Accident

ಪಿಕಪ್‌: ಕಾರು ಡಿಕ್ಕಿ: ವಾಹನ ಜಖಂ, ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಸುಳ್ಯ, ನ. 26. ಅರಂಬೂರು ಬಳಿ ಮಡಿಕೇರಿಯಿಂದ ಸುಳ್ಯ ಕಡೆಗೆ ತರಕಾರಿ ತುಂಬಿಕೊಂಡು ಬರುತ್ತಿರುವ ಪಿಕಪ್ ವಾಹನಕ್ಕೆ ಸುಳ್ಯ ಕಡೆಯಿಂದ ಪೆರಾಜೆ ಕಡೆಗೆ ಹೊಗುತ್ತಿದ್ದ ಅಲ್ಟೊಕಾರು ಡಿಕ್ಕಿಯಾಗಿ ಕಾರು ಮತ್ತು ಪಿಕಪ್ ಸ್ವಲ್ಪ ಜಖಂಗೊಂಡ ಘಟನೆ ನ 24 ರಂದು ರಾತ್ರಿ ಸಂಭವಿಸಿದೆ. ಕಾರಿನ ಚಾಲಕನಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಅಪಘಾತ ಕುರಿತು ಸುಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.  

ಪಿಕಪ್‌: ಕಾರು ಡಿಕ್ಕಿ: ವಾಹನ ಜಖಂ, ಚಾಲಕನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ನಿಯಂತ್ರಣ ತಪ್ಪಿ ಕಾರು ಪಲ್ಟಿ: ತಂದೆ ಮೃತ್ಯು, ಮಗಳಿಗೆ ಗಂಭೀರ ಗಾಯ

(ನ್ಯೂಸ್ ಕಡಬ)newskadaba.com  ಹಾಸನ, ನ.25. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ಸ್ಥಳದಲ್ಲೇ ಚಾಲಕ ಸಾವನ್ನಪ್ಪಿದ ಘಟನೆ ಬೇಲೂರು ತಾಲೂಕಿನ ಕೊರಟಗೆರೆಯಲ್ಲಿ ನಡೆದಿದೆ. ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ಚಿಕ್ಕಮಗಳೂರು ಮೂಲದ ದಯಾನಂದ (46) ಎಂದು ಗುರುತಿಸಲಾಗಿದೆ. ಇನ್ನೂ ಅಪಘಾತದಲ್ಲಿ ದಯಾನಂದ್ ಅವರ ಮಗಳು ನಿಶ್ಮಿತಾ (16) ಗಂಭೀರವಾಗಿ ಗಾಯಗೊಂಡಿದ್ದಾಳೆ. ಆಕೆಯನ್ನು ಬೇಲೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಯಾನಂದ್ ಅವರು ಬೇಲೂರಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು ಅಲ್ಲೇ ವಾಸವಿದ್ದರು. ಇನ್ನೂ ಭಾನುವಾರ ಚಿಕ್ಕಮಗಳೂರಿಗೆ ತೆರಳಿದ್ದ ಅವರು ಇಂದು

ನಿಯಂತ್ರಣ ತಪ್ಪಿ ಕಾರು ಪಲ್ಟಿ: ತಂದೆ ಮೃತ್ಯು, ಮಗಳಿಗೆ ಗಂಭೀರ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಪಾದಾಚಾರಿಗಳಿಗೆ ಗುದ್ದಿ ಎಸ್ಕೇಪ್ : ಇಬ್ಬರು ದಾರುಣ ಸಾವು

(ನ್ಯೂಸ್ ಕಡಬ)newskadaba.com   ಮಂಗಳೂರು, ನ.25:  ಮಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ಕಾರೊಂದು ಪಾದಾಚಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಗುದ್ದಿ ಪರಾರಿಯಾಗಿರುವ ವಿಡಿಯೋ ವೈರಲ್ ಆಗುತ್ತಿದೆ. ರಸ್ತೆ ಮೇಲೆ ಅಷ್ಟೇನು ಟ್ರಾಫಿಕ್ ಇಲ್ಲದ ರಸ್ತೆಯಲ್ಲಿ ರಸ್ತೆದಾಟಲು ಇಬ್ಬರು ವ್ಯಕ್ತಿಗಳು ನಿಂತಿದ್ದು, ಈ ವೇಳೆ ಲಾರಿ ಮುಂದಕ್ಕೆ ಹೋಗಿದೆ. ಇದೇ ಸಂದರ್ಭದಲ್ಲಿ ಫುಟ್ ಪಾತ್ ಮೇಲೆ ನಿಂತಿದ್ದ ವ್ಯಕ್ತಿಗಳ ಮೇಲೆ ಏಕಾಏಕಿ ಕಪ್ಪುಬಣ್ಣದ ಕಾರೊಂದು ವೇಗವಾಗಿ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯಾದ ರಭಸಕ್ಕೆ ಇಬ್ಬರು ವ್ಯಕ್ತಿಗಳು

