ಮಂಗಳೂರು

ಆಟೋ ಚಾಲಕನಿಗೆ ಚೂರಿ ಇರಿತ ➤ ಆರೋಪಿ ಎಸ್ಕೇಪ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ ನ. 02: ಬಾಡಿಗೆ ನೆಪದಲ್ಲಿ ಕರೆದೊಯ್ದು ಆಟೋ ಚಾಲಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ಬೆಳ್ತಂಗಡಿಯ ಸೀಟು ಎಂಬಲ್ಲಿ ಭಾನುವಾರ ನಡೆದಿದೆ. ಉಜಿರೆ ಗ್ರಾಮದ ಗುರಿಪಳ್ಳ ಮಾಳಿಗೆ ಮನೆಯ ನಿವಾಸಿ ಸದಾನಂದ (58) ಎಂಬುವರ ಆಟೋ ರಿಕ್ಷಾವನ್ನು ಬಾಡಿಗೆ ಮಾಡಿಕೊಂಡು ಆರೋಪಿ ಗುರಿಪಳ್ಳ ನಿವಾಸಿ ಚಂದ್ರಶೇಖರ್ ಬೆಳ್ತಂಗಡಿಯ ನಿಡಿಗಲ್ ಬಳಿಯ ಸೀಟು ಎಂಬಲ್ಲಿ ಹೋಗಿದ್ದಾನೆ. ಸೀಟು ಕಾಡಿನ ಹತ್ತಿರವಾಗುತ್ತಿದ್ದಂತೆ ಆಟೋ ಚಾಲಕನಿಗೆ ಚೂರಿಯಿಂದ ಇರಿದು ಆರೋಪಿ ಪರಾರಿಯಾಗಿದ್ದಾನೆ.ಆಟೋ ಚಾಳಕ ಸದಾನಂದ ಎಂಬುವರ […]

ಆಟೋ ಚಾಲಕನಿಗೆ ಚೂರಿ ಇರಿತ ➤ ಆರೋಪಿ ಎಸ್ಕೇಪ್ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾನುವಾರದಂದು ಕರಾವಳಿಯಲ್ಲಿ 99 ಮಂದಿಯಲ್ಲಿ ಕೋವಿಡ್ ದೃಡ

 (ನ್ಯೂಸ್ ಕಡಬ) newskadaba.com ಕರಾವಳಿ ನ. 02: ಕರಾವಳಿಯಲ್ಲಿ ಕೋವಿಡ್ 19 ಕೊಂಚ ಮಟ್ಟಿಗೆ ಇಳಿಮುಖದತ್ತ ಮುಖಮಾಡಿತ್ತು. ಆದರೆ ಇದೀಗಾ ಮತ್ತೆ ಏರಿಕೆಯತ್ತ ಮುಖಮಾಡುತ್ತಿದೆ. ಭಾನುವಾರದಂದು ಕರಾವಳಿಯಲ್ಲಿ 99 ಮಂದಿಗೆ ಸೋಂಕು ತಗುಲಿದೆ.   ಇನ್ನು ಕಳೆದ ದಿನ ಒಟ್ಟು 67 ಮಂದಿ ಕೋವಿಡ್ ಸೋಂಕಿತರು ಆಸ್ಪತ್ರೆಯಿಂದ ದಿಸ್ಚಾರ್ಜ್ ಆಗಿದ್ದಾರೆ. ಇದೀಗಾ ಒಟ್ಟು ಸೋಂಕಿತರ ಸಂಖ್ಯೆ 30341 ಮಂದಿ ಆಗಿದ್ದಾರೆ. ಒಟ್ಟು ಜಿಲ್ಲೆಯಲ್ಲಿ 678 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.    

ಭಾನುವಾರದಂದು ಕರಾವಳಿಯಲ್ಲಿ 99 ಮಂದಿಯಲ್ಲಿ ಕೋವಿಡ್ ದೃಡ Read More »

ಕರಾವಳಿ

ಯಕ್ಷಗಾನ ಭಾಗವತರಾದ ಭವ್ಯಶ್ರೀ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

(ನ್ಯೂಸ್ ಕಡಬ) newskadaba.com ಸುಳ್ಯ ನ. 02:ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ, ಸುಳ್ಯ ತಾಲೂಕು ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.     ಈ ಸಂದರ್ಭದಲ್ಲಿ ಯಕ್ಷಗಾನ ಭಾಗವತರಾದ ಭವ್ಯಶ್ರೀ ಮಂಡೆಕೋಲು ಅವರಿಗೆ ಭಾನುವಾರ ಸುಳ್ಯ ದಲ್ಲಿ ಸುಳ್ಯ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕಾರ್ಯಕ್ರಮದಲ್ಲಿ ಶಾಸಕರಾದ ಎಸ್ ಅಂಗಾರರವವರು ಸೇರಿದಂತೆ ಆನೇಕ ಗಣ್ಯರು ಉಪಸ್ಥಿತರಿದ್ದರು.      

