ನ್ಯೂಸ್ ಕಡಬ

ಬಂಟ್ವಾಳ : ಚುನಾವಣೆ ಬಹಿಷ್ಕಾರ ಬ್ಯಾನರ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ.13: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಅರಮನೆಹಿತ್ಲು ಎಂಬಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಶನಿವಾರ ರಾತ್ರಿ ಬಳಿಕ ಕಂಡುಬಂದಿದೆ. ನಂದಾವರದಿಂದ ಅರಮನೆಹಿತ್ಲುವರೆಗೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುದಾನ ದೊರೆತರೂ ಕೆಲಸ ನಡೆಯದ ಕಾರಣ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ.

ಬಂಟ್ವಾಳ : ಚುನಾವಣೆ ಬಹಿಷ್ಕಾರ ಬ್ಯಾನರ್ Read More »

ಕರಾವಳಿ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಿಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.13: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ವಯೋಸಹಜ ಅನಾರೋಗ್ಯದಿಂದ (85) ನಿಧನರಾಗಿದ್ದಾರೆ. .ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ಅಂಬಲಪಾಡಿ ನಿವಾಸದಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಪ್ರವಚನಕಾರ, ಮಧ್ವ ಸಿದ್ಧಾಂತದ ಪ್ರತಿಪಾದಕ ಹಾಗೂ ಪತ್ರಕರ್ತರಾಗಿಯೂ ಗುರುತಿಸಿಕೊಂಡಿದ್ದ ಅವರು ನಟ ಡಾ.ವಿಷ್ಣುವರ್ಧನ್ ಗೆ ಆಧ್ಯಾತ್ಮಿಕ ಗುರುಗಳಾಗಿದ್ದರು. ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದು, ಕನ್ನಡದ ಪ್ರಮುಖ ಮೂರು ಚಲನಚಿತ್ರಗಳಾದ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯಕ್ಕೆ ಸಂಭಾಷಣೆಯನ್ನು ಬರೆದಿದ್ದರು.1936ರಲ್ಲಿ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿದ್ದ ಗೋವಿಂದಾಚಾರ್ಯರು ಅಪಾರ ವಿದ್ವತ್ ಉಳ್ಳವರಾಗಿದ್ದರು.ಬನ್ನಂಜೆ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ನಿಧನ Read More »

ಕರಾವಳಿ, ಕರ್ನಾಟಕ

ಡಿ.13ರ ಇಂದು ಬಳ್ಪದ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ

(ನ್ಯೂಸ್ ಕಡಬ) newskadaba.com ಬಳ್ಪ, ಡಿ.13: ಹಿಂದೂ ಜಾಗರಣ ವೇದಿಕೆ ವತಿಯಿಂದ ಇಂದು ಬಳ್ಪದ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.   ಹಿಂದೂ ಜಾಗರಣ ವೇದಿಕೆ ಬಳ್ಪ ಇದರ ಆಶ್ರಯದಲ್ಲಿ ಎ. ಜೆ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರ ಡಿ.13ರ ಇಂದು ಬಳ್ಪದಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಆರಂಭಗೊಂಡಿದ್ದು ಸಂಜೆವರೆಗೆ ರಕ್ತದಾನ ಶಿಬಿರ ಬಳ್ಪದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆಯುತ್ತಿದೆ.    

ಡಿ.13ರ ಇಂದು ಬಳ್ಪದ ಶಾಲಾ ವಠಾರದಲ್ಲಿ ರಕ್ತದಾನ ಶಿಬಿರ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋವಿಡ್-19 ಅಂಕಿ ಅಂಶ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13: ಡಿ.12 ರ ವರದಿಯಂತೆ 53 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 32,325ಕ್ಕೆ ಏರಿಕೆಯಾಗಿದೆ. ಇನ್ನೂ ಡಿ.12 ರ ವರದಿಯಂತೆ 43 ಜನ ಸೋಂಕಿನಿಂದ ಸುಧಾರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಚೇತರಿಸಿಕೊಂಡವರ ಸಂಖ್ಯೆ 31,236ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕಳೆದ ದಿನ ಇಬ್ಬರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಈವೆರಗೂ ಒಟ್ಟು 732 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.      

ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೋವಿಡ್-19 ಅಂಕಿ ಅಂಶ Read More »

