ನ್ಯೂಸ್ ಕಡಬ

ಮಕ್ಕಳನ್ನು ಕತ್ತು ಹಿಸುಕಿ ಕೊಂದ  ಪಾಪಿ ತಂದೆ

(ನ್ಯೂಸ್ ಕಡಬ) newskadaba.com ರಾಯಚೂರು, ಫೆ.12. ಜಿಲ್ಲೆಯ ದೇವದುರ್ಗ ತಾಲೂಕಿನ ಜಕ್ಕಲದೊಡ್ಡಿ ಗ್ರಾಮದಲ್ಲಿ ಪತ್ನಿಯ ಶೀಲಶಂಕಿಸಿ ಮಕ್ಕಳಾದ ಶಿವರಾಜ್(5) ಹಾಗೂ ರಾಜು(3)ನನ್ನು ಕತ್ತು ಹಿಸುಕಿ ಕೊಂದಿರುವ ಘಟನೆ ನಡೆದಿದೆ. ಹೆಂಡತಿ ಪ್ರಭಾವತಿ ಮೇಲೆ ಅನುಮಾನ ಪಡುತ್ತಿದ್ದ ಪತಿ ನಿಂಗಪ್ಪ, ಅಜ್ಜ-ಅಜ್ಜಿಯನ್ನು ಭೇಟಿ ಮಾಡಿಸೋದಾಗಿ  ಮಕ್ಕಳನ್ನು ಕರೆದೊಯ್ದು ಕತ್ತು ಹಿಸುಕಿ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಮಕ್ಕಳನ್ನು ಕಳೆದುಕೊಂಡ ತಾಯಿಯ ಆಕ್ರಂಧನ ಮುಗಿಲು ಮುಟ್ಟಿದೆ. ಈ ಸಂಭಂದವಾಗಿ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆ ನಿಂಗಪ್ಪನನ್ನ ಬಂಧಿಸಲಾಗಿದೆ.

ಮಕ್ಕಳನ್ನು ಕತ್ತು ಹಿಸುಕಿ ಕೊಂದ  ಪಾಪಿ ತಂದೆ Read More »

ಕರ್ನಾಟಕ

ಕುಡಿದ ಮತ್ತಿನಲ್ಲಿ ಯುವಕರ ಮಾರಾಮಾರಿ..  

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ಕುಡಿದ ನಶೆಯಲ್ಲಿ ಹೋಟೆಲ್​​​ನಲ್ಲಿ ಮಾರಾಮಾರಿಯಾಗಿರುವ ಘಟನೆ M.S.ರಾಮಯ್ಯ ಆಸ್ಪತ್ರೆ ಬಳಿ ಸಂಭವಿಸಿದೆ. ಬರ್ತಡೇ ಪಾರ್ಟಿ ಅಚರಣೆಗೆ ಹೋಟೆಲ್​​ಗೆ ಹೋಗಿದ್ದ ಯುವಕರ ಗುಂಪೊಂದು ಬರ್ತಡೇ ಆಚರಣೆ ನಂತರ ಬಿಲ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.  ಹೋಟೆಲ್ ಸಿಬ್ಬಂದಿ ಮತ್ತು ಯುವಕರ ನಡುವೆ ಗಲಾಟೆಯಾಗಿದ ಕಾರಣ ಯಶವಂತಪುರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.  

ಕುಡಿದ ಮತ್ತಿನಲ್ಲಿ ಯುವಕರ ಮಾರಾಮಾರಿ..   Read More »

ಕರ್ನಾಟಕ

ತುಮಕೂರು: ಬೋನಿಗೆ ಬಿದ್ದ  ಚಿರತೆ ➤ಕೊಂಚ ನಿರಾಳರಾದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ತುಮಕೂರು, ಫೆ.12.  ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಇಟ್ಟಿದ್ದ ಬೋನಿಗೆ ಹೆಣ್ಣು ಚಿರತೆ ಬಿದ್ದಿದ್ದು, ಹಲವು ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಇತ್ತೀಚಿನ  ದಿನಗಳಲ್ಲಿ ಕುರಿ, ಮೇಕೆ, ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆಯಿಂದ ಬೇಸತ್ತಿದ್ದ ಗ್ರಾಮಸ್ಥರು ಇದೀಗ ಚಿರತೆ ಸೆರೆಯಿಂದ ಕೊಂಚ ನಿರಾಳರಾಗಿದ್ದಾರೆ. ಇನ್ನು ಗುಬ್ಬಿ ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದ್ದಾರೆ.  

