arrest

ಕಡಬ: ಅಧಿಕಾರಿಗಳ ಇಲಾಖಾ ವಾಹನಕ್ಕೆ ಹಾನಿ ಪ್ರಕರಣ      ➤  7 ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ)newskadaba.com  ಕಡಬ, ಫೆ.24. ಕೊಂಬಾರು ಗ್ರಾಮದ ಮಂಡೆಕರ ಅರಣ್ಯಪ್ರದೇಶದಲ್ಲಿ ಫೆ.23ರಂದು ಸಂಜೆ ಕಾಡಾನೆ ಸೆರೆ ಸಿಕ್ಕಿದ ಬಳಿಕ ಅರಣ್ಯ ಹಾಗೂ ಪೊಲೀಸ್ ಇಲಾಖಾ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿದ ಆರೋಪದಲ್ಲಿ 7 ಮಂದಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಫೆ.23ರಂದು ಕೊಂಬಾರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಕಾಡಾನೆ ಹಿಡಿಯುವ ಕಾರ್ಯಾಚರಣೆಯಲ್ಲಿ ಕಾಡಾನೆಯು ಸೆರೆಸಿಕ್ಕಿದ್ದು ರಾತ್ರಿ 9 ಗಂಟೆ ವೇಳೆಗೆ ಕಾಡಾನೆಯನ್ನು ದುಬಾರೆ ಆನೆ ಬಿಡಾರಕ್ಕೆ ಬಿಟ್ಟು ಬರಲು ಮುಂದಾದಾಗ ಸ್ಥಳದಲ್ಲಿದ್ದ ಕೆಲವು ಜನರು ಸ್ಥಳಕ್ಕೆ […]

ಕಡಬ: ಅಧಿಕಾರಿಗಳ ಇಲಾಖಾ ವಾಹನಕ್ಕೆ ಹಾನಿ ಪ್ರಕರಣ      ➤  7 ಆರೋಪಿಗಳು ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ಕಳವು ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಾಪು, ಫೆ.24. ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ದೋಚಿದ ಆರೋಪಿಯನ್ನು ಕಾಪು ಪೊಲೀಸರು ಆಂಧ್ರಪ್ರದೇಶ ರಾಜ್ಯದ ಮದನಪಲ್ಲಿಯಲ್ಲಿ ಬಂಧಿಸಿ ಕರೆತಂದಿದ್ದಾರೆ. ಆಂಧ್ರಪ್ರದೇಶದ ಸುನಿಲ್‌ (29) ಬಂಧಿತ ಆರೋಪಿ. ಕಾಪುವಿನ ಮಹಾಲಸಾ ಸ್ಟೋರ್ ಮಾಲಿಕರಾದ ರಾಘವೇಂದ್ರ ಕಿಣಿ ಅವರು ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಆರೋಪಿ ಗ್ರಾಹಕನ ಸೋಗಿನಲ್ಲಿ ಬಂದು ಮಾಲಕರಿಂದ 6 ಲಕ್ಷ ಹಣ ದೋಚಿ ಪರಾರಿಯಾಗಿದ್ದ.

ಗ್ರಾಹಕರ ಸೋಗಿನಲ್ಲಿ ಬಂದು ಮಾಲೀಕರಿಂದ 6 ಲಕ್ಷ ರೂ. ಕಳವು ➤ ಆರೋಪಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಲಾಡ್ಜ್‌‌ ನಲ್ಲಿ ಅನೈತಿಕ ವೇಶ್ಯಾವಟಿಕೆ ➤ ಇಬ್ಬರು ಮಹಿಳೆ ಸೇರಿ ಮೂವರು ವಶಕ್ಕೆ

(ನ್ಯೂಸ್ ಕಡಬ)newskadaba.com ಮಣಿಪಾಲ, ಫೆ.23. ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ವೊಂದಕ್ಕೆ ಪೊಲೀಸರು ದಾಳಿ ನಡೆಸಿ ಇಬ್ಬರು ಮಹಿಳೆ ಸೇರಿ ಮೂವರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಮಾಹಿತಿಯ ಮೇರೆಗೆ ದಾಳಿ ನಡೆಸಿದ ಪೊಲೀಸರು ಅನೈತಿಕ ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಹೋಟೆಲ್‌‌ನ ಮೇನೇಜರ್‌ ಸಂಪತ್‌ ಕುಮಾರ್‌ ಮತ್ತು ಕೆಲಸಕ್ಕೆ ಇರುವ ಸಂತೋಷ್‌ ಮತ್ತು ದಿನೇಶ್‌ ಇವರು ಹೆಂಗಸರನ್ನು ಅನೈತಿಕ ವೇಶ್ಯವಾಟಿಕೆ ಚಟುವಟಿಕೆ ಮಾಡುವಂತೆ ಈ ರೂಮಿನಲ್ಲಿ ಇರಿಸಿದ್ದಾರೆಂದು ವರದಿಯಾಗಿದೆ.