ಕರಾವಳಿ

ಬಂಟ್ವಾಳ :ಪತಿಯ ನಾಮಪತ್ರ ತಿರಸ್ಕರಿಸುವಂತೆ ಪತ್ನಿಯಿಂದ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13:  ಗ್ರಾಪಂ ಚುನಾವಣೆ ಸಂದರ್ಭ ತನ್ನ ಪತಿ ಸಲ್ಲಿಸಿದ ನಾಮಪತ್ರವನ್ನು ತಿರಸ್ಕರಿಸಿ ಎಂದು ಪತ್ನಿಯೇ ಹೇಳಿದ ಪ್ರಕರಣ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿ ಡಿ.12 ರ ಕಳೆದ ದಿನ ನಡೆದಿದೆ. ನಾಮಪತ್ರ ಸಲ್ಲಿಸಿದ ವ್ಯಕ್ತಿಯ ವಿರುದ್ಧ ಕೆಲವು ಪ್ರಕರಣಗಳು ಇದ್ದು, ಈ ಹಿನ್ನೆಲೆಯಲ್ಲಿ ತಿರಸ್ಕರಿಸಬೇಕು ಎಂದು ಅವರ ಪತ್ನಿ ಮತ್ತು ಕೆಲವರು ಆಗಮಿಸಿ ಆಕ್ಷೇಪ ಸಲ್ಲಿಸಿದರು. ಈ ಕುರಿತು ಅವರು ದೂರನ್ನೂ ನೀಡಿದ್ದಾರೆ. ಆದರೆ, ಅಭ್ಯರ್ಥಿ ಅಪರಾಧಿ ಎಂದು ಯಾವುದೇ ಘೋಷಣೆ

ಬಂಟ್ವಾಳ :ಪತಿಯ ನಾಮಪತ್ರ ತಿರಸ್ಕರಿಸುವಂತೆ ಪತ್ನಿಯಿಂದ ಮನವಿ Read More »

ಕರಾವಳಿ, ಕರ್ನಾಟಕ

ಪುತ್ತೂರು: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.13: ಇಂದು ಪುತ್ತೂರಿನಲ್ಲಿ  KSRTC ಬಸ್ಸ್ ಗಳು ರಸ್ತೆಗಿಳಿಯದೆ ಬೆಂಬಲ ಸೂಚಿಸಿದೆ. ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪುತ್ತೂರಿನ KSRTC ಬಸ್ ನಿಲ್ದಾಣದಲ್ಲಿ ಬೆಳಗ್ಗಿನಿಂದ ಬಸ್ಸ್ಗಳು ಕಂಡು ಬಂದಿರಲಿಲ್ಲ. ಕಳೆದ ದಿನಡಿಪೋದಿಂದ ಬಸ್ ಗಳನ್ನು ತಂಗುದಾಣಕ್ಕೆ ತಂದು ಮುಷ್ಕರದಲ್ಲಿ ತೊಡಗಿಕೊಂಡಿದ್ದರು.ಇನ್ನು ದಿಢೀರ್ ಮುಷ್ಕರದಿಂದ ಮುಂಜಾನೆಯೇ KSRTC ವಿಭಾಗೀಯ ನಿಯಂತ್ರಣಾಧಿಕಾರಿ, ಡಿಪೋ ಮೆನೇಜರ್ ಅಧಿಕಾರಿ ವರ್ಗದವರು KSRTC ತಂಗುದಾಣಕ್ಕೆ ಆಗಮಿಸಿದ್ದರು.ಅದರಂತೆ ಇಂದು ಕೂಡ ¸ಸಾರಿಗೆ ಮುಷ್ಕರಕ್ಕೆ ಪುತ್ತೂರಿನಲ್ಲಿ ಬೆಂಬಲ

ಪುತ್ತೂರು: ಎರಡನೇ ದಿನಕ್ಕೆ ಕಾಲಿಟ್ಟ ಸಾರಿಗೆ ಮುಷ್ಕರ Read More »

ಕರಾವಳಿ

ಸಾರಿಗೆ ನೌಕರರ ಮುಷ್ಕರ ➤ ಆಸ್ತಿಪಾಸ್ತಿ ನಷ್ಟಕ್ಕೆಲ್ಲಾ ಕೋಡಿಹಳ್ಳಿ ಚಂದ್ರಶೇಖರ್ ಹೊಣೆ: ಸಿಎಂ ಬಿಎಸ್ವೈ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.13: ರೈತ ಸಂಘದ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರು ದುರುದ್ದೇಶದಿಂದ ಕೆಲವು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಮುಷ್ಕರ ನಡೆಸಲು ಹಾಗೂ ರಾಜ್ಯದ ವಿವಿಧೆಡೆ ಕೆ.ಎಸ್.ಆರ್.ಟಿ.ಸಿ ಹಾಗೂ ಬಿ.ಎಂ.ಟಿ.ಸಿ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಲು ಪ್ರಚೋದಿಸಿ, ಸಾರ್ವಜನಿಕ ಆಸ್ತಿಪಾಸ್ತಿಯ ನಷ್ಟಕ್ಕೆ ಹೊಣೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರೋಪಿಸಿದ್ದಾರೆ. ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಮುಖ್ಯಮಂತ್ರಿ ಅವರು, “ಸಾರಿಗೆ ಸಂಸ್ಥೆಯ ನೌಕರರು ಮುಷ್ಕರ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ.

