ನ್ಯೂಸ್ ಕಡಬ

ಮನೆ ಮಂದಿಯನ್ನು ಬೆದರಿಸಿ ನಗ-ನಗದು ದರೋಡೆ

(ನ್ಯೂಸ್ ಕಡಬ) newskadaba.com ಕೊಣಾಜೆ, ಜೂ.30. ಮನೆಯೊಂದರ ಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ವೃದ್ಧ ದಂಪತಿಯನ್ನು ಬೆದರಿಸಿ ಸುಮಾರು ಒಂದು ಲಕ್ಷ ವೌಲ್ಯದ ನಗ-ನಗದು ದೋಚಿ ಪರಾರಿಯಾದ ಘಟನೆ ಇಂದು ಬೆಳಗ್ಗಿನ ಜಾವ ಕೊಣಾಜೆ ಗ್ರಾಮದ ನಡುಪದವಿನಲ್ಲಿ ನಡೆದಿದೆ. ದಸ್ತಾವೇಜು ಬರಹಗಾರರಾಗಿರುವ ನಡುಪದವು ನಿವಾಸಿ ಸದಾಶಿವಯ್ಯ ಎಂಬವರ ಮನೆಯಿಂದ ಈ ದರೋಡೆ ನಡೆದಿದೆ. ಸುಮಾರು 30 ಸಾವಿರ ರೂ. ನಗದು ಹಾಗೂ 20 ಗ್ರಾಮ ಚಿನ್ನಾಭರಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಕಳ್ಳರು ಮನೆಯ […]

ಮನೆ ಮಂದಿಯನ್ನು ಬೆದರಿಸಿ ನಗ-ನಗದು ದರೋಡೆ Read More »

ಕರಾವಳಿ

ಹದಿಹರೆಯದ ಮಕ್ಕಳು ಹಾದಿ ತಪ್ಪದಂತೆ ಜಾಗ್ರತೆ ವಹಿಸಬೇಕೇ…?

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.30. ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಮಕ್ಕಳೇ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರುವ ಪ್ರಕರಣಗಳು ಕಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಪಾಲಕರು ತಮ್ಮ ಮಕ್ಕಳ ಬಾಹ್ಯ ಚಟುವಟಿಕೆಗಳ ಮೇಲೆ ನಿಗಾ ಇಡಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಕರೆ ನೀಡಿದ್ದಾರೆ. ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ(ಮಾನಸಿಕ ವಿಭಾಗ) ನಗರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವಾರ್ತಾ ಮತ್ತು

ಹದಿಹರೆಯದ ಮಕ್ಕಳು ಹಾದಿ ತಪ್ಪದಂತೆ ಜಾಗ್ರತೆ ವಹಿಸಬೇಕೇ…? Read More »

ಕರಾವಳಿ

ಜಿಲ್ಲೆಯ ಪೊಲೀಸರಿಗಿಂತ ಮೊದಲು ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿ: ಹರಿಕೃಷ್ಣ ಬಂಟ್ವಾಳ್ ಕಿಡಿ

(ನ್ಯೂಸ್ ಕಡಬ) newskadaba.com ಜೂ.29. ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ಗಲಭೆಗಳು ಮತ್ತು ಕೋಮು ಹಿಂಸಾಚಾರಗಳಿಗೆ ಪೊಲೀಸರನ್ನು ಮಾತ್ರ ವರ್ಗಾವಣೆ ಮಾಡಿದರೆ ಸಾಕಾಗುವುದಿಲ್ಲ. ಇದರಿಂದ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ. ಎಲ್ಲದಕ್ಕೂ ಮೊದಲು ದಕ್ಷಿಣ ಕನ್ನಡದ ಉಸ್ತುವಾರಿ ಸಚಿವರಾದ ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿದರೆ ಜಿಲ್ಲೆಯಲ್ಲಿ ಸಂಪೂರ್ಣ ಶಾಂತಿ ನೆಲೆಸುತ್ತದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಸಂಸ್ಕಾರವೆಂಬುದು ಇದ್ದರೆ, ಈ ಮಣ್ಣಿನ ಸಂಸ್ಕೃತಿ ಗೊತ್ತಿದ್ದರೆ ಕೂಡಲೇ ರಮಾನಾಥ ರೈಯವರನ್ನು

ಜಿಲ್ಲೆಯ ಪೊಲೀಸರಿಗಿಂತ ಮೊದಲು ರಮಾನಾಥ ರೈಯವರನ್ನು ಎತ್ತಂಗಡಿ ಮಾಡಿ: ಹರಿಕೃಷ್ಣ ಬಂಟ್ವಾಳ್ ಕಿಡಿ Read More »

