ನ್ಯೂಸ್ ಕಡಬ

➤ ಮದುವೆ ದಿಬ್ಬಣದ ಬಸ್ ಕಂಟೈನರ್ ಗೆ ಡಿಕ್ಕಿ ➤ ಬಸ್ ಚಾಲಕ ಮೃತ್ಯು

ನ್ಯೂಸ್ ಕಡಬ) newskadaba.com, ಮುಂಬೈ ಡಿ. 19 ಮದುವೆ ದಿಬ್ಬಣದ ಬಸ್’ಗೆ ಹಿಂಬದಿಯಿಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು,  10 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮದುವೆ ಸಮಾರಂಭ ಮುಗಿಸಿ ಸಿಂಧುದುರ್ಗದಿಂದ ಶಹಪುರಕ್ಕೆ ಖಾಸಗಿ ಬಸ್​ ತೆರಳುತ್ತಿತ್ತು. ಬಸ್ ನಲ್ಲಿ ಸುಮಾರು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಬಸ್​ನಿಂದ […]

➤ ಮದುವೆ ದಿಬ್ಬಣದ ಬಸ್ ಕಂಟೈನರ್ ಗೆ ಡಿಕ್ಕಿ ➤ ಬಸ್ ಚಾಲಕ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

➤ ನೆಲ್ಯಾಡಿ ಬಸ್ ಪಲ್ಟಿ ಹಲವರಿಗೆ ಗಾಯ

ನ್ಯೂಸ್ ಕಡಬ) newskadaba.com ನೆಲ್ಯಾಡಿ , ಡಿ. 19  ಮದ್ದೂರಿನಿಂದ ಧರ್ಮಸ್ಥಳಕ್ಕೆ ಬರುತ್ತಿದ್ದ ಖಾಸಗಿ ಬಸ್ಸೊಂದು ಮಂಗಳೂರು- ಬೆಂಗಳೂರು ರಾ.ಹೆ. 75ರ ನೆಲ್ಯಾಡಿ ಸಮೀಪದ ಲಾವತ್ತಡ್ಕ ಕೊರಮೇರು ಎಂಬಲ್ಲಿ ಪಲ್ಟಿಯಾದ ಘಟನೆ ಡಿ.19 ರಂದು ಮುಂಜಾನೆ ನಡೆದಿದೆ.   ಈ ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು, ಮೂವರನ್ನು ಮಂಗಳೂರಿನ .ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.  ಉಳಿದಂತೆ ಗಾಯಗೊಂಡವರನ್ನು ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

➤ ನೆಲ್ಯಾಡಿ ಬಸ್ ಪಲ್ಟಿ ಹಲವರಿಗೆ ಗಾಯ Read More »

ಕ್ರೈಮ್ ನ್ಯೂಸ್

➤ 2023ರಲ್ಲಿ ದೇಶದಲ್ಲಿ ಮೊದಲ ಹೈಡ್ರೋಜನ್ ರೈಲು ಸಂಚಾರ ➤ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ಬೆಂಗಳೂರು: ಮುಂದಿನ ವರ್ಷ ದೇಶದಲ್ಲಿ ಮೊದಲ ಹೈಡ್ರೋಜನ್​ ರೈಲು ಸಂಚರಿಸಲಿದೆ. ಇನ್ನು ಬುಲೆಟ್ ರೈಲು ಬೋಗಿಗಳ ನಿರ್ಮಾಣ ವೇಗಗತಿಯಲ್ಲಿ ಸಾಗುತ್ತಿದ್ದು, ಶೀಘ್ರವೇ ಮುಂಬೈ-ಅಹ್ಮದಾಬಾದ್ ನಡುವೆ ಮೊದಲ ಬುಲೆಟ್ ರೈಲು ಸಂಚಾರ ಮಾಡಲಿದೆ ಎಂದು ಕೇಂದ್ರ ರೈಲ್ವೇ ಮತ್ತು ಐಟಿ ಇಲಾಖೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದರು. ಅವರು ಬೆಂಗಳೂರಿನ ವಸಂತನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹೈಡ್ರೋಜನ್, ಬುಲೆಟ್ ರೈಲಿನ ಬಗ್ಗೆ ಮಾತನಾಡಿದ್ದಾರೆ.

