b.c.road

ವಿಟ್ಲ :ಬೈಕ್ ಅಪಘಾತ ➤ ಖ್ಯಾತ ಪಾಕಪ್ರವೀಣ ಕಾಂತಡ್ಕ ಶಂಕರನಾರಾಯಣ ಭಟ್ ಮೃತ್ಯು

(ನ್ಯೂಸ್ ಕಡಬ) newskadaba.com ಫರಂಗಿಪೇಟೆ, ಡಿ.12: ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾ.ಹೆ. 75ರಲ್ಲಿ ಗುರುವಾರ ಇಳಿಸಂಜೆ ಬೈಕ್ ಸ್ಕಿಡ್ ಆಗಿ ನಡೆದ ಅಪಘಾತದಲ್ಲಿ ವಿಟ್ಲದ ಜನಪ್ರಿಯ ಬಾಣಸಿಗ ಕಾಂತಡ್ಕ ಶಂಕರನಾರಾಯಣ ಭಟ್ (58) ಮೃತಪಟ್ಟಿದ್ದಾರೆ. ಮಂಗಳೂರು ಕಡೆಯಿಂದ ಬೈಕಿನಲ್ಲಿ ವಿಟ್ಲ ಕಡೆಗೆ ಬರುತ್ತಿದ್ದ ಅವರ ಬೈಕ್, ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ಪಲ್ಟಿಯಾಗಿ ಅಪಘಾತ ಘಟಿಸಿದ್ದಾಗಿ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. […]

ವಿಟ್ಲ :ಬೈಕ್ ಅಪಘಾತ ➤ ಖ್ಯಾತ ಪಾಕಪ್ರವೀಣ ಕಾಂತಡ್ಕ ಶಂಕರನಾರಾಯಣ ಭಟ್ ಮೃತ್ಯು Read More »

ಕರಾವಳಿ

ಬಂಟ್ವಾಳ :ಮದುವೆ ಸಮಾರಂಭಗಳಲ್ಲಿ ಚಿನ್ನದ ಸರ ಎಗರಿಸುತ್ತಿದ್ದ ಚೋರಿ ಮಹಿಳೆ ಅಂದರ್

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಡಿ.12: ಮದುವೆ ಹಾಲ್ ನಲ್ಲಿ ಮಕ್ಕಳ ಕತ್ತಿನಿಂದ, ಮಹಿಳೆಯರ ಬ್ಯಾಗ್ ನಿಂದ ಚಿನ್ನಭಾರಣ ಕದಿಯುತ್ತಿದ್ದ ಮಹಿಳೆ ಈಗ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾಳೆ.   ಇತ್ತೀಚಿನ ದಿನಗಳಲ್ಲಿ ಮದುವೆ ಹಾಲ್ ಗಳಲ್ಲಿ ಮಹಿಳೆಯರ ಬ್ಯಾಗ್, ಚಿಕ್ಕ ಮಕ್ಕಳ ಕತ್ತಿನಿಂದ ಚಿನ್ನದ ಸರ ಕಳವಾಗುತ್ತಿರುವ ಬಗ್ಗೆ ಹಾಲ್ ನ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ದೃಶ್ಯ ಆಧರಿಸಿ ಹಾಲ್ ಮಾಲೀಕರು ಬಂಟ್ವಾಳ ನಗರ ಮತ್ತು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಗುರುವಾರ ಪಾಣೆಮಂಗಳೂರಿನ

ಬಂಟ್ವಾಳ :ಮದುವೆ ಸಮಾರಂಭಗಳಲ್ಲಿ ಚಿನ್ನದ ಸರ ಎಗರಿಸುತ್ತಿದ್ದ ಚೋರಿ ಮಹಿಳೆ ಅಂದರ್ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ :ಸಿಡಿಲು ಬಡಿದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.11: ಬಂಟ್ವಾಳ ತಾಲೂಕಿನಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ತಾಲೂಕಿನ ಗಡಿ ಭಾಗವಾಗಿರುವ ಕರೋಪಾಡಿ ಗ್ರಾಮದ ಸಾರ್ಥಕೋಡಿ ಎಂಬಲ್ಲಿ ಗುರುವಾರ ರಾತ್ರಿ ಘಟನೆ ನಡೆದಿದೆ. ಚಂದಪ್ಪ ಮೂಲ್ಯ ಮೃತಪಟ್ಟವರು.ರಾತ್ರಿ ಮನೆಗೆ ಸಿಡಿಲು ಬಡಿದಿದೆ, ಸುಮಾರು 12.30ರ ಬಳಿಕ ಘಟನೆ ನಡೆದಿದ್ದು, ಚಂದಪ್ಪ ಮೂಲ್ಯ ಅವರು ಸಿಡಿಲಾಘಾತದಿಂದ ತೀವ್ರ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಇದೇ ಸಂದರ್ಭ ಮನೆಗೂ ಸಿಡಿಲಾಘಾತದಿಂದ ಹಾನಿಗಳುಂಟಾಗಿವೆ. ವಿದ್ಯುತ್ ಉಪಕರಣಗಳು ಸುಟ್ಟುಹೋಗಿವೆ.

