3 ವರ್ಷದಿಂದ ಪಡಿತರ ಚೀಟಿಗೆ ಅರ್ಜಿಗೆ ಆಹ್ವಾನ ಸಿಗದೆ ಲಕ್ಷಾಂತರ ಬಡವರು BPLನಿಂದ ವಂಚಿತ; 7.76 ಲಕ್ಷ ನಕಲಿ ಕಾರ್ಡ್ ಪತ್ತೆ!
(ನ್ಯೂಸ್ ಕಡಬ) newskadaba.com, ಮೇ.02: ರಾಜ್ಯದಲ್ಲಿ ಲಕ್ಷಾಂತರ ಬಡವರು ಬಿಪಿಎಲ್ ಪಡಿತರ ಚೀಟಿಗಾಗಿ ಕಾಯುತ್ತಿದ್ದರೂ, ರಾಜ್ಯ ಸರಕಾರ ಮಾತ್ರ ಕಳೆದ 3 ವರ್ಷಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿಯನ್ನೇ ಕರೆದಿಲ್ಲ. ಇದರಿಂದ ಅರ್ಹ ಬಡವರು ಬಿಪಿಎಲ್ ಸೌಲಭ್ಯ ವಂಚಿತರಾಗಿದ್ದಾರೆ. ರಾಜ್ಯ ಸರಕಾರದ ಆಹಾರ , ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪ್ರಸ್ತುತ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನೆಲೆಯವರಿಗೆ, ಇ-ಶ್ರಮ್ ನೋಂದಾಯಿತ ಕಾರ್ಮಿಕರಿಗೆ, ಬುಡಕಟ್ಟು ಜನಾಂಗದವರಿಗೆ ಆದ್ಯತಾ ಪಡಿತರ ಚೀಟಿ ನೀಡುತ್ತಿದೆ. ಇದರ ಹೊರತಾಗಿ ಲಕ್ಷಾಂತರ ಮಂದಿ […]