ಯಕ್ಷಗಾನ ಭಾಗವತರಾದ ಭವ್ಯಶ್ರೀ ರವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ Read More »

ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಅಭಿವೃದ್ಧಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರ ನಿರ್ಲಕ್ಷ್ಯಕ್ಕೆ ಮಲೆಕುಡಿಯ ಸಂಘದಿಂದ ಆಕ್ಷೇಪ

(ನ್ಯೂಸ್ ಕಡಬ) newskadaba.com  ಕುಕ್ಕೆ ಶ್ರೀ ಸುಬ್ರಹ್ಮಣ್ಯ, ನ. 01: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಅಭಿವೃದ್ದಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ಮಾಡಿರುವುದಾಗಿ ಆರೋಪಿಸಿ ಮಲೆಕುಡಿಯರ ಸಂಘ ವಲಯ ಸಮಿತಿ ಸುಬ್ರಹ್ಮಣ್ಯ ಪತ್ರಿಕಾ ಹೇಳಿಕೆ ಅ.31 ರಂದು ಬಿಡುಗಡೆ ಮಾಡಿದ್ದಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೇವಸ್ಥಾನಕ್ಕೆ ನೂತನವಾಗಿ ಅಭಿವೃದ್ಧಿ ಸಮಿತಿ ರಚನೆಯಾಗಿದ್ದು ಸ್ಥಳೀಯ ಮೂಲ ನಿವಾಸಿಗಳಾದ ಮಲೆ ಕುಡಿಯ ಬುಡಕಟ್ಟು ಸಮುದಾಯವನ್ನು ನಿರ್ಲಕ್ಷಿದ್ದಾರೆ. ಈ ಹಿಂದಿನ ನಿರ್ಧಾರದಂತೆ ಮನೆಕುಡಿಯ ಜನಾಂಗದವರ ಕೋರಿಕೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ : ಅಭಿವೃದ್ಧಿ ಸಮಿತಿಯಲ್ಲಿ ಮಲೆಕುಡಿಯ ಜನಾಂಗದವರ ನಿರ್ಲಕ್ಷ್ಯಕ್ಕೆ ಮಲೆಕುಡಿಯ ಸಂಘದಿಂದ ಆಕ್ಷೇಪ Read More »

ಕರಾವಳಿ

ಸುಳ್ಯ: ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ 65 ನೇ ಕನ್ನಡ ರಾಜ್ಯೋತ್ಸವ

(ನ್ಯೂಸ್ ಕಡಬ) newskadaba.com ಸುಳ್ಯ, ನ. 01.  ರಾಷ್ಟ್ರೀಯ ಹಬ್ಬಗಳ ದಿನಾಚರಣೆ ಸಮಿತಿ ಸುಳ್ಯ ತಾಲೂಕು ಇದರ ಆಶ್ರಯದಲ್ಲಿ 65 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸರಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು. ಸುಳ್ಯ ತಹಶೀಲ ದಾರ್ ಅನಂತ ಶಂಕರ್ ಬಿ. ಧ್ವಜಾರೋಹಣ ಮಾಡಿದರು. ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು.     ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ

ಸುಳ್ಯ: ಸರಕಾರಿ ಪದವಿ ಪೂರ್ವ ಕಾಲೇಜುನಲ್ಲಿ 65 ನೇ ಕನ್ನಡ ರಾಜ್ಯೋತ್ಸವ Read More »