ಕರಾವಳಿ

ಕಡಬ: ವ್ಯಕ್ತಿ ಕಾಣೆ – ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.29. ಠಾಣಾ ವ್ಯಾಪ್ತಿಯ ಅಲಂಕಾರು ಗ್ರಾಮದ ಪಜ್ಜಡ್ಕ ನಿವಾಸಿ ದುಗ್ಗಣ್ಣ ಗೌಡ ಎಂಬವರ ಪುತ್ರ ಉಮ್ಮಣ್ಣ ಗೌಡ(54) ಬುಧವಾರದಂದು ಕಡಬಕ್ಕೆಂದು ಮನೆಯಿಂದ ತೆರಳಿದವರು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮನೆಯವರು ಸಂಬಂಧಿಕರ ಮನೆಯಲ್ಲೆಲ್ಲಾ ವಿಚಾರಿಸಿದ್ದು, ಪತ್ತೆಯಾಗದೆ ಇರುವುದರಿಂದ ಉಮ್ಮಣ್ಣ ಗೌಡರ ತಮ್ಮ ಉಮೇಶ್ ಗೌಡ ಗುರುವಾರದಂದು ಕಡಬ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾದವರ ಚಹರೆ: 5’6″ ಎತ್ತರವಾಗಿದ್ದು, ಸಪೂರ ಶರೀರ, ಬಿಳಿ ತಲೆಗೂದಲನ್ನು ಹೊಂದಿರುತ್ತಾರೆ. ಎಣ್ಣಿ ಕಪ್ಪು ಮೈಬಣ್ಣ ಹೊಂದಿದ್ದು,

ಕಡಬ: ವ್ಯಕ್ತಿ ಕಾಣೆ – ದೂರು Read More »

ಕರಾವಳಿ

ಸಾಲ ಮನ್ನಾ ಮಾಡಿರುವ ಸಿಎಂ ಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.29. ರೈತರ ಸಾಲ ಮನ್ನಾ ಖುಷಿಯಲ್ಲಿರುವ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಖಡಕ್ ವಾರ್ನಿಂಗ್ ಕೊಟ್ಟಿದೆ. ರೈತರ ಉದ್ದಾರಕ್ಕಾಗಿ, ಉತ್ತಮ ರಸ್ತೆಗಳ ನಿರ್ಮಾಣದ ಹೆಸರಿನಲ್ಲಿ ಬಹುರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ತೆಗೆದುಕೊಂಡಿರುವ ಸಾಲವನ್ನೇ ಸರಿಯಾಗಿಯೇ ಬಳಸಿಕೊಂಡಿಲ್ಲ ಅಂತ ಗರಂ ಆಗಿ ಪತ್ರ ಬರೆದಿದೆ. ಮಿಲಿಯನ್ ಗಟ್ಟಲೆ ಸಾಲವಿದೆ.  ಆದರೆ ಆ ಯೋಜನೆಗಳು ಮಾತ್ರ ಶೇ.20ರಷ್ಟು ಮುಗಿದಿಲ್ಲ. ಇನ್ನು ಆ ಯೋಜನೆಗೆ ನಿಗದಿಪಡಿಸಿರುವ ಸಮಯ ಶೇ. 60ರಷ್ಟು ಮುಗಿದಿದೆ ಅಂತಾ ಖಾರವಾಗಿ ಪತ್ರ

ಸಾಲ ಮನ್ನಾ ಮಾಡಿರುವ ಸಿಎಂ ಗೆ ಕೇಂದ್ರದಿಂದ ಖಡಕ್ ಎಚ್ಚರಿಕೆ Read More »

ರಾಷ್ಟ್ರೀಯ ನ್ಯೂಸ್

ಆಯತಪ್ಪಿ ಬಿದ್ದು ಗಾಯಗೊಂಡ ಪೇಜಾವರ ಶ್ರೀ ►ಗಾಯದ ನಡುವೆಯೂ ದೈನಂದಿನ ಚಟುವಟಿಕೆಗಳಲ್ಲಿ ತಲ್ಲೀನರಾದ ಶ್ರೀಗಳು

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 28. ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಬುಧವಾರ ಗರ್ಭಗುಡಿಯಲ್ಲಿ ಕಾಲು ಜಾರಿ ಬಿದ್ದ ಪರಿಣಾಮ ಭುಜಕ್ಕೆ ಗಾಯವಾಗಿರುವ ಬಗ್ಗೆ ವರದಿಯಾಗಿದೆ. ಬುಧವರ ಪೂಜೆ ನೆರವೇರಿಸಿ ಹಿಂತಿರುಗುವಾಗ ಪೇಜಾವರ ಶ್ರೀ ಆಯತಪ್ಪಿ ಬಿದ್ದರೆನ್ನಲಾಗಿದೆ. ಇದರಿಂದ ಅವರ ಭುಜಕ್ಕೆ ಗಾಯವಾಗಿದ್ದು, ಬಲಭುಜದ ಚರ್ಮ ಕಿತ್ತು ಹೋಗಿದೆ‌. ತಕ್ಷಣವೇ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿ ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದ್ದರೂ, ಶ್ರೀಗಳು ತನ್ನ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ ಎನ್ನಲಾಗಿದೆ.

