ಕಡೆಪಾಲದಲ್ಲಿ ಮಹಿಳೆಯ ನಿಗೂಢ ಮೃತ್ಯು ಆತ್ಮಹತ್ಯೆಯೋ? ವ್ಯವಸ್ಥಿತ ಕೊಲೆಯೋ? ತನಿಖೆ ಆರಂಭಿಸಿದ ಸುಳ್ಯ ಪೊಲೀಸ್
(ನ್ಯೂಸ್ ಕಡಬ) newskadaba.com, ಜು.20 : ಸಂಪಾಜೆ ಕಡೆಪಾಲದಲ್ಲಿ 22 ವರ್ಷದ ವಿವಾಹಿತ ಮಹಿಳೆ ಫಾತಿಮತ್ ನಿಶಾನ ಜುಲೈ 18ರಂದು ರಾತ್ರಿ ತೀವ್ರ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. 4 ವರ್ಷಗಳ ಹಿಂದೆ ಕಡೆಪಾಲದ ಅನ್ಸಾರ್ ಅವರೊಂದಿಗೆ ಮದುವೆಯಾಗಿದ್ದ ನಿಶಾನ ಅವರಿಗೆ 2.5 ವರ್ಷದ ಮಗುವಿದೆ. ಘಟನೆಯ ರಾತ್ರಿ ನಿಶಾನ ಅವರು ತಮ್ಮ ತಾಯಿ ಜುಬೈದಾ ಅವರಿಗೆ ಕರೆ ಮಾಡಿ ಗಂಡನ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದರು. ತಕ್ಷಣ ತಾಯಿ ಮಗಳ ಮನೆಗೆ ಧಾವಿಸಿದಾಗ ನಿಶಾನ ಮೃತದೇಹ […]