➤ 2023ರಲ್ಲಿ ದೇಶದಲ್ಲಿ ಮೊದಲ ಹೈಡ್ರೋಜನ್ ರೈಲು ಸಂಚಾರ ➤ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ Read More »

ಕರ್ನಾಟಕ

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಮುಬೈ, ಡಿ. 17. ಮುಂಬೈ ಕರ್ನಾಟಕದ ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ದೌರ್ಜನ್ಯ ನಡೆಯುತ್ತಿದೆ ಆದರೆ ಈ ವಿಷಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ಎನ್ ಸಿ.ಪಿ ಕಾಂಗ್ರೆಸ್ , ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣ ಬೃಹತ್ ಹೋರಾಟ ನಡೆಸಲು ನಿರ್ಧರಿಸಿದೆ.

ಗಡಿ ವಿವಾದ: ಮುಂಬೈಯಲ್ಲಿ ಬೃಹತ್ ಪ್ರತಿಭಟನೆ Read More »

ರಾಷ್ಟ್ರೀಯ ನ್ಯೂಸ್

ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ 64ನೇ ಜನ್ಮದಿನದ ಸಂಭ್ರಮ

(ನ್ಯೂಸ್ ಕಡಬ) newskadaba.com ರಾಮನಗರ, ಡಿ. 16. ಇಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ 64ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಜನ್ಮ ದಿನದ ಸಂಭ್ರಮಕ್ಕಾಗಿ ಜೆಡಿಎಸ್ ಪಂಚರತ್ನ ರಥಯಾತ್ರೆ ಹಮ್ಮಿಕೊಂಡಿದ್ದು, ರಾಮನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಇವರಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು, ನಾಯಕರುಗಳು ಶುಭಾಶಯಗಳನ್ನು ಕೋರಿದ್ದಾರೆ. ಇನ್ನೊಂದೆಡೆ ಕುಮಾರಸ್ವಾಮಿ ಅವರಿಗೆ ದೂರವಾಣಿ ಕರೆ ಮಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜನ್ಮದಿನಕ್ಕೆ ಶುಭಕೋರಿದರು..

ಮಾಜಿ ಸಿಎಂ ಕುಮಾರಸ್ವಾಮಿಯವರಿಗೆ 64ನೇ ಜನ್ಮದಿನದ ಸಂಭ್ರಮ Read More »

ಕರ್ನಾಟಕ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ದಾಳಿ ಟ್ವೀಟ್ ➤ ಅಪರಿಚಿತ ವ್ಯಕ್ತಿ ಅಂದರ್

(ನ್ಯೂಸ್‌ ಕಡಬ) newskadaba.com ಬೆಂಗಳೂರು, ಡಿ. 16. ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಾಂಬ್ ಸ್ಫೋಟಿಸುತ್ತೇನೆ ಎಂದು  ಅಪರಿಚಿತ ವ್ಯಕ್ತಿಯೊರ್ವ ಟ್ವೀಟ್ ಮಾಡಿದ್ದು,  ಈ ಸಂಬಂಧ ಅಪರಿಚಿತ ಟ್ವಿಟ್ಟರ್ ಬಳಕೆದಾರನ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈತ ‘ನಾನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್‌ ಇಡುತ್ತೇನೆ. ಇದರಿಂದ ನಗರಕ್ಕೆ ಇನ್ನೂ ಹತ್ತಿರದಲ್ಲಿ ಹೊಸ ವಿಮಾನ ನಿಲ್ದಾಣವನ್ನು ನಿರ್ಮಿಸಬಹುದು ಎಂದು ಟ್ವೀಟ್ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ದಾಳಿ ಟ್ವೀಟ್ ➤ ಅಪರಿಚಿತ ವ್ಯಕ್ತಿ ಅಂದರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿ.ಟಿ ರವಿ ಪ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು

(ನ್ಯೂಸ್‌ ಕಡಬ) newskadaba.com ಚಿಕ್ಕಮಂಗಳೂರು, ಡಿ. 16. ಇಲ್ಲಿ ಎರಡು ದಿನಗಳ ಕಾಲ ರಾಜ್ಯಮಟ್ಟದ ಯುವಜನೋತ್ಸವ ನಡೆಯುತ್ತಿದ್ದು, ಅದಕ್ಕಾಗಿ ಚಿಕ್ಕಮಂಗಳೂರು ನಗರದ ಹನುಮಂತ ವೃತ್ತದ ಬಳಿ ಸಿ.ಟಿ ರವಿ, ನಗರಸಭೆ ಅಧ್ಯಕ್ಷ ವೇಣುಗೋಪಾಲ ಸೇರಿದಂತೆ ಹಲವಾರು ಮುಖಂಡರ ಪ್ಲೆಕ್ಸ್ ಅಳವಡಿಸಲಾಗಿತ್ತು. ಇದರಲ್ಲಿ ಸಿ.ಟಿ ರವಿ ಹಾಗೂ ಮುಖಂಡರ ಭಾವಚಿತ್ರವನ್ನು ಕಿಡಿಗೇಡಿಗಳು ಬ್ಲೇಡ್ ನಿಂದ ಹರಿದು ಹಾಕಿದ್ದಾರೆ. ಈ ಸಂಬಂಧ ಡಿ.ವೈ.ಎಸ್.ಪಿ ಪುರುಷೋತ್ತಮ್, ನಗರದ ಠಾಣೆ ಪಿಎಸ್ ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸಿ.ಟಿ ರವಿ ಪ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಡಿ.15ರ ವರೆಗೆ ಭಾರೀ ಮಳೆ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ

(ನ್ಯೂಸ್‌ ಕಡಬ) newskadaba.com ಮಂಗಳೂರು, ಡಿ.14.  ಚಂಡಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ರಾಜ್ಯದ ಕರಾವಳಿಯಲ್ಲಿ ಮಳೆ ಮುಂದುವರಿದಿದೆ. ಡಿ.15ರವರೆಗೂ ಹೀಗೇ ಮುಂದುವರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಇನ್ನು ಅರಬ್ಬೀ ಸಮುದ್ರದಲ್ಲಿ ಡಿಸೆಂಬರ್‌ 13ರಿಂದ ವಾಯುಭಾರ ಕುಸಿತವಾಗಲಿದ್ದು, ಎರಡು ದಿನ ಭಾರಿ ಮಳೆಯಾಗುವ ಸೂಚನೆಯನ್ನು ಕೇಂದ್ರ ಹವಾಮಾನ ಇಲಾಖೆ ನೀಡಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ 65ಮಿ.ಮಿ ನಿಂದ 115ಮಿ.ಮಿವರೆಗೆ ಮಳೆ ಸುರಿಯಲಿದೆ ಎಂಬ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ.

ಡಿ.15ರ ವರೆಗೆ ಭಾರೀ ಮಳೆ ಸಾಧ್ಯತೆ ➤ ಹವಾಮಾನ ಇಲಾಖೆ ಎಚ್ಚರಿಕೆ Read More »

ಕರಾವಳಿ, ಕರ್ನಾಟಕ

ಸೈಕ್ಲೋನ್ ಎಫೆಕ್ಟ್ ಗಗನಕ್ಕೇರಿದೆ ತರಕಾರಿ ಬೆಲೆ!