ಆಯತಪ್ಪಿ ಬಿದ್ದು ಗಾಯಗೊಂಡ ಪೇಜಾವರ ಶ್ರೀ ►ಗಾಯದ ನಡುವೆಯೂ ದೈನಂದಿನ ಚಟುವಟಿಕೆಗಳಲ್ಲಿ ತಲ್ಲೀನರಾದ ಶ್ರೀಗಳು Read More »

ಕರ್ನಾಟಕ

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಕೋರೆ ಮಾಲಿಕನೋರ್ವನ ಮೇಲೆ ರೌಡಿ ಬ್ಲೇಡ್ ಸಾದಿಕ್ ಹಾಗೂ ತಂಡ ದಾಳಿ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ಬುಧವಾರ ಸಂಜೆ ನಡೆದಿದೆ. ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಕಾರಿನಲ್ಲಿ ಬಂದ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬ್ಲೇಡ್ ಸಾದಿಕ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಆತನ ಐವರು ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದಾರೆ. ಗಾಯಾಳು ಖಾದರ್ ನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್ Read More »

ಕರಾವಳಿ

ಮಗನಿಂದ ತಂದೆಯ ಬರ್ಬರ ಕೊಲೆ ►ಅರ್ಧ ಗಂಟೆ ತಂದೆಯನ್ನು ಕೊಚ್ಚಿದ ಮಗ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.28. ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರಿನ ಮೈಲಿ ಮನೆ ಎಂಬಲ್ಲಿ ಬುಧವಾರದಂದು ನಡೆದಿದೆ. ಮೈಲಿ ಮನೆ ನಿವಾಸಿ ಕೃಷ್ಣ (60) ಎಂಬವರೇ ತನ್ನ ಮಗನಿಂದಲೇ ಕೊಲೆಯಾದ ನತದೃಷ್ಟ. ಮಗ ನಾಗ (35) ಎಂಬಾತ ಕುಡಿದ ಮತ್ತಿನಲ್ಲಿ ತನ್ನ ತಂದೆಯನ್ನು ೫೦ ಮೀಟರ್ ಅಟ್ಟಾಡಿಸಿಕೊಂಡು ಬಂದು ಅರ್ಧಗಂಟೆಗೂ ಹೆಚ್ಚು ಕಾಲ ತಂದೆಯ ದೇಹವನ್ನು ಕೊಚ್ಚಿದ್ದು, ಬರ್ಬರವಾಗಿ ಕೊಲೆಗೈದಿದ್ದಾನೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ

ಮಗನಿಂದ ತಂದೆಯ ಬರ್ಬರ ಕೊಲೆ ►ಅರ್ಧ ಗಂಟೆ ತಂದೆಯನ್ನು ಕೊಚ್ಚಿದ ಮಗ Read More »

ಕರ್ನಾಟಕ

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.28. ಪ್ರವಾಸಕ್ಕೆಂದು ಬಂದಿದ್ದ ತುಮಕೂರು ಮೂಲದ ಇಬ್ಬರು ಯುವಕರು ಸಮುದ್ರ ಸ್ನಾನಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾದ ಘಟನೆ ಉಳ್ಳಾಲದ ಮೊಗವೀರಪಟ್ನದಲ್ಲಿ ಇಂದು ಬೆಳಗ್ಗೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಗಳಾದ ಅಯಾಝ್(19) ಹಾಗೂ ಶಾರೂಕ್(19) ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾದವರಾಗಿದ್ದಾರೆ. ಉಳ್ಳಾಲ ದರ್ಗಾಕ್ಕೆ ಆಗಮಿಸಿದ್ದ ಇವರು ಸ್ನಾನಕ್ಕೆಂದು ಸಮುದ್ರಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾದರೆನ್ನಲಾಗಿದೆ. ಇದೇ ವೇಳೆ ಸಮುದ್ರಪಾಲಾಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಅವರನ್ನು

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು Read More »

ಕರಾವಳಿ

2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುವ ವೇಳೆ ಕಡಬ ಪೊಲೀಸರು 2017ನೇ ಇಸವಿಯ ಬದಲು 2012ನೇ ಇಸವಿಯ ರಶೀದಿಗಳನ್ನು ನೀಡುತ್ತಿದ್ದಾರೆ ಎಂದು ದಂಡ ಹಾಕಿಸಿಕೊಂಡಿರುವ ವಾಹನ ಚಾಲಕರು ಆರೋಪಿಸಿದ್ದಾರೆ. ಕಡಬ ಪೊಲೀಸರು ಜೂ.26 ರಂದು ಕಡಬ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಪತ್ರ ಸರಿ ಇಲ್ಲದ ಹಾಗೂ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ದಂಡ ವಿಧಿಸಿದ್ದರು. ಈ ವೇಳೆ 26.06.2017 ಎಂದು ನಮೂದಿಸುವ ಬದಲು 26.06.2012 ಎಂದು

2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು Read More »

ಕರಾವಳಿ
Scroll to Top