ಲಾಡ್ಜ್‌‌ ನಲ್ಲಿ ಅನೈತಿಕ ವೇಶ್ಯಾವಟಿಕೆ ➤ ಇಬ್ಬರು ಮಹಿಳೆ ಸೇರಿ ಮೂವರು ವಶಕ್ಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್

(ನ್ಯೂಸ್ ಕಡಬ)newskadaba.com ಹೈದರಾಬಾದ್, ಫೆ.21. ಹೈದರಾಬಾದ್‌ನಿಂದ ಚೆನ್ನೈಗೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇದೆ ಎಂದು ಸುಳ್ಳು ಕರೆ ಮಾಡಿದ್ದ ಆರೋಪದ ಮೇಲೆ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್‌ನಿಂದ ಚೆನ್ನೈಗೆ ವಿಮಾನ ಹೊರಟಿದ್ದು, ಈ ವೇಳೆ ವಿಮಾನದಲ್ಲಿ ಬಾಂಬ್‌ ಇರುವ ಬಗ್ಗೆ ಕರೆ ಬಂದ ಹಿನ್ನೆಲೆಯಲ್ಲಿ, ವಿಮಾನವನ್ನು ಲಕ್ನೋದ ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿತ್ತು.  

ವಿಮಾನದಲ್ಲಿ ಬಾಂಬ್ ಇದೆ ಎಂದು ಬೆದರಿಕೆ ➤ ವ್ಯಕ್ತಿಯೋರ್ವ ಅರೆಸ್ಟ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪ್ರಾಪ್ತೆ ಮೇಲೆ ಆಸಿಡ್ ಎರಚಿ ಪರಾರಿ      ➤ ಯುವಕನೋರ್ವ ಅರೆಸ್ಟ್…!!!

(ನ್ಯೂಸ್ ಕಡಬ)newskadaba.com ಕನಕಪುರ, ಫೆ. 18. ಕನಕಪುರ ನಗರದ ಬೈಪಾಸ್‌ ರಸ್ತೆಯಲ್ಲಿ ಅಪ್ರಾಪ್ತೆ ಮೇಲೆ ಆಸಿಡ್ ಎರಚಿ ಪರಾರಿಯಾಗಿದ್ದ ಆರೋಪಿ ಯುವಕನನ್ನು ಬಂಧಿಸಿದ್ದಾರೆ. ಕುರುಪೇಟೆಯಲ್ಲಿ ಮೆಕ್ಯಾನಿಕ್‌ ಕೆಲಸ ಮಾಡುತ್ತಿದ್ದ ಸುಮಂತ್ (20) ಆರೋಪಿ ಯುವಕನಾಗಿದ್ದಾನೆ. ಕಳೆದ ಒಂದು ವರ್ಷದಿಂದ ಯುವಕ ಮತ್ತು ಅಪ್ರಾಪ್ತ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.  

ಅಪ್ರಾಪ್ತೆ ಮೇಲೆ ಆಸಿಡ್ ಎರಚಿ ಪರಾರಿ      ➤ ಯುವಕನೋರ್ವ ಅರೆಸ್ಟ್…!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಂಟ್ವಾಳ: ಲಕ್ಷಾಂತರ ಮೌಲ್ಯದ ಸೊತ್ತು ಕಳವು     ➤ ಇಬ್ಬರು ಆರೋಪಿಗಳು ಅರೆಸ್ಟ್…!!!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.17. ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಚರಣೆ ನಡೆಸಿದ ಬಂಟ್ವಾಳ ನಗರ ಪೋಲೀಸರ ತಂಡ ಸೊತ್ತುಗಳ ಸಹಿತ ಇಬ್ಬರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತುಂಬೆ ನಿವಾಸಿಗಳಾದ ಮೊಹಮ್ಮದ್ ಆನ್ಸಾಫ್, ನವಾಜ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರಿಂದ ಒಟ್ಟು 1.90 ಲಕ್ಷ ಮೌಲ್ಯದ ಸೊತ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ.  

ಬಂಟ್ವಾಳ: ಲಕ್ಷಾಂತರ ಮೌಲ್ಯದ ಸೊತ್ತು ಕಳವು     ➤ ಇಬ್ಬರು ಆರೋಪಿಗಳು ಅರೆಸ್ಟ್…!!! Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಡಬ, ಫೆ.17. ಕಡಬ ತಾಲೂಕು ಕಳಾರದ ಅಂಗಡಿಯೊಂದರ ಬಳಿ ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೋಡಿಂಬಾಳ ಗ್ರಾಮದ ಕುತ್ಯಾಡಿ ನಿವಾಸಿ  ಮಿರ್ಷಾದ್ (35) ಬಂಧಿತ ಅರೋಪಿ ಎಂದು ಗುರುತಿಸಲಾಗಿದೆ. ಫೆ.15 ರಂದು ಠಾಣಾ ಎಸ್.ಐ  ಸಿಬ್ಬಂದಿಗಳ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಕಳಾರ ಎಂಬಲ್ಲಿ ಕುಲ್ಕಿ ಜ್ಯೂಸ್‌ ಅಂಗಡಿ ಎದುರು ವ್ಯಕ್ತಿಯೋರ್ವ ರಸ್ತೆಯಲ್ಲಿ ತೂರಾಡುತ್ತಿದ್ದ ವೇಳೆ ವಿಚಾರಿಸಿದಾಗ ಯಾವುದೋ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ.    

