b.c.road

ಮಂಗಳೂರು: ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ➤ ಸ್ಟೋನ್ಸ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಹೇಮಂತ್

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 03: ದಕ್ಷಿಣ ಕನ್ನಡ ಜಿಲ್ಲೆಯ ಮೆಲ್ಕಾರ್, ನರಹರಿ, ಬೋಳಿಯಾರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಅವ್ಯಾಹತವಾಗಿ ಅಕ್ರಮ ಕಲ್ಲು ಸಾಗಾಟ ನಡೆಯುತ್ತಿದ್ದು ತಕ್ಷಣವೇ ಅದನ್ನ ರದ್ದುಗೊಳಿಸುವಂತೆ ಸ್ಟೋನ್ಸ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಹೇಮಂತ್ ಕುಮಾರ್ ಒತ್ತಾಯಿಸಿದ್ದಾರೆ. ತುಳುನಾಡ ರಕ್ಷಣಾ ವೇದಿಕೆ ಹಾಗೂ ಸ್ಟೋನ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಅಕ್ರಮವಾಗಿ ಗಣಿಗಾರಿಕೆ ನಡೆದು ಕೇರಳಕ್ಕೆ ಕಲ್ಲು ಸಾಗಾಟವಾಗುತ್ತಿದ್ದರೂ ಅಧಿಕಾರಿಗಳು ಮೌನವಹಿಸಿದ್ದಾರೆ. ಇದನ್ನ ಗಮನಿಸಿದರೆ ಅಧಿಕಾರಿಗಳು ಕೂಡಾ […]

ಮಂಗಳೂರು: ಸ್ಫೋಟಕ ಬಳಸಿ ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ➤ ಸ್ಟೋನ್ಸ್ ಬಿಲ್ಡರ್ಸ್ ಸಪ್ಲೈಯರ್ಸ್ ಅಸೋಸಿಯೇಶನ್ ಕಾರ್ಯದರ್ಶಿ ಹೇಮಂತ್ Read More »

ಕರಾವಳಿ

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಧಕ್ಕೆಯ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಮೀನುಗಾರಿಕಾ ದೋಣಿ ದುರಂತದಿಂದ ಮೃತಪಟ್ಟವರಿಗೆ ಸರಕಾರದಿಂದ ಪರಿಹಾರ ಧನ ಘೋಷಿಸುವ ಕುರಿತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.   ಬಂದರಿಗೆ ಭೇಟಿ ನೀಡಿದ ವೇಳೆ ಮಾತನಾಡಿದ‌ ಶಾಸಕ ಕಾಮತ್, ಬೋಟ್ ದುರಂತಕ್ಕೀಡಾಗಿರುವ‌ ವಿಚಾರ ತಿಳಿದು ಮನಸ್ಸಿಗೆ ಅತೀವ ನೋವಾಗಿದೆ. ವಿಚಾರ ತಿಳಿದ ತಕ್ಷಣವೇ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ. ಇಬ್ಬರ ಮೃತ ದೇಹ ಪತ್ತೆಯಾಗಿದ್ದು

ಮೀನುಗಾರಿಕಾ ದೋಣಿ ದುರಂತ ➤ ಶಾಸಕ ವೇದವ್ಯಾಸ್ ಕಾಮತ್ ಸಾಂತ್ವನ Read More »

ಕರಾವಳಿ

ಮಂಗಳೂರು: ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು ಡಿ. 02 : ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು (55) ಸೋಮವಾರ ಸಂಜೆ ತನ್ನ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ‘ವಾರ್ತಾಭಾರತಿ’ ದೈನಿಕದಲ್ಲಿ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು ವಾರದ ಹಿಂದೆ ಅಸ್ವಸ್ಥರಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೊಸದಿಗಂತ, ವಿಜಯಕರ್ನಾಟಕ ಪತ್ರಿಕೆಗಳಲ್ಲಿ ಅವರು ಸೇವೆ ಸಲ್ಲಿಸಿದ್ದರು. ಉತ್ತಮ ಸ್ಯಾಕ್ಸೋಫೋನ್ ವಾದಕರಾಗಿದ್ದ ಅವರು ಮಂಗಳೂರು ಪ್ರೆಸ್ಕ್ಲಬ್ ದಿನಾಚರಣೆ, ದ.ಕ.ಜಿಲ್ಲಾ ಪತ್ರಕರ್ತರ ಸಮ್ಮೇಳನ ಸೇರಿದಂತೆ