(ನ್ಯೂಸ್‌ ಕಡಬ) newskadaba.com , ಡಿ. 14  ರಾಜ್ಯದಲ್ಲಿ ಶೀತ ವಾತಾವರಣ ನಿರ್ಮಾಣವಾಗಿದ್ದು, ಹಲವೆಡೆ ದಿನವಿಡಿ ಮಳೆಯಾಗುತ್ತಿದೆ. ವಿಪರೀತ ಚಳಿ ಇರುವ ಕಾರಣ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು. ತರಕಾರಿ ಬೆಲೆ ಗಗನಕ್ಕೆರಿದೆ. ಎಲ್ಲಾ ತರಕಾರಿಗಳ ಬೆಲೆಯೂ 20 ರಿಂದ 25ರಷ್ಟು ಏರಿಕೆ ಆಗಿದೆ. ಸೈಕ್ಲೋನ್ ಎಫೆಕ್ಟ್ ನಿಂದ ಕೆ.ಆರ್,ಮಾರ್ಕೆಟ್, ಯಶವಂತಪುರ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಳವಾಗಿದೆ. ತರಕಾರಿ ಬೆಲೆ ಏರಿಕೆಯಿಂದ ಜನ ಕಂಗಾಲಾಗಿದ್ದಾರೆ.

ಸೈಕ್ಲೋನ್ ಎಫೆಕ್ಟ್ ಗಗನಕ್ಕೇರಿದೆ ತರಕಾರಿ ಬೆಲೆ! Read More »

ಕರ್ನಾಟಕ

ದೆಹಲಿಯ ಎಲ್ಲಾ ಸಬ್ –ರಿಜಿಸ್ಟಾರ್ ಹುದ್ದೆಗೆ ಮಹಿಳೆಯರ ಆಯ್ಕೆ ಲೆ. ಗವರ್ನರ್ ಸೂಚನೆ!

(ನ್ಯೂಸ್‌ ಕಡಬ) newskadaba.com ದೆಹಲಿ, ಡಿ. 13. ನವದೆಹಲಿ ಆಸ್ತಿ ನೋಂದಣಿಯಿಂದ  ಆರಂಭವಾಗಿ, ಮದುವೆ ನೋಂದಣಿಯವರೆಗೆ ದೆಹಲಿಯ ಎಲ್ಲಾ ಸಬ್-ರಿಜಿಸ್ಟಾರ್ ಹುದ್ದೆಗಳಿಗೆ ಮಹಿಳೆಯರನ್ನಷ್ಟೇ  ನೇಮಕ  ಮಾಡುವಂತೆ  ಲೆಪ್ಟಿನೆಂಟ್ ಗವರ್ನರ್ ವಿ ಕೆ ಸಕ್ಸೇನಾ  ಸೂಚಿಸಿದ್ದಾರೆ. ಈ ಕ್ರಮದಿಂದ ದೆಹಲಿಯ ಎಲ್ಲಾ ಕಂದಾಯ ಇಲಾಖೆಯಲ್ಲಿರುವ ಎಲ್ಲಾ 22 ಸಬ್- ರಿಜಿಸ್ಟಾರ್ ಸ್ಥಾನಗಳಿಗೂ  ಮಹಿಳಾ ಅಧಿಕಾರಿಗಳು ನೇಮಕವಾಗಲಿದ್ದಾರೆ. ಕಚೇರಿಗಳಲ್ಲಿ ನಡೆಯುವ ಪಕ್ಷಪಾತ ಮತ್ತು ಜನರಿಗೆ ಆಗುವ ಕಿರುಕುಳ ತಪ್ಪಿಸಲು ಮಹಿಳೆಯರನ್ನು ನೇಮಕ ಮಾಡಲಾಗುವುದು ಎಂದು ಲೆಫ್ಟಿನೆಂಟ್ ಗವರ್ನರ್  ತಿಳಿಸಿದ್ದಾರೆ.

ದೆಹಲಿಯ ಎಲ್ಲಾ ಸಬ್ –ರಿಜಿಸ್ಟಾರ್ ಹುದ್ದೆಗೆ ಮಹಿಳೆಯರ ಆಯ್ಕೆ ಲೆ. ಗವರ್ನರ್ ಸೂಚನೆ! Read More »

ರಾಷ್ಟ್ರೀಯ ನ್ಯೂಸ್
Scroll to Top