ಕಡಬ: ಗಾಂಜಾ ಸೇವಿಸಿ ತೂರಾಟ      ➤ ವ್ಯಕ್ತಿ ಅರೆಸ್ಟ್..! Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಚೆಕ್ ಅಮಾನ್ಯ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಪುತ್ತೂರು, ಫೆ.14. ಪುತ್ತೂರು ನಗರ ಠಾಣೆಯಲ್ಲಿ 2015ರಲ್ಲಿ ಚೆಕ್ ಅಮಾನ್ಯ ಪ್ರಕರಣದಲ್ಲಿ ವಾರೆಂಟ್ ಜಾರಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಶಾಂತಿಗೋಡು ಗ್ರಾಮದ ಅಕ್ಷಿತ್ ಶೆಟ್ಟಿ ಎಂದು ಗುರುತಿಸಲಾಗಿದೆ. ಅಕ್ಷಿತ್ ಶೆಟ್ಟಿಯನ್ನು ಪುತ್ತೂರು ನಗರ ಠಾಣಾ ಪರಮೇಶ್ವರ ಮತ್ತು ಪಿ ಸಿ ಗಿರಿಪ್ರಶಾಂತ್ ಅವರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಪುತ್ತೂರು: ಚೆಕ್ ಅಮಾನ್ಯ ಪ್ರಕರಣ ➤ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ

ಬಾಬ ಸಾಹೇಬ್ ಅಂಬೇಡ್ಕರ್ ಅವಮಾನಿಸಿದ ಪ್ರಕರಣ !!     ➤ 7 ವಿದ್ಯಾರ್ಥಿಗಳು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.14. ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರಿಗೆ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್‌ ವಿಶ್ವವಿದ್ಯಾಲಯದ 7 ಜನ ವಿದ್ಯಾರ್ಥಿಗಳನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಸುಜಲ್, ಗೌರವ್ ಪವಾರ್, ನೈಮಾ ನಾಗ್ರಿಯಾ, ಪ್ರಣವ್ ಪಲ್ಲಿಯಿಲ್, ರಿಷಬ್ ಜೈನ್, ಸ್ಮೃತಿ ಆರ್.ಬಿ, ಆಸಿಶ್ ಅಗರ್ವಾಲ್ ಬಂಧಿತ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳೆಲ್ಲ ಬಿಬಿಎ 5ನೇ ಸೆಮಿಸ್ಟರ್​​ನಲ್ಲಿ ಓದುತ್ತಿದ್ದರು ಎನ್ನಲಾಗಿದೆ‌‌. ಕಾಲೇಜ್ ಫೆಸ್ಟ್ ಒಂದರ ಮ್ಯಾಡ್ ಆಯಡ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಬಿ. ಆರ್ ಅಂಬೇಡ್ಕರ್ ಬಗ್ಗೆ

ಬಾಬ ಸಾಹೇಬ್ ಅಂಬೇಡ್ಕರ್ ಅವಮಾನಿಸಿದ ಪ್ರಕರಣ !!     ➤ 7 ವಿದ್ಯಾರ್ಥಿಗಳು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ

(ನ್ಯೂಸ್ ಕಡಬ)newskadaba.com ಹಾಸನ. ಫೆ.12. ಹಾಸನದ ಉದ್ಯಮಿಯೋರ್ವನನ್ನು ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ನವೀನ್ ಮತ್ತು ಸಾಗರ್ ಬಂಧಿತ ಆರೋಪಿಗಳು ಎಂದು ಎಸ್ಪಿ ಹರಿರಾಮ್ ಶಂಕರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಹಾಸನದ ಗವೇನಹಳ್ಳಿ ಬೈಪಾಸ್ ಸಮೀಪ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಲಿಖಿತ್‌ ಗೌಡ (26) ಹತ್ಯೆಗೀಡಾದ ಯುವಕನಾಗಿದ್ದು, ಈತನ ಮೃತದೇಹ ಇತ್ತೀಚೆಗೆ ಹಾಸನ ತಾಲೂಕಿನ ಯೋಗೀಹಳ್ಳಿ ಅರಣ್ಯದಲ್ಲಿ ಪತ್ತೆಯಾಗಿತ್ತು ಎನ್ನಲಾಗಿದೆ.  

ಉದ್ಯಮಿ ಅಪಹರಿಸಿ ಹತ್ಯೆ ಪ್ರಕರಣ ➤ ಇಬ್ಬರು ಆರೋಪಿಗಳ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top