ಸಾರಿಗೆ ನೌಕರರ ಮುಷ್ಕರ ➤ ಆಸ್ತಿಪಾಸ್ತಿ ನಷ್ಟಕ್ಕೆಲ್ಲಾ ಕೋಡಿಹಳ್ಳಿ ಚಂದ್ರಶೇಖರ್ ಹೊಣೆ: ಸಿಎಂ ಬಿಎಸ್ವೈ Read More »

ಕರ್ನಾಟಕ

ಮಂಗಳೂರು: ಬಿಜೆಪಿ ಬೆಂಬಲಿತ ಗ್ರಾ.ಪಂ ಅಭ್ಯರ್ಥಿ ಮೇಲೆ ಸುತ್ತಿಗೆಯಿಂದ ಹಲ್ಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.13: ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಮದರಸ ಧಾರ್ಮಿಕ ಗುರುವಿಗೆ ತಂಡವೊಂದು ಸುತ್ತಿಗೆಯಲ್ಲಿ ತಲೆಗೆ ಬಡಿದು ಕೊಲೆಗೆ ಯತ್ನಿಸಿರುವ ಘಟನೆ ಮಂಗಳೂರು ಹೊರವಲಯ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ತಡರಾತ್ರಿ ವೇಳೆ ನಡೆದಿದೆ.     ಅಸೈಗೋಳಿ ನಿವಾಸಿ ಹನೀಫ್ ನಿಜಾಮಿ (40) ಕೊಲೆಯತ್ನಕ್ಕೆ ಒಳಗಾದವರು. ಇವರಿಗೆ ಅಸೈಗೋಳಿ ನಿವಾಸಿ ಕಾಂಗ್ರೆಸ್ ಕಾರ್ಯಕರ್ತ ಕರೀಂ ನೇತೃತ್ವದ ತಂಡ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.ಹನೀಫ್ ನಿಜಾಮಿ ಉಪ್ಪಳ,

ಮಂಗಳೂರು: ಬಿಜೆಪಿ ಬೆಂಬಲಿತ ಗ್ರಾ.ಪಂ ಅಭ್ಯರ್ಥಿ ಮೇಲೆ ಸುತ್ತಿಗೆಯಿಂದ ಹಲ್ಲೆ Read More »

ಕರಾವಳಿ, ಕ್ರೈಮ್ ನ್ಯೂಸ್

ಚಿಕನ್ ವ್ಯಾಪಾರದ ಪಿಕಪ್ ವಾಹನ ಕದ್ದ ಕಳ್ಳರ ಬಂಧನ

(ನ್ಯೂಸ್ ಕಡಬ) newskadaba.com ಕೊಡಗು, ಡಿ.12: ಮಾಂಸಕ್ಕಾಗಿ ಕೋಳಿ ವ್ಯಾಪಾರ ಮಾಡಿ ನಿಲ್ಲಿಸಿದ್ದ ವ್ಯಾಪಾರಿಯ ಪಿಕಪ್ ವಾಹನವನ್ನೇ ಕಳ್ಳತನ ನಡೆಸಿ ನಕಲಿ ನಂಬರ್ ಪ್ಲೇಟ್ ಮಾಡಿ ಮಾರಟದ ವೇಳೆ ಖದೀಮರು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಕುಶಾಲನಗರದಲ್ಲಿ ನಡೆದಿದೆ. ಬಂಧಿತರನ್ನು ಕಣ್ಣೂರಿನ ರೌಫ್,ಕರಿಕೆಯ ಅಬ್ದುಲ್ ಫಾರೂಕ್, ಸುಳ್ಯದ ಡೇವಿಡ್ ಎಂದು ಗುರುತಿಸಲಾಗಿದೆ.   ಕಳೆದ ಮೂರು ತಿಂಗಳ ಹಿಂದೆ ಕೋಳಿ ವ್ಯಾಪಾರ ಮುಗಿಸಿ ನಿಲ್ಲಿಸಿದ್ದ ವಾಹನ ಕಳುವಾಗಿದ್ದು,ಸಂಬಂಧ ಕುಶಾಲನಗರ ದಲ್ಲಿ ಪ್ರಕರಣ ದಾಖಲಾಗಿತ್ತು,ಅದರಂತೆ ಕೆಲವೊಂದು ದಾಖಲೆ ಮೂಲಕ

ಚಿಕನ್ ವ್ಯಾಪಾರದ ಪಿಕಪ್ ವಾಹನ ಕದ್ದ ಕಳ್ಳರ ಬಂಧನ Read More »

ಕರಾವಳಿ

ಮಂಗಳೂರು :ಕಾರಿನ ಎಂಜಿನ್ ಗೆ ಆಕಸ್ಮಿಕ ಬೆಂಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.12: ಕಾರಿನ ಎಂಜಿನ್ ಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಎಂಜಿನ್ ಗೆ ಹಾನಿಯಾಗಿದೆ. ನಗರದ ಪಿವಿಎಸ್ ಬಳಿ ಇಂದು ಮಧ್ಯಾಹ್ನ  ನಡೆದಿದೆ.   ಕಾರು  ಸುಟ್ಟು ಕಾರಕಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.      

ಮಂಗಳೂರು :ಕಾರಿನ ಎಂಜಿನ್ ಗೆ ಆಕಸ್ಮಿಕ ಬೆಂಕಿ Read More »

ಕರಾವಳಿ
Scroll to Top