Accident

ಬಂಟ್ವಾಳ: ಕಂಟೈನರ್ ಟ್ರಕ್ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ

(ನ್ಯೂಸ್‌ ಕಡಬ) newskadaba ಬಂಟ್ವಾಳ, ಮಾ.09: ಕಂಟೈನರ್ ಟ್ರಕ್ ಮತ್ತು ಖಾಸಗಿ ಬಸ್ ಗಳ ನಡುವೆ ಅಪಘಾತ ಸಂಭವಿಸಿ ಟ್ರಕ್ ಚಾಲಕ ಗಂಭೀರ ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಕಾಲೇಜು ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕನ್ನು ಸ್ಥಳೀಯರು ರಕ್ಷಿಸಿ ಕೂಡಲೇ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಖಾಸಗಿ ಬಸ್ ನಲ್ಲಿದ್ದ ಅನೇಕ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಿಸಿರೋಡಿನಿಂದ ಮೂಡಬಿದಿರೆಯ ಕಡೆಗೆ ಹೋಗುತ್ತಿದ್ದ ಕಂಟೇನರ್ ಹಾಗೂ ಮೂಡಬಿದಿರೆಯಿಂದ […]

ಬಂಟ್ವಾಳ: ಕಂಟೈನರ್ ಟ್ರಕ್ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ Read More »

ಕರಾವಳಿ

ತೇಜಸ್ವಿ ಯಾದವ್ ಬೆಂಗಾವಲು ವಾಹನ ಅಪಘಾತ- ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಪಾಟ್ನಾ, ಫೆ. 27. ಆರ್.ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಬೆಂಗಾವಲು ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಈ ಅಪಘಾತವು ಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಬದಿಯ ಮತ್ತೊಂದು ಕಡೆಯಿಂದ ಬರುತ್ತಿದ್ದ ವಾಹನಕ್ಕೆ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ತೇಜಸ್ವಿ ಯಾದವ್ ಬೆಂಗಾವಲು ವಾಹನ ಅಪಘಾತ- ಓರ್ವ ಮೃತ್ಯು Read More »

ಕ್ರೈಮ್ ನ್ಯೂಸ್

ಕಡಬ: ಜೀಪು-ಸ್ಕೂಟರ್ ನಡುವೆ ಡಿಕ್ಕಿ- ಅಪಘಾತದ ರಭಸಕ್ಕೆ ಜೀಪು ಮೇಲಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿ

(ನ್ಯೂಸ್ ಕಡಬ) neskadaba.com ಕಡಬ, ಫೆ. 26. ಜೀಪು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಸ್ಕೂಟರ್ ನಲ್ಲಿದ್ದ ಮೂವರು ಸಿನಿಮೀಯ ರೀತಿಯಲ್ಲಿ ಪವಾಡ ಸದೃಶ ಪಾರಾದ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪ ಹೊಸಮಠ ದೇರಾಜೆ ಬಳಿ ಫೆ. 24ರ ಶನಿವಾರದಂದು ನಡೆದಿದೆ.   ಹೊಸಮಠದಿಂದ ತೆರಳುತ್ತಿದ್ದ ಸ್ಕೂಟರ್ ದೇರಾಜೆ ಕ್ರಾಸ್ ಬಳಿ ಮುಖ್ಯ ರಸ್ತೆಗೆ ಬರುತ್ತಿದ್ದ ಜೀಪಿಗೆ ಡಿಕ್ಕಿಯಾಗಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಜೀಪಿನ ಬಾನೆಟ್ ಮೇಲೆ ಬಿದ್ದರೆ, ಮತೋರ್ವ ಸವಾರೆ ಜೀಪಿನ ಇನ್ನೊಂದು ಭಾಗಕ್ಕೆ ಎಸೆಯಲಟ್ಟು

ಕಡಬ: ಜೀಪು-ಸ್ಕೂಟರ್ ನಡುವೆ ಡಿಕ್ಕಿ- ಅಪಘಾತದ ರಭಸಕ್ಕೆ ಜೀಪು ಮೇಲಿಂದ ರಸ್ತೆಗೆ ಎಸೆಯಲ್ಪಟ್ಟ ಯುವತಿ Read More »

