Accident

ಮರಕ್ಕೆ ಢಿಕ್ಕಿ ಹೊಡೆದ ಕಾರು ► ಚಾಲಕ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಶೃಂಗೇರಿ, ನ.14. ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಾವಡಿ ಸಮೀಪ ನಡೆದಿದೆ. ಮೃತರನ್ನು ಕಾರು ಚಾಲಕ ಅಡುಗೆ ವೃತ್ತಿ ಮಾಡುತ್ತಿದ್ದ ಉಳುವೆ ನಿವಾಸಿ ಸತ್ಯನಾರಾಯಣ(64) ಎಂದು ಗುರುತಿಸಲಾಗಿದೆ. ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಸತ್ಯನಾರಾಯಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮರಕ್ಕೆ ಢಿಕ್ಕಿ ಹೊಡೆದ ಕಾರು ► ಚಾಲಕ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಮೈಸೂರಲ್ಲಿ ಭೀಕರ ಅಪಘಾತ ► ಉಳ್ಳಾಲ ಮೂಲದ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ನ.14. ಇಲ್ಲಿನ ಹುಣಸೂರು ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತವೊಂದರಲ್ಲಿ ಮಂಗಳೂರು ನಗರದ ಉಳ್ಳಾಲ ಮೂಲದ ಮೂವರು ಸಾವನಪ್ಪಿದ ಘಟನೆ ಮಂಗಳವಾರ ಮುಂಜಾನೆ ನಡೆದಿದೆ. ಮೃತರನ್ನು ತೊಕ್ಕೊಟು ಸಮೀಪದ ಉಳ್ಳಾಲದ ಅಬ್ದುಲ್ ಹಮೀದ್(47), ಸಹೋದರ ಮಹಮದ್ ಇಕ್ಬಾಲ್(37) ಹಾಗೂ ಹಮೀದ್ ಪುತ್ರ ಶೇಕ್ ಹಕೀಬ್(18) ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ಸಂಜೆ ಪ್ರವಾಸಕ್ಕೆಂದು ತೊಕ್ಕೊಟ್ಟು ವಿನಿಂದ ಊಟಿಗೆ ಕುಟುಂಬ ಸಮೇತ ತೆರಳುತ್ತಿದ್ದರು. ಈ ವೇಳೆ ಮೈಸೂರಿನ ಬಸರಿಕಟ್ಟೆ ಬಳಿ ಟೆಂಪೋ

ಮೈಸೂರಲ್ಲಿ ಭೀಕರ ಅಪಘಾತ ► ಉಳ್ಳಾಲ ಮೂಲದ ಮೂವರು ಮೃತ್ಯು Read More »

ಕರಾವಳಿ

ಇಚಿಲಂಪಾಡಿ: ಬೈಕ್ ಢಿಕ್ಕಿ ► ಪಾದಚಾರಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ನ.13. ಬೈಕ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಧರ್ಮಸ್ಥಳ ರಾಜ್ಯ ಹೆದ್ದಾರಿಯ ಇಚಿಲಂಪಾಡಿ ಎಂಬಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೃತ ಮಹಿಳೆಯನ್ನು ಬೇರಿಕೆ ಕೊಪ್ಪ ನಿವಾಸಿ ಹೊನ್ನಮ್ಮ(59) ಎಂದು ಗುರುತಿಸಲಾಗಿದೆ. ಇವರು ತನ್ನ ಮನೆಯಿಂದ ನಡೆದುಕೊಂಡು ರಸ್ತೆ ಬದಿಯಲ್ಲಿ ತೆರಳುತ್ತಿದ್ದಾಗ ಬೈಕ್ ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.