ಮಂಗಳೂರು: ಪತ್ರಕರ್ತ, ಸ್ಯಾಕ್ಸೋಫೋನ್ ವಾದಕ ದಯಾನಂದ ಕುಡುಪು ನಿಧನ Read More »

ಕರಾವಳಿ

ಬಂಟ್ವಾಳ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 02: ಕಳೆದ ದಿನ ರಾತ್ರಿ ವಿಟ್ಲ ಸಮೀಪದ ಉಕ್ಕುಡ ಎಂಬಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ.     ಗಾಯಗೊಂಡ ವ್ಯಕ್ತಿಯನ್ನು ಕಾಸರಗೋಡು ಮಗಲ್ಪಾಡಿ ನಿವಾಸಿ ಹನೀಫ್ ಎಂದು ಗುರುತಿಸಲಾಗಿದೆ. ವಿಟ್ಲ ಕಡೆಯಿಂದ ಕಾಸರಗೋಡು ರಸ್ತೆಯಲ್ಲಿ ಪೆರ್ಲ ಕಡೆ ತೆರಳುತ್ತಿದ್ದ ಬೈಕ್ ಗೆ ಎದುರಿನಿಂದ ಬಂದ ಪಿಕಪ್ ವಾಹನ ಢಿಕ್ಕಿ ಹೊಡೆದಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ.  

ಬಂಟ್ವಾಳ: ಪಿಕಪ್ ಮತ್ತು ಬೈಕ್ ನಡುವೆ ಭೀಕರ ಅಪಘಾತ Read More »

ಕರಾವಳಿ

ಬಿ.ಸಿ.ರೋಡ್ ಸೇತುವೆ ಬಳಿ ಕಾರುಗಳ ಡಿಕ್ಕಿ ➤ ಸರಣಿ ಅಪಘಾತ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 30: ಬಿ.ಸಿ.ರೋಡ್ ನೇತ್ರಾವತಿ ಸೇತುವೆ ಬಳಿ ಮೂರು ಕಾರುಗಳು ಡಿಕ್ಕಿಯಾಗಿ ಸರಣಿ ಅಪಘಾತ ಕಳೆದ ದಿನ ಸಂಭವಿಸಿದೆ.   ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದು, ಬಂಟ್ವಾಳ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಭಾನುವಾರ ರಾತ್ರಿ ಅಪಘಾತ ನಡೆದಿದ್ದು, ಇದರಿಂದಾಗಿ ತುಂಬಾ ಹೊತ್ತುವಾಹನಗಳು ಸಾಲುಗಟ್ಟಿ ನಿಂತವು. ಬಳಿಕ ಪೊಲೀಸರು ವಾಹನಗಳನ್ನು ತೆರವುಗೊಳಿಸಿದರು.    

ಬಿ.ಸಿ.ರೋಡ್ ಸೇತುವೆ ಬಳಿ ಕಾರುಗಳ ಡಿಕ್ಕಿ ➤ ಸರಣಿ ಅಪಘಾತ Read More »

ಕರಾವಳಿ

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ

(ನ್ಯೂಸ್ ಕಡಬ) newskadaba.com ಮಲ್ಪೆ ನ. 29: ಗೋವಾ-ಮಹಾರಾಷ್ಟ್ರ ಗಡಿ ಭಾಗದ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಏಳು ಮಂದಿ ಮೀನುಗಾರರಿದ್ದ ದೋಣಿ ಕಳೆದ ದಿನ  ಮುಳುಗಡೆಯಾಗಿತ್ತು. ಮೀನುಗಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ . ಸಮುದ್ರದಲ್ಲಿ ಮುಳುಗಿದ ದೋಣಿಯು ಮಲ್ಪೆಯದ್ದಾಗಿದ್ದು, ಮಥುರಾ ಹೆಸರಿನ ಈ ಆಳಸಮುದ್ರ ಮೀನುಗಾರಿಕಾ ದೋಣಿಯು ನ. 17ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು.   ದೋಣಿಯಲ್ಲಿ ಏಳು ಮಂದಿ ಮೀನುಗಾರರಿದ್ದರು. ಸಮುದ್ರದಲ್ಲಿ ಮುಳುಗಿದ ದೋಣಿಯಲ್ಲಿ ಬಲೆ, ಡೀಸೆಲ್, ಮೀನು ಸೇರಿದಂತೆ ಸುಮಾರು 65 ಲಕ್ಷ ರೂ.