ತುಮಕೂರು: ಬೋನಿಗೆ ಬಿದ್ದ  ಚಿರತೆ ➤ಕೊಂಚ ನಿರಾಳರಾದ ಗ್ರಾಮಸ್ಥರು Read More »

ಕರ್ನಾಟಕ

ಖಾಸಗಿ ಬಸ್ ಅಪಘಾತ ➤ಯುವತಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಫೆ.12.   ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಧರೆಗೆ ಢಿಕ್ಕಿಯಾದ ಪರಿಣಾಮ ಓರ್ವ ಪ್ರಯಾಣಿಕ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಉಳಿದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುವ ಘಟನೆ ವಿಟ್ಲ ಸಮೀಪದ ಕೆಲಿಂಜ ಸಂಭವಿಸಿದೆ. ವಿಟ್ಲದಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಸೆಲಿನಾ ಬಸ್ ಅಪಘಾತದ ವೇಳೆ ಬಸ್ ನ ಮುಂಭಾಗದ ಗಾಜು ಒಡೆದು ಯುವತಿ ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ.ಯುವತಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಉಳಿದಂತೆ ಅನೇಕ ಪ್ರಯಾಣಿಕರಿಗೂ ಗಾಯವಾಗಿದ ಎಂದು

ಖಾಸಗಿ ಬಸ್ ಅಪಘಾತ ➤ಯುವತಿಗೆ ಗಂಭೀರ ಗಾಯ Read More »

ಕರ್ನಾಟಕ

➤ಎರಡನೇ ತರಗತಿ ಬಾಲಕನಿಗೆ ಮೋದಿಯಿಂದ ಪತ್ರ..

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12.  ಬೆಂಗಳೂರಿನ ಎರಡನೇ ತರಗತಿ ಬಾಲಕನಿಗೆ ಮೋದಿಯವರು ಪತ್ರ ಬರೆದಿದ್ದಾರೆ. ಮೋದಿಗೆ ಸಾಂತ್ವನ ಹೇಳಿದ್ದ ಆರುಷ್​ ಶ್ರೀನಿವಾಸ್​​​, ಮೋದಿ ತಾಯಿ ಹೀರಾಬಿನ್ ನಿಧನಕ್ಕೆ ಬಾಲಕನಿಂದ ಸಂತಾಪ ಸೂಚಿಸಿದ್ದ ಹೀಗಾಗಿ ಬಾಲಕನ ಪತ್ರಕ್ಕೆ ಮೋದಿ ಕೃತಜ್ಞತೆಯ ಉತ್ತರ ಕಳಿಸಿದ್ದಾರೆ. ನಿಮ್ಮ ಮನಸ್ಸಿನಲ್ಲಿ ನನಗೆ ಜಾಗ ಕೊಟ್ಟಿದ್ದಕ್ಕೆ ಕೃತಜ್ಞನಾಗಿದ್ದೇನೆ,  ನಿಮ್ಮ ಪ್ರೀತಿ ನನಗೆ ಶಕ್ತಿ ಮತ್ತು ಧೈರ್ಯ ಕೊಡುತ್ತದೆ ಎಂದು ಬಾಲಕನಿಗೆ ಬರೆದಿರುವ ಪತ್ರದಲ್ಲಿ ಪ್ರಧಾನ ಮಂತ್ರಿ ತಿಳಿಸಿದ್ದಾರೆ.    