ಮಂಗಳೂರು: ಪಾದಾಚಾರಿಗಳಿಗೆ ಗುದ್ದಿ ಎಸ್ಕೇಪ್ : ಇಬ್ಬರು ದಾರುಣ ಸಾವು Read More »

ಕರಾವಳಿ

ಟ್ರಕ್‌- ಬಸ್ ಡಿಕ್ಕಿ : 5 ಮಂದಿ ಮೃತ್ಯು, 15 ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.com ಲಕ್ನೋ, ನ. 21. ಟ್ರಕ್‌ಗೆ ಹಿಂಬದಿಯಿಂದ ಡಬಲ್ ಡೆಕ್ಕರ್ ಬಸ್ ಡಿಕ್ಕಿ ಹೊಡೆದ ಪರಿಣಾಮ 5 ತಿಂಗಳ ಮಗು ಸೇರಿ ಐವರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಅಲಿಘರ್‌ನ ಯಮುನಾ ಎಕ್ಸ್‌ ಪ್ರೆಸ್‌ ವೇಯಲ್ಲಿ ನಡೆದಿದೆ. ದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್‌ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗುದ್ದಿದ ರಭಸಕ್ಕೆ ಬಸ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಪ್ರಯಾಣಿಕರು ಬಸ್ ಒಳಗೆ ಸಿಲುಕಿಕೊಂಡಿದ್ದಾರೆ. ಸ್ಥಳೀಯರು ಬಸ್ಸಿನ ಗಾಜುಗಳನ್ನು

ಟ್ರಕ್‌- ಬಸ್ ಡಿಕ್ಕಿ : 5 ಮಂದಿ ಮೃತ್ಯು, 15 ಮಂದಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಪುತ್ತೂರು, ನ. 21. ಸ್ವಿಫ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುಂಬ್ರ ಶೇಖಮಲೆಯಲ್ಲಿ ನಡೆದಿದೆ. ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ನೆಲಕ್ಕುರುಳಿದೆ. ಘಟನೆಯಲ್ಲಿ ಕಾರು ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.  

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 20. ಮಂಗಳೂರಿನ ಪದವಿನಂಗಡಿಯಲ್ಲಿ ಕಾರು ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮಂಗಳವಾರ ಮದ್ಯಾಹ್ನ ಸಂಭವಿಸಿದೆ. ಜಯಶೀಲ ಮೃತಪಟ್ಟವರು ಎಂದು ತಿಳಿದು ಬಂದಿದೆ. ಜಯಶೀಲರವರು ರಸ್ತೆಬದಿ ನಿಂತಿದ್ದ ವೇಳೆ ಕಾರು ಬಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆಯ ವೀಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ರಸ್ತೆ ಬದಿ ನಿಲ್ಲಿಸಿದ್ದ ಕಾರು ಏಕಾಏಕೀ ಬಂದು ಮುಂದೆ ನಿಂತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದು, ಆ ಕಾರು ಮತ್ತೊಂದು ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಸರಣಿ

ಪದವಿನಂಗಡಿ: ಸರಣಿ ಅಪಘಾತ; ಮಹಿಳೆ ಮೃತ್ಯು Read More »

ಕರಾವಳಿ

ರಸ್ತೆ ಅಪಘಾತ: ಇಬ್ಬರು ಪಾದಚಾರಿಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಉಡುಪಿ, ನ. 19. ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ 2024ರ ನ.17ರಂದು ಎರಡು ಪ್ರತ್ಯೇಕ ರಸ್ತೆ ಅಪಘಾತಗಳು ನಡೆದಿದ್ದು, ಪಾದಚಾರಿಗಳಿಗೆ ಗಾಯಗೊಂಡ ಘಟನೆ ನಡೆದಿದೆ. ಪುತ್ತೂರು ಗ್ರಾಮದ ಆಶೀರ್ವಾದದ ಬಳಿ ಸಂತೆಕಟ್ಟೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಬಸ್ಸನ್ನು ಚಾಲಕ ಅಜಾಗರೂಕತೆಯಿಂದ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆ ಬದಿ ನಿಂತಿದ್ದ ಬಾಗಲಕೋಟೆ ಜಿಲ್ಲೆಯ ಜೈನಬಿ ನದಾಫ್ (27) ಎಂಬ ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ. ಜೈನಬಿಯ ಎಡಗೈ ಮತ್ತು ಕೆನ್ನೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಉಡುಪಿಯ ಆದರ್ಶ