ಇಚಿಲಂಪಾಡಿ: ಬೈಕ್ ಢಿಕ್ಕಿ ► ಪಾದಚಾರಿ ಮಹಿಳೆ ಮೃತ್ಯು Read More »

ಕರಾವಳಿ

ಆಂಬುಲೆನ್ಸ್ ನ ಟೈರ್ ಸ್ಪೋಟ ►ತಪ್ಪಿದ ಭಾರೀ ಅನಾಹುತ

(ನ್ಯೂಸ್ ಕಡಬ) newskadaba.com ಬೆಳಗಾವಿ, ನ.11. ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸಲೆಂದು ಬರುತ್ತಿದ್ದ 108 ಆಂಬುಲೆನ್ಸ್ ಪಲ್ಟಿಯಾದ ಘಟನೆ  ಅರಟಾಳ ಮತ್ತು ಹಾಲಳ್ಳಿ ಗ್ರಾಮದ ಚಿಕ್ಕೋಡಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತೆಲಸಂಗ ಮತ್ತು ಅರಟಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ ಆಂಬುಲೆನ್ಸ್ ಅರಟಾಳ ಗ್ರಾಮದ ಗರ್ಭಿಣಿ ಮಹಿಳೆಯನ್ನು ಕರೆತರಲು ಬರುತ್ತಿದ್ದ ಸಂದರ್ಭದಲ್ಲಿ ಅರಟಾಳ ಮತ್ತು ಹಾಲಳ್ಳಿ ಗ್ರಾಮದ ಮಧ್ಯೆ ಆಂಬುಲೆನ್ಸ್ ಪಲ್ಟಿಯಾಗಿದೆ. ಗರ್ಭಿಣಿಯನ್ನು ಕರೆತರಲು ಬರುತ್ತಿದ್ದಾಗ ಈ ಘಟನೆ ನಡೆದದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆಂಬುಲೆನ್ಸ್

ಆಂಬುಲೆನ್ಸ್ ನ ಟೈರ್ ಸ್ಪೋಟ ►ತಪ್ಪಿದ ಭಾರೀ ಅನಾಹುತ Read More »

ಕರಾವಳಿ

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ನ.11. ಅತಿವೇಗದಿಂದ ಬಂದ ಬೈಕೊಂದು ಬ್ರಿಡ್ಜ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಮಂಡ್ಯದ ಮಳವಳ್ಳಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 209ರ ಚಿಲ್ಲಾಪುರ ಗೇಟ್ ಬಳಿ ಶುಕ್ರವಾರ ತಡರಾತ್ರಿ  ನಡೆದಿದೆ. ಹಲಗೂರಿನ ಪ್ರತಾಪ್(23) ಬಾಣಸಮುದ್ರದ ಶಶಿ(24) ಮೃತ ದುರ್ದೈವಿಗಳು. ಘಟನೆಯಿಂದ ಪ್ರತಾಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶಶಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಅತಿವೇಗವೇ ಈ ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಡಿಕ್ಕಿ ► ಯುವಕರಿಬ್ಬರು ಮೃತ್ಯು Read More »

ಕರಾವಳಿ

ನೆಟ್ಟಣ: ಪಾದಚಾರಿಗೆ ಬೈಕ್ ಢಿಕ್ಕಿ ► ಸವಾರರಿಬ್ಬರು ಸೇರಿ ಮೂವರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.08. ಬೈಕೊಂದು ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ನೆಟ್ಟಣ ಸಮೀಪದ ನೆಲ್ಲಿಕಟ್ಟೆ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ಪಾದಚಾರಿ ಕಲ್ಲಾಜೆ 72 ಕಾಲನಿ ನಿವಾಸಿ ಮುತ್ತುವೀರನ್(72), ಬೈಕ್ ಸವಾರ ಬಾಲಸುಬ್ರಹ್ಮಣ್ಯ(36) ಹಿಂಬದಿ ಸವಾರೆ ಮಂಗಳಾದೇವಿ(34) ಗಾಯಗೊಂಡಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪುತ್ತೂರಿನ ಚೇತನಾ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಟ್ಟಣ: ಪಾದಚಾರಿಗೆ ಬೈಕ್ ಢಿಕ್ಕಿ ► ಸವಾರರಿಬ್ಬರು ಸೇರಿ ಮೂವರಿಗೆ ಗಾಯ Read More »

