ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿರ್ಲಕ್ಷ್ಯದ ಆರೋಪ| ಮೂಲಭೂತ ತಪಾಸಣೆಯಿಲ್ಲದೆ ಚಿಕಿತ್ಸೆ, ಡಿ.ಎಚ್.ಒ. ಮಧ್ಯಪ್ರವೇಶದ ಬಳಿಕ ಪರೀಕ್ಷೆ- ಎದೆಯ ಸೋಂಕು ಪತ್ತೆ
(ನ್ಯೂಸ್ ಕಡಬ) newskadaba.com ,ಆ.06 ಕಡಬ: ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ಸಮರ್ಪಕ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿರುವ ಬೆನ್ನಲ್ಲೇ, ರೋಗಿಗಳಿಗೆ ಅಗತ್ಯ ಮೂಲಭೂತ ವೈದ್ಯಕೀಯ ತಪಾಸಣೆ ನಡೆಸದೆ ಔಷಧಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ. ಕೋಡಿಂಬಾಳದ ವ್ಯಕ್ತಿಯೊಬ್ಬರಿಗೆ ಜ್ವರ ಹಾಗೂ ದೈಹಿಕ ಬಳಲಿಕೆಯ ಲಕ್ಷಣಗಳಿದ್ದರೂ ಯಾವುದೇ ಮೂಲಭೂತ ಪರೀಕ್ಷೆ ನಡೆಸದೆ ಔಷಧಿ ನೀಡಲಾಗಿದ್ದು, ಬಳಿಕ ಜಿಲ್ಲಾ ಆರೋಗ್ಯಾಧಿಕಾರಿಗಳ ಮಧ್ಯಪ್ರವೇಶದ ನಂತರ ನಡೆಸಿದ ಪರೀಕ್ಷೆಯಲ್ಲಿ ಎದೆಯ ಸೋಂಕು ಪತ್ತೆಯಾಗಿ ಸೂಕ್ತ […]