➤ಎರಡನೇ ತರಗತಿ ಬಾಲಕನಿಗೆ ಮೋದಿಯಿಂದ ಪತ್ರ.. Read More »

ಕರ್ನಾಟಕ

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಇಸ್ತಾಂಬುಲ್, ಫೆ.12.  ಶತಮಾನದ ಭೀಕರವಾದ ಭೂಕಂಪಕ್ಕೆ ನಲುಗಿರುವ ಟರ್ಕಿ ಹಾಗೂ ಸಿರಿಯಾ ರಾಷ್ಟ್ರಗಳಲ್ಲಿ  ಮೃತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಒಟ್ಟು ಮೃತರ ಸಂಖ್ಯೆ 28 ಸಾವಿರಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ 24,617 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 3,575 ಮಂದಿ ಮೃತಪಟ್ಟಿದ್ದಾರೆ  ಎಂದು ವರದಿ ತಿಳಿಸಿದೆ. ಟರ್ಕಿಯಲ್ಲಿ 80 ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಉಭಯ ರಾಷ್ಟ್ರಗಳಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ.  

ಬದುಕು ಕಸಿದ ಭೂಕಂಪನ! ➤ಟರ್ಕಿ, ಸಿರಿಯಾದಲ್ಲಿ ಮೃತರ ಸಂಖ್ಯೆ 28,000ಕ್ಕೆ ಏರಿಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಸಾರಿಗೆ ನೌಕರರ ವೇತನ ಪರಿಷ್ಕರಣೆ ➤ ಸಚಿವ ಬಿ.ಶ್ರೀರಾಮುಲು ‌

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಫೆ.12. ಸಾರಿಗೆ ನೌಕರರಿಗೆ 7ನೇ ವೇತನ ಜಾರಿಗೆ ಕಷ್ಟವಾಗಬಹುದು. ಆದರೆ ವೇತನ ಪರಿಷ್ಕರಣೆಗೆ ಈಗಾಗಲೇ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಕಾರ್ಯ ಮಾಡಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಭರವಸೆ ನೀಡಿದ್ದಾರೆ. ಮೊಳಕಾಲ್ಮುರು ಪಟ್ಟಣದ ಹಳೆಯ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ನಿರ್ಮಿಸಲಾಗುತ್ತಿರುವ ಮೊಳಕಾಲ್ಮುರು ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ

ಸಾರಿಗೆ ನೌಕರರ ವೇತನ ಪರಿಷ್ಕರಣೆ ➤ ಸಚಿವ ಬಿ.ಶ್ರೀರಾಮುಲು ‌ Read More »

ಕರ್ನಾಟಕ

ಕಾರು ಮತ್ತು ಲಾರಿ  ಡಿಕ್ಕಿ  ➤ನವದಂಪತಿ ದುರ್ಮರಣ

(ನ್ಯೂಸ್ ಕಡಬ) newskadaba.com ತುಮಕೂರು, ಫೆ.11.   ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ನವದಂಪತಿಗಳ ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಮೃತಪಟ್ಟನೆ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಗೇಟ್ ಬಳಿ ನಡೆದಿದೆ. ಇಂದು ಮಧ್ಯಾಹ್ನ ಅಪಘಾತ ಸಂಭವಿಸಿದ್ದು ಮದುವೆಯಾಗಿ ಕೇವಲ ಒಂದೂವರೆ ತಿಂಗಳಾಗಿದ್ದು. ಸಾಫ್ಟ್ ವೇರ್ ಟೆಕ್ಕಿ ಜೋಡಿ ಮೃತಪಟ್ಟಿದೆ. ಮೃತರನ್ನು ಅರಸಿಕೆರೆ ಮೂಲದ 35 ವರ್ಷದ ರಘು ಮತ್ತು ಕೇವಲ ಒಂದೂವರೆ ತಿಂಗಳ ತಿಗಳನಹಳ್ಳಿ ಮೂಲದ 28 ವರ್ಷದ ಅನುಷಾ ಎಂದು

ಕಾರು ಮತ್ತು ಲಾರಿ  ಡಿಕ್ಕಿ  ➤ನವದಂಪತಿ ದುರ್ಮರಣ Read More »