ಬಂಟ್ವಾಳ :ಸಿಡಿಲು ಬಡಿದು ವ್ಯಕ್ತಿ ಮೃತ್ಯು Read More »

ಕರಾವಳಿ

ಕಾಸರಗೋಡು :ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನ ➤ ಆರೋಪಿ ಖಾಕಿ ಬಲೆಗೆ

(ನ್ಯೂಸ್ ಕಡಬ) newskadaba.com ವಿದ್ಯಾನಗರ, ಡಿ.09: ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನಿಸಿದ್ದ ಓರ್ವ ಆರೋಪಿಯನ್ನು ವಿದ್ಯಾನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೊಲ್ಲಂಪಾಡಿಯ ಅಬ್ದುಲ್ ಖಾದರ್ (31) ಎಂದು ಗುರುತಿಸಲಾಗಿದೆ. ಅಬ್ದುಲ್ ಖಾದರ್ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳಿಗೆ ಪರಿಚಯವಾಗಿದ್ದ. ಆಕೆಯ ಸ್ನೇಹ ಬೆಳೆಸಿ ಖಾಸಗಿ ಫೋಟೋವನ್ನು ಪಡೆದುಕೊಂಡಿದ್ದ. ಅವುಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸುವುದಾಗಿ ಬೆದರಿಸಿದ್ದ ಆರೋಪಿಯು 25 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಯುವತಿಯು ವಿದ್ಯಾನಗರ ಠಾಣೆಗೆ ದೂರು

ಕಾಸರಗೋಡು :ಯುವತಿಗೆ ಬೆದರಿಸಿ ಲಕ್ಷಾಂತರ ರೂ. ವಂಚಿಸಲು ಯತ್ನ ➤ ಆರೋಪಿ ಖಾಕಿ ಬಲೆಗೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ದ.ಕ.‌ ಪ್ರಥಮ‌ ಹಂತದ ಗ್ರಾಪಂ ಚುನಾವಣೆ ➤ 68 ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.09:ದ.ಕ. ಜಿಲ್ಲೆಯಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣೆಗೆ ಎರಡನೆಯ ದಿನವಾದ ಮಂಗಳವಾರ 38 ನಾಮಪತ್ರಗಳು ಸಲ್ಲಿಕೆಯಾಗಿವೆ.   ಮಂಗಳೂರು ತಾಲೂಕಿನಲ್ಲಿ 8, ಮೂಡುಬಿದಿರೆ ತಾಲೂಕಿನಲ್ಲಿ 3 ಮತ್ತು ಬಂಟ್ವಾಳ ತಾಲೂಕಿನಲ್ಲಿ 27 ನಾಮಪತ್ರಗಳು ಸಲ್ಲಿಕೆಯಾಗಿವೆ. ನಾಮಪತ್ರಿಕೆಯ ಮೊದಲ ದಿನ ಒಟ್ಟು 22 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಮಂಗಳವಾರ ಸಲ್ಲಿಕೆಯಾದ 38 ನಾಮಪತ್ರಗಳು ಸೇರಿ ಈವರೆಗೆ ಒಟ್ಟು 68 ನಾಮಪತ್ರಗಳು ಸಲ್ಲಿಕೆಯಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಸಲು ಕೊನೇಯ ದಿನವಾಗಿದೆ.ಜಿಲ್ಲೆಯಲ್ಲಿ ಪ್ರಥಮ‌ ಹಂತದಲ್ಲಿ

ದ.ಕ.‌ ಪ್ರಥಮ‌ ಹಂತದ ಗ್ರಾಪಂ ಚುನಾವಣೆ ➤ 68 ನಾಮಪತ್ರ ಸಲ್ಲಿಕೆ Read More »

