ನ್ಯೂಸ್ ಕಡಬ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಆಗಮನ

(ನ್ಯೂಸ್ ಕಡಬ) newskadaba.com.ಮಂಗಳೂರು ,ಜು.31: ದ.ಕ ಜಿಲ್ಲೆಗೆ ಭೇಟಿ ನೀಡಲು ಶುಕ್ರವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರಿಗೆ ದ.ಕ ಜಿಲ್ಲಾ ಕಾಂಗ್ರೆಸ್ ನಾಯಕರಿಂದ ಭವ್ಯ ಸ್ವಾಗತ ಸಿಕ್ಕಿದೆ. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಬಿ.ರಮಾನಾಥ ರೈ,ಅಭಯ ಚಂದ್ರ ಜೈನ್ ,ವಿನಯ ಕುಮಾರ್ ಸೊರಕೆ,ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ಐವನ್ ಡಿ ಸೋಜ,ಯು.ಆರ್. ಸಭಾಪತಿ ಹಾಗೂ ಇತರ ಕಾಂಗ್ರೆಸ್ […]

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಆಗಮನ Read More »

ಕರಾವಳಿ

ಭಾರತೀಯರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ನಿರ್ಬಂಧ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.31: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಭಾರತೀಯರು ಕೊರೊನಾದಿಂದಾಗಿ ತಮ್ಮ ತಾಯ್ನಾಡಿಗೆ ಕಷ್ಟುಪಟ್ಟು ಮರಳಿದ್ದಾರೆ. ಆದರೆ ಕುವೈತ್‌ನಿಂದ ಸ್ವದೇಶಕ್ಕೆ ಮರಳಿದ್ದ ಅನೇಕ ಭಾರತೀಯರಿಗೆ ಈಗ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಭಾರತ ಸಹಿತ ಏಳು ದೇಶಗಳ ಜನರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ತಡೆ ನೀಡಿದೆ. ಬಾಂಗ್ಲಾದೇಶ, ಇರಾನ್, ನೇಪಾಳ, ಪಾಕಿಸ್ತಾನ, ಫಿಲಿಫೈನ್ಸ್ ಮತ್ತು ಶ್ರೀಲಂಕಾ ನಿರ್ಬಂಧಕ್ಕೆ ಒಳಗಾಗಿರುವ ಇತರ ರಾಷ್ಟ್ರಗಳು. ಕುವೈತ್ ಸರ್ಕಾರದ ಸಂವಹನ ಕೇಂದ್ರವು ಟ್ವಿಟ್ಟರ್‌ನಲ್ಲಿ ಇದನ್ನು ಪ್ರಕಟಿಸಿದ್ದು, ಎಷ್ಟು ಸಮಯದವರೆಗೆ

ಭಾರತೀಯರ ಪ್ರವೇಶಕ್ಕೆ ಕುವೈತ್ ತಾತ್ಕಾಲಿಕ ನಿರ್ಬಂಧ Read More »

ಕರಾವಳಿ

ಗುಬ್ಬಿ ಸಂತತಿ ಉಳಿಸಲು ಧ್ಯೇಯ ➤ ಪಕ್ಷಿಗಳಿಗೆ 3 ಎಕರೆ ಜೋಳದ ಹೊಲ ಮೀಸಲಿಟ್ಟ ವ್ಯಕ್ತಿ

(ನ್ಯೂಸ್ ಕಡಬ) newskadaba.com ದಾವಣಗೆರೆ,ಜು.31: ಮಾರಕ ಕೊರೋನಾದಿಂದಾಗಿ ಮನುಷ್ಯರಿಗಷ್ಟೇ ಅಲ್ಲದೇ, ಪ್ರಾಣಿ-ಪಕ್ಷಿಗಳಿಗೂ ಸಂಕಷ್ಟಗಳು ಎದುರಾಗಿವೆ. ಎಷ್ಟೋ ಕಡೆ ಬೀದಿನಾಯಿಗಳು ಆಹಾರವಿಲ್ಲದೇ ನರಳುತ್ತಿವೆ. ಇಂತಹ ಸಂದರ್ಭದಲ್ಲಿ ದಾವಣೆಗೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೊಲದಲ್ಲಿ ಜೋಳ ಬೆಳೆದು ಪಕ್ಷಿಗಳಿಗೋಸ್ಕರ ಮೀಸಲಿಟ್ಟಿದ್ದಾರೆ.ಸುಮಾರು 3 ಎಕರೆ ಹೊಲದಲ್ಲಿ ಜೋಳ ಬೆಳೆದಿರುವ ಚಂದ್ರಶೇಖರ್ ಸಂಕೋಳ, ಗುಬ್ಬಿ ಸಂತತಿ ಉಳಿಸುವ ಧ್ಯೇಯ ಹೊಂದಿದ್ದಾರೆ. ಆ ಮೂಲಕ ಮಾನವೀಯತೆ ಮೆರೆಯುವ ಕೆಲಸ ಮಾಡುತ್ತಿದ್ದಾರೆ.     ಅಲ್ಲದೇ ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರತಿದಿನ ಪಕ್ಷಿಗಳ ಚಿಲಿಪಿಲಿ ಶಬ್ದವನ್ನು ಕೇಳುತ್ತಾ