ಮಲ್ಪೆ :ಸಮುದ್ರದಲ್ಲಿ ಮುಳುಗಿದ 7 ಮಂದಿಯಿದ್ದ ಮೀನುಗಾರಿಕೆ ದೋಣಿ Read More »

ಕರಾವಳಿ, ಕರ್ನಾಟಕ

ಕೋಟ :ಸ್ಕೂಟಿಗೆ ಡಿಕ್ಕಿ ಹೊಡೆದ ಫಾರ್ಚೂನ್ ➤ ಯುವತಿ ಮೃತ್ಯು, ಮತ್ತೋರ್ವ ಯುವತಿ ಗಂಭೀರ

(ನ್ಯೂಸ್ ಕಡಬ) newskadaba.com ಕೋಟ ನ. 29: ಕಳೆದ ದಿನ  ಉಡುಪಿಯ ಕೋಟದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಯುವತಿಯೋರ್ವಳು ಸಾವನ್ನಪ್ಪಿದ್ದಾಳೆ. ಮತ್ತೋರ್ವ ಯುವತಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.     ಕೋಟ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ಕೃಷ್ಣಭವನ ಹೋಟೆಲ್ ಎದುರುಗಡೆ ಈ ಅಪಘಾತ ಸಂಭವಿಸಿದ್ದು, ಶ್ರೇಯಾ ಶಾನುಭಾಗ್ (24) ಮೃತಪಟ್ಟು ಪ್ರಜ್ಞಾ (25) ಗಂಭೀರ ಗಾಯಗೊಂಡಿದ್ದಾರೆ. ಬೇಳೂರು ನಿವಾಸಿ ಶ್ರೇಯಾ ಕುಂದಾಪುರದಿಂದ ಬ್ರಹ್ಮಾವರ ಕಡೆ ಸ್ಕೂಟಿಯಲ್ಲಿ ಬರುತ್ತಿದ್ದ ಸಂದರ್ಭ ಫಾರ್ಚೂನ್ ವಾಹನ

ಕೋಟ :ಸ್ಕೂಟಿಗೆ ಡಿಕ್ಕಿ ಹೊಡೆದ ಫಾರ್ಚೂನ್ ➤ ಯುವತಿ ಮೃತ್ಯು, ಮತ್ತೋರ್ವ ಯುವತಿ ಗಂಭೀರ Read More »

ಕರಾವಳಿ

ಮಂಗಳೂರು : ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 27: ಬಾಳೆಹೊನ್ನೂರಿನ ಕೆ.ಎಚ್ ಲತೀಫ್ ಎಂಬವರು (35) ಸೆಪ್ಟೆಂಬರ್ 13ರಿಂದ ಕಾಣೆಯಾಗಿದ್ದು,ಈ ಬಗ್ಗೆ ಪಣಂಬೂರು ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೃಢಕಾಯ ಶರೀರ ಹೊಂದಿದ್ದು, 5.6 ಅಡಿ ಎತ್ತರವಿದ್ದು, ಬಿಳಿ ಮೈಬಣ್ಣ ಹೊಂದಿದ್ದಾರೆ, ಕನ್ನಡ, ತುಳು, ಹಿಂದಿ, ಮಲಯಾಳಿ ತೆಲುಗು ಭಾಷೆ ಬಲ್ಲವರಾಗಿದ್ದಾರೆ.ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಪಣಂಬೂರು ಪೊಲೀಸ್‍ ಠಾಣೆದೂ.ಸಂ: 0824-2220530, 9480805355, 9480805331 ಅಥವಾಮಂಗಳೂರು ಕಂಟ್ರೋಲ್‍ರೂಮ್‍ದೂ.ಸಂ: 0824-2220800ಗೆ ಮಾಹಿತಿಯನ್ನು ನೀಡುವಂತೆ ಪಣಂಬೂರು ಪೊಲೀಸ್‍ ಠಾಣೆಯ ಸಬ್‍ ಇನ್ಸ್‍ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು : ವ್ಯಕ್ತಿ ನಾಪತ್ತೆ Read More »

