arrest

ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣ..! ➤ ಒಂದು ತಿಂಗಳ ಬಳಿಕ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಗಳೂರು, ಮಾ.03. ಹಂಪನಕಟ್ಟೆಯಲ್ಲಿನ ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 1 ತಿಂಗಳ ಬಳಿಕ ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಝಿಕ್ಕೋಡ್ ಕೊಯಿಲಾಂಡಿಯ ಶಿಫಾಝ್ (33) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಈತನನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ಅತ್ತಾವರದ ನಿವಾಸಿ ರಾಘವ(50) ಎಂಬವರನ್ನು ಚೂರಿಯಿಂದ ಇರಿದು ಕೊಲೆಗೈದು ದರೋಡೆ ಮಾಡಿಕೊಂಡು ಮುಸುಕುದಾರಿ ಪರಾರಿಯಾಗಿದ್ದ. ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದರು.

ಜ್ಯುವೆಲ್ಲರಿಗೆ ನುಗ್ಗಿ ದರೋಡೆ – ಕೊಲೆ ಪ್ರಕರಣ..! ➤ ಒಂದು ತಿಂಗಳ ಬಳಿಕ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು: ನಿವೃತ್ತ ಮಹಿಳಾ ಸರ ದೋಚಿದ್ದ ಖದೀಮನ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಇತ್ತೀಚಿಗೆ ನಿವೃತ್ತ ಮಹಿಳಾ ಪೊಲೀಸ್‌ ಇನ್ಸ್ ಪೆಕ್ಟರ್‌ವೊಬ್ಬರಿಂದ ಚಿನ್ನದ ಸರ ದೋಚಿದ್ದ ಚಾಲಾಕಿ ಖದೀಮನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಉಲ್ಲಾಳ ನಿವಾಸಿ ದರ್ಶನ್‌ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ರು ಮೌಲ್ಯದ 76.4 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮೂಡಲಪಾಳ್ಯ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಕಾಲೋನಿ ನಿವಾಸಿ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಗೀತಾರೆಡ್ಡಿ ಅವರು ಮನೆ ಮುಂದೆ ಕಸ ಗುಡಿಸುವಾಗ ಸರ ಕಳವು ಮಾಡಿ ಕಿಡಿಗೇಡಿ ಪರಾರಿಯಾಗಿದ್ದ.

ಬೆಂಗಳೂರು: ನಿವೃತ್ತ ಮಹಿಳಾ ಸರ ದೋಚಿದ್ದ ಖದೀಮನ ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಕಡಬ, ಮಾ.02. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೆ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಕಡಬ ತಾಲೂಕಿನ ರಾಮಕುಂಜ ಗ್ರಾಮದ ವೆಂಕಪ್ಪ ಪೂಜಾರಿ ಎಂಬವರ ಪುತ್ರ ಕಿಶೋರ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಡಬ ಠಾಣಾ ಹೆಚ್.ಸಿ ರಾಜುನಾಯ್ಕ ಮತ್ತು ಪಿಸಿ ಸಿರಾಜುದ್ದಿನ್ ಅವರು ಮಂಗಳೂರಿನಲ್ಲಿ ದಸ್ತಗಿರಿ ಮಾಡಿ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಕಡಬ: 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್ Read More »

ಕರಾವಳಿ

ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು       ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.28. ಚಿಮೇನಿ ಪೊಲೀಸ್ ಠಾಣಾ ವ್ಯಾಪ್ತಿಯ ಕಯ್ಯೂರು ಆಲಂತಟ್ಟದಲ್ಲಿ ಹಾಡಹಗಲೇ ಮನೆಗಳ ಬೀಗ ಮುರಿದು ಚಿನ್ನಾಭರಣ ಮತ್ತು ನಗದು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಬಂಧಿಸಿದ್ದಾರೆ. ಕಾಞ೦ಗಾಡ್ ರೈಲ್ವೇ ಪರಿಸರದ ಪಿ. ಎಚ್. ಆಶಿಫ್(21) ಬಂಧಿತ ಆರೋಪಿಯಾಗಿದ್ದಾನೆ.  

ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು       ➤ ಆರೋಪಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಕ್ರಮ ನರಿ ಸಾಕಾಣೆ       ➤ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ನರಿಯನ್ನ ಅಕ್ರಮವಾಗಿ ಸಾಕಿದ್ದ ಆರೋಪಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಲಕ್ಷ್ಮಿಕಾಂತ್ (42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಲಕ್ಷ್ಮಿಕಾಂತ್ ಏಳು ತಿಂಗಳ ಹಿಂದೆ ನರಿಯನ್ನು ಅರಣ್ಯದಿಂದ ಹಿಡಿದು ತಂದಿದ್ದ. ಬಳಿಕ ತನ್ನ ಕೋಳಿ ಫಾರಂನ ಪಂಜರದಲ್ಲಿ ನರಿಯನ್ನ ಸಾಕಿಕೊಂಡಿದ್ದ.  

ಅಕ್ರಮ ನರಿ ಸಾಕಾಣೆ       ➤ಆರೋಪಿ ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ          ➤ ಓರ್ವ ಮಹಿಳೆ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಕೊಚ್ಚಿ, ಫೆ.28. ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಕೇರಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಶೀಲಾ ಸನ್ನಿ (51) ಎಂದು ಗುರುತಿಸಲಾಗಿದೆ. ಈಕೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ನಾಯರಂಗಡಿ ನಿವಾಸಿ. ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್​ ಇಟ್ಟುಕೊಂಡಿದ್ದಳು. ಆದರೆ, ಪಾರ್ಲರ್​ ಒಳಗೆ ಡ್ರಗ್ಸ್​ ಮತ್ತು ಸ್ಟ್ಯಾಂಪ್​ ಮಾರಾಟದಂತಹ ಅಕ್ರಮ ವ್ಯವಹಾರ ನಡೆಸುತ್ತಿದ್ದಳು. ಇರಿಂಜಲಕುಡ ವೃತ್ತದ ಕಚೇರಿಯಲ್ಲಿ ದೊರೆತ ರಹಸ್ಯ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ

ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ          ➤ ಓರ್ವ ಮಹಿಳೆ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಂಚನೆ ಪ್ರಕರಣ; ವಿದೇಶಿ ಪ್ರಜೆ ಅರೆಸ್ಟ್..!     

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ದೇಶದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ನೈಜೀರಿಯಾ ಪ್ರಜೆಯನ್ನು ಈಶಾನ್ಯ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೋಪಿ ನೈಜೀರಿಯಾದ ನೋಕೊಚಾ ಕಾಸ್ಮೀರ್‌ ಇಕೆಂಬಾ ಎಂಬಾತನಿಂದ ಸಿಮ್‌ ಕಾರ್ಡ್‌ಗಳು, ಆರು ಮೊಬೈಲ್‌ ಫೋನ್‌ಗಳು, ಒಂದು ಲ್ಯಾಪ್‌ಟಾಪ್‌, ಎರಡು ಡೆಬಿಟ್‌ ಕಾರ್ಡ್‌ ಹಾಗೂ ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.  

ವಂಚನೆ ಪ್ರಕರಣ; ವಿದೇಶಿ ಪ್ರಜೆ ಅರೆಸ್ಟ್..!      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರು ಢಿಕ್ಕಿ ಹೊಡೆದು ಮೂರುವರೆ ವರ್ಷದ ಮಗು ಮೃತಪಟ್ಟ ಪ್ರಕರಣ   ➤  ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.28. ಕಾರು ಢಿಕ್ಕಿ ಹೊಡೆದು ಮೂರುವರೆ ವರ್ಷದ ಬಾಲಕಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಕಾರು ಚಾಲಕ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ ದೆಹಲಿ ಪೊಲೀಸರು ಬಂಧಿಸಿದ್ದಾರೆ  ಎನ್ನಲಾಗಿದೆ. ಸಮರ್ಕ್ ಮಲಿಕ್ (20) ಬಂಧಿತ ಚಾಲಕ ಎಂದು ಗುರುತಿಸಲಾಗಿದೆ. ಈತ ಭಾರತೀಯ ವಾಯುಪಡೆಯ ಅಧಿಕಾರಿಯ ಪುತ್ರನೆಂದು ತಿಳಿದು ಬಂದಿದೆ. ಈತ ಚಲಾಯಿಸುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ .  