ಗುಬ್ಬಿ ಸಂತತಿ ಉಳಿಸಲು ಧ್ಯೇಯ ➤ ಪಕ್ಷಿಗಳಿಗೆ 3 ಎಕರೆ ಜೋಳದ ಹೊಲ ಮೀಸಲಿಟ್ಟ ವ್ಯಕ್ತಿ Read More »

ಕರಾವಳಿ, ಕರ್ನಾಟಕ

ಗದಗ : ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಟಿವಿ ತರಲು ತಾಳಿಯನ್ನೇ ಅಡವಿಟ್ಟ ತಾಯಿ

(ನ್ಯೂಸ್ ಕಡಬ) newskadaba.com ಗದಗ,ಜು.31:ಕೊರೋನಾ ಹಾವಳಿಯಿಂದ ಟಿವಿ ಹಾಗೂ ಮೊಬೈಲ್ ಮೇಲೆ ಶಿಕ್ಷಣ ಅವಲಂಬನೆಯಾಗಿದೆ. ಉಳ್ಳವರ ಮಕ್ಕಳು ಮೂಬೈಲ್ ಮೂಲಕ ದೊಡ್ಡ ಟಿವಿ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೇ ಬಡ, ಮದ್ಯಮ ವರ್ಗದ ಜನರಿಗೆ ಇದೊಂದು ದೊಡ್ಡ ಸಮಸ್ಯೆ ಎದುರಾಗಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಟಿವಿ ಖರೀದಿ ಮಾಡೋದು ಸವಾಲಿನ ಕೆಲಸವೇ ಸರಿ. ಹೌದು ಇಲ್ಲೊರ್ವ ತಾಯಿ ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿಯನ್ನಯ ಅಡವಿಟ್ಟು ಮಕ್ಕಳಿಗೆ ಟಿವಿ ಕೊಡಿಸಿದ್ದಾಳೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ

ಗದಗ : ಮಕ್ಕಳ ಆನ್​ಲೈನ್​ ಶಿಕ್ಷಣಕ್ಕೆ ಟಿವಿ ತರಲು ತಾಳಿಯನ್ನೇ ಅಡವಿಟ್ಟ ತಾಯಿ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಆನ್‌ಲೈನ್‌ ಮೂಲಕ ಮನೆ ಮನೆಗೆ ಮಧ್ಯ ಪೂರೈಕೆಗೆ ಸರ್ಕಾರ ಚಿಂತನೆ ➤ ಆಗಸ್ಟ್‌ನಿಂದ ಹೋಂ ಡೆಲಿವರಿ ಸೇವೆ ಜಾರಿ ಸಾಧ್ಯತೆ

(ನ್ಯೂಸ್ ಕಡಬ) newskadaba.com ಬೆಂಗಳೂರು: ಜು.30., ಕರ್ನಾಟಕ ಸರಕಾರ ಮದ್ಯವನ್ನು ಆನ್‌ಲೈನ್‌ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದು, ಉದ್ಯಮಕ್ಕೆ ಸಂಬಂಧಿಸಿದವರ ಜೊತೆ ಸೋಮವಾರ ಸಮಾಲೋಚನೆ ಹಮ್ಮಿಕೊಂಡಿದೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಮೊಬೈಲ್‌ ಆಪ್‌ ಮೂಲಕ ಹೋಮ್‌ ಡೆಲಿವರಿಗೆ ಅವಕಾಶ ನೀಡಲು ಉದ್ದೇಶಿಸಲಾಗಿದ್ದು, ಮುಂದಿನ ಹಂತದಲ್ಲಿ ರಾಜ್ಯಾದ್ಯಂತ ಚಿಲ್ಲರೆ ಮಾರಾಟ ಮಳಿಗೆ ಮತ್ತು ಎಂಎಸ್‌ಐಎಲ್‌ ಮಳಿಗೆಗಳ ಮೂಲಕ ಮನೆ ಮನೆಗೆ ಪೂರೈಕೆ ಮಾಡುವ ಬಗ್ಗೆ ಅಲೋಚಿಸಿದೆ. ಉದ್ಯಮಕ್ಕೆ ಸಂಬಂಧಿಸಿದ ಎಲ್ಲರಿಗೂ ತಮ್ಮ ತಮ್ಮ