ಕರಾವಳಿ

ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನ ➤ 10 ಮಂದಿ ಪೊಲೀಸ್ ವಶಕ್ಕೆ

(ನ್ಯೂಸ್ ಕಡಬ) newskadaba.com ಕಲಬುರ್ಗಿ, ನ. 01. ನಗರದಲ್ಲಿ ಇಂದು 65ನೇ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುತ್ತಿದೆ. ಇತ್ತ ಕನ್ನಡ ರಾಜ್ಯೋತ್ಸವ  ಬಹಿಷ್ಕರಿಸಿ, ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡಲು ಯತ್ನಿಸಿದ ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಸರ್ದಾರ್ ವಲ್ಲಭಭಾಯ್​ ಪಟೇಲ್ ವೃತ್ತದಲ್ಲಿ ಸೇರಿದ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯ ಧ್ವಜಾರೋಹಣಕ್ಕೆ ಯತ್ನಿಸಿ ಬಂಧನಕ್ಕೊಳಗಾದರು. ಯಾವುದೇ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಕಲ್ಯಾಣ ಕರ್ನಾಟಕ ಭಾಗವನ್ನು ಪದೇ ಪದೇ ನಿರ್ಲಕ್ಷಿಸಲಾಗುತ್ತಿದೆ.

ಪ್ರತ್ಯೇಕ ರಾಜ್ಯದ ಧ್ವಜಾರೋಹಣಕ್ಕೆ ಯತ್ನ ➤ 10 ಮಂದಿ ಪೊಲೀಸ್ ವಶಕ್ಕೆ Read More »

ಕರ್ನಾಟಕ

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ➤ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 01. ಈಗಾಗಲೇ ಈರುಳ್ಳಿ ಬೆಲೆ 100ರ ಗಡಿ ದಾಟಿ ಕಣ್ಣೀರು ತರಿಸುತ್ತಿದೆ. ಇದರ ಮಧ್ಯೆ ಗ್ರಾಹಕರಿಗೆ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆಯಾಗುವ ಮೂಲಕ ಗ್ರಾಹಕರಲ್ಲಿ ಮತ್ತೊಂದು ಶಾಕ್ ನೀಡಿದೆ.     ಕಳೆದ ಎರಡು ವರ್ಷಗಳಲ್ಲಿ ಆಲೂಗಡ್ಡೆ ಇದೇ ಮೊದಲ ಬಾರಿಗೆ ರೂ.50ಕ್ಕಿಂತ ಹೆಚ್ಚು ಬೆಲೆ ಏರಿಕೆ ಕಂಡಿದೆ. ಶೇ.44ರಷ್ಟು ಈರುಳ್ಳಿ ಬೆಲೆ ಏರಿಕೆ ಕಂಡಿದ್ದರೇ, ಶೇ.92ರಷ್ಟು ಆಲೂಗಡ್ಡೆ ಏರಿಕೆಯನ್ನು ಇದೇ ಮೊದಲ ಬಾರಿಗೆ ಎರಡು ವರ್ಷಗಳಲ್ಲಿ ಏರಿಕೆ ಕಂಡಿದೆ. ಈ

ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ➤ ಆಲೂಗೆಡ್ಡೆ ಬೆಲೆಯಲ್ಲಿ ಶೇ.90ರಷ್ಟು ಏರಿಕೆ Read More »

ಕರ್ನಾಟಕ

ವಿಡಿಯೋ ಮೂಲಕ ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ ಆರ್‌ಸಿಬಿ ತಂಡ

(ನ್ಯೂಸ್ ಕಡಬ) newskadaba.com ದೆಹಲಿ ನ. 01: ಕನ್ನಡ ರಾಜ್ಯೋತ್ಸವಕ್ಕೆ ವಿವಿಧ ಗಣ್ಯರು ಶುಭ ಕೋರುತ್ತಿದ್ದಾರೆ. ಅದೇ ರೀತಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಶುಭಾಶಯ ತಿಳಿಸಿದ್ದು, ತಂಡದ ಆಟಗಾರರು ಮಾತನಾಡಿ, ಸಂತಸ ವ್ಯಕ್ತಪಡಿಸಿದ್ದರೆ. ಆರ್‌ಸಿಬಿ ಟ್ವಿಟ್ಟರ್ ನ ಅಧಿಕೃತ ಖಾತೆಯ ಮೂಲಕ ವಿಡಿಯೋ ಟ್ವೀಟ್ ಮಾಡಿದ್ದು, ಈ ವಿಶೇಷ ವಿಡಿಯೋದಲ್ಲಿ ಮಾತನಾಡಿ ಶುಭ ಕೋರಿದ್ದಾರೆ. ತಂಡದ ನಾಯಕ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಸೇರಿದಂತೆ ದೇಶೀಯ ಆಟಗಾರರು ಕನ್ನಡದಲ್ಲೇ ಶುಭಾಶಯ ತಿಳಿಸಿದರೆ, ಎಬಿ ಡಿವಿಲಿಯರ್ಸ್ ಸೇರಿದಂತೆ ವಿದೇಶಿ

