭಾರತದ ಪರಿಕಲ್ಪನೆ ► ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ Read More »

ಕರಾವಳಿ

ಆಡಳಿತ ಪಕ್ಷದ ವಿರುದ್ದವೇ ಸ್ಪೀಕರ್ ರಮೇಶ್ ಕುಮಾರ್ ಗರಂ ► ಕಾರಣವೇನು ಗೊತ್ತೇ?

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ. 19.ಆಡಳಿತ ಪಕ್ಷದ ಸದಸ್ಯರ ವಿರುದ್ದವೇ ಸ್ಪೀಕರ್ ರಮೇಶ್ ಕುಮಾರ್ ವಿಧಾನಸಭೆಯಲ್ಲಿ ಗರಂ ಆಗಿದ್ದಾರೆ.ಮಂಗಳವಾರದಂದು ಪೂರಕ ಬಜೆಟ್‌ ವಿರೋಧಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಸಭಾತ್ಯಾಗ ಮಾಡುವ ನಿರ್ಧಾರ ಪ್ರಕಟಿಸಿದ ನಂತರ ಬಿಜೆಪಿ ಸದಸ್ಯರು ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರ ಬೇಕು ಎಂದು  ಆಡಳಿತ ಪಕ್ಷವನ್ನು ಕೇಳಿದರು.  ಆಗ ಆಡಳಿತ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದಾಗ ನಿಮಗೆ ನಾವು  ಮತ್ತೇಕೆ ಉತ್ತರ ಕೊಡಬೇಕು ಎಂದು ಹೇಳುತ್ತಾ ಗೋವಿಂದಾ ಗೋವಿಂದ.. ಎಂದು ಕೂಗಲು

ಆಡಳಿತ ಪಕ್ಷದ ವಿರುದ್ದವೇ ಸ್ಪೀಕರ್ ರಮೇಶ್ ಕುಮಾರ್ ಗರಂ ► ಕಾರಣವೇನು ಗೊತ್ತೇ? Read More »

ಕರ್ನಾಟಕ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಾವ, ಜಾಣ ಮತ್ತು ರತ್ನ ಪರೀಕ್ಷೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ .18. ಕನ್ನಡ ಸಾಹಿತ್ಯ ಪರಿಷತ್ತಿನ 2018-19ನೇ ಸಾಲಿನ ಪ್ರವೇಶ, ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳು 2019ನೇ ಜನವರಿ 11, 12 ಮತ್ತು 13 ರಂದು ಒಟ್ಟು 3 ದಿನಗಳ ಕಾಲ ರಾಜ್ಯದ 19 ಕೇಂದ್ರಗಳಲ್ಲಿ ನಡೆಯಲಿವೆ. ಪರೀಕ್ಷಾ ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಅಂಚೆ ಮೂಲಕ ಕಳುಹಿಸಲಾಗಿದೆ. 29-12-2018ರ ನಂತರವೂ ಪ್ರವೇಶಪತ್ರ ತಲುಪದಿರುವ ಬಗ್ಗೆ ವಿದ್ಯಾರ್ಥಿಗಳು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು-18 ಇಲ್ಲಿ ವಿಚಾರಿಸಬಹುದು.   ಬೇರೆ ಜಿಲ್ಲೆಯವರಿಗೆ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಾವ, ಜಾಣ ಮತ್ತು ರತ್ನ ಪರೀಕ್ಷೆ Read More »