ಕರಾವಳಿ

ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಗೆ ಹೃದಯಾಘಾತ ➤ ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ

(ನ್ಯೂಸ್ ಕಡಬ) newskadaba.com ಕಾಪು, ಡಿ.08: ಕಾಪುವಿನ ವಸತಿ ಸಂಕೀರ್ಣವೊಂದರಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಯೋರ್ವರು ಹೃದಯಾಘಾತದಿಂದ ಮೃತ ಪಟ್ಟ ಘಟನೆ ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ.ಕಾಪುವಿನ ಕಾಪುವಿನ ಸಿಟಿ ಸಂಟರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಯಾರ ಜೊತೆಗೆ ಬೆರೆಯುತ್ತಿರಲಿಲ್ಲ, ತಾನಯ್ತು ತನ್ನ ಕೆಲಸವಾಯ್ತು ಎಂಬಂತೆ ಇದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಸೋಮವಾರ ಬೆಳಗ್ಗಿನ ಜಾವ ಅವರ ರೂಮಿನಿಂದ ಕೆಟ್ಟ ವಾಸನೆ ಹೊರ ಬರುತ್ತಿದ್ದದ್ದನ್ನು ಗಮನಿಸಿದ ಪಕ್ಕದ ಕೋಣೆಯ ನಿವಾಸಿಗಳು ಕಾಪು ಪೋಲಿಸರಿಗೆ ತಿಳಿಸಿದ್ದಾರೆ. ಕಾಪು

ಏಕಾಂಗಿಯಾಗಿ ವಾಸಿಸುತ್ತಿದ್ದ ಮಹಿಳೆಗೆ ಹೃದಯಾಘಾತ ➤ ವಾರದ ಬಳಿಕ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮೃತದೇಹ Read More »

ಕರಾವಳಿ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಮುಲ್ಕಿ, ಡಿ. 07: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಬಳಿ ಕಳೆದ ದಿನ ಬೆಳಿಗ್ಗೆ ಟೆಂಪೋ ಡಿಕ್ಕಿ ಹೊಡೆದು ನಡೆದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ಹಳೆಯಂಗಡಿ ಬಸ್ ನಿಲ್ದಾಣ ಬಳಿಯ ನಿವಾಸಿಗಳಾದ ತಾಯಿ ಸುಖಲತಾ(44) ಅವರ ಮಗ ಚಿರಾಗ್(10) ರಸ್ತೆ ಬದಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಟೆಂಪೋ ಹಳೆಯಂಗಡಿ ಸಮೀಪಿಸುತ್ತಿದಂತೆಯೇ ಚಾಲಕನ ನಿಯಂತ್ರಣ ತಪ್ಪಿ ನಡೆದುಕೊಂಡು ಹೋಗುತ್ತಿದ್ದ ತಾಯಿ ಮತ್ತು ಮಗನಿಗೆ ಡಿಕ್ಕಿ ಹೊಡೆದು ಬಳಿಕ

ಹಳೆಯಂಗಡಿ ಬಳಿ ಟೆಂಪೋ ಡಿಕ್ಕಿ ಪ್ರಕರಣ ➤ ಚಿಕಿತ್ಸೆ ಫಲಕಾರಿಯಾಗದೆ ಗಾಯಾಳು ಮಹಿಳೆ ಮೃತ್ಯು Read More »

ಕರಾವಳಿ

ವಿಟ್ಲದಲ್ಲಿ ಪರಿಚಯಸ್ಥನಿಂದಲೇ ನಡೆಯಿತು ಹಲ್ಲೆ ➤ ಆರೋಪಿ ಜಯ ಕೊಟ್ಟಾರಿ ವಿರುದ್ಧ ಕೇಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.04: ಮುಖಂಡನೊಬ್ಬ ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ವಿಟ್ಲ ಕಲಾಶೀಪಾಳ್ಯದಲ್ಲಿ ವರದಿಯಾಗಿದೆ.ವಿಟ್ಲ ಪಡ್ನೂರು ಗ್ರಾಮದ ಕಡಂಬು ಸುರಂಗದಮೂಲೆ ನಿವಾಸಿ ಚಿದಾನಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.     ಇನ್ನು ದಾಳಿಗೊಳಗಾದ ವ್ಯಕ್ತಿ ಚಿದಾನಂದ ಹಾಗೂ ಹಲ್ಲೆ ನಡೆಸಿರುವ ಜಯಕೊಟ್ಟಾರಿ ಒಬ್ಬರಿಗೊಬ್ಬರು ಪರಿಚಯಸ್ಥರಾಗಿದ್ದು, ಕಳೆದ ದಿನ ಚಿದಾನಂದ ಎಂಬುವರು ಸಂಜೆ ಮನೆಗೆ ತೆರಳುತ್ತಿದ್ದಾಗ ಏಕಾಏಕಿಯಾಗಿ ಬಂದ ಜಯಕೊಟ್ಟಾರಿ ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ

ವಿಟ್ಲದಲ್ಲಿ ಪರಿಚಯಸ್ಥನಿಂದಲೇ ನಡೆಯಿತು ಹಲ್ಲೆ ➤ ಆರೋಪಿ ಜಯ ಕೊಟ್ಟಾರಿ ವಿರುದ್ಧ ಕೇಸ್ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಪರ್ಸೀನ್ ಬೋಟ್ ದುರಂತದಲ್ಲಿ ಮೃತರಾದ ಆರು ಮಂದಿ ಮೀನುಗಾರರ ಕುಟುಂಬಕ್ಕೆ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ ಕಚೇರಿಯಲ್ಲಿ ಇಂದು (ಗುರುವಾರ) ಪರಿಹಾರದ ಚೆಕ್ ವಿತರಿಸಿದರು. ಒಂದು ಕುಟುಂಬಕ್ಕೆ ತಲಾ 6 ಲಕ್ಷ ರೂ.ನಂತೆ ಒಟ್ಟು 36 ಲಕ್ಷ ರೂ.ನ ಚೆಕ್ ವಿತರಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಉಪಸ್ಥಿತರಿದ್ದರು.  

ಮಂಗಳೂರು: ಮೃತ ಮೀನುಗಾರರ ಕುಟುಂಬಕ್ಕೆ ಪರಿಹಾರ ವಿತರಣೆ Read More »

ಕರಾವಳಿ

ಮಂಗಳೂರು :ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಣೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 03: ಕನಕದಾಸರು ಕರ್ನಾಟಕ ಮಾತ್ರವಲ್ಲ ಲೋಕಗುರು. ಮನುಷ್ಯನ ಜೀವನದುದ್ದಕ್ಕೂ ಅಜ್ಞಾನದಿಂದ ಜ್ಞಾನದತ್ತ, ವೈಯಕ್ತಿಕ, ಕುಟುಂಬ, ಸಮೂಹ, ಸಮಾಜ, ಲೋಕದಕತ್ತಲನ್ನು ಕಳೆದು ಬೆಳಕಿನತ್ತ ಕೊಂಡೊಯ್ಯಲು ಪ್ರೇರಣೆ ನೀಡಿದವರು. ಮನುಷ್ಯ ತನ್ನ ಮೌಢ್ಯಾಂಧಕಾರದಿಂದ ಹೊರಬರಲು ಸಮಾಜವನ್ನು ಟೀಕಿಸಿ, ತಿದ್ದಿ, ಮನುಷ್ಯನ ಆತ್ಮಸಾಕ್ಷಾತ್ಕಾರಕ್ಕೆ ಸ್ಪೂರ್ತಿಯಾದವರು. ಈ ಜಗತ್ತಿನಲ್ಲಿ ಭಕ್ತಿಗಿಂತ ಶ್ರೇಷ್ಠವಾದ ಶಕ್ತಿ ಮತ್ತೊಂದಿಲ್ಲ ಎಂದು ತಮ್ಮ ಮೂಲಕ ಜಗತ್ತಿಗೆ ಸಾರಿದವರು. ವ್ಯಕ್ತಿಯನ್ನು ಸಮಾಜದ ಕೇಂದ್ರ ಬಿಂದುವಾಗಿಸಲು ಆತನ ಸಿರಿ ಸಂಪತ್ತು ಮಾತ್ರವಲ್ಲದೆ ಆತನಗುಣ, ದೋಷಗಳೂ, ದೃಷ್ಠಿಕೋನ,

ಮಂಗಳೂರು :ಶಕ್ತಿ ವಿದ್ಯಾ ಸಂಸ್ಥೆಯಲ್ಲಿ ಕನಕದಾಸ ಜಯಂತಿ ಆಚರಣೆ. Read More »

ಕರಾವಳಿ
Scroll to Top