ಕರಾವಳಿ

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ ನ. 27: ಅಮಾನುಷ ರೀತಿಯಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓಮ್ನಿ ಕಾರನ್ನು ಮೂಡುಬಿದಿರೆ ಪೊಲೀಸರು ಗುರುವಾರ ಬೆಳಗ್ಗೆ ತಡೆದಿದ್ದು, ಐದು ದನಗಳನ್ನು ರಕ್ಷಿಸಿದ್ದು, ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.   ಕಾರ್ಕಳ ಕಡೆಯಿಂದ ಮೂಡುಬಿದಿರೆ ಮಾರ್ಗವಾಗಿ ಬೆಳ್ತಂಗಡಿ ಕಡೆಗೆ ಹಿಂಸಾತ್ಮಕವಾಗಿ ದನಗಳನ್ನು ತುಂಬಿಸಿ ಅತೀ ವೇಗವಾಗಿ ಹೋಗುತ್ತಿದ್ದ ಓಮ್ನಿ ಕಾರನ್ನು ಪೊಲೀಸರು ಅನುಮಾನಗೊಂಡು ಪೇಟೆಯ ಬಜಾಜ್ ಶೋರೂಂ ಬಳಿಯ ಅಡ್ಡರಸ್ತೆಯಲ್ಲಿ ತಡೆದಿದ್ದಾರೆ. ಕಾರು ನಿಲ್ಲಿಸಿ ಚಾಲಕ ಸಹಿತ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.

ಅಮಾನುಷವಾಗಿ ಜಾನುವಾರು ಸಾಗಾಟ ➤ ಐದು ದನಗಳ ರಕ್ಷಣೆ,ಆರೋಪಿಗಳು ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ ;ಆರ್.ಟಿ.ಸಿ. ತಿದ್ದುಪಡಿಗೆ ಲಂಚಕ್ಕೆ ಬೇಡಿಕೆ ➤ ಉಪತಹಸೀಲ್ದಾರ್ ಎಸಿಬಿ ಬಲೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 27: ಆರ್.ಟಿ.ಸಿ. ತಿದ್ದುಪಡಿ ಮಾಡಲೆಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ಬಂದ ದೂರಿನನ್ವಯ ದಕ್ಷಿಣ ಕನ್ನಡದ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಅಧಿಕಾರಿಗಳು ಬಂಟ್ವಾಳ ತಾಲೂಕು ಕಚೇರಿಗೆ ದಾಳಿ ನಡೆಸಿದ ವೇಳೆ ಉಪತಹಸೀಲ್ದಾರ್ ರವಿಶಂಕರ್ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದು, ಘಟನೆ ಗುರುವಾರ ಮಧ್ಯಾಹ್ನ ಬಿ.ಸಿ.ರೋಡಿನ ಮಿನಿ ವಿಧಾನಸೌಧದಲ್ಲಿ  ನಡೆದಿದೆ.   ದೂರುದಾರರು ತಾಯಿಯ ಹೆಸರಲ್ಲಿರುವ ಜಾಗಕ್ಕೆ ಸಂಬಂಧಿಸಿ ಆರ್.ಟಿ.ಸಿ.ಯಲ್ಲಿ ತಿದ್ದುಪಡಿ ಮಾಡಿಕೊಡಲು ಉಪತಹಸೀಲ್ದಾರ್ 1,500 ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಬಂಟ್ವಾಳ ;ಆರ್.ಟಿ.ಸಿ. ತಿದ್ದುಪಡಿಗೆ ಲಂಚಕ್ಕೆ ಬೇಡಿಕೆ ➤ ಉಪತಹಸೀಲ್ದಾರ್ ಎಸಿಬಿ ಬಲೆಗೆ Read More »

ಕರಾವಳಿ
Scroll to Top