ಕರ್ನಾಟಕ

ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.12. ಬೆಂಗಳೂರಿನಿಂದ ಕಣ್ಣೂರಿನ ತಲಶ್ಶೇರಿಯತ್ತ ಪ್ರಯಾಣ ಬೆಳಿಸಿದ್ದ ಪ್ರವಾಸಿ ಬಸ್‌ವೊಂದು ನಿಯಂತ್ರಣ ತಪ್ಪಿ ನದಿಗೆ ಉರುಳಿದ ಘಟನೆ ಪೆರಿಂಗತ್ತೂರ್‌ ಎಂಬಲ್ಲಿ ಮಂಗಳವಾರದಂದು ನಡೆದಿದೆ. ಈ ಅವಘಡದಲ್ಲಿ ಮಹಿಳೆ, ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಹಲವರು ಗಾಯಗೊಂಡಿದ್ದಾರೆ‌. ಚಾಲಕನ ನಿಯಂತ್ರಣ ತಪ್ಪಿದ ಬಸ್ ಪೆರಿಂಗತ್ತೂರ್ ಎಂಬಲ್ಲಿನ ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ನದಿಗೆ ಉರುಳಿದೆ. ಚಾಲಕ ಬಸ್‌ನಿಂದ ಜಿಗಿದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸೇತುವೆಯಿಂದ ನದಿಗೆ ಉರುಳಿದ ಪ್ರವಾಸಿ ಬಸ್ ► ಮೂವರು ಮೃತ್ಯು, ಹಲವರಿಗೆ ಗಾಯ Read More »

ರಾಷ್ಟ್ರೀಯ ನ್ಯೂಸ್

ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಹೇಳಿಕೆಯ ಆರೋಪ ► ಪೇಜಾವರ ಶ್ರೀಗಳ ವಿರುದ್ಧ ದೂರು ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.26. ಶನಿವಾರ ಉಡುಪಿಯಲ್ಲಿ ನಡೆದ ಧರ್ಮಸಂಸದ್ ನಲ್ಲಿ ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ ಎನ್ನುವ ಹೇಳಿಕೆ ನೀಡಿದ ಆರೋಪದಲ್ಲಿ ಉಡುಪಿ ಪೇಜಾವರಶ್ರೀ ವಿರುದ್ಧ ನಗರದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೇಜಾವರ ಶ್ರೀಯವರು ಸಂವಿಧಾನವನ್ನು ಅಂಬೇಡ್ಕರ್ ಒಬ್ಬರೇ ಮಾಡಿದ್ದಲ್ಲ, ಸಂವಿಧಾನದಲ್ಲಿ ಅಲ್ಪಸಂಖ್ಯಾತರಿಗೆ ಒಂದು ಕಾನೂನು, ಬಹುಸಂಖ್ಯಾತರಿಗೆ ಒಂದು ಕಾನೂನಿದೆ. ಅದ್ದರಿಂದ ಸಂವಿಧಾನವನ್ನು ತಿದ್ದುಪಡಿ ಮಾಡಿದ್ರೆ ತಪ್ಪೇನಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಖಂಡಿಸಿ ಇದೀಗ ಬೆಂಗಳೂರು ಸ್ನಾತಕೋತ್ತರ

ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಹೇಳಿಕೆಯ ಆರೋಪ ► ಪೇಜಾವರ ಶ್ರೀಗಳ ವಿರುದ್ಧ ದೂರು ದಾಖಲು Read More »

ಕರ್ನಾಟಕ

ಟ್ರಾಫಿಕ್ ಪೊಲೀಸರಿಗೆ ಹೆದರಿ ಬೈಕ್ ತಿರುಗಿಸಿದಾಗ ಅಪಘಾತ ► ಬೈಕಿನಿಂದ ರಸ್ತೆಗುರುಳಿದ ಬಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.26. ಹೆಲ್ಮೆಟ್ ಧರಿಸಿಲ್ಲವೆಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಬೈಕೊಂದು ಸ್ಕಿಡ್ ಆದ ಪರಿಣಾಮ 9 ವರ್ಷದ ಬಾಲಕ ರಸ್ತೆಗೆ ಬಿದ್ದಿದ್ದು, ಬಾಲಕನ ಮೇಲೆ‌ ಬಸ್ ಹರಿದು ಬಾಲಕ ಮೃತಪಟ್ಟ ಹೃದಯವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಶನಿವಾರದಂದು ನಡೆದಿದೆ. ಸ್ಥಳೀಯ ನಿವಾಸಿ ರಾಜಣ್ಣ ಎಂಬವರು ತನ್ನ ಮೊಮ್ಮಕ್ಕಳೊಂದಿಗೆ ತೆರಳುತ್ತಿದ್ದಾಗ ನಗರದ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಟ್ರಾಫಿಕ್ ಪೊಲೀಸರನ್ನು ಕಂಡು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಹಿಡಿಯುತ್ತಾರೆ ಎಂದು ಹೆದರಿ ಬದಲಿ