ಆನ್‌ಲೈನ್‌ ಮೂಲಕ ಮನೆ ಮನೆಗೆ ಮಧ್ಯ ಪೂರೈಕೆಗೆ ಸರ್ಕಾರ ಚಿಂತನೆ ➤ ಆಗಸ್ಟ್‌ನಿಂದ ಹೋಂ ಡೆಲಿವರಿ ಸೇವೆ ಜಾರಿ ಸಾಧ್ಯತೆ Read More »

ಕರ್ನಾಟಕ

ಕೊರೋನಾ ಆತಂಕದ ನಡುವೆಯೂ ವರಮಹಾಲಕ್ಷ್ಮಿ ಪೂಜೆಗೆ ಖರೀದಿ ಜೋರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.30: ಕೊರೊನಾ ಸಂಕಷ್ಟದ ನಡುವೆ ವರಮಹಾಲಕ್ಷ್ಮಿ ಆಚರಣೆಗೆ ವಿವಿಧ ವಸ್ತುಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ.ದೇಶದ ದೊಡ್ಡ ಹಬ್ಬವಾದ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಸಿಲಿಕಾನ್ ಸಿಟಿ ಜನ ಭರದ ಸಿದ್ಧತೆ ನಡೆಸಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಹಲವು ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆಯಾದರೂ ನಗರದ ವಿವಿಧೆಡೆ ಇರುವ ಗಾಂಧಿಬಜಾರ್ ಮಾರುಕಟ್ಟೆ, ಲಾಲ್‍ಬಾಗ್, ಗಣೇಶ ದೇವಾಲಯ, ಹೂವಿನ ಮಾರುಕಟ್ಟೆ, ಮೈಸೂರು ರಸ್ತೆ, ಫ್ಲೈ ಓವರ್ ಕೆಳಭಾಗದ ಮಾರುಕಟ್ಟೆ, ಮಹಾಲಕ್ಷ್ಮಿ ಲೇಔಟ್, ರಾಜಾಜಿನಗರ,

ಕೊರೋನಾ ಆತಂಕದ ನಡುವೆಯೂ ವರಮಹಾಲಕ್ಷ್ಮಿ ಪೂಜೆಗೆ ಖರೀದಿ ಜೋರು Read More »

ಕರಾವಳಿ

ಸರ್ಕಾರ ಸುಭದ್ರವಾಗಿದೆ, ಮುಂದಿನ ಮೂರು ವರ್ಷವೂ ಯಡಿಯೂರಪ್ಪನವರೇ ಸಿಎಂ ➤ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜು.30: ಮುಂದಿನ ಮೂರು ವರ್ಷಕ್ಕೂ ಬಿ.ಎಸ್. ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರಲಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ ಈ ಕುರಿತು ಯಾರಿಗೂ ಸಂಶಯ ಬೇಡ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್​‌ ತಿಳಿಸಿದ್ದಾರೆ. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈ ಊಹಾಪೋಹಗಳಿಗೆ ಇಂದು ಚಾಮರಾಜನಗರದ ಕೊಳ್ಳೆಗಾಲದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್​ ‌ತೆರೆ ಎಳೆಯಲು ಮುಂದಾಗಿದ್ದಾರೆ.

ಸರ್ಕಾರ ಸುಭದ್ರವಾಗಿದೆ, ಮುಂದಿನ ಮೂರು ವರ್ಷವೂ ಯಡಿಯೂರಪ್ಪನವರೇ ಸಿಎಂ ➤ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಜುಲೈ 31 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆಶಿ

(ನ್ಯೂಸ್ ಕಡಬ) newskadaba.com ಮಂಗಳೂರು: ಜು.30., ಕರ್ನಾಟಕ ಪ್ರಾದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಜುಲೈ 31 ರಂದು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸುತ್ತಿರುವ ಡಿ. ಕೆ ಶಿವಕುಮಾರ್ ಅವರು ಕೇಂದ್ರ ಮಾಜಿ ಸಚಿವರಾದ ಡಾ. ಆಸ್ಕರ್ ಫೆರ್ನಾಂಡಿಸ್, ಮಂಗಳೂರು ಬಿಷಪ್ ರವನ್ನುಭೇಟಿ ಮಾಡಿ ಬಳಿಕ ದ.ಕ.ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ, ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಕುದ್ರೋಳಿ