ಕರಾವಳಿ

ಉಳ್ಳಾಲ: ಬಸ್ – ಬೈಕ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಉಳ್ಳಾಲ, ನ.05. ಬಸ್ಸೊಂದು ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತ ಬೈಕ್ ಸವಾರನನ್ನು ಉಳ್ಳಾಲ್ ಬೈಲ್ ನಿವಾಸಿ ಮಹಮ್ಮದ್ ಸಯ್ಯದ್ ಶಲೀಲ್ ಎಂದು ಗುರುತಿಸಲಾಗಿದೆ. ತುಂಬೆ ಬಿ.ಎ. ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿಯಾಗಿರುವ ಇವರು ಕಿವಿಗೆ ಇಯರ್ ಫೋನ್ ಇಟ್ಟು ಮೊಬೈಲ್ ನಲ್ಲಿ ಸಂಭಾಷಣೆ ಮಾಡುತ್ತ ಬೈಕ್ ಚಲಾಯಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಬೈಕ್ ಸ್ಕಿಡ್

ಉಳ್ಳಾಲ: ಬಸ್ – ಬೈಕ್ ಢಿಕ್ಕಿ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ತೊಕ್ಕೊಟ್ಟು: ಲಾರಿ – ಆಕ್ಟಿವಾ ಢಿಕ್ಕಿ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ನ.05. ಲಾರಿಯೊಂದು ಹೋಂಡಾ ಆಕ್ಟಿವಾಗೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ರಾತ್ರಿ ತೊಕ್ಕೊಟ್ಟು ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಪಡೀಲ್ ನಿವಾಸಿ ರಾಜೇಶ್ ವೇಗಸ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿತುವ ಸಹ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಬಳಿಕ ಸ್ಥಳೀಯರು ಸ್ಥಳದಲ್ಲಿ ಜಮಾಯಿಸಿ ರಸ್ತೆ ಅವ್ಯವಸ್ಥೆಯ ಬಗ್ಗೆ ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಉಳ್ಳಾಲ ಇನ್ಸ್‌ಪೆಕ್ಟರ್

ತೊಕ್ಕೊಟ್ಟು: ಲಾರಿ – ಆಕ್ಟಿವಾ ಢಿಕ್ಕಿ ► ಓರ್ವ ಮೃತ್ಯು, ಇನ್ನೋರ್ವ ಗಂಭೀರ Read More »

ಕರಾವಳಿ

ಮಾಣಿ: ಆಟೋ ರಿಕ್ಷಾ ಪಲ್ಟಿ ► ಓರ್ವ ಮೃತ್ಯು, ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.04. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾವೊಂದು ಉರುಳಿಬಿದ್ದ ಪರಿಣಾಮ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಬುಡೋಳಿ ಸಮೀಪದ ಬೊಳ್ಳುಕಲ್ಲು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಬುಡೋಳಿಯಿಂದ ಮಾಣಿ ಕಡೆಗೆ ತೆರಳುತ್ತಿದ್ದ ರಿಕ್ಷಾದ ಮುಂಭಾಗದ ಚಕ್ರ ಕಳಚಿ ಬಿದ್ದ ಪರಿಣಾಮ ರಿಕ್ಷಾ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಣಿ: ಆಟೋ ರಿಕ್ಷಾ ಪಲ್ಟಿ ► ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »

ಕರಾವಳಿ

ದುಬೈನಲ್ಲಿ ರಸ್ತೆ ಅಪಘಾತ ► ದಕ್ಷಿಣ ಕನ್ನಡದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.03. ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ‌ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ. ಮೃತ ಯುವಕನನ್ನು ಮೂಡಬಿದಿರೆಯ ಗಂಟಾಲ್ಕಟ್ಟೆ ನಿವಾಸಿ ರಿಯಾಝ್ ಅಹಮ್ಮದ್(25 ) ಎಂದು ಗುರುತಿಸಲಾಗಿದೆ. ದುಬೈನ ಅಜ್ಮನ್ ನಲ್ಲಿ ಉದ್ಯೋಗದಲ್ಲಿದ್ದ ರಿಯಾಝ್ ಅಹಮದ್ ತನ್ನ ಮನೆ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈತ ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ದುಬೈಗೆ ತೆರಳಿದ್ದನೆನ್ನಲಾಗಿದ್ದು, ಮೃತದೇಹವನ್ನು ಊರಿಗೆ

ದುಬೈನಲ್ಲಿ ರಸ್ತೆ ಅಪಘಾತ ► ದಕ್ಷಿಣ ಕನ್ನಡದ ಯುವಕ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top