ಟ್ರಾಫಿಕ್ ಪೊಲೀಸರಿಗೆ ಹೆದರಿ ಬೈಕ್ ತಿರುಗಿಸಿದಾಗ ಅಪಘಾತ ► ಬೈಕಿನಿಂದ ರಸ್ತೆಗುರುಳಿದ ಬಾಲಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣ ►ಎಸ್ಐಟಿ ಬಲೆಗೆ ಸಿಕ್ಕಿಬಿದ್ದ ಮೂವರು ಹಂತಕರು, ಅಜ್ಞಾತ ಸ್ಥಳದಲ್ಲಿ ವಿಚಾರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.11. ಪತ್ರಕರ್ತೆ ಗೌರಿ ಲಂಕೆಶ್​​ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್’ಐಟಿ ಬಲೆಗೆ ಶಂಕಿತ ಮೂವರು ಹಂತಕರು ಸಿಕ್ಕಿದ್ದಾರೆ ಎನ್ನಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಯುತ್ತಿದೆ. ರೇಖಾಚಿತ್ರದ ಆಧಾರದ ಮೇಲೆ ಶಂಕಿತ ಹಂತಕರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ಗೋಪ್ಯ ಸ್ಥಳದಲ್ಲಿ ಕಳೆದ ಒಂದು ವಾರದಿಂದ ನಿರಂತರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ರೇಖಾಚಿತ್ರ ಹೋಲಿಕೆಯ ಮೇಲೆ ಶಂಕಿತರ ಮೂವರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕಳೆದ ವಾರ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ಕರೆತರಲಾಗಿದೆ ಎನ್ನಲಾಗಿದೆ. ಭಾವಚಿತ್ರ ಹೋಲಿಕೆಯಿದ್ದ ಈ

ಗೌರಿ ಲಂಕೇಶ್ ಹತ್ಯೆ ಪ್ರಕರಣ ►ಎಸ್ಐಟಿ ಬಲೆಗೆ ಸಿಕ್ಕಿಬಿದ್ದ ಮೂವರು ಹಂತಕರು, ಅಜ್ಞಾತ ಸ್ಥಳದಲ್ಲಿ ವಿಚಾರಣೆ Read More »

ಕರ್ನಾಟಕ

ನೇಕಾರರ 50 ಸಾವಿರ ರೂ. ಸಾಲ ಮನ್ನಾ ► ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.11. ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ಸಹಕಾರ ಸಂಘಗಳಲ್ಲಿ ನೇಕಾರಿಕೆಗಾಗಿ ಪಡೆದ ನೇಕಾರರ ರೂ.50 ಸಾವಿರ ವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಿಲ್ಲಾಡಳಿತ ಮಂಡಳಿ ಹಾಗೂ ಇತರ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಸಾಲ ಮನ್ನಾ ಮಾಡಿದ ಮಾದರಿಯಲ್ಲಿಯೇ ನೇಕಾರರ ಸಾಲವನ್ನು ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರದಿಂದ 9,000 ನೇಕಾರರಿಗೆ ಲಾಭವಾಗಲಿದೆ. ಈ ಉದ್ದೇಶಕ್ಕೆ ಒಟ್ಟಾರೆ ರೂ.52 ಕೋಟಿ ಒದಗಿಸಲಾಗುತ್ತಿದೆ

ನೇಕಾರರ 50 ಸಾವಿರ ರೂ. ಸಾಲ ಮನ್ನಾ ► ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ Read More »

