ಶಿರಾಡಿ ಸುರಂಗ ಮಾರ್ಗ ಯೋಜನೆ: ರೈಲ್ವೆ ಹಾಗೂ ರಸ್ತೆ ಇಲಾಖೆಯಿಂದ ಪ್ರತ್ಯೇಕ ಸಮೀಕ್ಷೆ – ಸಂಸದ ಕ್ಯಾ. ಬ್ರಿಜೇಶ್ ಚೌಟ
(ನ್ಯೂಸ್ ಕಡಬ) newskadaba.com ಜೂ.19 ಪ್ರಸ್ತಾವಿತ ಶಿರಾಡಿ ಸುರಂಗ ಮಾರ್ಗ ಯೋಜನೆಗೆ ಸಂಬಂಧಿಸಿದಂತೆ ರೈಲ್ವೆ ಮತ್ತು ರಸ್ತೆ ಸಾರಿಗೆ ಇಲಾಖೆಗಳು ಪ್ರತ್ಯೇಕವಾಗಿ ಸಮೀಕ್ಷೆ ನಡೆಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಈಗಾಗಲೇ ಜಂಟಿ ಸಮೀಕ್ಷೆ ನಡೆಸಲಾಗಿದ್ದರೂ,ರಸ್ತೆ ಇಲಾಖೆಗೆ 38 ಕಿ.ಮೀ ವ್ಯಾಪ್ತಿಯ ಇಳಿಜಾರು ತಿದ್ದುಪಡಿ ಸಾಕಾದರೆ, ರೈಲ್ವೆ ಇಲಾಖೆಗೆ 88 ಕಿ.ಮೀ ದೂರದ ಅವಶ್ಯಕತೆಯಿದೆ. ಪ್ರಸ್ತುತ ರಸ್ತೆ ಯೋಜನೆಯ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಮುಂಗಾರು ಅಧಿವೇಶನದ ವೇಳೆ ಅಧಿಕಾರಿಗಳನ್ನು ಭೇಟಿಯಾಗಿ ಹೆಚ್ಚಿನ ಮಾಹಿತಿ ಪಡೆಯಲಾಗುವುದು.ಮಂಗಳೂರು-ಬೆಂಗಳೂರು ವಂದೇ […]