ಕಾರು ಢಿಕ್ಕಿ ಹೊಡೆದು ಮೂರುವರೆ ವರ್ಷದ ಮಗು ಮೃತಪಟ್ಟ ಪ್ರಕರಣ   ➤  ಆರೋಪಿ ಅರೆಸ್ಟ್..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ

(ನ್ಯೂಸ್ ಕಡಬ)newskadaba.com ಸುರತ್ಕಲ್, ಫೆ.28. ಗಾಂಜಾ ಅಮಲಿ ನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ನಡೆಸಿ, ರಿಕ್ಷಾಕ್ಕೆ ಹಾನಿ ಮಾಡಿದ ಘಟನೆಗೆ ಸಂಬಂಧಿಸಿದಂತೆ ಒಟ್ಟು ಮೂವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ. ಪಣಂಬೂರು ಮೋಗವೀರ ಮಹಾಸಭಾ ವ್ಯಾಪ್ತಿಯ ಸಮುದ್ರ ತೀರದಲ್ಲಿ ಘಟ‌ನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯವಾರ ಪ್ರತೀಕ್ ಎಂಬಾತನನ್ನು ಬಂಧಿಸಲಾಗಿತ್ತು. ನಿನ್ನೆ ಅಮಲ್ ಅಜಯನ್ ಮತ್ತು ನಿಶಾಂತ್ ಗೆ ಬಂಧಿಸಲಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ಸುನಿಲ್ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ ಎನ್ನಲಾಗಿದೆ.

ಸುರತ್ಕಲ್: ಗಾಂಜಾ ಅಮಲಿನಲ್ಲಿ ರಿಕ್ಷಾ ಚಾಲಕನಿಗೆ ಹಲ್ಲೆ ➤ ಮೂವರ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ      ➤  ಆರೋಪಿ ಅಂದರ್

(ನ್ಯೂಸ್ ಕಡಬ)newskadaba.com  ತುಮಕೂರು, ಫೆ.25. ತಿಪಟೂರು ಪಟ್ಟಣದಲ್ಲಿ ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆಯಾಗಿದ್ದು, ದಂಧೆಯಲ್ಲಿ ತೊಡಗಿದ್ದ ತಿಪಟೂರಿನ ವ್ಯಕ್ತಿ ವಿರುಪಾಕ್ಷಿ ಗೌಡ ಅಲಿಯಾಸ್ ಪಕ್ಷಿಗೌಡನನ್ನು ಮಾಲು ಸಮೇತ ಕೇರಳ ಪೊಲೀಸರು ಬಂಧಿಸಿದ್ದಾರೆ. ತಿಪಟೂರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೇ 15 ಲಕ್ಷದಷ್ಟು ಬೆಲೆಬಾಳುವ ತಿಮಿಂಗಿಲ ವಾಂತಿ ಮಾಲು ಮಾರಾಟ ಮಾಡಲು ಯತ್ನಿಸುತ್ತಿದ್ದ ವಿರುಪಾಕ್ಷಿಗೌಡ ಕೇರಳ ಪೊಲೀಸರಿಗೆ ಮಾಲು ಸಮೇತ ತಗ್ಲಾಕ್ಕೊಂಡಿದ್ದು, ಇದೀಗ ಅಂದರ್ ಆಗಿದ್ದಾನೆ. ಇನ್ನು ಮಾಲು ಕೊಂಡುಕೊಳ್ಳೋ ವೇಷದಲ್ಲಿ ಕೇರಳ ಪೊಲೀಸರು

ಇಂಟರ್ ನ್ಯಾಶನಲ್ ತಿಮಿಂಗಿಲ ವಾಂತಿ ದಂಧೆ ಪತ್ತೆ      ➤  ಆರೋಪಿ ಅಂದರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top