ರಸ್ತೆ ಅಪಘಾತ: ಇಬ್ಬರು ಪಾದಚಾರಿಗಳಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಡಿವೈಡರ್‌- ಕಾರು ಡಿಕ್ಕಿ – ಓರ್ವ ಮೃತ್ಯು..!

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ. 18. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಘಟನೆ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟಿದ್ದಾರೆ. ಮೃತರನ್ನು ಕುಂಬ್ರ ನಿವಾಸಿ ಎಂದು ಹೇಳಲಾಗಿದೆ. ಕಾರು ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.  

ಡಿವೈಡರ್‌- ಕಾರು ಡಿಕ್ಕಿ – ಓರ್ವ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಆಟೋ- ಕಾರು ಡಿಕ್ಕಿ: ನವಜೋಡಿ ಸೇರಿ 7 ಮಂದಿ ಮೃತ್ಯು..!

(ನ್ಯೂಸ್ ಕಡಬ) newskadaba.com ನ. 16.  ಮದುವೆ ಮುಗಿಸಿ ವರನ ಮನೆಗೆ ತೆರಳುತ್ತಿದ್ದ ವೇಳೆ ಕಾರು ಆಟೋ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ನವ ವಿವಾಹಿತ ಜೋಡಿ ಸೇರಿ 7 ಮಂದಿ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ. ಇಂದು ಮುಂಜಾನೆ ಘಟನೆ ನಡೆದಿದ್ದು, ದಟ್ಟ ಮಂಜು ಕವಿದಿದ್ದ ಕಾರಣ ವೇಗವಾಗಿ ಬಂದ ಕಾರು ಆಟೋಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಶುಕ್ರವಾರ ಸಂಜೆಯಷ್ಟೇ ಮದುವೆಯಾಗಿದ್ದ ನವಜೋಡಿ ಬಿಜ್ನೋರ್‌ನ ಧಂಪುರದಲ್ಲಿರುವ ವರನ ಮನೆಗೆ ಹಿಂತಿರುಗುತ್ತಿದ್ದ

ಆಟೋ- ಕಾರು ಡಿಕ್ಕಿ: ನವಜೋಡಿ ಸೇರಿ 7 ಮಂದಿ ಮೃತ್ಯು..! Read More »

ಕ್ರೈಮ್ ನ್ಯೂಸ್

ಜಾನುವಾರು ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕ ಪರಾರಿ

(ನ್ಯೂಸ್ ಕಡಬ) newskadaba.com ನ. 16.  ಅತಿ ವೇಗದಿಂದ ಮೀನು ಸಾಗಿಸುವ ಇನ್ಸುಲೇಟರ್‌ ವಾಹನ ಪಲ್ಟಿಯಾದ ಘಟನೆ ಶಿರೂರು ಕರಿಕಟ್ಟೆ ಬಳಿ ಸಂಭವಿಸಿದೆ. ಆದರೆ ಇದರಲ್ಲಿ ಮೀನಿನ ಬದಲು ಜಾನುವಾರುಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಗುರುವಾರ ರಾತ್ರಿ ಮಿನಿ ಇನ್ಸುಲೇಟರ್‌ ವಾಹನದೊಳಗೆ ಮೀನು ತುಂಬಿರುವ ಟ್ರೇ ಗಳನ್ನು ಇರಿಸಿಕೊಂಡು ಮಧ್ಯದಲ್ಲಿ ಎತ್ತುಗಳನ್ನು ಸಾಗಿಸಲಾಗುತ್ತಿತ್ತು. ವಾಹನವು ಭಟ್ಕಳದಿಂದ ಬೈಂದೂರು ಕಡೆಗೆ ಸಾಗುತ್ತಿದ್ದಾಗ ಕರಿಕಟ್ಟೆ ದುರ್ಗಾಂಬಿಕಾ ಹಾಲ್‌ ಹತ್ತಿರ ಪಲ್ಟಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು

ಜಾನುವಾರು ಸಾಗಿಸುತ್ತಿದ್ದ ವಾಹನ ಪಲ್ಟಿ: ಚಾಲಕ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top