ಕರಾವಳಿ

ಪುತ್ತೂರು: ದ್ವಿಚಕ್ರ ವಾಹನ ಹಾಗೂ ಮಿನಿಬಸ್ ನಡುವೆ ಢಿಕ್ಕಿ – ಸವಾರ ಮೃತ್ಯು

(ನ್ಯೂಸ್ ಕಡಬ) neskadaba.com ಪುತ್ತೂರು, ಫೆ. 26. ದ್ವಿಚಕ್ರ ವಾಹನ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಢಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಬಕ ಸಮೀಪದ ಪೋಳ್ಯದಲ್ಲಿ ಭಾನುವಾರದಂದು ರಾತ್ರಿ ನಡೆದಿದೆ. ಮೃತ ಸವಾರನನ್ನ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್ ರಾಜ(45) ಎಂದು ಗುರುತಿಸಲಾಗಿದೆ. ಸ್ಕೂಟರ್ ಸಹಸವಾರರಾಗಿದ್ದ ಬಿಹಾರ ಮೂಲದ ಸುರೇಂದರ್ (29) ಮತ್ತು ಸನ್ನೀಫ್ (28) ಎಂಬವರು ಗಾಯಗೊಂಡಿದ್ದಾರೆ. ರವಿವಾರದಂದು ರಜೆಯಿದ್ದ ಕಾರಣ ಕ್ಲಿಫರ್ಡ್ ಮೊರಾಸ್ ಅವರು ಅಳಕೆಮಜಲಿನಲ್ಲಿ ಖಾಸಗಿ

ಪುತ್ತೂರು: ದ್ವಿಚಕ್ರ ವಾಹನ ಹಾಗೂ ಮಿನಿಬಸ್ ನಡುವೆ ಢಿಕ್ಕಿ – ಸವಾರ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನ ಅಪಘಾತ – ಸವಾರ ಗಂಭೀರ

(ನ್ಯೂಸ್ ಕಡಬ) neskadaba.com ಉಡುಪಿ, ಫೆ. 26. ದ್ವಿಚಕ್ರ ವಾಹನ ಅಪಘಾತಗೊಂಡು ಸವಾರ ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿಯ ಶಾರದಾ ಹೋಟೆಲ್ ಹತ್ತಿರದ ಸರ್ವಿಸ್ ರಸ್ತೆಯಲ್ಲಿ ನಡೆದಿದೆ. ಗಾಯಾಳುವನ್ನು ಕನ್ನರ್ಪಾಡಿಯ ಸೋಮನಾಥ್ ಶೆಟ್ಟಿ ಎಂದು ಗುರುತಿಸಲಾಗಿದೆ. ಹಿಂಬದಿಯಲ್ಲಿ ಕುಳಿತ ಸಹಸವಾರನಿಗೂ ಸಣ್ಣ ಪುಟ್ಟ ಗಾಯಗಳಾಗಿವೆ ಎನ್ನಲಾಗಿದೆ. ಈ ಕುರಿತು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನ ಅಪಘಾತ – ಸವಾರ ಗಂಭೀರ Read More »

ಕರಾವಳಿ

ಸಿಮೆಂಟ್ ಮಿಕ್ಸರ್ ಟ್ರಕ್ ಹರಿದು ಶಿಕ್ಷಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಪಣಂಬೂರು, ಫೆ. 24. ಕಾಂಕ್ರೀಟ್ ಮಿಕ್ಸರ್ ಲಾರಿ ಹರಿದು ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಪಣಂಬೂರು ಬೀಚ್ ಬಳಿ ಶುಕ್ರವಾರದಂದು ನಡೆದಿದೆ. ಮೃತ ಶಿಕ್ಷಕಿಯನ್ನು ಹೊನ್ನಕಟ್ಟೆ ನಿವಾಸಿ ಪೂರ್ಣಿಮಾ (29) ಎಂದು ಗುರುತಿಸಲಾಗಿದೆ. ಪೂರ್ಣಿಮಾ ತನ್ನ ಸಹೋದರಿಯ ಜೊತೆ ದ್ವಿಚಕ್ರ ವಾಹನದಲ್ಲಿ ಸಹ ಸವಾರೆಯಾಗಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ, ಅವರಿದ್ದ ಸ್ಕೂಟರ್ ಪಣಂಬೂರು ಗೇಲ್ ಗ್ಯಾಸ್ ಬಂಕ್ ಬಳಿ ತಲುಪಿದಾಗ ಹಿಂದಿನಿಂದ ಎಡಭಾಗದಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ನುಗ್ಗಿ ಬಂದ ಸಿಮೆಂಟ್ ಮಿಕ್ಸರ್