ಕರ್ನಾಟಕ

ಸಾರಿಗೆ ಸಂಸ್ಥೆಗಳಿಗೂ ತಟ್ಟಿದ GST ಬಿಸಿ ► ಗುಜರಿ ಬಸ್‌’ಗಳ ಖರೀದಿಗೆ ತೆರಿಗೆ ಎಷ್ಟು ಗೊತ್ತೆ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.4. ಕೇಂದ್ರ ಸರ್ಕಾರ ದೇಶದಲ್ಲಿ ಜಿಎಸ್ ಟಿ ಜಾರಿಗೆ ತಂದ ಮೇಲೆ  ಉದ್ಯಮ, ವ್ಯಾಪಾರ, ವಹಿವಾಟಿನ ಮೇಲೆ ಮಹತ್ವದ ಬದಲಾವಣೆಗಳು ನಡೆದಿವೆ. ಆದ್ರೆ ಜಿಎಸ್ ಟಿಯ ಬಿಸಿ ಈಗ ಸಾರಿಗೆ ಸಂಸ್ಥೆಗಳಿಗೂ ತಟ್ಟಿದೆ. ಜಿಎಸ್ ಟಿಯಿಂದ  ಸಾರಿಗೆ ಸಂಸ್ಥೆ ಸಂಕಷ್ಟಕ್ಕೀಡಾಗಿದೆ. GST ಜಾರಿಗೆ ಬಂದ ನಂತರ ಕೆಎಸ್​’ಆರ್​ಟಿಸಿಗೆ ಬಿಸಿ ತಟ್ಟಿದೆ. ಈಗಾಗಲೆ ಗುಜರಿಗೆ ಸೇರಿರುವ 800 ಬಸ್‌’ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಕಾರಣವೇನು ಅಂತಿರಾ..? ಹೌದು ಗುಜರಿ ವಸ್ತುಗಳ ಖರೀದಿ ಮೇಲೆ ಶೇಕಡ

ಸಾರಿಗೆ ಸಂಸ್ಥೆಗಳಿಗೂ ತಟ್ಟಿದ GST ಬಿಸಿ ► ಗುಜರಿ ಬಸ್‌’ಗಳ ಖರೀದಿಗೆ ತೆರಿಗೆ ಎಷ್ಟು ಗೊತ್ತೆ…? Read More »

ಕರಾವಳಿ

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು

(ನ್ಯೂಸ್ ಕಡಬ) newskadaba.com ಕಡಬ, ನ.3. ಗೂಗಲ್ ನಕ್ಷೆಯಲ್ಲಿ ಈಗ ಸ್ಥಳಗಳ ಹೆಸರು ಇಂಗ್ಲಿಷ್‍‌ನಲ್ಲಿ ಮಾತ್ರ ಅಲ್ಲ ಕನ್ನಡದಲ್ಲಿಯೂ ಲಭ್ಯವಿದೆ. ಇಲ್ಲಿಯವರೆಗೆ ಗೂಗಲ್ ಮ್ಯಾಪ್‍ನಲ್ಲಿ ಸ್ಥಳಗಳ ಹೆಸರು ಇಂಗ್ಲಿಷ್‍ನಲ್ಲಿ ಮಾತ್ರ ಕಾಣುತ್ತಿತ್ತು. ಇದೀಗ ಇಂಗ್ಲಿಷ್ ಜತೆಗೆ ಕನ್ನಡದಲ್ಲಿಯೂ ಸ್ಥಳದ ಹೆಸರನ್ನು ಓದಬಹುದು. ರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕನ್ನಡಿಗರಿಗೊಂದು ಸಂತೋಷದ ಸುದ್ದಿ ಇದಾಗಿದೆ. ಆಯಾ ಪ್ರಾಂತೀಯ ಭಾಷೆ ನಕ್ಷೆಯಲ್ಲಿ ಕಾಣಿಸಿಕೊಳ್ಳಲಿದೆ. ಗೂಗಲ್‌ನ ಈ ಕ್ರಮವನ್ನು ಪ್ರಶಂಸಿಸಿ, ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರು ಸಂತೋಷ ವ್ಯಕ್ತಪಡಿಸಿ, ಗೂಗಲ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಗೂಗಲ್ ನಕ್ಷೆಯಲ್ಲಿ ಕನ್ನಡ ಬಳಕೆ ► ಸಂತಸ ವ್ಯಕ್ತಪಡಿಸಿದ ಕನ್ನಡಿಗರು Read More »

ಕರಾವಳಿ
Scroll to Top