ಕರ್ನಾಟಕ

ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾದರು

(ನ್ಯೂಸ್ ಕಡಬ) newskadaba.com ಕೊಪ್ಪಳ, ಫೆ.11.   ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿ ಮತ್ತೇ ಒಂದಾಗಿರುವ ದಂಪತಿಗಳು. ನಾಲ್ಕು ಜೋಡಿಯ ವಿವಾಹ ವಿಚ್ಚೇದನ ಅರ್ಜಿ ಏಕಕಾಲಕ್ಕೆ ಸುಖಾಂತ್ಯ ಕಂಡಿರೋ ಅಪರೂಪದ ಪ್ರಕರಣ ಗಂಗಾವತಿಯ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ನಡೆದಿದೆ.‌ ಸಣ್ಣ–ಪುಟ್ಟ ಜಗಳ ಮತ್ತು ಮನಸ್ತಾಪದ ಕಾರಣ ನೀಡಿ, ಗಂಗಾವತಿ ತಾಲೂಕಿನ ವಿವಿಧ ಗ್ರಾಮದ ದಂಪತಿಗಳಾದ ದ್ಯಾವಣ್ಣ ‌ನಾಯಕ–ಅನಸೂಯ, ವಿರೇಶ– ಜಾನಕಮ್ಮ, ಶ್ರೀನಿವಾಸ – ತುಳಸಿದೇವಿ, ನಿಂಗಪ್ಪ– ಮಮತಾ ಗಂಗಾವತಿ ಕೋರ್ಟ್​ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಸುಮಾರು ‌ಎರಡು ವರ್ಷಗಳ ವಿಚಾರಣೆ ನಂತರ, ಇಂದು ನಡೆದ ರಾಷ್ಟ್ರೀಯ ಲೋಕ್ ಅದಾಲತ್​ನಲ್ಲಿ ನಾಲ್ಕು ಜೋಡಿಗಳು ಮತ್ತೇ ಒಂದಾಗಿದ್ದಾರೆ

ವಿಚ್ಛೇದನಕ್ಕೆಂದು ಬಂದಿದ್ದ ಜೋಡಿಗಳು ಮತ್ತೆ ಒಂದಾದರು Read More »

ಕರ್ನಾಟಕ

DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ

(ನ್ಯೂಸ್ ಕಡಬ) newskadaba.com ಕೋಲಾರ, ಫೆ.11.  ಕೋಲಾರದ DCF ವೆಂಕಟೇಶ್​ ಬಳಿ ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆಯಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ನಿನ್ನೆ ಇಡೀ ದಿನ ದಾಳಿ ಮಾಡಿದ್ದರು. 8 ಕೆ.ಜಿ.ಬೆಳ್ಳಿ ,1 KG 300 ಗ್ರಾಂ ಚಿನ್ನಾಭರಣಗಳು ವಶಕ್ಕೆ ಪಡೆಯಲಾಗಿದೆ ವರದಿ ತಿಳಿಸಿದೆ. ಲೋಕಾಯುಕ್ತ ಕೃಷಿ ಜಮೀನು, ಸೈಟ್​ಗಳ ದಾಖಲೆ ವಶಕ್ಕೆ ಪಡೆದಿದ್ದಾರೆ. ವೆಂಕಟೇಶ್ ಸಾತನೂರು‌, ಮಾಗಡಿ‌, ಮಧುಗಿರಿಯಲ್ಲಿ ಕೃಷಿ ಭೂಮಿ ಹೊಂದಿದ್ದರು. DCF ಬೆಂಗಳೂರಿನ ವಿಜಯನಗರದಲ್ಲಿ ವಸತಿ ಕಟ್ಟಡ, ‌ ನೆಲಮಂಗ ಮತ್ತು ಮಾಲೂರುನಲ್ಲಿ ಸೈಟ್ ಹೊಂದಿದ್ದರು.

DCFವೆಂಕಟೇಶ್ ಮನೆ ಮೇಲೆ‌ ಲೋಕಾಯುಕ್ತ ದಾಳಿ ..  ➤ಕೆಜಿಗಟ್ಟಲೆ ಚಿನ್ನ-ಬೆಳ್ಳಿ ಪತ್ತೆ Read More »

ಕರ್ನಾಟಕ
Scroll to Top