ವಿಡಿಯೋ ಮೂಲಕ ಕನ್ನಡದಲ್ಲೇ ರಾಜ್ಯೋತ್ಸವ ಶುಭಾಶಯ ತಿಳಿಸಿದ ಆರ್‌ಸಿಬಿ ತಂಡ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕತ್ತು ಕೊಯ್ದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ.!

(ನ್ಯೂಸ್ ಕಡಬ) newskadaba.com ಹಾಸನ ನ. 01: ಹೆಂಡತಿಯ ಕತ್ತು ಕೊಯ್ದು ಗಂಡನೇ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕೊಂಗಲಬೀಡು ಗ್ರಾಮದ ಬಳಿ ನಡೆದಿದೆ. ಶಾಲಿನಿ ಪತಿಯಿಂದಲೇ ಕೊಲೆಯಾದ ಮಹಿಳೆ. ಆರೋಪಿ ಪತಿ ಪುನೀತ್  ಸಂಜೆ  ಕಾರ್ಯಕ್ರಮಕ್ಕೆ ಹೋಗೋಣ ಎಂದು ಹೇಳಿ ಶಾಲಿನಿಯನ್ನ ಮನೆಯಿಂದ ಕರೆದುಕೊಂಡು ಬಂದಿದ್ದಾನೆ.   ಹಳ್ಳಿಮೈಸೂರು ರಸ್ತೆಯ ಕೊಂಗಲಬೀಡು ಗ್ರಾಮದ ಸಮೀಪ ಪತ್ನಿಯ ಕತ್ತನ್ನು ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಸ್ಥಳದಲ್ಲಿದ್ದ ಗ್ರಾಮಸ್ಥರು ಮಹಿಳೆಯ ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆಗೆ ಜನರು

ಕತ್ತು ಕೊಯ್ದು ಪತ್ನಿಯನ್ನ ಕೊಲೆಗೈದ ಪಾಪಿ ಪತಿ.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಾರ್ಕಳ : ಕಾರಣಿಕ ದೈವ ಕೊರಗಜ್ಜನ ಹಾಡು ಹಾಡಿ ವೈರಲ್ ಆದ ಪುಟ್ಟ ಪೋರ

(ನ್ಯೂಸ್ ಕಡಬ) newskadaba.com ಹಿರ್ಗಾನ ನ. 01: ಇಲ್ಲೊಬ್ಬ ಪುಟ್ಟ ಬಾಲಕ ತುಳುನಾಡಿನ ಪ್ರಸಿದ್ಧ ಕಾರಣಿಕ ದೈವ ಕೊರಗಜ್ಜ ನ ಹಾಡನ್ನ ಹಾಡಿ ಇದೀಗಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದಾನೆ.   ಇಂದಿನ ಮಕ್ಕಳು ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಗಂಟೆಗಟ್ಟಲೇ ಸಮಯ ವ್ಯಯಿಸುತ್ತಲೇ ಇರುತ್ತಾರೆ. ಆದರೆ ಈ ಪುಟ್ಟ ಬಾಲಕ ತನ್ನ ಮುಗ್ಧ ಭಕ್ತಿಯಿಂದ ತುಳುನಾಡ ಭಕ್ತಿಗೀತೆಗಳನ್ನು ಕೊಂಚವೂ ತಡವರಿಸದೇ ತಪ್ಪಿಲ್ಲದೇ ಲಯಬದ್ದವಾಗಿ ಹಾಡುತ್ತ ಆನಂದಿಸುತ್ತಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಈ ಪುಟ್ಟ ಬಾಲಕನ ಹೆಸರು ಕಾರ್ತಿಕ್,

ಕಾರ್ಕಳ : ಕಾರಣಿಕ ದೈವ ಕೊರಗಜ್ಜನ ಹಾಡು ಹಾಡಿ ವೈರಲ್ ಆದ ಪುಟ್ಟ ಪೋರ Read More »

ಕರಾವಳಿ
Scroll to Top