ಸಿಮೆಂಟ್ ಮಿಕ್ಸರ್ ಟ್ರಕ್ ಹರಿದು ಶಿಕ್ಷಕಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ದ್ವಿಚಕ್ರ ವಾಹನ ಪಲ್ಟಿ- ಮಹಿಳೆ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಫೆ. 24. ದ್ವಿಚಕ್ರ ವಾಹನವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಮಹಿಳೆಯೊಬ್ಬರು ಗಂಭೀರ ಗಾಯಗೊಂಡ ಘಟನೆ ತೋಟತ್ತಾಡಿ ಗ್ರಾಮದ ಮೂರ್ಜೆ ಎಂಬಲ್ಲಿ ಸಂಭವಿಸಿದೆ. ಗಾಯಗೊಂಡ ಮಹಿಳೆಯನ್ನು ನಾವೂರು ಗ್ರಾಮದ ನಿವಾಸಿ ಸಂಜೀವ ಎಂಬವರ ಪತ್ನಿ ಕಮಲ(45) ಎಂದು ಗುರುತಿಸಲಾಗಿದೆ. ಇವರು ಸಂತೋಷ್ ಎಂಬವರು ಚಲಾಯಿಸುತ್ತಿದ್ದ ಸ್ಕೂಟರ್ ನಲ್ಲಿ ಸಹ ಸವಾರರಾಗಿ ಪ್ರಯಾಣಿಸುತ್ತಿದ್ದ ವೇಳೆ ತೋಟತ್ತಾಡಿ ಗ್ರಾಮದ ಮೂರ್ಜೆ ಎಂಬಲ್ಲಿಗೆ ತಲುಪಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ಮಗುಚಿ ಬಿದ್ದಿದ್ದು, ರಸ್ತೆಗೆಸೆಯಲ್ಪಟ್ಟ

ದ್ವಿಚಕ್ರ ವಾಹನ ಪಲ್ಟಿ- ಮಹಿಳೆ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಮುಂಬೈಯಲ್ಲಿ ರಸ್ತೆ ಅಪಘಾತ – ಕಾಸರಗೋಡು ಕಯ್ಯಾರ್ ನಿವಾಸಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು, ಫೆ. 24. ಮುಂಬೈಯಲ್ಲಿ ನಡೆದ ಅಪಘಾತದಲ್ಲಿ ಕಾಸರಗೋಡು ಮೂಲದ ಕಯ್ಯಾರ್ ನಿವಾಸಿಯೋರ್ವರು ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಕಯ್ಯಾರ್ ಚನ್ನಿಕುಡೇಲ್ ನ ರೂಬನ್ ಚಾರ್ಲ್ಸ್ ಕ್ರಾಸ್ತ (39) ಎಂದು ಗುರುತಿಸಲಾಗಿದೆ. ಮುಂಬೈನಲ್ಲಿ ಉದ್ಯಮ ನಡೆಸುತ್ತಿದ್ದ ಇವರು, ಶುಕ್ರವಾರದಂದು ಸಂಜೆ ಬೈಕ್ ಮತ್ತು ಲಾರಿ ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ರೂಬನ್ ನನ್ನು ಸಮೀಪದ ಆಸ್ಪತ್ರೆಗೆ ತಲಪಿಸಿದರೂ ಅದಾಗಲೇ ಮೃತಪಟ್ಟಿದ್ದಾರೆ.

ಮುಂಬೈಯಲ್ಲಿ ರಸ್ತೆ ಅಪಘಾತ – ಕಾಸರಗೋಡು ಕಯ್ಯಾರ್ ನಿವಾಸಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್ ಸ್ಕಿಡ್ – ಸವಾರ ಮೃತ್ಯು, ಸಹಸವಾರ ಗಂಭೀರ

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 24. ಬೈಕ್ ಸ್ಕಿಡ್ ಆದ ಪರಿಣಾಮ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಪರ್ಪಲೆ ಗುಡ್ಡದ ತಿರುವಿನಲ್ಲಿ ಸಂಭವಿಸಿದೆ. ಮೃತರನ್ನು ಬ್ರಹ್ಮಾವರ ನಿವಾಸಿ ಆಕಾಶ್ ಕಾಂಚನ್(18) ಎಂದು ಗುರುತಿಸಲಾಗಿದೆ. ಈತ ನಿಟ್ಟೆಯ ಖಾಸಗಿ ಕಾಲೇಜಿನಲ್ಲಿ ಮೆಕ್ಯಾನಿಕ್ ಇಂಜಿನಿಯರಿಂಗ್ ಓದುತಿದ್ದ ಇವರು ಕಾಲೇಜಿನಲ್ಲಿ ವಾರ್ಷಿಕೋತ್ಸವ ಇದ್ದ ಕಾರಣ ಸ್ನೇಹಿತರೊಂದಿಗೆ ಪ್ರತ್ಯೇಕ ಬೈಕ್‌ಗಳಲ್ಲಿ ತೆರಳುತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಬೈಕ್ ಸ್ಕಿಡ್ – ಸವಾರ ಮೃತ್ಯು, ಸಹಸವಾರ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ದುಬೈ: ರಸ್ತೆ ಅಪಘಾತ- ಮಂಗಳೂರಿನ ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 23. ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವತಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಎಂದು ಗುರುತಿಸಲಾಗಿದೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ದುಬೈ: ರಸ್ತೆ ಅಪಘಾತ- ಮಂಗಳೂರಿನ ಯುವತಿ ಮೃತ್ಯು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top