ಉಡುಪಿಯಲ್ಲಿ ಸಂಗೀತ ಮ್ಯಾರಥಾನ್: ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ಗೆ ಭಾಜನರಾದ ವಿದುಷಿ ಸಂಗೀತಾ
(ನ್ಯೂಸ್ ಕಡಬ) newskadaba.com, ಆ.24 ಉಡುಪಿ: ಖ್ಯಾತ ಗಾಯಕಿ, ಆಕಾಶವಾಣಿಯ ಉನ್ನತ ದರ್ಜೆಯ ಕಲಾವಿದೆ ವಿದುಷಿ ಸಂಗೀತಾ ಬಾಲಚಂದ್ರ ಅವರು 25 ಗಂಟೆಗಳ ಕಾಲ ನಿರಂತರವಾಗಿ ಏಕವ್ಯಕ್ತಿ ದಾಸರಪದ ಗಾಯನ ‘ಪಂಚವಿಶಂತಿ’ ಮ್ಯಾರಥಾನ್ ಪೂರ್ಣಗೊಳಿಸಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಆಗಸ್ಟ್ 23ರ ಬೆಳಿಗ್ಗೆ 6.30ಕ್ಕೆ ಉಡುಪಿಯ ಗೀತಾ ಮಂದಿರದ ಶ್ರೀ ಪುತ್ತಿಗೆ ನರಸಿಂಹ ಸಭಾಂಗಣದಲ್ಲಿ ಪ್ರಾರಂಭವಾದ ಈ ಗಾಯನ ಯಜ್ಞವು ಆಗಸ್ಟ್ 24ರ ಬೆಳಿಗ್ಗೆ 7.40ಕ್ಕೆ ಮುಕ್ತಾಯಗೊಂಡಿತು.25 ಗಂಟೆಗಳ ಕಾಲ ನಿರಂತರವಾಗಿ […]