ಜುಲೈ 31 ರಂದು ಮಂಗಳೂರಿಗೆ ಆಗಮಿಸಲಿದ್ದಾರೆ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆಶಿ Read More »

ಕರಾವಳಿ

ಮಂಗಳೂರು:ನಿಲ್ಲಿಸಿದ್ದ ಕಾರಿನಿಂದ ಹಣ ಕದ್ದ ಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ: ಜು.30., ಮಂಗಳೂರಿನಲ್ಲಿ ನಿಲ್ಲಿಸಿದ್ದ ಕಾರಿನಿಂದ ಹಣ ಕಳ್ಳತನ ಮಾಡಿದ್ದ ವ್ಯಕ್ತಿಯನ್ನು ಉಡುಪಿ ಜಿಲ್ಲಾ ಡಿಸಿಐಬಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮೂಡಬಿದ್ರೆ ತೋಡಾರು ನಿವಾಸಿ ಗುರುಪ್ರಸಾದ್ (32) ಎಂದು ಗುರುತಿಸಲಾಗಿದೆ, ಮಂಗಳೂರಿನ ಕ್ಲಾಕ್ ಟವರ್ ಬಳಿಯ ನಿಲ್ಲಿಸಿದ್ದ ಕಾರಿನಿಂದ ನಗದು ಹಣ ಕಳ್ಳತನ ಮಾಡಿದ್ದು ಉಡುಪಿ ಡಿಸಿಐಬಿ ಪೋಲೀಸ್ ಇನ್ಸ್ ಪೆಕ್ಟರ್ ಮಂಜಪ್ಪ ಡಿಆರ್. ರವರು ಖಚಿತ ಮಾಹಿತಿ ಮೇರೆಗೆ ಉಡುಪಿ ಡಿಸಿಐಬಿ ಸಿಬ್ಬಂದಿಯವರೊಂದಿಗೆ ಉಡುಪಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ

ಮಂಗಳೂರು:ನಿಲ್ಲಿಸಿದ್ದ ಕಾರಿನಿಂದ ಹಣ ಕದ್ದ ಕಳ್ಳನ ಬಂಧನ Read More »

ಕರಾವಳಿ

ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರ ದಾಳಿ ➤ 3 ಭಾರತೀಯ ಯೋಧರು ಹುತಾತ್ಮ

(ನ್ಯೂಸ್ ಕಡಬ) newskadaba.com ಇಂಫಾಲ್, ಜು.30: ಮಾಯನ್ಮಾರ್ ಗಡಿಯಲ್ಲಿನ ನಾಲ್ಕನೇ ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಮೂವರು ಯೋಧರು ಹುತಾತ್ಮರಾಗಿದ್ದಾರೆ.  ಮ್ಯಾನ್ಮಾರ್‌ನ ಗಡಿಯ ಸಮೀಪ ಮಣಿಪುರದ ಚಾಂಡೆಲ್ ಜಿಲ್ಲೆಯಲ್ಲಿ ಸ್ಥಳೀಯ ಗುಂಪಿನ ಪೀಪಲ್ಸ್ ಲಿಬರೇಶನ್ ಆರ್ಮಿಯ ಭಯೋತ್ಪಾದಕರು ಹೊಂಚು ಹಾಕಿ ದಾಳಿ ನಡೆಸಿದ್ದಾರೆ. ಇದರಲ್ಲಿ 4 ಅಸ್ಸಾಂ ರೈಫಲ್ಸ್ ಘಟಕದ ಮೂವರು ಯೋಧರು ಪ್ರಾಣ ಕಳೆದುಕೊಂಡಿದ್ದು ನಾಲ್ವರು ಗಾಯಗೊಂಡಿದ್ದಾರೆ.       ಗಸ್ತಿನಲ್ಲಿದ್ದ ಭಾರತೀಯ ಯೋಧರ ಮೇಲೆ ಭಯೋತ್ಪಾದಕರು ಐಇಡಿ ಸ್ಫೋಟಿಸಿದ್ದು

ಅಸ್ಸಾಂ ರೈಫಲ್ಸ್ ಯೂನಿಟ್ ಮೇಲೆ ಉಗ್ರ ದಾಳಿ ➤ 3 ಭಾರತೀಯ ಯೋಧರು ಹುತಾತ್ಮ Read More »

ಅಂತರ್ರಾಷ್ಟ್ರೀಯ ನ್ಯೂಸ್, ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top